ರಾಜ್ಯದಲ್ಲಿ 29 ಹೊಸ ಕೊರೊನಾ ಪ್ರಕರಣ: ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಇಳಿಯುತ್ತಾ ಬಂದಿದ್ದ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಯಿಂದ ಮತ್ತೆ ಏರುಮುಖವಾಗಿ ಸಾಗಿದೆ. ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 29 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. ಇವರಲ್ಲಿ 18 ಜನರು ಅಸುನೀಗಿದ್ದರೆ, 152 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಈ ವಾರದಲ್ಲಿ ಮೊದಲಿಂದಲೂ ಸತತ ಇಳಿಕೆಯ ಹಾದಿಯಲ್ಲಿದ್ದ ಸೋಂಕಿತರ ಸಂಖ್ಯೆ ಗುರುವಾರದಿಂದ ಮತ್ತೆ ಏರಿಕೆಯಾಗುತ್ತಿದೆ. ಆಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿದ ಬೆನ್ನಲ್ಲೇ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ. ಸೋಮವಾರ 18, ಮಂಗಳವಾರ 10 ಮತ್ತು ಬುಧವಾರ 9 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದವು. ಹೀಗೆ ಇಳಿಯುತ್ತ ಬಂದಿದ್ದ ಸಂಖ್ಯೆ ಗುರುವಾರ ಮತ್ತೆ 18ಕ್ಕೆ ಏರಿಕೆಯಾಗಿತ್ತು. ಶುಕ್ರವಾರ ಈ ಸಂಖ್ಯೆ ಮತ್ತಷ್ಟು ಏರುಗತಿಯಲ್ಲಿ ಸಾಗಿದೆ. ಸೋಂಕಿತರ ವಿವರ
  • ಬೆಂಗಳೂರು ನಗರ: 19
  • ತುಮಕೂರು: 1
  • ಬೆಳಗಾವಿ: 2
  • ಚಿಕ್ಕಬಳ್ಳಾಪುರ: 1
  • ಬಾಗಲಕೋಟೆ - 3
  • ವಿಜಯಪುರ: 2
  • ಮಂಡ್ಯ: 1


from India & World News in Kannada | VK Polls https://ift.tt/3azlADR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...