ನೀವು ಸಚಿನ್‌ ಅಭಿಮಾನಿಯಾಗಿದ್ದರೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು!

ಬೆಂಗಳೂರು: ಕ್ರಿಕೆಟ್‌ ದೇವರೆಂದೇ ಕರೆಯುವ ಮಾಸ್ಟರ್ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಜನುಮ ದಿನ ನಿನ್ನೆಯಷ್ಟೇ ಮುಗಿದಿದೆ. ಕ್ರಿಕೆಟ್ ದಂತಕತೆಯ ಜತೆಗಿನ ಪಯಣದ ನೆನಪಿನೊಂದಿಗೆ ಹಿರಿಯ ವೇಗಿ ಶ್ರೀಶಾಂತ್ ಸಚಿನ್ ತೆಂಡೂಲ್ಕರ್ ಅವರಿಗೆ ನಿನ್ನೆ ಹುಟ್ಟುಹಬ್ಬದ ವಿಶೇಷ ಶುಭಾಶಯ ಕೋರಿದ್ದರು. ಸಚಿನ್‌ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ನಿತಿನ್ ಜತೆ ಸುಮಾರು ಅರ್ಧಗಂಟೆ ಹರಟೆ ಹೊಡೆದಿದ್ದ , ಕ್ರಿಕೆಟ್‌ ದಂತಕತೆ ಕುರಿತ ಸಾಕಷ್ಟು ಆಸಕ್ತಿಕರ ಅಂಶಗಳನ್ನು ಹೊರಹಾಕಿದ್ದಾರೆ. ಇದಲ್ಲದೆ 2011ರ ವಿಶ್ವಕಪ್ ಮುಗಿದ ಬಳಿಕ ಸಚಿನ್ ಅವರಿಂದ ಪಡೆದ ಬ್ಯಾಟ್ ಅನ್ನು ತೋರಿಸಿ ಬರ್ತ್‌ ಡೇಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ಇಡೀ ಲೈವ್ ಮಾತುಕತೆಯ ಆಕರ್ಷಣೆ ಎಂದರೆ, ಶ್ರೀಶಾಂತ್ ಜತೆಗೆ ಮಾತನಾಡಿದ ನಿತಿನ್. ಸಚಿನ್ ಅವರ ಚೊಚ್ಚಲ ಟೆಸ್ಟ್ ಪಂದ್ಯದಿಂದ ನಿವೃತ್ತಿ ಪಂದ್ಯದವರೆಗೆ ಅವರು, ಸಚಿನ್ ಅಭಿಮಾನಿಯಾಗಿ ಕ್ರಿಕೆಟ್ ನೋಡಿದ್ದು ವಿಶೇಷ. ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬದ ನಿಮಿತ್ತಾ ಕ್ರಿಕೆಟ್‌ ದೇವರ ಕುರತಾದ ಹಲವು ವಿಚಾರಗಳನ್ನು ಕೇರಳ ವೇಗಿ ಶ್ರೀಶಾಂತ್‌ ಬಹಿರಂಗ ಪಡಿಸಿದ್ದಾರೆ. ಸಚಿನ್ ಫೇವರಿಟ್ ಫುಡ್ ಅಮ್ಮನ ಕೈ ರುಚಿ, ಮುಂಬೈ ವಡಾ ಪಾವ್, ಚೈನೀಸ್ ಫುಡ್ ಸುಶೀ ಎಂದು ಹೇಳಿದ್ದಾರೆ. ಅಲ್ಲದೇ, ಸಚಿನ್ ಹಾಗೂ ಸೆಹ್ವಾಗ್ ದ್ವಿಶತಕ ಹೊಡೆದಾಗ ಇಂದೋರಿನ ರಾಜು ಎನ್ನುವ ಅಭಿಮಾನಿಯೊಬ್ಬ ಅಲ್ಲಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿಕೊಂಡು, ನಮಗೆ ಪ್ರಸಾದ ಕೊಟ್ಟಿದ್ದು ಇನ್ನು ನೆನಪಿದೆ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು. ಸಚಿನ್ ಫೇವರಿಟ್ ಶಾಟ್ ಅಂದರೆ ಆನ್ ಡ್ರೈವ್ ಹಾಗೂ ಸ್ಟ್ರೇಟ್ ಡ್ರೈವ್. ಮುಂಬೈ ವಾಂಖೇಡೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಚಿನ್ ಕ್ರಿಕೆಟಿಗೆ ವಿದಾಯ ಹೇಳಿದಾಗ ಇಡೀ ಮೈದಾನ, ದೇಶದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಂದು ನನಗೆ ವಿಶ್ವಕಪ್ ಸೋತಷ್ಟೆ ಬೇಜಾರಾಗಿತ್ತು ಎಂದು ಶ್ರೀಶಾಂತ್‌ ಹೇಳಿಕೊಂಡರು. ಸಚಿನ್‌ ತೆಂಡೂಲ್ಕರ್‌ ಒಬ್ಬ ದಂತಕತೆ, ಅವರನ್ನುಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಈಗ ಬ್ಯಾಟ್ ಮಾಡಿದರು ಅವರು ಶತಕ ಸಿಡಿಸಿಬಲ್ಲರು. ಅವರೊಬ್ಬ ಭಾರತೀಯ ಕ್ರಿಕೆಟ್‌ನ ಕ್ರಾಂತಿ. ಅವರೊಬ್ಬ ಅದ್ಭುತ ಸ್ನೇಹ ಜೀವಿಯೂ ಹೌದು. ಮೊದಲ ಭೇಟಿಯಲ್ಲೇ 10-15 ವರ್ಷಗಳ ಹಿಂದೆ ಪರಿಚಯ ಇದ್ದಂತೆ ಮಾತನಾಡುತ್ತಾರೆ ಎಂದರು. ಕ್ರಿಕೆಟಿಗಾಗೇ ಸಚಿನ್ ಹುಟ್ಟಿದ್ದಾರೆ ಎನಿಸುತ್ತದೆ. ಸಚಿನ್ ಜನ್ಮ ದಿನವನ್ನು ವಿಶ್ವ ಕ್ರಿಕೆಟ್ ದಿನ ಎಂದು ಘೋಷಿಸಬೇಕು. ಕ್ರೀಡಾ ದಿನ (ಸ್ಪೋರ್ಟ್ಸ್ ಡೇ) ಎಂದು ಕರೆಯಬೇಕು. ನನ್ನ ಕ್ರಿಕೆಟ್ ಬದುಕು ಯಶಸ್ವಿಯಾಗಲು ಸಚಿನ್ ಸಲಹೆ ಕಾರಣ. ನಾನು ಪ್ರತಿ ಬಾರಿ ಬೌಲ್ ಮಾಡುವಾಗಲೂ ಮಿಡ್ ಆನ್, ಮಿಡ್ ಆಫ್ ಅಲ್ಲಿ ನಿಂತು ಇನ್ ಸ್ವಿಂಗ್, ಔಟ್ ಸ್ವಿಂಗ್ ಎಂದು ಹೇಳುತ್ತಿದ್ದರು ಎಂದು ಸಚಿನ್‌ ನೀಡಿದ್ದ ಸಲಹೆಗಳನ್ನು ನೆನಪು ಮಾಡಿಕೊಂಡರು. 2011ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಸಚಿನ್ ಹಾಗೂ ಸೆಹ್ವಾಗ್ ಅವರು ನನ್ನನ್ನು ಒಂದು ಕಡೆ ನಿಲ್ಲಿಸಿ ಅಲ್ಲಿಯೇ ಮಂತ್ರ ಪಠಿಸುವಂತೆ ನಿರ್ದೇಶಿಸಿದ್ದರು. ನಾನು ಹಾಗೆ ಮಾಡುತ್ತಿದ್ದೆ. ನಾನು ಮತ್ತೆ ಕ್ರಿಕೆಟಿಗೆ ಬರಲು ಅವರೇ ಸ್ಫೂರ್ತಿ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎನ್ನುವುದನ್ನು ತಮ್ಮ ನಿವೃತ್ತಿ ಅಂಚಿನಲ್ಲಿ ಮಾಡಿರುವ ಸಾಧನೆ ಮೂಲಕ ಸಚಿನ್ ಸಾಬೀತು ಮಾಡಿದ್ದಾರೆ ಎಂದರು. ಸಚಿನ್ ತೆಂಡೂಲ್ಕರ್‌ ಬ್ಯಾಟ್ ಮಾಡುವುದನ್ನು ನೋಡಿದಾಗಲೆಲ್ಲ ಅವರು ಕವನ ಬರೆಯುತ್ತಿದ್ದಾರೆ ಎಂದು ಎನಿಸುತ್ತದೆ. ಅವರ ದ್ವಿಶತಕ ಕೂಡ ಅಷ್ಟೇ ಲೀಲಾಜಾಲವಾಗಿತ್ತು. ಹೊಡಿ, ಬಡಿ ಇನ್ನಿಂಗ್ಸ್ ಅದು ಆಗಿರಲಿಲ್ಲ. ಅಂದು ಎದುರಾಳಿಗಳಿಗೆ ಒಂದೇ ಒಂದು ಚಾನ್ಸ್ ಕೂಡ ಕೊಟ್ಟಿರಲಿಲ್ಲ. ಸಚಿನ್ ಅವರ ಕ್ರಿಕೆಟ್ ಕಿಟ್ ಅಥವಾ ವಸ್ತುಗಳನ್ನು ಬೇರೆಯವರು ಸರಿ ಪಡಿಸಲು ಸಚಿನ್ ಯಾವತ್ತೂ ಬಿಡುತ್ತಿರಲಿಲ್ಲ, ಸಚಿನ್ ಅಷ್ಟು ಶಿಸ್ತು ಹಾಗೂ ಸ್ವಾಭಿಮಾನಿ ಜೀವಿ. ಬೇರೆಯವರೂ ಶಿಸ್ತನ್ನು ಪಾಲಿಸಿಕೊಳ್ಳಲಿ ಎಂದು ಅವರು ಬಯಸುತ್ತಿದ್ದರು ಎಂದು ಶ್ರೀಶಾಂತ್‌ ಹೇಳಿದ್ದಾರೆ. ರಣಜಿ ಪಂದ್ಯವಾಡಿ ಈ ಬಾರಿ ಕೇರಳಕ್ಕೆ ಪ್ರಶಸ್ತಿ ಗೆದ್ದು ಕೊಡುವ ಆಸೆಯಿದೆ. ಇನ್ನೊಂದು ಅಚ್ಚರಿ ವಿಚಾರ ಎಂದರೆ ನಾವೆಲ್ಲ ಕ್ರಿಕೆಟ್ ಆಟಗಾರರು ಸೇರಿ ಒಂದು ಹಾಡಿನ ವಿಡಿಯೋ ಮಾಡಿದ್ದೇವೆ, ಸದ್ಯದಲ್ಲೇ ನಿಮ್ಮೆದುರು ಬರಲಿದೆ ಎಂದು ವೇಗಿ ಶ್ರೀಶಾಂತ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2S6RCRn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...