ಹೊಸದಿಲ್ಲಿ: ಝೂಮ್ ಆಪ್ ಮೂಲಕ ಸಭೆ ಸೇರಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಪ್ರಧಾನಿ , ಮಾಜಿ ಹಣಕಾಸು ಸಚಿವ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ಡಿಎ (ತುಟ್ಟಿ ಭತ್ಯೆ) ಹೆಚ್ಚಳ ನಿರ್ಧಾರವನ್ನು ತಡೆ ಹಿಡಿದಿರುವ ಸರಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. "ಈ ಹಂತದಲ್ಲಿ ಸರಕಾರಿ ನೌಕರರ ಮೇಲೆ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಮೇಲೆ ಕಷ್ಟಗಳನ್ನು ಹೇರುವುದು ಅನಿವಾರ್ಯವಲ್ಲ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ,” ಎಂಬುದಾಗಿ ಹಣಕಾಸು ತಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ. ಜೊತೆಗೆ ನಾವು ಡಿಎ ಕಡಿತಗೊಂಡಿರುವ ಜನರ ಪರವಾಗಿ ಇರಬೇಕು ಎಂಬುದಾಗಿ ಎರಡು ಬಾರಿಯ ಪ್ರಧಾನಿಗಳು ತಿಳಿಸಿದ್ದಾರೆ.
ಈ ಹಿಂದೆ ರಾಜಧಾನಿಯ ಸಂಸತ್ ಆವರಣದ ಸುಂದರೀಕರಣ ಪ್ರಕ್ರಿಯೆಯನ್ನು ಅಮಾನವೀಯ ಮತ್ತು ಅಸೂಕ್ಷ್ಮ ಎಂದು ಕರೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೆ ಕೇಂದ್ರ ಸರಕಾರದ ಮೇಲೆ ಕಿಡಿಕಾರಿದ್ದಾರೆ. “ಇದೇ ಅವಧಿಯಲ್ಲಿ ನೀವು ಸೆಂಟ್ರಲ್ ವಿಸ್ತಾ ನಿರ್ಮಿಸುತ್ತಿದ್ದೀರಿ. ನೀವು ಈ ಅತಿಯಾದ ಖರ್ಚುಗಳನ್ನು ಮಾಡಬಾರದಾಗಿತ್ತು. ಆದರೆ ನೀವು ಮಧ್ಯಮ ವರ್ಗದಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದೀರಿ, ಹೀಗಿದ್ದೂ ಅದನ್ನು ಬಡವರಿಗೆ ನೀಡುತ್ತಿಲ್ಲ. ನೀವು ಇದನ್ನು ನಿಮ್ಮ ಸೆಂಟ್ರಲ್ ವಿಸ್ತಾ ಯೋಜನೆಗೆ ಖರ್ಚು ಮಾಡುತ್ತಿದ್ದೀರಿ,” ಎಂಬುದಾಗಿ ಅವರು ಚಾಟಿ ಬೀಸಿದ್ದಾರೆ. ಕೇಂದ್ರ ಸರಕಾರ ಗುರುವಾರ ತುಟ್ಟಿ ಭತ್ಯೆ ಹೆಚ್ಚಳವನ್ನು ಮುಂದಿನ ವರ್ಷ ಜುಲೈವರೆಗೆ ತಡೆ ಹಿಡಿದಿತ್ತು. ಜೊತೆಗೆ ಪಿಂಚಣಿದಾರರ ಡಿಯರ್‌ನೆಸ್ ರಿಲೀಫ್ (ಡಿಆರ್)ನ್ನೂ ಸ್ಥಗಿತಗೊಳಿಸಿತ್ತು. ಇದರಿಂದ ಕೇಂದ್ರ ಸರಕಾರಕ್ಕೆ 37,350 ಕೋಟಿ ರೂಪಾಯಿ ಉಳಿತಾಯವಾಗಲಿದೆ.
“ಬುಲೆಟ್ ರೈಲು ಮತ್ತು ಸೆಂಟ್ರಲ್ ವಿಸ್ತಾ ಯೋಜನೆಯ ಖರ್ಚನ್ನು ನೀವು ಕಡಿತಗೊಳಿಸುತ್ತಿಲ್ಲ. ಡಿಎ ಸ್ಥಗಿತಗೊಳಿಸುವ ಮೊದಲು ಈ ಕಾರ್ಯಕ್ರಮಗಳನ್ನು ನಿಲ್ಲಸಿಬೇಕಿತ್ತು,” ಎಂದು ಪಿ ಚಿದಂಬರಂ ಹರಿಹಾಯ್ದಿದ್ದಾರೆ. ಸೆಂಟ್ರಲ್ ವಿಸ್ತಾ ಯೋಜನೆಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ 20,00 ಕೋಟಿ ರೂಪಾಯಿ ಅನುದಾನ ನೀಡಿದ್ದರೆ, ಬುಲೆಟ್ ರೈಲು ಯೋಜನೆಗೆ 5,600 ಕೋಟಿ ರೂಪಾಯಿ ಮೀಸಲಿಟ್ಟಿದೆ.
from India & World News in Kannada | VK Polls https://ift.tt/3bys5Ii