ಬಂಕುರಾ (): ಅಧ್ಯಾಪಕನಿಗೆ ಶಿಕ್ಷಣ ಪ್ರೀತಿ ಇದ್ದರೆ ಹಾಗೂ ಮಕ್ಕಳಿಗೆ ಓದುವ ಹವ್ಯಾಸ ಇದ್ದರೆ ಯಾವ ಸವಾಲು ಅಡ್ಡಿಯಾಗಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಇದಾಗಿದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರೊಬ್ಬರು ಮರದ ಮೇಲೆ ಕುಳಿತುಕೊಂಡು ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳ ಅಧ್ಯಯನ ವರ್ಷಕ್ಕೆ ತೊಂದರೆ ಎದುರಾಗಿದೆ. ಆದರೆ ಅತೀವ ಬದ್ಧತೆ ಮೆರೆದಿರುವ ಬಂಕುರಾ ಜಿಲ್ಲೆಯ ಸುಬ್ರಾಟೊ ಪಾಟಿ ಎಂಬ ಶಿಕ್ಷಕರು ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡುತ್ತಿದ್ದಾರೆ. ಅಷ್ಟಕ್ಕೂ ಇವರು ಮರ ಏರಿ ಕುಳಿತುಕೊಂಡಿರುವ ಹಿಂದೆ ಕಾರಣವೊಂದಿದೆ. ಕಳಗಡೆ ಮೊಬೈಲ್ ನೆಟ್‌ವರ್ಕ್ ತೊಂದರೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಅನ್ಯ ದಾರಿಯಿಲ್ಲದೆ ಮರವೇರಲು ನಿರ್ಧರಿಸಿದ್ದರು. 'ನಮ್ಮ ಗ್ರಾಮದಲ್ಲಿ ನೆಕ್‌ವರ್ಟ್ ತೊಂದರೆಯಿದೆ ಹಾಗಾಗಿ ಮರದ ಮೇಲೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದೇನೆ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯ ವರೆಗೆ ಆನ್ಲೈನ್ ಪಾಠಗಳನ್ನು ಹೇಳಿಕೊಡುತ್ತಿದ್ದೇನೆ' ಎಂದು ಅಧ್ಯಾಪಕರು ತಿಳಿಸುತ್ತಾರೆ. ಸ್ಮಾರ್ಟ್‌ಫೋನ್ ಮೂಲಕ ಸುಬ್ರಾಟೊ ಪಾಟಿ ಮಕ್ಕಳಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಪ್ರಸ್ತುತ ಅಧ್ಯಾಪಕನ ಶಿಕ್ಷಣ ಪ್ರೀತಿಗೆ ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
from India & World News in Kannada | VK Polls https://ift.tt/2Vt65sP