ಕಟಿಂಗ್ ಶಾಪ್‌, ರೆಸ್ಟೊರೆಂಟ್‌ ಮೇ 3ರವರೆಗೆ ಬಂದ್‌; ಕೇಂದ್ರ ಸರಕಾರ ಸ್ಪಷ್ಟನೆ

ಹೊಸದಿಲ್ಲಿ: ಕೊರೊನಾ ವೈರಸ್‌ನಿಂದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್‌ಡೌನ್‌ 2.0 ಮೇ 3ರಂದು ಕೊನೆಗೊಳ್ಳಲಿದೆ. ಈಗ ಕೇಂದ್ರ ಸರಕಾರ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿ ಘೋಷಿಸಿದೆ. ಆದರೆ ಕೆಲವು ಗೊಂದಲಗಳಿದ್ದು ಇದಕ್ಕೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಹೇರ್ ಕಟಿಂಗ್ ಸಲೂನ್ ಅರಂಭವಾಗುತ್ತದೆ ಎಂಬ ಬಗ್ಗೆ ಗೊಂದಲ ಈಗ ನಿವಾರಣೆಯಾಗಿದೆ. ಎಲ್ಲ ರೆಸ್ಟೋರೆಂಟ್‌ಗಳು, , ಕಟಿಂಗ್ ಶಾಪ್‌ಗಳು ಮೇ 3ರವರೆಗೆ ಬಂದ್‌ ಆಗಿರುತ್ತದೆ ಎಂದು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ. ಈಗಾಗಲೇ ಶುಕ್ರವಾರ ನೀಡಿದ ವಿನಾಯಿತಿಯಲ್ಲ ಕೆಲವು ಅಂಗಡಿಗಳನ್ನು ಮಾತ್ರ ಅವಕಾಶ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಂಗಡಿಗಳು ಹಾಗೂ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿರುವ ಕೆಲ ನಿರ್ದಿಷ್ಟ ವರ್ಗದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಎಲ್ಲ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಂಡು ಶೇಕಡ 50ರಷ್ಟನ್ನು ಮಾತ್ರ ತೆರೆಯಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದರು.


from India & World News in Kannada | VK Polls https://ift.tt/2VCI2Yz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...