ಬೆಂಗಳೂರು: ರಾಜ್ಯದ ಸುದ್ದಿವಾಹಿನಿಯ ಪತ್ರಕರ್ತರೊಬ್ಬರಿಗೆ ಮಾರಕ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಿಳುನಾಡಿನ ಖಾಸಗಿ ಸುದ್ದಿವಾಹಿನಿಯ ಇಬ್ಬರು ಪತ್ರಕರ್ತರಿಂದ ಅದೇ ಸುದ್ದಿವಾಹಿನಿ 27 ಸಹೋದ್ಯೋಗಿಗಳಿಗೆ ಹರಡಿತ್ತು. ಇದೀಗ ರಾಜ್ಯದ ಪತ್ರಕರ್ತರಿಗೂ ಕೊರೊನಾ ಸೋಂಕು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ, ಮಹಾರಾಷ್ಟ್ರ, ತಮಿಳುನಾಡು ಬಳಿಕ ರಾಜ್ಯದ ಪತ್ರಕರ್ತರಿಗೂ ಕೊರೊನಾ ಸೋಂಕು ಹರಡಿದೆ. ಇವರು ರೆಡ್ ಝೋನ್ ಪ್ರದೇಶದಲ್ಲಿ ವರದಿ ಮಾಡುವ ಸಲುವಾಗಿ ಓಡಾಡಿದ ಹಿನ್ನೆಲೆ ಹೊಂದಿದ್ದಾರೆ. ಪತ್ರಕರ್ತರು ವರದಿ ಮಾಡುವ ಸಲುವಾಗಿ ಕೊರೊನಾ ಸೋಂಕು ಪೀಡಿತ ರೆಡ್ ಝೋನ್, ಕಂಟೈನ್ಮೆಂಟ್ ಪ್ರದೇಶಗಳಿಗೆ ತೆರಳುತ್ತಿದ್ದು, ಈ ವೇಳೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಪತ್ರಕರ್ತರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಪತ್ರಕರ್ತರು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದಾರೆ. ಈ ವೇಳೆ, ಖಾಸಗಿ ಚಾನಲ್ ವೊಂದರ ವಿಡಿಯೋ ಜರ್ನಲಿಸ್ಟ್ ವೊಬ್ಬರಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ ಎನ್ನಲಾಗಿದೆ. ಸೋಂಕು ಪೀಡಿತ ಕೆಲ ದಿನಗಳ ಹಿಂದೆ ರೆಡ್ ಝೋನ್ ನಲ್ಲಿದ್ದ ಪ್ರದೇಶಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ಮುಂಜಾಗ್ರತೆ ವಹಿಸಲಾಗಿದೆ.
from India & World News in Kannada | VK Polls https://ift.tt/3cJHmGr