ಕೊರೊನಾ ಸಂಕಷ್ಟ: ಕೋವಿಡ್‌ ಪರೀಕ್ಷಾ ಲ್ಯಾಬ್‌ ಹೆಚ್ಚಿಸಲು ಸರ್ಕಾರ ಪ್ಲ್ಯಾನ್

ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು ಇದಕ್ಕಾಗಿ ಅಗತ್ಯವಿರುವ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ 60 ಕೋವಿಡ್‌ ಪರೀಕ್ಷಾ ಲ್ಯಾಬ್‌ಗಳನ್ನು ಸ್ಥಾಪನೆ ಮಾಡಲು ಸರ್ಕಾರ ಗುರಿ ಹೊಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೆ ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು “ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗದಗ,ವಿಜಯಪುರ, ತುಮಕೂರು ಜಿಲ್ಲೆಗಳಲ್ಲೂ ಈಗ ಕೋವಿಡ್19 ಲ್ಯಾಬ್ ಕಾರ್ಯಾರಂಭ ಮಾಡಿವೆ. ಫೆಬ್ರವರಿಯಲ್ಲಿದ್ದ 2 ಲ್ಯಾಬ್ ನಿಂದ ಈಗ ನಾವು 26 ಲ್ಯಾಬ್‌ಗಳನ್ನು ಹೊಂದಿದ್ದು ದಿನಕ್ಕೆ 5000 ಪರೀಕ್ಷೆ ಸಾಮರ್ಥ್ಯ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ 30 ರ ವರೆಗೆ ಕೊರೊನೊ ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆಯಾಗಿದೆ. ಸೋಂಕಿಗೆ ತುತ್ತಾಗಿ ಇದುವರೆಗೂ 22 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ 25ರ ಬಳಿಕ ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದ ಸೋಂಕಿನ ಸಂಖ್ಯೆಯಲ್ಲಿ ಇದೀಗ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ತಪಾಸಣೆಯನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅದಕ್ಕೆ ಅಧಿಕ ಸಂಖ್ಯೆಯ ಲ್ಯಾಬ್‌ಗಳ ಅಗತ್ಯವಿದ್ದು ಮೇ ಅಂತ್ಯಕ್ಕೆ 60 ಲ್ಯಾಬ್‌ಗಳನ್ನು ಹೊಂದುವ ವಿಶ್ವಾಸವನ್ನು ಸುಧಾಕರ್ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2YtU6gi

ದೇಶದಲ್ಲಿ ಕೊರೊನಾ ರೆಡ್‌ ಜೋನ್‌ಗಳ‌ ಸಂಖ್ಯೆ ಇಳಿಮುಖ, ಸೋಂಕು ಮುಕ್ತ ಜಿಲ್ಲೆಗಳಲ್ಲೂ ಕುಸಿತ

ಹೊಸದಿಲ್ಲಿ: ಕಳೆದ 15 ದಿನಗಳಲ್ಲಿ ದೇಶದಲ್ಲಿನ ರೆಡ್‌ಜೋನ್‌ಗಳ ಸಂಖ್ಯೆ ಶೇ.23ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಏಪ್ರಿಲ್‌ 15ರಂದು 170 ಇದ್ದ ರೆಡ್‌ಜೋನ್‌ಗಳ ಸಂಖ್ಯೆ, ಏಪ್ರಿಲ್‌ 30ಕ್ಕೆ 130ಕ್ಕೆ ಇಳಿದಿದೆ. ಅದರಂತೆ ಗ್ರೀನ್‌ ಜೋನ್‌ಗಳ ಸಂಖ್ಯೆಯೂ ಸಹ 356 ರಿಂದ 319ಕ್ಕೆ ಇಳಿದಿದ್ದು, ವೂರಸ್‌ ಹರಡುವುದನ್ನು ತೋರಿಸುತ್ತಿದೆ. ಆರೇಂಜ್‌ ಜೋನ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 207 ಜಿಲ್ಲೆಗಳಿಂದ 284ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ. 28 ದಿನಗಳ ಬದಲಾಗಿ 21 ದಿನ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಾಣಿಸದಿದ್ದರೆ. ಆ ಜಿಲ್ಲೆಯನ್ನು ಗ್ರೀನ್‌ ಜೋನ್‌ಗೆ ಸೇರಿಸಲಾಗುವುದು ಎಂದು ಸರಕಾರ ಹೇಳಿದೆ. ದೆಹಲಿ ಸೇರಿ ದೇಶದ ಎಲ್ಲ 7 ಮೆಟ್ರೋ ನಗರಗಳು ರೆಡ್‌ ಜೋನ್‌ನಲ್ಲಿದ್ದು, ಮುಂಬೈ ಮತ್ತು ದೆಹಲಿ ಎರಡರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಇವೆ. ಮಹಾರಾಷ್ಟ್ರದಲ್ಲಿ 14 ರೆಡ್‌ ಜೋನ್‌ಗಳಿದ್ದರೆ, ಉತ್ತರ ಪ್ರದೇಶದಲ್ಲಿ 19 ರೆಡ್‌ಜೋನ್‌ಗಳು ಸೃಷ್ಟಿಯಾಗಿವೆ. ದೆಹಲಿಯಲ್ಲಿ 11 ರೆಡ್‌ಜೋನ್‌ಗಳಿದ್ದು, ಇಡೀ ದಿಲ್ಲಿಯನ್ನೇ ಕೆಂಪು ವಲಯ ಎಂದು ಪರಿಗಣಿಸಲಾಗಿದೆ. ಇನ್ನು, ತಮಿಳುನಾಡು 12, ಪಶ್ಚಿಮ ಬಂಗಾಳ 10, ಗುಜರಾತ್‌ 9, ರಾಜಸ್ಥಾನ 8, ತೆಲಂಗಾಣ 6 ಹಾಗೂ ಕರ್ನಾಟಕದಲ್ಲಿ 3 ರೆಡ್‌ಜೋನ್‌ಗಳಿವೆ ಎಂದು ಕೇಂದ್ರ ತಿಳಿಸಿದೆ. ಅತಿ ಹೆಚ್ಚು ಗ್ರೀನ್‌ ಜೋನ್‌ಗಳು ಅಸ್ಸಾಂನಲ್ಲಿವೆ. ಅಸ್ಸಾಂನಲ್ಲಿ 30 ಹಸಿರು ವಲಯದ ಪ್ರದೇಶಗಳಿವೆ ಎಂದು ಸರಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,993 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, 73 ಸಾವುಗಳು ಕೂಡ ಸಂಭವಿಸಿವೆ. ದೇಶದಲ್ಲಿ ಇದುವರೆಗೂ 35,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದು,1,147 ಕೊರೊನಾ ಸಾವುಗಳು ವರದಿಯಾಗಿವೆ. ರೆಡ್‌ ಜೋನ್‌ ಮತ್ತು ಆರೆಂಜ್‌ ಜೋನ್‌ಗಳಲ್ಲಿ ವೈರಸ್‌ ಹರಡುವುದನ್ನು ನಿಯಂತ್ರಣಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಕೇಂದ್ರ ರಾಜ್ಯಗಳಿಗೆ ತಿಳಿಸಿದ್ದು, ಅಗತ್ಯ ವೈದ್ಯಕೀಯ ಸೇವೆ ಹಾಗೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಬಿಟ್ಟರೆ ಜನರ ಓಡಾಟವನ್ನು ಕಡ್ಡಾಯವಾಗಿ ಕಡಿಮೆ ಮಾಡುವಂತೆ ಸೂಚನೆ ನೀಡಿದೆ. ಅದಲ್ಲದೇ ಡೂರ್‌-ಟೂ-ಡೂರ್‌ ಸ್ಕ್ರೀನಿಂಗ್‌ ನಡೆಸಲು ರಾಜ್ಯಗಳಿಗೆ ಸೂಚಿಸಿದೆ.


from India & World News in Kannada | VK Polls https://ift.tt/2SmqNJ2

ಮಧ್ಯಪ್ರದೇಶದಲ್ಲಿ ಯುವತಿ ಮೇಲೆ 7 ಜನರಿಂದ ಗ್ಯಾಂಗ್‌ ರೇಪ್, ಮೂವರು ಅಪ್ರಾಪ್ತರು ದುಷ್ಕೃತ್ಯದಲ್ಲಿ ಭಾಗಿ

ಬೆತುಲ್‌ (ಮಧ್ಯಪ್ರದೇಶ): ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಗ್ಯಾಂಗ್‌ ರೇಪ್‌ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ 18 ವರ್ಷದ ಯುವತಿಯ ಮೇಲೆ 7 ಜನ ನಡೆದಿದೆ. ಅತ್ಯಾಚಾರದಲ್ಲಿ ಮೂವರು ಅಪ್ರಾಪ್ತರು ಕೂಡ ಭಾಗಿಯಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ತನ್ನ ಅಣ್ಣನ ಜೊತೆ ಊರಿಗೆ ಮರಳುತ್ತಿದ್ದಾಗ ಬುಧವಾರ ರಾತ್ರಿ ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರಕ್ಕೂ ಮುನ್ನ ಆಕೆಯ ಅಣ್ಣನನ್ನು ಬಾವಿಗೆ ದುಷ್ಕರ್ಮಿಗಳು ಎಸೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿ ಐವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳು ಕಣ್ತಪ್ಪಿಸಿಕೊಂಡಿದ್ದಾರೆ. ಬುಧವಾರ ರಾತ್ರಿ ಯುವತಿ 21 ವರ್ಷದ ಅಣ್ಣನ ಜೊತೆ ಮೋಟಾರ್‌ ಬೈಕ್‌ನಲ್ಲಿ ಮರಳುವಾಗ ಅತ್ಯಾಚಾರ ನಡೆದಿದೆ ಎಂದು ಕೋಟ್ವಾಲಿ ಪೊಲೀಸ್‌ ಠಾಣೆಯ ಅಧಿಕಾರಿ ರಾಜೇಂದ್ರ ಧುರ್ವೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ 8.30ರ ಹೊತ್ತಿಗೆ ಮೋಟಾರ್‌ ಬೈಕ್‌ನ್ನು ಕೆಡವಿದ ದುಷ್ಕರ್ಮಿಗಳು ಯುವತಿಯ ಅಣ್ಣನನ್ನು ಬಾವಿಗೆ ಎಸೆದಿದ್ದಾರೆ. ಅಲ್ಲಿಂದ ಬೆಳಗ್ಗೆ 2 ಗಂಟೆಯವರೆಗೂ ಯುವತಿ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಧುರ್ವೆ ಹೇಳಿದ್ದಾರೆ. ಅತ್ಯಾಚಾರದ ನಂತರ ಯುವತಿ ತನ್ನ ಅಣ್ಣನನ್ನು ರಕ್ಷಿಸಿಕೊಂಡು ಊರಿಗೆ ಹೋಗಿದ್ದು, ಗುರುವಾರ ಬೆಳಗ್ಗೆ ಬಂದು ದೂರು ನೀಡಿದ್ದಾರೆ. ಇಬ್ಬರು ಬಂಧಿತ ಆರೋಪಿಗಳನ್ನು ಶುಭಂ ಬೆಲೆ ಹಾಗೂ ಸಂದೀಪ್‌ ಖಾಟಿಯಾ ಎಂದು ಗುರುತಿಸಲಾಗಿದೆ. ನಾಪತ್ತೆಯಾದವರನ್ನು ಲೋಕೇಶ್‌ ಸೋನಿ, ಪವನ್‌ ಬೆಲೆ ಎಂದು ಗುರುತಿಸಿದ್ದು, ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ), 365 (ಕಿಡ್ನಾಪ್‌) ಮತ್ತು 307 (ಕೊಲೆ ಯತ್ನ) ಪ್ರಕರಣಗಳನ್ನು ದಾಖಲಿಸಲಾಗಿದೆ.


from India & World News in Kannada | VK Polls https://ift.tt/2So2fzi

ಕೊರೊನಾ ಲಾಕ್‌ಡೌನ್: ಮದ್ಯ ನಿಷೇಧಕ್ಕೆ ಒತ್ತಾಯಿಸಿ ಬಿಎಸ್‌ವೈಗೆ ಎಚ್‌ಕೆ ಪಾಟೀಲ್ ಪತ್ರ

ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ಪರಿಣಾಮ ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಕುಡಿತದ ಚಟ ಹೊಂದಿರುವವರು ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೆ ಕಂಗಾಲಾಗಿದ್ದಾರೆ.ಜೊತೆಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಮೇ 3 ರ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಆದಾಯದ ಮೂಲವಾಗಿರುವ ಮದ್ಯವನ್ನು ಶೀಘ್ರದಲ್ಲೇ ಆರಂಭ ಮಾಡಲು ಸರ್ಕಾರವೂ ಯೋಚಿಸುತ್ತಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಮುಖ್ಯಮಂತ್ರಿ ಅವರಿಗೆ ಪತ್ರವನ್ನು ಬರೆದು ಮದ್ಯವನ್ನು ಸಂಪೂರ್ಣ ನಿಷೇಧ ಮಾಡಿ ಎಂದು ಒತ್ತಾಯಿಸಿದ್ದಾರೆ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಮದ್ಯ ಮಾರಾಟ ನಿಷೇಧದ ಪರಿಣಾಮ ಪತಿ, ಪತ್ನಿ, ಮಕ್ಕಳು ಹೆಚ್ಚು ಕಾಲ ಕೂಡಿ ಇರುವುದರಿಂದ ಪ್ರೀತಿ, ಪ್ರೇಮ, ಅನುಕಂಪ, ಅನುರಾಗ, ತ್ಯಾಗ ದಯೆ ಮೊದಲಾದ ಜೀವನ ಮೌಲ್ಯವನ್ನು ಸಹಜವಾಗಿ ಪಾಲಿಸಲಾಗುತ್ತಿದೆ. ಮದ್ಯಪಾನ ಒಂದು ಚಟವಾಗಿ ಮಾಡಿಕೊಂಡವರು ತಾತ್ಕಾಲಿಕವಾಗಿ ತೊಂದರೆ ಅನುಭವಿಸಿದರೂ ಈಗ ಸಾರಾಯಿ ಇಲ್ಲದೆ ಬದುಕುತ್ತಿದ್ದಾರೆ. ಬೀಯರ್, ರಮ್, ಬ್ರಾಂಡಿ ಕುಡಿಯುವ ಹವ್ಯಾಸಗಳಿಗೆ ಕಡಿವಾಣ ಬಿದ್ದಿದೆ. ಕಳ್ಳಬಟ್ಟಿ ಕುಡಿಯುವವರು ಸಹ ಅದಿಲ್ಲದೆ ಬದುಕುತ್ತಿದ್ದಾರೆ. ಅಮಲು ಮುಕ್ತ, ಸುಸಂಸ್ಕೃತ ಸಮಾಜ ನಿರ್ಮಾಣದತ್ತ ನಾವು ಅರಿವಿಲ್ಲದೆ ದಾಪುಗಾಲು ಹಾಕುತ್ತಿದ್ದೇವೆ. ಇದರಿಂದ ಅಪಾರ ಲಾಭವಾಗುತ್ತಿದೆ. ಮದ್ಯಪಾನದಿಂದ ಮೇಲ್ವರ್ಗದಲ್ಲಿ ಆಲಸ್ಯ, ಸರಿ ಮಾರ್ಗದಿಂದ ದೂರ ಸರಿಯುವಿಕೆ, ಅಧಿಕಾರ ದುರುಪಯೋಗ, ಜಗಳ, ಅಶಾಂತಿ ತಲೆದೋರುವಿಕೆ ಜೊತೆಗೆ ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗುವ ಭಯಂಕರವಾದ ಪರಿಣಾಮ ಬೀರುವ ಮದ್ಯಪಾನ ನಿಷೇಧಿಸುವುದು ಇಂದಿನ ಅತ್ಯಂತ ಅವಷ್ಯಕತೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಒಂದು ಮೂಲ ಇಲ್ಲದಂತೆ ಮಾಡುವುದು ಜಾಣತನವಾಗದೆಂದು ಅಭಿಪ್ರಾಯ ವ್ಯಕ್ತಪಡಿಸುವವರಿಗೇನು ಕಡಿಮೆ ಇಲ್ಲ ಇದನ್ನು ಬೆಂಬಲಿಸುವವರು ಇದ್ದಾರೆ ಎಂದು ಎಚ್‌ಕೆ ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಅವಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಜಾರಿಗೆ ತನ್ನಿ ಎಂದು ಅವರು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/2Ssmj3A

ಅಂತಾರಾಜ್ಯ, ಅಂತರ್‌ಜಿಲ್ಲಾ ಪ್ರಯಾಣ ಸಂಬಂಧಿತ ನೋಡಲ್‌ ಅಧಿಕಾರಿಗಳ ವಿವರ, ದೂರವಾಣಿ ಸಂಖ್ಯೆ

ಬೆಂಗಳೂರು: ಸಚಿವ ಸಂಪುಟ ಸಭೆಯ ತೀರ್ಮಾನದ ಅನ್ವಯ ಅಂತಾರಾಜ್ಯ ಪ್ರಯಾಣ ಹಾಗೂ ಅಂತರ್‌ ಜಿಲ್ಲಾ ಪ್ರಯಾಣ ಸಂಬಂಧ ಸಮನ್ವಯ ಕೈಗೊಳ್ಳಲು ರಾಜ್ಯ ಸರಕಾರವು 11 ರಾಜ್ಯಗಳಿಗೆ ಸಂಬಂಧಿಸಿದಂತೆ ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿದೆ. ಜತೆಗೆ ಈ ನೋಡಲ್‌ ಅಧಿಕಾರಿಗಳ ಮೊಬೈಲ್‌ ಸಂಖ್ಯೆಯನ್ನೂ ಸರಕಾರ ಒದಗಿಸಿದೆ. ಈ ಕುರಿತ ವಿವರ ಕೆಳಕಂಡಂತಿದೆ. ಈ ಅಧಿಕಾರಿಗಳು ತಮಗೆ ವಹಿಸಿರುವ ರಾಜ್ಯಗಳ ಜತೆ ಸಮನ್ವಯತೆ ಸಾಧಿಸಿ ಪ್ರವಾಸಿಗರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಿದ್ದಾರೆ. ಜಿಲ್ಲಾಡಳಿತದ ಜತೆಗೆ ಸರಕಾರಿ ಸ್ವಾಮ್ಯದ ಮೂರು ಸಾರಿಗೆ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ಅದರೆ ಜನರ ಸಂಚಾರಕ್ಕೆ ಕೇಂದ್ರ ಸರಕಾರ ಗುರುವಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಢಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ರಾಜ್ಯದ ನೋಡಲ್‌ ಅಧಿಕಾರಿಗಳು ಡಾ.ರಾಜ್‌ ಕುಮಾರ್‌ ಕತ್ರಿ, ಅರುಣ್‌ ಜೇಜಿ ಚಕ್ರವರ್ತಿ: ಹೊರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿಸಿಲುಕಿಕೊಂಡಿರುವ ಜನರ ಸಂಚಾರದ ಒಟ್ಟಾರೆ ಉಸ್ತುವಾರಿ ಎನ್‌. ಮಂಜುನಾಥ್‌ ಪ್ರಸಾದ್‌, ಪಿ.ಎಸ್‌.ಸಂಧು: ಕರ್ನಾಟಕದಿಂದ ಇತರೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಹೋಗುವ ಜನ ಒಟ್ಟಾರೆ ಉಸ್ತುವಾರಿ ಯಾವ ಯಾವ ರಾಜ್ಯಕ್ಕೆ ನೋಡೆಲ್‌ ಅಧಿಕಾರಿಗಳು ಯಾರು? ಇಲ್ಲಿದೆ ವಿವರ ಹೊಸ ದಿಲ್ಲಿ, ಉತ್ತರ ಭಾರತದ ರಾಜ್ಯಗಳು -ಕಪಿಲ್‌ ಮೋಹನ್‌ (9972904388) ಪಿ.ಎಸ್‌.ಸಿಂಧು (9480800601) ರಾಜಸ್ತಾನ - ಮನೋಜ್‌ ಕುಮಾರ ಮೀನಾ (9448724992) - ಡಾ.ರಾಮ್‌ ನಿವಾಸ್‌ ಸೆಪೆಟ್‌ (960604110) ಉತ್ತರ ಪ್ರದೇಶ - ತುಷಾರ್‌ ಗಿರಿನಾಥ್‌ (9741288825) - ಸುನಿಲ್‌ ಅಗರವಾಲ್‌ (9448371117) ಬಿಹಾರ - ಅಜುಂ ಪರ್ವೇಜ್ (9448378644) - ವಿಕಾಸ್‌ ಕುಮಾರ್‌ ವಿಕಾಸ್‌ (9480843003) ಪ.ಬಂಗಾಳ ಮತ್ತು ಈಶಾನ್ಯ ರಾಜ್ಯಗಳು - ಮನೋಜ ಜೈನ್‌ (94803 80780) - ನಿಶಾ ಜೇಮ್ಸ್‌ (9840401015) ಜಾರ್ಖಂಡ್‌ - ಉಜ್ವಲ್‌ಕುಮಾರ್‌ ಘೋಷ್‌ (7338525461) - ಸೀಮಂತ್‌ ಕುಮಾರ್‌ ಸಿಂಗ್‌ (9480800021) ಒಡಿಶಾ - ಡಾ.ಜೆ.ರವಿಶಂಕರ್‌ (9448478992) - ಡಾ.ಕೆ. ರಾಮಚಂದ್ರರಾವ್‌ (94808 06101) ಮಹಾರಾಷ್ಟ್ರ - ಗುಂಜನ್‌ ಕೃಷ್ಣ (9036366666) - ಪಾಟೀಲ್‌ ವಿನಾಯಕ್‌ ವಸಂತರಾವ್‌ (9480800823) ಆಂಧ್ರ, ತೆಲಂಗಾಣ - ಎನ್‌.ವಿ.ಪ್ರಸಾದ್‌ (9448146360) - ಮಾಲಿನಿ ಕೃಷ್ಣಮೂರ್ತಿ (9480800026) ತಮಿಳುನಾಡು - ವಿ. ಪೊನ್ನುರಾಜು (9845598981) - ಹರಿಶೇಖರನ್‌ (9448386750) ಕೇರಳ - ಡಾ.ಎಂ.ಟಿ.ರೇಜು (9449828637) - ಸಿಮಿ ಮೇರಿಯಂ ಜಾಜ್‌ರ್‍ (9480800071)


from India & World News in Kannada | VK Polls https://ift.tt/2y6KVrJ

ಕೊರೊನಾ ವೈರಸ್‌ ಚೀನಾದ್ದೇ.. ನಮ್ಮತ್ರ ಸಾಕ್ಷಿ ಇದೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್‌ಟನ್‌ ಡಿಸಿ: ವಿಚಾರವಾಗಿ ಮತ್ತು ನಡುವಿನ ಗುದ್ದಾಟ ಮುಂದುವರೆದಿದೆ. ಇಷ್ಟು ದಿನ ಕೊರೊನಾ ಚೀನಾದ್ದು ಎಂದು ಬರೀ ಬಾಯಿ ಮಾತಲ್ಲಿ ಹೇಳುತ್ತಿದ್ದ ಟ್ರಂಪ್‌ ಗುರುವಾರ ಹೊಸ ಬಾಂಬ್‌ ಸಿಡಿಸಿದ್ದು, ಕೊರೊನಾ ವೈರಸ್‌ಗೂ ವುಹಾನ್‌ ಲ್ಯಾಬ್‌ಗೂ ಸಂಬಂಧ ಇರುವುದಕ್ಕೆ ಮಹತ್ವದ ಸಾಕ್ಷಿ ಸಿಕ್ಕಿದೆ ಎಂದು ಹೇಳಿ ಡ್ರ್ಯಾಗನ್‌ ರಾಷ್ಟ್ರವನ್ನು ದಂಗು ಬಡಿಸಿದ್ದಾರೆ. ಚೀನಾದ ಮೇಲೆ ಆರೋಪ ಮಾಡುತ್ತಿದ್ದೀರಲ್ಲ ನಿಮ್ಮತ್ತಿರ ಏನು ಸಾಕ್ಷಿಯಿದೆ ಎಂದು ಗುರುವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಹೌದು ನನ್ನತ್ತಿರ ಸಾಕ್ಷಿ ಇದೆ. ಆದರೆ, ನಿಮಗೆ ಹೇಳಲು ಆಗುವುದಿಲ್ಲ ಎಂದು ಆತ್ಮವಿಶ್ವಾಸದಿಂದಲೇ ಉತ್ತರಿಸಿದ್ದಾರೆ. ಇನ್ನು, ಕೊರೊನಾ ನಷ್ಟಕ್ಕೆ ಪರಿಹಾರ ನೀಡಬೇಕೇಂದು ಚೀನಾಗೆ ಆಗ್ರಹಿಸಿದ್ದ ಟ್ರಂಪ್‌, ಈಗ ಇದನ್ನು ಬೇರೆ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ಚೀನಾದ ವಸ್ತುಗಳ ಮೇಲೆ ತೆರಿಗೆ ಹೆಚ್ಚು ಮಾಡುತ್ತೇವೆ. ಅದು ದುಡ್ಡಿಗಿಂತ ಹೆಚ್ಚಿನದನ್ನೇ ಅಮೆರಿಕಕ್ಕೆ ತಂದುಕೊಡಲಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಈಗಾಗಲೇ ಅಮೆರಿಕ ಹಾಗೂ ಚೀನಾ ನಡುವೆ ದೀರ್ಘಕಾಲಿಕ ವ್ಯಾಪಾರ ಯುದ್ಧ ನಡೆಯುತ್ತಿದ್ದು, ಈಗ ಅದು ಮತ್ತೊಂದು ಮಗ್ಗಲನ್ನು ತಲುಪಲಿದೆ. ಕೊರೊನಾ ಅಟ್ಟಹಾಸಕ್ಕೆ ಯುರೋಪ್‌ ಮತ್ತು ಅಮೆರಿಕ ಮಾರುಕಟ್ಟೆ ತತ್ತರಿಸಿದ್ದು, ಅಮೆರಿಕದ ಜನಸಂಖ್ಯೆಯ ಶೇ.9ರಷ್ಟು ಜನ ಮುಂದಿನ 6 ವಾರಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ. ಇದು ಅಮೆರಿಕಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ನ ಕ್ರಿಶ್ಚಿಯನ್‌ ಲ್ಯಾಗಾರ್ಡ್‌ ಹೇಳಿದ್ದು, ಯುರೋಪ್‌ನ ಅತಿದೊಡ್ಡ ಆರ್ಥಿಕತೆ ಜರ್ಮನಿಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ ಎಂದಿದ್ದಾರೆ. ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಕೊರೊನಾ ವೈರಸ್‌ನ್ನು ಡೊನಾಲ್ಡ್‌ ಟ್ರಂಪ್‌ ಸ್ಪಷ್ಟವಾಗಿ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ವಿಶ್ವ ನೋಡುತ್ತಿದೆ. ಚೀನಾ ವಿರೋಧಿ ಅಲೆಯಲ್ಲಿಯೇ ಚುನಾವಣೆ ಗೆಲ್ಲಲು ತಯಾರಿ ಮಾಡಿಕೊಂಡಿದ್ದಾರೆ. ಕೊರೊನಾದಿಂದ ವಿಶ್ವದ ಬೇರೆ ರಾಷ್ಟ್ರಗಳಿಗಿಂತ ಅಮೆರಿಕವೇ ಹೆಚ್ಚು ತತ್ತರಿಸಿದ್ದು, ವಿಶ್ವದ ದೊಡ್ಡಣ್ಣನ ಆರ್ಥಿಕತೆ ಪಾತಾಳ ತಲುಪಿದೆ. ಕಳೆದ ವರ್ಷ ಚೀನಾದ ವುಹಾನ್‌ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್‌ ಮಾನವನಿಗ ತಗುಲಿತ್ತು ಎಂದು ನಂಬಲಾಗಿತ್ತು. ಆದರೆ, ಅಮೆರಿಕದ ಸತತ ವಾದಗಳಿಂದ ಚೀನಾ ಜೈವಿಕ ಯುದ್ಧವನ್ನು ಪ್ರಾರಂಭಿಸಿತೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.


from India & World News in Kannada | VK Polls https://ift.tt/3aQ0BN7

ಕೊರೊನಾ ಸಂಕಷ್ಟದ ನಡುವೆ ಕಾರ್ಮಿಕರ ದಿನ, ಮೇ 1 ರ ಹಿನ್ನೆಲೆ ಏನು?

ಬೆಂಗಳೂರು: ವಿಶ್ವವು ಕೊರೊನಾ ಸಂಕಷ್ಟದಲ್ಲಿದೆ. ಈ ನಡುವೆ ಮೇ 1 ಕಾರ್ಮಿಕರ ದಿನ ಬಂದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಸಂಕಷ್ಟಗಳು ಸುದ್ದಿಯಾಗುತ್ತಿವೆ. ಉದ್ಯೋಗವಿಲ್ಲದೆ, ಸೂಕ್ತ ಸೌಲಭ್ಯವಿಲ್ಲದೆ ತೊಂದರೆಯನ್ನು ಅನುಭವಿಸುತ್ತಿರುವ ಕಾರ್ಮಿಕರ ಗೋಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಅಪರೂಪ. ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿ ನೂರಾರು ಕಿಲೋ ಮೀಟರ್‌ ನಡೆದುಕೊಂಡು ಊರು ಸೇರಿದ ಕಾರ್ಮಿಕರ ಕಣ್ಣೀರಿಗೂ 2020 ರ ಮೇ 1 ಸಾಕ್ಷಿಯಾಗಿದೆ. ಕೊರೊನಾದಂತಹ ಗಂಡಾತರ ಪರಿಸ್ಥಿತಿಯಲ್ಲಿ ಈ ದಿನದಂದು ಕಾರ್ಮಿಕರ ಮುಖದಲ್ಲಿ ಸಂತಸ ಮೂಡಲು ಅಸಾಧ್ಯ. ಹೀಗಿದ್ದರೂ ಕೆಲವು ಕಡೆಗಳಲ್ಲಿ ಕಾರ್ಮಿಕರ ದಿನವನ್ನು ಎಡಪಂಥೀಯ ಸಂಘನೆಗಳು ಆಚರಿಸುತ್ತಿದೆ. ರಾಜಕಾರಣಿಗಳು ಕಾರ್ಮಿಕರ ದಿನಕ್ಕೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಏನಿದು ಕಾರ್ಮಿಕರ ದಿನ ಮೇ 1 ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹು. ಕಾರ್ಮಿಕರ ಪರವಾದ ಹೋರಾಟಗಳ ಹಿನ್ನೆಲೆ ಈ ದಿನಕ್ಕಿದೆ. ಕಾರ್ಮಿಕರ ದಮನಕಾರಿ ನೀತಿಯ ವಿರುದ್ಧ ನಡೆದ ನಿರಂತರ ಹೋರಾಟದ ಭಾಗದಲ್ಲಿ ಕಾರ್ಮಿಕ ಸಂಘಟನೆಗಳು ಅಂತರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಕರೆ ಕೊಟ್ಟವು. 1886 ರಲ್ಲಿ ಅಮೆರಿಕಾದ ಷಿಕಾಗೋದಲ್ಲಿ ನಡೆದ ಕಾರ್ಮಿಕರ ಬೃಹತ್ ಮುಷ್ಕರದಂದು ಗೋಲಿಬಾರ್ ನಡೆದಿತ್ತು. ಈ ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ಬಲಿಯಾಗಿದ್ದರು. ಈ ದಮನಕಾರಿ ನೀತಿಯನ್ನು ವಿರೋಧಿಸಿ ಅಂತರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಮೇ 1 ರಂದು ಕಾರ್ಮಿಕ ದಿನವನ್ನಾಗಿ ಆಚರಣೆ ಮಾಡಲು ಕರೆ ನೀಡಿತು. ಅಂದಿನಿಂದ ಮೇ 1 ದುಡಿಯುವ ವರ್ಗಗಳ ವಿಮೋಚನೆಯ ದಿನವನ್ನಾಗಿ ಆಚರಿಸಲ್ಪಡುತ್ತಿದೆ. ಇಟಲಿ, ಕೆನಡಾ, ಅಮೆರಿಕಾ ಹೊರತಾಗಿ ಬಹುತೇಕ ಎಲ್ಲಾ ರಾಷ್ಟ್ರಗಳು ಮೇ 1ನ್ನು ಕಾರ್ಮಿಕ ದಿನವಾಗಿ ಆಚರಿಸುತ್ತದೆ. ಯುರೋಪಿನ ಹಲವು ರಾಷ್ಟ್ರಗಳಲ್ಲೂ ಆಚರಿಸಲಾಗುತ್ತದೆ. ರಷ್ಯಾ, ಚೀನಾ ಸೇರಿದಂತೆ ಕಮ್ಯುನಿಷ್ಟ್ ರಾಷ್ಟ್ರಗಳಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತ ಸೇರಿದಂತೆ ಸುಮಾರು 100 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮೇ 1 ರಂದು ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ. ಭಾರತದಲ್ಲಿ ಕಾರ್ಮಿಕ ಚಳುವಳಿಯ ಪ್ರಭಾವ ಹೆಚ್ಚಾಗಿದ್ದರಿಂದ ಮೇ ದಿನದ ಆಚರಣೆಯನ್ನು ಎರಪಂಥೀಯ, ಕಮ್ಯೂನಿಷ್ಟ್ ಸಂಘಟನೆಗಳು ಆಚರಿಸುತ್ತವೆ. ಎಡ ಪಕ್ಷಗಳ ಶಕ್ತಿ ಕೇಂದ್ರಗಳಾದ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ದಲ್ಲಿ ಮೇ 1 ರಂದು ಬೃಹತ್ ಕಾರ್ಮಿಕ ಪ್ರದರ್ಶನಗಳು, ಮೆರವಣಿಗೆಗಳು ಹಾಗೂ ಕಾರ್ಮಿಕರ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಲ್ಲಿ ಕೇವಲ ಸಾಂಕೇತಿಕವಾಗಿ ಈ ಆಚರಣೆ ಜಾರಿಯಲ್ಲಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ದಿನ ಸದ್ಯ ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ ಕಾರ್ಮಿಕರು, ರೈತರಾಗಿ ವರ್ಗ ಇದರಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದೆ. ಕೈಗಾರಿಕೆಗಳು ಮತ್ತೆ ಆರಂಭವಾಗಿ ಚೇತರಿಕೆ ಕಂಡುಕೊಳ್ಳು ಸಾಕಷ್ಟು ಸಮಯಾವಕಾಶದ ಅವಶ್ಯಕತೆ ಇದೆ. ಕೊರೊನಾದಿಂದಾಗಿ ಕಾರ್ಮಿಕರ ಸಂಕಷ್ಟಗಳು, ಉದ್ಯೋಗ ಅಭದ್ರತೆ, ಕೆಲಸದ ಒತ್ತಡ, ವೇತನ, ಪಿಂಚಣಿಗಳ ಕುರಿತಾಗಿ ಚರ್ಚೆಗಳು ನಡೆಯುತ್ತಿದ್ದರು ಕಾರ್ಮಿಕರ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಇದೀಗ ಮೇ 1 ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಂದಿರುವುದರಿಂದ ಕಾರ್ಮಿಕರ ಸಂಕಷ್ಟಗಳ ಕುರಿತಾಗಿ ಚರ್ಚೆ ನಡೆಯಬೇಕಾಗಿದೆ. ಲಾಕ್‌ಡೌನ್‌ನಿಂದ ಕೈಗಾರಿಕಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು ಇದರ ನೇರ ಪರಿಣಾಮ ಕಾರ್ಮಿಕರ ಮೇಲಾಗುತ್ತಿದೆ. ಈಗಾಗಲೇ ವೇತನ ಪಾವತಿಯಾಗದೆ ಕೆಲಸ ಕಳೆದುಕೊಳ್ಳುತ್ತಿರುವ ಆತಂಕದಲ್ಲಿ ಕಾರ್ಮಿಕರಿದ್ದಾರೆ. ಮುಂದಿನ ದಿನಗಳು ಮತ್ತಷ್ಟು ಸಂಕಷ್ಟಮಯವಾಗಲಿದೆ ಎಂಬ ಆತಂಕ ಕಾರ್ಮಿಕರಲ್ಲಿದೆ. ಸಂಕಷ್ಟದ ದಿನಗಳು ದೂರವಾಗಿ ಮುಖದಲ್ಲಿ ಮಂದಹಾಸ ಮೂಡುವ ದಿನಗಳಿಗಾಗಿ ಕಾರ್ಮಿಕರು ಕಾಣುತ್ತಿರುವ ಕನಸು ನನಸಾಗಲಿ ಎಂಬುವುದು ಎಲ್ಲರ ಹಾರೈಕೆ.


from India & World News in Kannada | VK Polls https://ift.tt/2z2gRO4

ಕಾರ್ಮಿಕರ ಹೋರಾಟದ ಆ ದಿನಕ್ಕಿಂದು ಬರೋಬ್ಬರಿ 139 ವರ್ಷ!

ಇಂದು 139ನೇ ವರ್ಷದ . ಈ ದಿನವನ್ನು ಲೇಬರ್‌ ಡೇ, ವರ್ಕರ್ಸ್ ಡೇ, ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಸಮಾಜದಲ್ಲಿ ಇವರ ಪಾತ್ರ ಬಹಳ ದೊಡ್ಡದು. ಕಾರ್ಮಿಕರು ತಮ್ಮ ದುಡಿಮೆಯಿಂದ ತಮ್ಮ ಕುಟುಂಬವನ್ನು ಪೋಷಿಸುವ ಜತೆಗೆ ತಮ್ಮ ಸಂಸ್ಥೆಯ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಈ ಮೂಲಕ ಒಂದು ದೇಶದ ಪ್ರಗತಿಗೂ ನೆರವಾಗುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸೇವೆಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ದಿನವೊಂದಕ್ಕೆ 8 ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಕಾರ್ಮಿಕರ ಚಳವಳಿ 1860 ರಿಂದ ಆರಂಭವಾಯಿತು. ಚಳವಳಿಗಾಗಿ ಅಮೆರಿಕ, ಕೆನಡಾ, ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ದಿನವೊಂದಕ್ಕೆ 10 ರಿಂದ 14 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು. ಅಮರಿಕದ ಷಿಕಾಗೋ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಯಿತು. 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಆರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣತ್ಯಾಗ ಮಾಡಿದರು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಹದಿನೆಂಟು-ಹತ್ತೊಂಬತ್ತನೇ ಶತಮಾನವು ಕೈಗಾರಿಕಾ ಕ್ರಾಂತಿಯ ಕಾಲವಾಗಿತ್ತು, ಬಂಡವಾಳಶಾಹಿ ಆರ್ಥಿಕತೆಯು ಬಲಗೊಳ್ಳಲಾರಂಭಿಸಿದ್ದ ಕಾಲವಾಗಿತ್ತು. ದೊಡ್ಡದಾಗಿ ಬೆಳೆಯತೊಡಗಿದ್ದ ಉದ್ದಿಮೆಗಳಲ್ಲಿ ಕಾರ್ಮಿಕರು ದಿನಕ್ಕೆ 12-20 ಗಂಟೆ ದುಡಿದು ಹೈರಾಣಾಗುತ್ತಿದ್ದರು. ಒಳ ಹೋದವರು ಹೊರಬರುವ ಖಾತರಿಯಿಲ್ಲದಿದ್ದ ಗಣಿಗಳು, ಉಸಿರುಗಟ್ಟಿಸುವಷ್ಟು ಮಲಿನವಾಗಿದ್ದ ಕಾರ್ಖಾನೆಗಳು, ಸ್ವಲ್ಪ ತಪ್ಪಿದರೆ ಚಚ್ಚುತ್ತಿದ್ದ ಯಂತ್ರಗಳು ದುಡಿಯುವವರ ಆರೋಗ್ಯಕ್ಕೂ, ಆಯಸ್ಸಿಗೂ ಕಂಟಕವಾಗಿದ್ದವು. ಇಂತಹ ಅಮಾನವೀಯವಾದ, ಅಪಾಯಕಾರಿಯಾದ, ಅನಾರೋಗ್ಯಕರವಾದ ಸ್ಥಿತಿಗತಿಗಳ ವಿರುದ್ಧ ವಿಶ್ವದೆಲ್ಲೆಡೆ ಪ್ರತಿಭಟನೆಗಳಾಗುತ್ತಿದ್ದವು. ಆಸ್ಟ್ರೇಲಿಯಾದಿಂದ ಅಮೆರಿಕಾದವರೆಗೆ ಈ ಹೋರಾಟಗಳು ಒಗ್ಗಟ್ಟಾಗಿ ಬಲಗೊಂಡಂತೆ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಸುಧಾರಣೆಗಳು ಆರಂಭಗೊಂಡವು. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ದುಡಿಸಬಾರದೆನ್ನುವ ಬೇಡಿಕೆಯೂ ಎಲ್ಲೆಡೆ ಜೋರಾಯಿತು. ‘ಮೇ 1, 1886ರಿಂದ ಎಂಟೇ ಗಂಟೆಗಳ ಕೆಲಸ’ ಎಂಬ ಘೋಷಣೆಯೊಂದಿಗೆ ಅಮೆರಿಕಾದ ಕಾರ್ಮಿಕರ ಸಂಘದ ನೇತತ್ವದಲ್ಲಿ ಮುಷ್ಕರಗಳು ನಡೆದವು. ಷಿಕಾಗೋ ನಗರದಲ್ಲಿ 40,000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಮಾಲೀಕರು ಹಾಗೂ ಪೋಲೀಸರ ಅಮಾನುಷ ದಾಳಿಗಳಾದವು; ಹಲವರು ಸತ್ತರು, ಬಂಧಿತ ನಾಯಕರು ಗಲ್ಲಿಗೇರಿಸಲ್ಪಟ್ಟರು. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು.


from India & World News in Kannada | VK Polls https://ift.tt/3bTS0dL

ಕೊರೊನಾ ಲೈವ್ ಅಪ್‌ಡೇಟ್ಸ್; ದೇಶದಲ್ಲಿ 34,863ಕ್ಕೇರಿದ ಸೋಂಕಿತ ಪ್ರಕರಣಗಳು!

ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 2ಲಕ್ಷದ 28 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 1ರ ಕ್ಷಣಕ್ಷಣದ ಮಾಹಿತಿ ಇಲ್ಲಿದೆ:- -ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. 229 ಮಂದಿ ಗುಣಮುಖರಾಗಿದ್ದು 22ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 12ನೇ ಸ್ಥಾನದಲ್ಲಿದೆ.

-ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸೋಂಕಿತರ ಸಂಖ್ಯೆ 34,863ಕ್ಕೆ ಏರಿಕೆಯಾಗಿದೆ. 9,059 ಮಂದಿ ಗುಣಮುಖರಾಗಿದ್ದು, 1,154 ಮಂದಿ ಸಾವನ್ನಪ್ಪಿದ್ದಾರೆ. -ಅಮೆರಿಕದಲ್ಲಿ ಅತೀ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದು. ಸೋಂಕಿತ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 10 ಲಕ್ಷದ 95 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, 63,800ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪಟ್ಟಿಯಲ್ಲಿ ಕೂಡ ಮೊದಲನೇ ಸ್ಠಾನದಲ್ಲಿದೆ. -ಸೋಂಕಿತ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 2 ಲಕ್ಷದ 39 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 24,500ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಚಾರ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದೆ. -ಇಟಲಿ ಮೃತಪಟ್ಟವರ ಚಾರ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 2ಲಕ್ಷದ 05ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 27,900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. ಸೋಂಕಿತರ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. -ವಿಶ್ವದಾದ್ಯಂತ 2 ಲಕ್ಷ 34 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 33 ಲಕ್ಷದ 08ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇದರಲ್ಲಿ 10ಲಕ್ಷದ 39 ಸಾವಿರ ಮಂದಿ ಗುಣಮುಖರಾಗಿದ್ದಾರೆ.


from India & World News in Kannada | VK Polls https://ift.tt/35jwE7b

ಪರ ಊರಲ್ಲಿ ಸಿಲುಕಿದವವರಿಗೆ ತಾಯ್ನಾಡಿಗೆ ಮರಳಲು ಇರುವ ಷರತ್ತುಗಳೇನು? ಇಲ್ಲಿದೆ ಮಾಹಿತಿ

ಬೆಂಗಳೂರು: ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ತಮ್ಮದಲ್ಲದ ನಾಡಿನಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ತವರಿಗೆ ಮರಳಲು ಒಂದು ಅವಕಾಶ ಸಿಕ್ಕಿದೆ. ಆದರೆ ಈ ಪ್ರಯಾಣ ಒಂದು ಬಾರಿ ಮಾತ್ರವಾಗಿದೆ. ಊರಿಗೆ ಮರಳಿದ ಬಳಿಕ ಲಾಕ್‌ಡೌನ್‌ ಸಂಪೂರ್ಣ ತೆರವುಗೊಳ್ಳುವ ವರೆಗೆ ವಾಪಸ್‌ ಆಗುವಂತಿಲ್ಲ. ಒಂದು ಬಾರಿ ಪ್ರಯಾಣಿಸಲು ಅವಕಾಶ ನೀಡಲಾಗಿರುವ ಪ್ರಯಾಣದ ಬಗೆಗಿನ ಪ್ರಮುಖಾಂಶಗಳು ಹೀಗಿವೆ. - ರಾಜ್ಯದಲ್ಲಿ ಸಿಕ್ಕಿಕೊಂಡಿರುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರರು ಅವರ ಸ್ವಂತ ರಾಜ್ಯಕ್ಕೆ ಪ್ರಯಾಣ ಬೆಳೆಸಬಹುದು. ಆದರೆ, ಅಲ್ಲಿಂದ ವಾಪಸ್‌ ಬರುವಂತಿಲ್ಲ. - ನಮ್ಮ ರಾಜ್ಯದೊಳಗೂ ಜಿಲ್ಲೆಯಿಂದ ಜಿಲ್ಲೆಗೆ ಒಮ್ಮೆ ಮಾತ್ರ ಪ್ರಯಾಣಿಸಬಹುದು. ಈ ಪ್ರಯಾಣಕ್ಕೆ ಮುನ್ನ ತಪಾಸಣೆ ಮಾಡಿಸಿಕೊಂಡಿರಬೇಕು. - ಪ್ರಯಾಣದ ಖರ್ಚನ್ನು ಜನರೇ ಭರಿಸಿಕೊಳ್ಳಬೇಕಾಗುತ್ತದೆ. ವಾಹನ ಬೇಕಾದರೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಬಹುದು. - ಹೆಚ್ಚು ಜನರು ಇಲ್ಲದಿದ್ದರೆ ಟ್ಯಾಕ್ಸಿ, ಇನ್ನಿತರ ಲಘು ವಾಹನ ಮಾಡಿಕೊಂಡು ಹೋಗಲು ಪರವಾನಗಿ ನೀಡಲಾಗುತ್ತದೆ. - ಇದೇ ರೀತಿ ಬೇರೆ ರಾಜ್ಯದಲ್ಲಿ ಸಿಲುಕಿಕೊಂಡವರೂ ಒಂದು ಬಾರಿಗೆ ಅನ್ವಯವಾಗುವಂತೆ ನಮ್ಮ ರಾಜ್ಯಕ್ಕೆ ಬರಬಹುದು. - ಉದ್ಯಮದ ಸಂಬಂಧ ಜಿಲ್ಲೆಯಿಂದ ಜಿಲ್ಲೆಗೆ ಒಂದಕ್ಕಿಂತ ಹೆಚ್ಚು ಬಾರಿ ಪ್ರಯಾಣ ಮಾಡಬೇಕಿರುವ ಪ್ರತಿನಿಧಿಗಳಿಗೆ ಮಾತ್ರ ಷರತ್ತುಬದ್ಧವಾಗಿ ಅನುಮತಿ.


from India & World News in Kannada | VK Polls https://ift.tt/3f6s68D

ತೆರವಿನತ್ತ ಲಾಕ್‌ಡೌನ್‌: ರೆಡ್‌ ಝೋನ್‌ ಬಿಟ್ಟು ಉಳಿದೆಡೆ ಕೈಗಾರಿಕೆ ಓಪನ್‌, ಹೋಟೆಲ್‌ ಪಾರ್ಸೆಲ್‌ಗೂ ಅವಕಾಶ

ಬೆಂಗಳೂರು: ಕೇಂದ್ರದ ಮಾರ್ಗಸೂಚಿಯನ್ನು ನಿರೀಕ್ಷಿಸಿ ರೆಡ್‌ ಝೋನ್‌ ಹೊರತು ಪಡಿಸಿ ಇತರ ವಲಯದಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಹಾಗೆಯೇ ಕಾರ್ಮಿಕರು, ವಿದ್ಯಾರ್ಥಿಗಳು, ಇತರ ಉದ್ಯೋಗಿಗಳು ಒಂದು ಬಾರಿಗೆ ಅಂತಾರಾಜ್ಯ ಹಾಗೂ ಅಂತರ್‌ ಜಿಲ್ಲಾ ಪ್ರಯಾಣ ಕೈಗೊಳ್ಳಲು ಒಪ್ಪಿಗೆ ನೀಡಲೂ ತೀರ್ಮಾನಿಸಿದೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿಗುರುವಾರ ನಡೆದ ಸಂಪುಟ ಸಭೆಯಲ್ಲಿಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೈಗಾರಿಕೆ ಆರಂಭಕ್ಕೆ ಹಸಿರುವ ವಲಯದಲ್ಲಿನೀಡಿದ್ದ ಅವಕಾಶವನ್ನು ಇದೀಗ ರೆಡ್‌ ಝೋನ್‌ ಬಿಟ್ಟು ಉಳಿದ ಕಡೆಗೂ ವಿಸ್ತರಿಸಲಾಗಿದೆ ಎಂದು ಕೈಗಾರಿಕೋದ್ಯಮಿಗಳ ಜತೆಗಿನ ಸಭೆಯ ಬಳಿಕ ತಿಳಿಸಿದರು. ಮೇ 3ರ ಬಳಿಕ ಕೇಂದ್ರದಿಂದ ಬರುವ ಮಾರ್ಗಸೂಚಿ ಆಧರಿಸಿ ಇನ್ನಷ್ಟು ಸಡಿಲಿಕೆ, ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ನಡುವೆಯೂ ಮದ್ಯ ಮಾರಾಟ, ಹೋಟೆಲ್‌ ಉದ್ಯಮ ಆರಂಭ ಹಾಗೂ ಸೆಲೂನ್‌ ಶಾಪ್‌ ತೆರೆಯುವುದರ ಬಗ್ಗೆ ಮೇ 3ರ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗೆ ಕಾಯಲಾಗುತ್ತಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಸಭೆಯ ಮಾಹಿತಿ ನೀಡಿದರು. ನಿಯಂತ್ರಣ ವಲಯ ಮಾತ್ರ ಸೀಲ್‌ ನಿಯಂತ್ರಣ ವಲಯ ಹೊರತು ಪಡಿಸಿ ಇತರ ಎಲ್ಲಾ ಕಡೆ ಕೈಗಾರಿಕೆ ಪ್ರಾರಂಭಿಸುವುದಕ್ಕೂ ಸಂಪುಟ ಒಲವು ತೋರಿದೆ. ಸಂಪುಟ ಸಭೆ ಬಳಿಕ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್‌.ಯಡಿಯೂರಪ್ಪ, ''ನಿಯಂತ್ರಣ ವಲಯವೊಂದನ್ನು ಹೊರತು ಪಡಿಸಿ ಉಳಿದೆಲ್ಲಕಡೆಯೂ ಮೇ 4ರ ಬಳಿಕ ಕೈಗಾರಿಕೆಗೆ ಅನುಮತಿ ನೀಡುವ ಉದ್ದೇಶವಿದೆ. ಒಂದು ರೀತಿಯಲ್ಲಿ ಕೋವಿಡ್‌ ಕಾಟ ನಿಯಂತ್ರಣಕ್ಕೆ ಬರುತ್ತಿದೆ ಎಂದು ಎನಿಸುತ್ತಿದೆ. ಬೆಂಗಳೂರಿನಲ್ಲಿ ಕಳೆದ 3-4 ದಿನದಿಂದ ಹೆಚ್ಚು ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ಬೆಂಗಳೂರು ಮತ್ತು ಸುತ್ತಮುತ್ತವೂ ಕೈಗಾರಿಕೆ ಆರಂಭಿಸಲು ಅನುಕೂಲವಾಗಬಹುದು. ಈ ದಿಕ್ಕಿನಲ್ಲಿ ಇನ್ನೊಂದೆರಡು ದಿನ ಕಾಯ್ದು ನೋಡಲಾಗುವುದು,'' ಎಂದು ಹೇಳಿದರು. ಪಾರ್ಸೆಲ್‌ ಕೊಡಬಹುದುಮದ್ಯ ಮಾರಾಟ, ಹೋಟೆಲ್‌ ಆರಂಭ, ಸೆಲೂನ್‌ ಶಾಪ್‌ ಆರಂಭಿಸುವ ಬಗ್ಗೆ ನಿರ್ಧರಿಸಿಲ್ಲ. ಮೇ 3ರ ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಆದರೆ, ಹೋಟೆಲ್‌ಗಳಲ್ಲಿ ಊಟ, ತಿಂಡಿ ಪಾರ್ಸೆಲ್‌ ಕೊಡಬಹುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. 3-4 ತಿಂಗಳು ಇದ್ದೀತುಕೋವಿಡ್‌ ಸಮಸ್ಯೆ ಇನ್ನೂ 3-4 ತಿಂಗಳು ಇದ್ದರೆ ಅಚ್ಚರಿಯಿಲ್ಲ. ಹಾಗಾಗಿ ಕೋವಿಡ್‌ ನಿರ್ವಹಣೆ ಮತ್ತು ಆರ್ಥಿಕ ಚಟುವಟಿಕೆ ಒಟ್ಟೊಟ್ಟಿಗೆ ಹೋಗಬೇಕು. ಇದು ಪ್ರಧಾನಿಯವರ ಆಶಯವೂ ಆಗಿದೆ. ಕೇಂದ್ರದಿಂದ ಬರುವ ಮಾರ್ಗಸೂಚಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. - ಬಿ.ಎಸ್‌.ಯಡಿಯೂರಪ್ಪ, ಸಿಎಂ


from India & World News in Kannada | VK Polls https://ift.tt/2yV3dfB

ಚೀನಾ ನಾನು ಸೋಲುವುದನ್ನೇ ಕಾಯುತ್ತಿದೆ: ಶುರುವಾಯ್ತು ಟ್ರಂಪ್ ಎಲೆಕ್ಷನ್ ಪ್ರಚಾರ!

ವಾಷಿಂಗ್ಟನ್: ಇದೇ ನವೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆಯಲಿದ್ದು, ಈಗಾಗಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿ ಬಿಟ್ಟಿದ್ದಾರೆ. ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಈ ಬಾರೊ ಕೊರೊನಾ ವೈರಸ್ ಮತ್ತು ಚೀನಾದ ಉಲ್ಲೇಖವೇ ಅಧಿಕವಾಗಿರಲಿದೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸೋಲಬೇಕೆಂಬುದು ಚೀನಾದ ಬಯಕೆಯಾಗಿದ್ದು, ಅದಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಹೋಗಬಹುದು ಎಂದು ಟ್ರಂಪ್ ಹೇಳಿದ್ದಾರೆ. ಮಾರಕ ಕೊರೊನಾ ವೈರಸ್‌ನ್ನು ವಿಶ್ವಕ್ಕೆ ಕೊಡುಗೆಯಾಗಿ ಕೊಟ್ಟಿರುವ ಚೀನಾವನ್ನು ಸದ್ಯ ತಾವೊಬ್ಬರೇ ಎದುರು ಹಾಕಿಕೊಂಡಿದ್ದು, ಇದೇ ಕಾರಣಕ್ಕೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸೋಲಿಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡಲಿದೆ ಎಂದು ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ಸೋತರೆ ಚೀನಾ ನಿರಾಳವಾಗಿ ಬಿಡುತ್ತದೆ. ಆದರೆ ಹೀಗಾಗಬಾರದು ಎಂದರೆ ಅಮೆರಿಕದ ಜನತೆ ತಮ್ಮನ್ನು ಮರು ಆಯ್ಕೆ ಮಾಡಬೇಕು ಎಂದು ಟ್ರಂಪ್ ಮನವಿ ಮಾಡಿದ್ದಾರೆ. ನಾನು ಮರು ಆಯ್ಕೆಯಾದರೆ ಅಮೆರಿಕವೂ ಸೇರಿದಂತೆ ಇಡೀ ಜಗತ್ತಿಗೆ ಕೊರೊನಾ ವೈರಸ್ ಹರಿಬಿಟ್ಟಿರುವ ಚೀನಾವನ್ನು ಇದರ ಜವಾಬ್ದಾರಿ ಹೊರುವಂತೆ ಮಾಡುವುದು ಖಚಿತ ಎಂದೂ ಟ್ರಂಪ್ ಈ ವೇಳೆ ಭರವಸೆ ನೀಡಿದ್ದಾರೆ. ನಮಗೆ ಆಸಕ್ತಿಯೇ ಇಲ್ಲ ಎಂದ ಚೀನಾ: ಇನ್ನು ಟ್ರಂಪ್ ಅವರ ಆರೋಪವನ್ನು ಅಲ್ಲಗಳೆದಿರುವ ಚೀನಾ, ಅಮೆರಿಕದ ಆಂತರಿಕ ರಾಜಕೀಯದಲ್ಲಿ ತನಗೆ ಎಳ್ಳಷ್ಟೂ ಆಸಕ್ತಿ ಇಲ್ಲ ಎಂದು ಹೇಳಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಯಾರೂ ಸೋಲುತ್ತಾರೆ ಎಂದು ತಲೆಕೆಡಿಸಕೊಳ್ಳಲು ತನ್ನ ಬಳಿ ಸಮಯವಿಲ್ಲ ಎಂದು ಚೀನಾ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಸಚಿವ ಜೆಂಗ್ ಶುವಾಂಗ್, ಅಮೆರಿಕದ ಜನತೆ ಚೀನಾವನ್ನು ತನ್ನ ಚುನಾವಣಾ ಚರ್ಚಾ ವಿಷಯವನ್ನಾಗಿ ಮಾಡಿಕೊಳ್ಳುವ ಹುನ್ನಾರವನ್ನು ಒಪ್ಪುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೊರೊನಾ ವೈರಸ್ ಮತ್ತು ಚೀನಾ ಚರ್ಚಾ ವಿಷಯಗಳಾಗುವುದು ಖಚಿತವಾಗಿದ್ದು, ಟ್ರಂಪ್ ಇದಕ್ಕಾಗಿ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾಗಿದೆ.


from India & World News in Kannada | VK Polls https://ift.tt/2zKbmnr

ನಷ್ಟ ಭರ್ತಿಗೆ ಮೇ 4ರಿಂದ ಮದ್ಯ ಮಾರಾಟ ಸಾಧ್ಯತೆ..! ಕೇಂದ್ರದ ಮಾರ್ಗಸೂಚಿಗೆ ಕಾದಿರುವ ರಾಜ್ಯ

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ನಿಷೇಧ ಮಾಡಿದ ಹಿನ್ನೆಲೆ ಸರಕಾರಕ್ಕೆ ಸಾವಿರಾರು ಕೋಟಿ ರೂ.ನಷ್ಟವುಂಟಾಗಿದೆ. ಈ ಕಾರಣದಿಂದ ಮೇ 4ರಿಂದ ಮದ್ಯ ಮಾರಾಟಕ್ಕೆ ಸರಕಾರ ಅವಕಾಶ ನೀಡುವ ಸಾಧ್ಯತೆ ಇದೆ. ಈ ಮೂಲಕ ಬೊಕ್ಕಸಕ್ಕೆ ಆಗುವ ನಷ್ಟವನ್ನು ಕಡಿಮೆ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. ಮಾರ್ಚ್‌ 24 ರಿಂದ ಮೇ 3ರವರೆಗೂ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಇರುವುದರಿಂದ ಸರಕಾರದ ಖಜಾನೆಗೆ ಬರೋಬ್ಬರಿ 2,050 ಕೋಟಿ ರೂ. ನಷ್ಟ ಉಂಟಾಗಿದೆ. ಈ ಕಾರಣಕ್ಕಾಗಿಯೇ ಮಂಗಳವಾರ ಸಿಎಂಗಳ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಹಸಿರು ವಲಯದಲ್ಲಾದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದರು. ಈಗ ಸರಕಾರ ಕೇಂದ್ರದ ಮಾರ್ಗಸೂಚಿಗಾಗಿ ಕಾಯುತ್ತಿದ್ದು, ಶುಕ್ರವಾರ ಅಥವಾ ಶನಿವಾರ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆ ಇದ್ದು, ಅದರ ಆಧಾರದ ಮೇಲೆ ರಾಜ್ಯದಲ್ಲಿ ಮದ್ಯ ಮಾರಾಟದ ಭವಿಷ್ಯ ತೀರ್ಮಾನವಾಗಲಿದೆ. ಏಕೆಂದರೆ, ಕೇಂದ್ರ ಸರಕಾರವೇ ರಾಷ್ಟ್ರಾದ್ಯಂತ ಮದ್ಯ ಮಾರಾಟ ನಿಷೇಧಿಸಿರುವುದರಿಂದ ಕೇಂದ್ರದ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಕೇಂದ್ರದ ಮಾರ್ಗಸೂಚಿ ನಂತರವೇ ತೀರ್ಮಾನ ಎಂದು ಸರಕಾರ ಹೇಳಿದೆ. ಈ ಬಗ್ಗೆ ಅಬಕಾರಿ ಸಚಿವ ಎಚ್‌.ನಾಗೇಶ್‌, ನಾವು ಮದ್ಯ ಮಾರಾಟವನ್ನು ಏಪ್ರಿಲ್‌ 14ರಂದೇ ಮರು ಪ್ರಾರಂಭಿಸಬೇಕಾಗಿತ್ತು. ಆದರೆ, ಲಾಕ್‌ಡೌನ್‌ ವಿಸ್ತರಣೆಯಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಮದ್ಯ ಮಾರಾಟ ಮತ್ತು ಉತ್ಪಾದನೆಯನ್ನು ತಕ್ಷಣ ಪ್ರಾರಂಭಿಸದಿದ್ದರೆ ಸರಕಾರಕ್ಕೆ ಹೊರೆಯಾಗುವುದು ಖಂಡಿತ. ಮೇ 3ರಿಂದ ಮದ್ಯ ಮಾರಾಟಕ್ಕೆ ಎಲ್ಲ ರೀತಿಯ ಪ್ರಯತ್ನ ಪಡುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಮೇ 15ರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದರು. ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಇದನ್ನೇ ಪ್ರಸ್ತಾಪಿಸಿದ್ದು, ಏಪ್ರಿಲ್‌ ತಿಂಗಳ ಸೇರಿಗೆ ಸಂಗ್ರಹದ ಗುರಿ 10,500 ಕೋಟಿ ರೂ.ನಲ್ಲಿ ಕೇವಲ ಶೇ.4ರಷ್ಟು ಮಾತ್ರ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷದ ಉಳಿತಾಯದೊಂದಿಗೆ ಏಪ್ರಿಲ್‌ ತಿಂಗಳ ವೇತನವನ್ನು ಸರಕಾರ ಸಿಬ್ಬಂದಿಗೆ ನೀಡಬಹುಉ. ಆದರೆ, ಮದ್ಯ ಮಾರಾಟ ಪ್ರಾರಂಭಿಸದಿದ್ದರೆ ಸರಕಾರ ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿ ತಿಂಗಳು ರಾಜ್ಯ ಸರಕಾರಕ್ಕೆ ಮದ್ಯ ಮಾರಾಟದಿಂದಲೇ 1,900 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ, ಇದು ಏಪ್ರಿಲ್‌ ತಿಂಗಳಲ್ಲಿ ಶೂನ್ಯ ತಲುಪಿದೆ. ಆದ್ದರಿಂದ ಮದ್ಯ ಮಾರಾಟ ಮರು ಪ್ರಾರಂಭಿಸಿ ಆದ ನಷ್ಟವನ್ನು ತುಂಬಲು ಸರಕಾರ ಹವಣಿಸುತ್ತಿದೆ. ಗ್ರೀನ್‌ ಜೋನ್‌ಗಳಲ್ಲಿ ಮದ್ಯ ಮಾರಾಟ ಸೋಮವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/35gS30C

ದಿಲ್ಲಿ ಸೆಂಟ್ರಲ್‌ ವಿಸ್ತಾ ಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಹೊಸದಿಲ್ಲಿ: ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ 20,000 ಕೋಟಿ ರೂಪಾಯಿ ಮೊತ್ತದ ಸೆಂಟ್ರಲ್‌ ವಿಸ್ತಾ ಯೋಜನೆಗೆ ತಡೆ ನೀಡಲು ನಿರಾಕರಿಸಿದೆ. ಕೇಂದ್ರ ದಿಲ್ಲಿಯ ಲುಟಿಯನ್ಸ್‌ ಪ್ರದೇಶದಲ್ಲಿ ಹೊಸ ಸಂಸತ್‌ ಭವನ ಮತ್ತು ಇತರ ಸರಕಾರಿ ಕಚೇರಿಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಯೋಜನೆಯ ವಿರುದ್ಧ ಇದೇ ರೀತಿಯ ಅರ್ಜಿಯು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಕೋವಿಡ್‌-19 ಪರಿಸ್ಥಿತಿಯಲ್ಲಿ, ಯಾರೂ ಏನನ್ನೂ ಮಾಡಲು ಹೋಗುವುದಿಲ್ಲ ಮತ್ತು ಯಾವುದೇ ತುರ್ತು ಇಲ್ಲ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಹೇಳಿದ್ದಾರೆ. ಈಗಾಗಲೇ ರಾಜೀವ್‌ ಸೂರಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. “ಇದೇ ರೀತಿಯ ಅರ್ಜಿ ವಿಚಾರಣೆಗೆ ಬಾಕಿ ಇದೆ ಮತ್ತು ಇದನ್ನು ನಕಲು ಮಾಡುವ ಅಗತ್ಯವಿಲ್ಲ,” ಎಂಬುದಾಗಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಸೆಂಟ್ರಲ್‌ ವಿಸ್ತಾ ಯೋಜನೆಗೆ ಭೂ ಪ್ರದೇಶದ ಬಳಕೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಲುಟಿಯೆನ್ಸ್ ಪ್ರದೇಶದ 86 ಎಕರೆ ವಿಸ್ತೀರ್ಣದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುವುದು 'ಕಟುವಾದ ನಡೆ'ಯಾಗಿದ್ದು ಇದರಿಂದ ತೆರೆದ ಮತ್ತು ಹಸಿರಿನಿಂದ ಕೂಡಿದ ಪ್ರದೇಶವನ್ನು ಆನಂದಿಸುವ ಜನರಿಗೆ ವಂಚನೆಯಾಗಿದೆ ಎಂದು ಅರ್ಜಿದಾರರು ದೂರಿದ್ದರು. ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ "ಸಂಸತ್‌ ಭವನ ನಿರ್ಮಿಸಲಾಗುತ್ತಿದೆ ... ಯಾರಾದರೂ ಯಾಕೆ ಆಕ್ಷೇಪಣೆ ವ್ಯಕ್ತಪಡಿಸಬೇಕು?” ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಪ್ರಕರಣದ ವಿಚಾರಣೆ ನಡೆಸಿತು. ಐತಿಹಾಸಿಕ ರೈಸಿನಾ ಹಿಲ್‌ ಕಾಂಪ್ಲೆಕ್ಸ್‌ ಮತ್ತು ಸಂಸತ್‌ ಭವನದ ಬಾಹ್ಯ ಚಹರೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದಾಗಿ ಸರಕಾರ ಕಳೆದ ಅಕ್ಟೋಬರ್‌ನಲ್ಲಿ ಹೇಳಿತ್ತು. ಈಗಿನ ಸಂಸತ್‌ನಲ್ಲಿ ಎಲ್ಲಾ ಸಂಸದರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲ, ಇಕ್ಕಟ್ಟಾಗಿದೆ ಎಂಬುದಾಗಿ ಗೃಹ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅಕ್ಟೋಬರ್‌ನಲ್ಲಿ ಹೇಳಿದ್ದರು. ಇಂಡಿಯಾ ಗೇಟ್‌ ಮತ್ತು ರಾಷ್ಟ್ರಪತಿ ಭವನದ ನಡುವೆ ಸೆಂಟ್ರಲ್‌ ವಿಸ್ತಾ ಯೋಜನೆ ಜಾರಿಗೊಳಿಸಲಾಗುತ್ತಿದ್ದು 2021ರ ನವೆಂಬರ್‌ಗೆ ಪೂರ್ಣಗೊಳ್ಳಲಿದೆ. 2022ರ ಮಾರ್ಚ್‌ 22ಕ್ಕೆ ಮೊದಲು ಹೊಸ ಸಂಸತ್‌ ಭವನ ನಿರ್ಮಾಣವಾಗಲಿದ್ದು, 2024 ಮಾರ್ಚ್‌ಗೆ ಎಲ್ಲಾ ಸಚಿವಾಲಯಗಳೂ ಒಂದೇ ಕಡೆ ಕಾರ್ಯ ನಿರ್ವಹಿಸುವ ಕಾರ್ಯಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ.


from India & World News in Kannada | VK Polls https://ift.tt/3f34DFf

ಕೊರೊನಾ ಲಾಕ್‌ಡೌನ್: ಅಂತರ್‌ ಜಿಲ್ಲೆ, ಅಂತರ್‌ ರಾಜ್ಯ ಸಂಚಾರಕ್ಕೆ ಅವಕಾಶ, ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಂತರ್ ರಾಜ್ಯ ಹಾಗೂ ಅಂತರ್‌ ಜಿಲ್ಲೆಯ ಸಂಚಾರಕ್ಕೆ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೊರೊನಾ ಲಾಕ್‌ಡೌನ್ ಪರಿಣಾಮ ವಿವಿಧ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗದೆ ರಾಜ್ಯದಲ್ಲಿ ಉಳಿದುಕೊಂಡಿದ್ದರು. ಉದ್ಯೋಗ ಹಾಗೂ ವಸತಿ ಇಲ್ಲದೆ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ನೀಡಿದೆ. ಊರಿಗೆ ತೆರಳಲು ಮುಂದಾಗಿದ್ದ ಕಾರ್ಮಿಕರಿಗೆ ವಸತಿ ಹಾಗೂ ಊಟದ ಸೌಲಭ್ಯವನ್ನು ಕಲ್ಪಿಸಿದೆ. ಇದೀಗ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಹೊರರಾಜ್ಯಗಳ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಅಂತರ್‌ ರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಇದಕ್ಕೆ ಸರ್ಕಾರ ಖರ್ಚು ಭರಿಸುವುದಿಲ್ಲ. ಬದಲಾಗಿ ಅವರ ಸ್ವಂತ ಖರ್ಚಿನಲ್ಲೇ ತೆರಳಬೇಕಿದೆ ಎಂದು ಸಂಸದೀಯ ವ್ಯವಹಾರ ಖಾತೆ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಮೇ 3 ರಂದು ಎರಡನೇ ಅವಧಿಯ ಲಾಕ್‌ಡೌನ್ ಮುಕ್ತಾಯಗೊಳ್ಳಲಿದ್ದು ರಾಜ್ಯದ ಹಸಿರು ವಲಯಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.


from India & World News in Kannada | VK Polls https://ift.tt/2W9KViB

ಮದ್ಯವನ್ನು ಪಾರ್ಸಲ್‌ ನೀಡಲಾದರೂ ಅನುಮತಿ ನೀಡಿ: ವೈನ್‌ ಮಾರಾಟಗಾರರ ಮನವಿ

ಬೆಂಗಳೂರು: ಮೇ 3ಕ್ಕೆ ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್‌ ಮುಕ್ತಾಯವಾಗಲಿದೆ. ನಂತರವಾದರೂ ಕೆಲವು ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ವೈನ್ ಮಾರಾಟಗಾರರ ಒಕ್ಕೂಟ ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಲಾಕ್‌ಡೌನ್ ಪರಿಣಾಮ ಎಲ್ಲ ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಹೀಗಾಗಿ ಎಲ್ಲ ಮದ್ಯದ ಅಂಗಡಿಗಳಲ್ಲಿ ಭಾರೀ ಪ್ರಮಾಣದ ಬಿಯರ್ ಸ್ಟಾಕ್ ಇದೆ. ಒಂದು ವೇಳೆ ಮೇ 4ರ ನಂತರವೂ ಮದ್ಯದ ಅಂಗಡಿಗಳನ್ನು ತೆರೆಲು ಅನುಮತಿ ನೀಡದಿದ್ದರೆ ಸ್ಟಾಕ್‌ ಇರುವ ಎಲ್ಲ ಬಿಯರ್‌ ಅನ್ನು ನಾಶಗೊಳಿಸಬೇಕಾಗುತ್ತದೆ. ಬಿಯರ್ ತಯಾರಾದ ದಿನದಿಂದ ಆರು ತಿಂಗಳೊಳಗೆ ಬಳಸಬೇಕು. ಇಲ್ಲದಿದ್ದರೆ ಅದು ಬಳಕೆಗೆ ಯೋಗ್ಯವಲ್ಲ ಎಂದು ವೈನ್ ಒಕ್ಕೂಟವು ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ನಾಲ್ಕು ತಿಂಗಳಿಂದ ಬಿಯರ್ ಸ್ಟಾಕ್ ಇದೆ. ಈಗ ಬೇಸಿಗೆ ಇರುವುದರಿಂದ ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಬಿಯರ್ ಹಾಳಾಗಿರುವ ಸಾಧ್ಯತೆ ಇದೆ ಎಂದು ವೈನ್ ಒಕ್ಕೂಟದ ಕಾರ್ಯದರ್ಶಿ ಗೋವಿಂದರಾಜ್ ಹೆಗಡೆ ಅವರು ತಿಳಿಸಿದ್ದಾರೆ. ಈ ಸಂಬಂಧ ನಾವು ಇಂದು ಮುಖ್ಯಮಂತ್ರಿಗಳಿಗೆ ಇ-ಮೇಲ್ ಮಾಡಿದ್ದು, ಮೇ 4ರ ನಂತರ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು. ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡದಿರುವುದರಿಂದ ರಾಜ್ಯ ಸರ್ಕಾರಕ್ಕೂ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಗೋವಿಂದರಾಜು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕುರಿತು ಮೇ 3ರ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್‌. ನಾಗೇಶ್‌ ತಿಳಿಸಿದ್ದರು.


from India & World News in Kannada | VK Polls https://ift.tt/3cZBI2V

ಶೊಯೇಬ್‌ ಅಖ್ತರ್‌ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಮುಂದಾದ ಪಿಸಿಬಿ!

ಲಾಹೋರ್‌: ಯೂಟ್ಯೂಬ್‌ ಚಾನಲ್‌ನಲ್ಲಿನ ಅಸಭ್ಯ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಕಾನೂನು ಸಲಹೆಗಾರ ತಫಝುಲ್ ರಿಝ್ವಿ, ಪಾಕ್‌ನ ಮಾಜಿ ಕ್ರಿಕೆಟಿಗ ವಿರುದ್ಧ ಕ್ರಿಮಿನಲ್‌ ವಿಚಾರಣೆ ಮತ್ತು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಮಾಜಿ ವೇಗದ ಬೌಲರ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಬಳಕೆ ಮಾಡಿರುವ ಪದಗಳ ಕುರಿತಾಗಿ ಅಸಮಾಧಾನ ಹೊರಹಾಕಿದೆ. ಈ ನಿಟ್ಟಿನಲ್ಲಿ ರಿಝ್ವಿ ತಮ್ಮ ನಿರ್ದೇಶನದಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದೆ. "ಶೊಯೇಬ್‌ ಅಖ್ತರ್‌ ಅವರು ಬಳಕೆ ಮಾಡಿರುವ ಪದಗಳಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಬಹಳ ಬೇಸರವಾಗಿದೆ. ಪಿಸಿಬಿ ಕಾನೂನು ವಿಭಾಗ ಮತ್ತು ಕಾನೂನು ಸಲಹೆಗಾರರ ಕುರಿತಾಗಿ ಸಾರ್ವಜನಿಕವಾಗಿ ಮಾತನಾಡುವ ವೇಳೆ ಅಸಭ್ಯ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಬಳಸಿರುವ ಭಾಷೆ ನಿಜಕ್ಕೂ ಅಸಹನೀಯ. ನಾಗರೀಕ ಸಮಾಜದಲ್ಲಿ ಈ ರೀತಿಯ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ," ಎಂದಿದೆ. "ಇದೀಗ ಪಿಸಿಬಿ ಕಾನೂನು ಸಲಹೆಗಾರರಾದ ತಫಝುಲ್‌ ರಿಝ್ವಿ ತಮ್ಮದೇ ನಿರ್ದೇಶನದಲ್ಲಿ ಶೊಯೇಬ್‌ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್‌ ವಿಚಾರಣೆಯನ್ನು ಆಗ್ರಹಿಸಿದ್ದಾರೆ. ಪಿಸಿಬಿ ಕೂಡ ತನ್ನ ಹಕ್ಕನ್ನು ಕಾಯ್ದುಕೊಳ್ಳಲಿದೆ," ಎಂದು ತನ್ನ ಹೇಳಿಕೆಯಲ್ಲಿ ವಿವರಿಸಿದೆ. ಶೊಯೇಬ್‌ ಅಖ್ತರ್‌, ಇತ್ತೀಚೆಗೆ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಪಾಕಿಸ್ತಾನದ ಪ್ರತಿಭಾನ್ವಿತ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ ವಿರುದ್ಧ ಹೇರಲಾಗಿರುವ 3 ವರ್ಷಗಳ ನಿಷೇಧ ಶಿಕ್ಷೆ ಕುರಿತಾಗಿ ಮಾತನಾಡಿ, ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಆಟಗಾರರು ಮತ್ತು ಪಿಸಿಬಿ ನಡುವೆ ಸದಾ ಭಿನ್ನಾಭಿಪ್ರಾಯ ತಂದೊಡ್ಡುವುದಾಗಿ ಆರೋಪಿಸಿ ಕಾನೂನು ಕ್ಷೇತ್ರದಲ್ಲಿ ರಿಝ್ವಿ ಅವರ ಅನುಭವವನ್ನು ಪ್ರಶ್ನಿಸಿದ್ದರು. ಅಕ್ಮಲ್‌ ವಿರುದ್ಧದ 3 ವರ್ಷಗಳ ನಿಷೇಧ ಶಿಕ್ಷೆ ಬಹಳ ಕಠಿಣವಾದದ್ದು ಎಂದು ಅಖ್ತರ್‌ ಟೀಕಿಸಿದ್ದರು. ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಬುಕ್ಕೀಗಳು ಸಂಪರ್ಕಿಸಿದ್ದ ವಿಚಾರವನ್ನು ಪಿಸಿಬಿ ಗಮನಕ್ಕೆ ತರದೇ ಇದ್ದ ಕಾರಣಕ್ಕೆ ಉಮರ್‌ ಅಕ್ಮಲ್‌ಗೆ 3 ವರ್ಷ ನಿಷೇಧ ಶಿಕ್ಷೆ ಎದುರಾಗಿದೆ. "ಪಿಸಿಬಿ ಕಾನೂನು ವಿಭಾಗ ಮೂರು ಪೈಸಕ್ಕೆ ಬೆಲೆ ಬಾಳುವುದಿಲ್ಲ. ಕೇವಲ ಅನಗತ್ಯ ಕೇಸ್‌ಗಳ ಮೂಲಕ ಹಣ ಸುಲಿಗೆ ಮಾಡುವುದನ್ನು ರೂಡಿಸಿಕೊಂಡಿದೆ. ಕಾನೂನು ಸಲೆಗಾರ ರಿಝ್ವಿ, ಆ ಕೆಲಸಕ್ಕೆ ನಾಲಾಯಕ್. ಆತ ಈ ಹಿಂದೆಯೂ ಹಲವು ಎಡವಟ್ಟಿನ ಕೆಲಸಗಳನ್ನು ಮಾಡಿ ಪಾಕಿಸ್ತಾನದ ಸಂವಿಧಾನದ ಉಲ್ಲಂಘನೆ ಮಾಡಿರುವ ಮೂರ್ಖ," ಎಂದೆಲ್ಲಾ ಅಖ್ತರ್‌ ಮಾತಿನ ಚಾಟಿ ಬೀಸಿದ್ದರು. ಪಿಸಿಬಿ ಕಾನೂನು ವಿಭಾಗದ ವಿರುದ್ಧ ಅಖ್ತರ್‌ ಹರಿಹಾಯ್ದ ಸಂಪೂರ್ಣ ವಿಡಿಯೋ ಇಲ್ಲಿದೆ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VMV31I

'ಬುಟ್ಟ ಬೊಮ್ಮ' ಹಾಡಿಗೆ ಬೊಂಬಾಟ್ ಸ್ಟೆಪ್‌ ಹಾಕಿದ ಡೇವಿಡ್‌ ವಾರ್ನರ್‌ & ಫ್ಯಾಮಿಲಿ!

ಬೆಂಗಳೂರು: ಲಾಕ್‌ ಡೌನ್‌ ದಿನಗಳಲ್ಲಿ ಕುಟುಂಬದವರೊಟ್ಟಿಗೆ ಅದ್ಭುತ ಸಮಯ ಕಳೆಯುತ್ತಿರುವ ತಂಡದ ಸ್ಟಾರ್ ಓಪನರ್‌ , ತಮ್ಮ ಟಿಕ್‌ ಟಾಕ್‌ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡುತ್ತಿದ್ದಾರೆ. ಇದೇ ತಿಂಗಳು ಅಧಿಕೃತವಾಗಿ ಟಿಕ್‌ಟಾಕ್‌ ಸೋಷಿಯಲ್‌ ಮೀಡಿಯಾ ಆಪ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್‌, ತಮ್ಮ ಸೃಜನಶೀಲತೆಯನ್ನು ನಾನಾ ರೀತಿಯಲ್ಲಿ ಅನಾವರಣ ಪಡಿಸುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ ತಮ್ಮ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅಭಿಮಾನಿಗಳ ಸಲುವಾಗಿ ವಾರ್ನರ್‌ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್‌ ಮತ್ತು ಕನ್ನಡತಿ ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ಫೇಮಸ್‌ ಹಾಡು ''ಗೆ ಸಖತ್‌ ಸ್ಟೆಪ್‌ ಹಾಕಿ ಮಿಂಚಿದ್ದಾರೆ. ಪತ್ನಿ ಮತ್ತು ಮಗಳು ಐವೀ ವಾರ್ನರ್‌ ಕೂಡ ಡೇವಿಡ್‌ ಜೊತೆ ಕೈಜೋಡಿಸಿದ್ದಾರೆ. "ಈಗ ಟಿಕ್‌ ಟಾಕ್‌ ಟೈಮ್‌. ನಿಮ್ಮ ಕಂಫರ್ಟ್‌ ವಲಯದಿಂದ ಹೊರಗೆ ಬನ್ನಿ. ಕ್ಯಾಂಡೀಸ್‌ ವಾರ್ನರ್‌," ಎಂದು ಸಂದೇಶ ಬರೆಯುವುದರೊಂದಿಗೆ 'ಬುಟ್ಟ ಬೊಮ್ಮ' ಹಾಡಿಗೆ ಸ್ಟೆಪ್‌ ಹಾಕಿರುವ ಟಿಕ್‌ಟಾಕ್‌ ವಿಡಿಯೋವನ್ನು ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಕ್ಯಾಂಡೀಸ್‌ ವಾರ್ನರ್‌ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅದೇ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಇದಕ್ಕೂ ಮುನ್ನ ವಾರ್ನರ್‌ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಸ್ಮಿಮ್‌ ಸೂಟ್‌ ತೊಟ್ಟು, ಪತ್ನಿಗೆ ತಮ್ಮ ಕ್ರಿಕೆಟ್‌ ಸಮವಸ್ತ್ರ ತೊಡಿಸಿ ಪಾತ್ರ ಬದಲಾವಣೆಯನ್ನು ಪ್ರದರ್ಶಿಸಿದ್ದರು. ಇನ್ನು ಮುದ್ದಿನ ಮಗಳು ಐವೀ ಸಲುವಾಗಿಯೇ ಟಿಕ್‌ಟಾಕ್‌ಗೆ ಕಾಲಿಟ್ಟಿರುವ ವಾರ್ನರ್‌, ಮಗಳೊಟ್ಟಿಗೆ ಕಟ್ರೀನಾ ಕೈಫ್‌ ಅವರ ಸೂಪರ್‌ ಹಿಟ್‌ 'ಶೀಲಾ ಕಿ ಜವಾನಿ' ಹಾಡಿಗೆ ಸ್ಟೆಪ್‌ ಹಾಕಿ ಅಭಿಮಾನಿಗಳಿಂದ ಮೆಚ್ಚುಗೆ ಗಿಟ್ಟಿಸಿದ್ದರು. ಇನ್ನು ಎಲ್ಲವೂ ಸರಿಯಿದಿದ್ದರೆ ಈ ಹೊತ್ತಿಗೆ ಐಪಿಎಲ್‌ 2020 ಟೂರ್ನಿಯಲ್ಲಿ ಡೇವಿಡ್‌ ವಾರ್ನರ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ, ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ 29ಕ್ಕೆ ಶುರುವಾಗಬೇಕಿದ್ದ ಟೂರ್ನಿಯನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಪರಿಸ್ಥಿತಿ ಸುಧಾರಿಸಿ ಸುರಕ್ಷಿತ ವಾತಾವರಣ ನಿರ್ಮಾಣವಾದ ಬಳಿಕವಷ್ಟೇ ಟೂರ್ನಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಹೇಳಿಕೆ ನೀಡಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3f7Fl8Q

ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ ಪ್ರದೇಶಗಳು ! ಸರ್ಕಾರ ಘೋಷಣೆ

ಬೆಂಗಳೂರು: ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಪ್ರದೇಶಗಳಲ್ಲಿ 2019- 20 ನೇ ಸಾಲಿನಲ್ಲಿ ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ನೀಡುವಂತೆ ಕ್ರಮ ಕೈಗೊಳ್ಳಲು ಆದೇಶಿಸಿದೆ. ವಾಡಿಕೆಗಿಂತ ಶೇ. 60 ರಷ್ಟು ಮಳೆ ಕೊರತೆ ಅಥವಾ ಸತತ ಮೂರು ವಾರ ಅಥವಾ ಅಧಿಕ ಶುಷ್ಕ ವಾತಾವರಣ ಹಾಗೂ ತೇವಾಂಶದ ಕೊರತೆ, ಬೆಳೆ ಬಿತ್ತನೆ ಪ್ರದೇಶ, ಅಂತರ್ಜಲ ಕುಸಿತ ಈ ಎಲ್ಲಾ ಮಾನದಂಡಗಳ ಅನ್ವಯ ಈ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ಬೆಂಗಳೂರು ನಗರದಲ್ಲಿ ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ದೇವನಹಳ್ಳಿ. ದೊಡ್ಡಬಳ್ಳಾಪುರ, ನೆಲಮಂಗಲ, ರಾಮನಗರ ಜಿಲ್ಲೆಯ ಕನಕಪುರ, ರಾಮನಗರ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ತಾಲೂಕುಗಳು ಇದರಲ್ಲಿ ಸೇರಿವೆ. ಅಲ್ಲದೆ ಚಿಕ್ಕಬಳ್ಳಾಪುರ - 3 ತಾಲೂಕುಗಳು, ತುಮಕೂರು 7, ಚಿತ್ರದುರ್ಗ 3, ದಾವಣಗೆರೆ 1, ಚಾಮರಾನಗರ 1, ಬಳ್ಳಾರಿ 4 ,ಕೊಪ್ಪಳ 1,ರಾಯಚೂರು 3 , ಕಲಬುರಗಿ 3,ಯಾದಗಿರಿ 1 ಬೆಳಗಾವಿ 1, ಬಾಗಲಕೋಟೆ 3, ವಿಜಯಪುರ 4 ಹಾಗೂ ಗದಗ ಜಿಲ್ಲೆಯ ಒಂದು ತಾಲೂಕು ಇದರಲ್ಲಿ ಒಳಗೊಂಡಿದೆ.


from India & World News in Kannada | VK Polls https://ift.tt/2YifS6J

33ನೇ ವಸಂತಕ್ಕೆ ಕಾಲಿಟ್ಟ 'ಹಿಟ್‌ಮ್ಯಾನ್' ರೋಹಿತ್‌ ಬಾರಿಸಿರುವ 3 ವಿಶೇಷ ದ್ವಿಶತಕಗಳು

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ 'ಹಿಟ್‌ಮ್ಯಾನ್‌' ಎಂದೇ ಖ್ಯಾತಿ ಪಡೆದಿರುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಗುರುವಾರ ತಮ್ಮ 33ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕ ಆಗಿರುವ ರೋಹಿತ್‌ ಶರ್ಮಾ, ಅವರ 33ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಡಿಐ ಕ್ರಿಕೆಟ್‌ನಲ್ಲಿ ಅವರ 3 ದ್ವಿಶತಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 2007ರ ಜೂನ್‌ 23ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್‌, ಒಡಿಐನಲ್ಲಿ ಮೂರು ದ್ವಿಶತಕ ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ತಂಡದ ನಾಯಕನಾಗಿರುವ ಸ್ಟೈಲಿಷ್‌ ಬಲಗೈ ಬ್ಯಾಟ್ಸ್‌ಮನ್‌ನ ಮೂರು ಒಡಿಐ ಮಾಸ್ಟರ್‌ ಕ್ಲಾಸ್‌ ಇನಿಂಗ್ಸ್‌ಗಳು ಹೀಗಿವೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ 203 ರನ್‌ಅಂದು ದೇಶದಲ್ಲಿ ದೀಪಾವಳಿಯ ಸಂಭ್ರಮ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಮ್‌ ಇಂಡಿಯಾಗೆ ಗೆಲುವು ಅನಿವಾರ್ಯವಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಓಪನರ್‌ ಶಿಖರ್‌ ಧವನ್‌ ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ವಿರಾಟ್‌ ಕೊಹ್ಲಿ ಕೂಡ ರನ್‌ಔಟ್‌ ಆಗಿದ್ದರು. ಹೀಗಾಗಿ ತಂಡಕ್ಕೆ ಗೆಲ್ಲಲು ಕನಿಷ್ಠ 350+ ರನ್‌ ತಂದುಕೊಡುವ ಜವಾಬ್ದಾರಿ ರೋಹಿತ್‌ ಮೇಲಿತ್ತು. ಆಗಷ್ಟೇ ಕೈಬೆರಳಿನ ಗಾಯದ ಸಮಸ್ಯೆಯಿಂದ ಚೇತರಿಸಿ ತಂಡ ಸೇರಿದ್ದ ರೋಹಿತ್‌ ಆರಂಭದಲ್ಲಿ ನಿಧಾನವಾಗಿ ಬ್ಯಾಟ್‌ ಮಾಡುವ ಮೂಲಕ ಬಳಿಕ ಸ್ಪಿನ್ನರ್‌ಗಳ ಎದುರು ಬಿರುಸಿನ ಆಟವಾಡಿ ಶತಕ ದಾಖಲಿಸಿದರು. ಶತಕ ಬಾರಿಸಿದ ಬಳಿಕ ತಮ್ಮ ರನ್‌ ಗತಿಯ ಗಿಯರ್‌ ಬದಲಾಯಿಸಿಕೊಂಡ ರೋಹಿತ್‌ ಮೊತ್ತ ಮೊದಲ ಬಾರಿ 'ಹಿಟ್‌ಮ್ಯಾನ್‌ ರೂಪ ತಾಳಿದ್ದರು. ನೋಡ ನೋಡುತ್ತಿದ್ದಂತೆಯೇ 158 ಎಸೆತಗಳಲ್ಲಿ 209 ರನ್‌ ಚಚ್ಚಿ ಭಾರತದ ಪರ ಒಡಿಐನಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ರೋಹಿತ್‌ ವೀರಾವೇಶದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ 383 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ ಆಸ್ಟ್ರೇಲಿಯಾ ಎದುರು 57 ರನ್‌ಗಳ ಭರ್ಜರಿ ಜಯ ದಾಖಲಿಸಿತು. ರೋಹಿತ್‌ ಇನಿಂಗ್ಸ್‌ನಲ್ಲಿ 12 ಫೋರ್‌ ಮತ್ತು 16 ಸಿಕ್ಸರ್‌ಗಳು ಹೊರಹೊಮ್ಮಿದ್ದವು. 2014ರಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ಕೋಲ್ಕೊತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ರೋಹಿತ್‌ ಶರ್ಮಾಗೆ ಅಚ್ಚು ಮೆಚ್ಚಿನ ಅಂಗಣ. ಇದೇ ಕ್ರೀಡಾಂಗಣದಲ್ಲಿ ಹಿಟ್‌ಮ್ಯಾನ್‌ ಹಲವು ಅದ್ಭುತ ಬ್ಯಾಟಿಂಗ್‌ ಪ್ರದರ್ಶನಗಳನ್ನು ನೀಡಿದ್ದಾರೆ. ಅಂತೆಯೇ ಈಡನ್‌ ಪಿಚ್‌ನಲ್ಲಿ ವಿಶ್ವ ದಾಖಲೆಯ ಬ್ಯಾಟಿಂಗ್‌ ಪ್ರದರ್ಶನವನ್ನೂ ನೀಡಿದ್ದಾರೆ. 2014ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 173 ಎಸೆತಗಳಲ್ಲಿ 264 ರನ್‌ ಸಿಡಿಸಿದ್ದ ರೋಹಿತ್‌, ಒಡಿಐ ಕ್ರಿಕೆಟ್‌ನ ಚೊಚ್ಚಲ ತ್ರಿಶತಕದಿಂದ ವಂಚಿತರಾಗಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಒಬ್ಬ ಇನಿಂಗ್ಸ್‌ ಒಂದರಲ್ಲಿ ದಾಖಲಿಸಿದ ಅತಿ ಹೆಚ್ಚು ರನ್‌ಗಳ ವಿಶ್ವದಾಖಲೆ ಆಗಿದೆ. ಬಹುಶಃ ದಶಕಗಳ ಕಾಲ ಈ ದಾಖಲೆ ಹಾಗೇ ಉಳಿಯಲಿದೆ. ಅಂದಹಾಗೆ ಆ ಇನಿಂಗ್ಸ್‌ನಲ್ಲಿ 4 ರನ್‌ಗಳಿಗೆ ಜೀವದಾನ ಪಡೆದಿದ್ದ ರೋಹಿತ್‌, ತಮ್ಮ ಖಾತೆಗೆ 260 ರನ್‌ಗಳನ್ನು ಜೋಡಿಸಿಕೊಳ್ಳುತ್ತಾರೆ ಎಂದು ಯಾರೊಬ್ಬರೂ ಅಂದಾಜಿಸಿರಲಿಲ್ಲ. ಅವರ ಆ ಮನಮೋಹಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 33 ಫೋರ್‌ಗಳು ಸಿಡಿದರೆ, 9 ಸಿಕ್ಸರ್‌ಗಳು ಸ್ಫೋಟಗೊಂಡಿದ್ದವು. 2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 208 ರನ್‌ ಶ್ರೀಲಂಕಾ ತಂಡದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿದ್ದ ರೋಹಿತ್‌ ಶರ್ಮಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡಕ್ಕೆ 392/4 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟಿದ್ದರು. ಈ ಸಲುವಾಗಿ ಅವರು 153 ಎಸೆತಗಳಲ್ಲಿ 208 ರನ್‌ಗಳ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಈ ಇನಿಂಗ್ಸ್‌ನಲ್ಲಿ 13 ಫೋರ್‌ ಮತ್ತು 12 ಸಿಕ್ಸರ್‌ಗಳು ಚಿಮ್ಮಿದ್ದು ವಿಶೇಷ. ಪರಿಣಾಮ ಭಾರತಕ್ಕೆ 141 ರನ್‌ಗಳ ಭರ್ಜರಿ ಜಯ ಪ್ರಾಪ್ತಿಯಾಗಿತ್ತು. ವಿಶ್ವಕಪ್‌ನಲ್ಲಿ ರೋಹಿತ್‌ ವಿಶ್ವರೂಪ ಪರ ರನ್‌ ಹೊಳೆಯನ್ನೇ ಹರಿಸಿದ ರೋಹಿತ್‌ ಶರ್ಮಾ, 2019ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ 81.00ರ ಸರಾಸರಿಯಲ್ಲಿ 648 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ವಿಶ್ವ ದಾಖಲೆಯ 5 ಶತಕಗಳು ಸೇರಿವೆ. ಈ ಮೂಲಕ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 5 ಶತಕಗಳನ್ನು ಬಾರಿಸಿದ ಏಕಮಾತ್ರ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ರೋಹಿತ್‌ ಪಾತ್ರರಾದರು. ಭಾರತ ತಂಡದ ಪರ 224 ಒಡಿಐ, 108 ಅಂತಾರಾಷ್ಟ್ರೀಯ ಟಿ20 ಮತ್ತು 32 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಮುಂಬೈಕರ್‌ ರೋಹಿತ್‌, ಕ್ರಮವಾಗಿ 9,115, 2,773 ಮತ್ತು 2,141 ರನ್‌ಗಳನ್ನು ಗಳಿಸಿದ್ದಾರೆ. ರೋಹಿತ್‌ ಶರ್ಮಾ ಅವರ 33ನೇ ಹುಟ್ಟು ಹಬ್ಬದ ದಿನದಂದು ಟ್ವಿಟರ್‌ ಮೂಲಕ ಹರಿದುಬಂದ ಶುಭ ಹಾರೈಕೆಗಳು ಹೀಗಿವೆ. ಟೆಸ್ಟ್‌ ತಂಡದಲ್ಲಿ ಓಪನಿಂಗ್‌ ಪಾರ್ಟ್ನರ್‌ ಮಯಾಂಗ್‌ ಅಗರ್ವಾಲ್ ಶುಭಾಶಯ. ಶುಭ ಹಾರೈಸಿದ ಟೀಮ್‌ ಇಂಡಿಯಾ ಕೋಚ್‌ ರವಿ ಶಾಸ್ತ್ರಿ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಸಹ ಆಟಗಾರ ಕರಣ್‌ ಶರ್ಮಾ ಶುಭ ಹಾರೈಕೆ ಶುಭ ಕೋರಿದ ಭಾರತ ಟೆಸ್ಟ್‌ ತಂಡದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ವಿಶೇಷ ವಿಡಿಯೋ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ ಕ್ರಿಕೆಟ್‌ ಆಸ್ಟ್ರೇಲಿಯಾ ರೋಹಿತ್‌ ಶರ್ಮಾ ಅವರ ವೃತ್ತಿ ಬದುಕಿನ ಕೆಲ ವಿಶೇಷ ಅಂಕಿ ಅಂಶಗಳು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bSfP5t

ಜ್ಞಾನನಿಧಿಯಲ್ಲಿ ಪದವಿ ತರಗತಿಗಳು! 2 ಲಕ್ಷ ವಿದ್ಯಾರ್ಥಿಗಳನ್ನು ಮುಟ್ಟಿದ ಯೂ-ಟ್ಯೂಬ್‌ ಚಾನೆಲ್!

ಚೀ.ಜ.ರಾಜೀವ ಮೈಸೂರು: ಕೊರೊನಾದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗಲಿ ಎಂದು ಆರಂಭಿಸಿರುವ '' ಯೂ-ಟ್ಯೂಬ್‌ ಚಾನೆಲ್‌ ಸುಮಾರು 2 ಲಕ್ಷದಷ್ಟು ವಿದ್ಯಾರ್ಥಿಗಳನ್ನು ಮುಟ್ಟಿದೆ ! ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸುಮಾರು 4 ಲಕ್ಷದಷ್ಟು ವಿದ್ಯಾರ್ಥಿಗಳಿಗಾಗಿ ಇಲಾಖೆ ಜ್ಞಾನ ನಿಧಿ ಚಾನೆಲ್‌ ಆರಂಭಿಸಿದೆ. ನುರಿತ ಅಧ್ಯಾಪಕರು ತಮ್ಮ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ 20ರಿಂದ 30 ನಿಮಿಷ ಅವಧಿಯ ಉಪನ್ಯಾಸವನ್ನು ಚಿತ್ರೀಕರಿಸಿ, ಅದನ್ನೇ ಯೂ ಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಯಾವಾಗ ಬೇಕಾದರೂ ವೀಕ್ಷಿಸಿ, ತಮ್ಮ ಕಲಿಕೆಯನ್ನು ಉತ್ತಮೀಕರಿಸಿಕೊಳ್ಳುತ್ತಿದ್ದಾರೆ. ''ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುಮಾರು 40 ವಿಷಯಗಳ ಕುರಿತು ಮೂರು ಸಾವಿರ ಈ ಕಂಟೆಂಟ್‌(ವೀಡಿಯೊ ಉಪನ್ಯಾಸ) ಅನ್ನು ನಾವು ಜ್ಞಾನನಿಧಿ ಯೂ ಟ್ಯೂಬ್‌ಗೆ ಜೋಡಿಸಿದ್ದೇವೆ. ಇದುವರೆಗೆ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಇದನ್ನು ನೋಡಿರುವ ಕುರಿತು ನಮಗೆ ಮಾಹಿತಿ ಸಿಕ್ಕಿದೆ,'' ಎಂದು ಯೋಜನೆಯ ರಾಜ್ಯ ಸಮನ್ವಯಕಾರ ಬಿ.ಮಂಜುನಾಥ್‌ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಅನಿವಾರ್ಯವಾದ ರಜೆ ಸ್ಥಿತಿಗೆ ಕಾಲವನ್ನೇ ದೂಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆನ್‌ಲೈನ್‌ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಹಾಗಾಗಿ, ಯೂಟ್ಯೂಬ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌, ಗೂಗಲ್‌ ಕ್ಲಾಸ್‌ ರೂಂನಂಥ ಡಿಜಿಟಲ್‌ ವೇದಿಕೆಗಳ ಮೂಲಕ ಕಾಲೇಜು ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನೀಡಲಾರಂಭಿಸಿದ್ದಾರೆ. ಈ ಥರಾವರಿ ಡಿಜಿಟಲ್‌ ವೇದಿಕೆಗಳ ಪೈಕಿ ಶೇ.50ರಷ್ಟು ಭಾಗವನ್ನು ಯೂ ಟ್ಯೂಬ್‌ ಜ್ಞಾನ ನಿಧಿಯೇ ಆವರಿಸಿಕೊಂಡಿದೆ. ''ಇಲಾಖೆಯಲ್ಲಿರುವ 8 ಸಾವಿರ ಅಧ್ಯಾಪಕರ ಪೈಕಿ ನಾಲ್ಕು ಸಾವಿರ ಅಧ್ಯಾಪಕರು ಜ್ಞಾನನಿಧಿಗೆ ಪಠ್ಯ ಭಾಷಣ ಸಿದ್ಧಪಡಿಸುತ್ತಿದ್ದಾರೆ. ಈಗಾಗಲೇ 10 ಸಾವಿರ ಕಂಟೆಂಟ್‌ ಸಿದ್ಧವಿದೆ. ನಮಗೆ ಮೂರು ಸಾವಿರ ಕಂಟೆಂಟ್‌ ಅನ್ನು ಮಾತ್ರ ಯೂ ಟ್ಯೂಬ್‌ಗೆ ಅಪ್‌ಲೋಡ್‌ ಮಾಡಲು ಸಾಧ್ಯವಾಗಿದೆ. ಪ್ರತಿದಿನ 200 ಪಠ್ಯವನ್ನು ಜೋಡಿಸುತ್ತಲೇ ಇದ್ದೇವೆ,'' ಎಂದು ವಿವರಿಸುತ್ತಾರೆ ಮಂಜುನಾಥ್‌. ''ನಾಲ್ಕು ಲಕ್ಷ ವಿದ್ಯಾರ್ಥಿಗಳ ಶೇ.50ರಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಇಂಥಾ ಪಠ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಲ್ಲಿಯೇ ಪ್ರತಿಕ್ರಿಯಿಸಿದ್ದಾರೆ. ಆದರೆ, ಶೇ.20ರಿಂದ 30ರಷ್ಟು ಮಕ್ಕಳಿಗೆ ಡಿಜಿಟಲ್‌ ಸೌಲಭ್ಯ ಕೈಗೆಟಕುವುದೇ ಕಷ್ಟ. ಬಾಕಿ ಉಳಿದ ಮಕ್ಕಳಿಗೆ ಡಿಜಿಟಲ್‌ ಸೌಲಭ್ಯವಿದ್ದರೂ ಅವರು ಇನ್ನೂ ನಾವು ನೀಡುತ್ತಿರುವ ಡಿಜಿಟಲ್‌ ಮಾಧ್ಯಮದ ಶಿಕ್ಷಣದತ್ತ ಹೊರಳಿಲ್ಲ. ಇದಕ್ಕೆ ಕಾರಣ ತಿಳಿದಿಲ್ಲ,'' ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು. ಸಂಕಷ್ಟ ಕಾಲದ ಆಸರೆ ಕೊರೊನಾ ಸೃಷ್ಟಿಸಿರುವ ಈ ಸಂಕಟದ ಬಿಡುವಿನ ವೇಳೆಯಲ್ಲಿ ಜ್ಞಾನನಿಧಿ ಯೂ ಟ್ಯೂಬ್‌ ಚಾನೆಲ್‌ ಪದವಿ ವಿದ್ಯಾರ್ಥಿಗಳು ಕಲಿಯಲು ವರದಾನವಾಗಿದೆ. ಇದುವರೆಗಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಯೂ ಟ್ಯೂಬ್‌ ಚಾನೆಲ್‌ ಯಾವತ್ತೂ ತರಗತಿ ಪಾಠ-ಪ್ರವಚನಕ್ಕೆ ಪರ್ಯಾಯವಲ್ಲ. ಅಲ್ಲಿನ ಭಾವವನ್ನು ಇಲ್ಲಿನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಮೈಸೂರು ವಿವಿಯ ಪ್ರಾಧ್ಯಾಪಕರು ಬೋಧನೆ ಮಾಡಿದ್ದನ್ನು ಗುಲ್ಬರ್ಗಾ ವಿವಿಯ ವಿದ್ಯಾರ್ಥಿಗಳು ನೋಡಬಹುದು, ಆಲಿಸಬಹುದು, ಕಲಿಯಬಹುದು ಎನ್ನುತ್ತಾರೆ ಪ್ರೊ.ಬಿ.ವಿ. ವಸಂತಕುಮಾರ್‌. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ನಿಗದಿಪಡಿಸಿರುವ ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ನೀಲಮ್ಮನ ಹಾಗೂ ಅಂಬಿಗರ ಚೌಡಯ್ಯನಿಗೆ ಸಂಬಂಧಿಸಿದ 100 ವಚನಗಳ ಕುರಿತು ತಲಾ 20 ನಿಮಿಷದ 27 ವೀಡಿಯೋ ಹಾಕಿದ್ದೇನೆ. ನಮ್ಮ ಸಮಯವೂ ವ್ಯರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. -ಪ್ರೊ.ಬಿ.ವಿ.ವಸಂತಕುಮಾರ್‌, ಅಧ್ಯಾಪಕರು, ಮಹಾರಾಣಿ ಕಾಲೇಜು, ಮೈಸೂರು


from India & World News in Kannada | VK Polls https://ift.tt/3f3injp

ಮತ್ತೆ ಕೊರೊನಾ ಅಟ್ಟಹಾಸ; ಬೆಳಗಾವಿಯಲ್ಲಿ 14, ರಾಜ್ಯದಲ್ಲಿ 22 ಪಾಸಿಟಿವ್‌ ಕೇಸ್‌

ಬೆಂಗಳೂರು: ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ಗುರುವಾರ ಮತ್ತೆ ಆರ್ಭಟಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಕೇವಲ 34 ಪ್ರಕರಣಗಳು ವರದಿಯಾಗಿದ್ದವು. ಆದರೆ ಗುರುವಾರ ಒಂದೇ ದಿನ ಅದೂ ಮಧ್ಯಾಹ್ನ ಮೊದಲೇ 22 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದ ಒಟ್ಟು ಕೋವಿಟ್‌-19 ಪ್ರಕರಣಗಳ ಸಂಖ್ಯೆ 557ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 14 ಜಿಲ್ಲೆಯೊಂದರಿಂದಲೇ ವರದಿಯಾಗಿವೆ. ಇನ್ನು ವಿಜಯಪುರದಲ್ಲಿ 2 ಮತ್ತು ನಗರದಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. ಕೋವಿಡ್‌-19 ತಣ್ಣಗಾಗಿದ್ದ ದಕ್ಷಿಣ ಕನ್ನಡ, ತುಮಕೂರು ಮತ್ತು ದಾವಣಗೆರೆಯಲ್ಲಿ ತಲಾ 1 ಪ್ರಕರಣಗಳು ಖಚಿತವಾಗಿವೆ. ಈ ಮೂರೂ ಜಿಲ್ಲೆಗಳು ಒಂದು ಹಂತದಲ್ಲಿ ಕೊರೊನಾ ಮುಕ್ತ ಜಿಲ್ಲೆಯಾಗುವ ಹಾದಿಯಲ್ಲಿದ್ದವು. ಆದರೆ ಇದೀಗ ನಿರಂತರ ಒಂದೊಂದೇ ಪ್ರಕರಣಗಳು ವರದಿಯಾಗಲು ಆರಂಭವಾಗಿವೆ. ಅದರಲ್ಲೂ ದಾವಣಗೆರೆಯಲ್ಲಿ ಬುಧವಾರ ಬರೋಬ್ಬರಿ 34 ದಿನಗಳ ನಂತರ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಗುರುವಾರ ಇಲ್ಲಿ ಒಬ್ಬರ ಕೊರೊನಾ ವರದಿ ಪಾಸಿಟಿವ್‌ ಬಂದಿದೆ. ದಕ್ಷಿಣ ಕನ್ನಡದಲ್ಲಿ ಕೊರೊನಾ ವೈರಸ್‌ ರೋಗಿಯ ಸಂಪರ್ಕದಲ್ಲಿದ್ದ 58 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ವಿಜಯಪುರದಲ್ಲೂ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 62 ವರ್ಷ ಪುರುಷ ಮತ್ತು 33 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬೆಳಗಾವಿಯ 14 ಸೋಂಕಿತರಲ್ಲಿ 12 ಜನರು ಹಿರೇಬಾಗೇವಾಡಿಯವರಾಗಿದ್ದಾರೆ. ಇವರಲ್ಲಿ 8 ವರ್ಷದ ಬಾಲಕಿ ಮತ್ತು 16 ಹಾಗೂ 18 ವರ್ಷ ಬಾಲಕರೂ ಸೇರಿದ್ದಾರೆ. ಇನ್ನಿಬ್ಬರು ಸೋಂಕಿತರು ಹುಕ್ಕೇರಿಯವರಾಗಿದ್ದು ಇವರಲ್ಲಿ ಓರ್ವ 9 ವರ್ಷದ ಬಾಲಕನಾಗಿದ್ದಾನೆ. ತುಮಕೂರಿನಲ್ಲಿ 65 ವರ್ಷದ ಮಹಿಳೆ ಮತ್ತು ದಾವಣಗೆರೆಯಲ್ಲಿ 69 ವರ್ಷದ ಪುರುಷರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ದಾವಣಗೆರೆಯ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಮೂರು ಪ್ರಕರಣಗಳಲ್ಲಿ ಇಬ್ಬರು ಪಾದರಾಯನಪುರ ವಾರ್ಡ್‌ನ ಸಂಪರ್ಕಿತರಾಗಿದ್ದಾರೆ. ಇನ್ನೊಬ್ಬರು 63 ವರ್ಷದ ಪುರುಷರಾಗಿದ್ದು ತೀವ್ರ ಉಸಿರಾಟದ ಸಮಸ್ಯೆ (SARI) ಯಿಂದ ಬಳಲುತ್ತಿದ್ದಾರೆ. 7 ಜನರು ಗುಣಮುಖ ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 7 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವ ಸಂಖ್ಯೆ 227ಕ್ಕೆ ಏರಿದೆ. ಇನ್ನು ಕೋವಿಡ್‌-19ನಿಂದ 21 ಜನರು ಸಾವಿಗೀಡಾಗಿದ್ದರೆ, ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ 22 ಕೊರೊನಾ ಸೋಂಕಿತರನ್ನು ಕಳೆದುಕೊಂಡಿದೆ.


from India & World News in Kannada | VK Polls https://ift.tt/3cW8cuU

ರೈತರ ಆಪತ್ಬಾಂಧವ ‘ಅಗ್ರಿ ವಾರ್‌ರೂಮ್‌’: ಮುಂಗಾರು ಹಂಗಾಮಿಗೂ ವಿಸ್ತರಿಸಲು ಮನವಿ

- ಆರ್‌.ತುಳಸಿಕುಮಾರ್‌ ಬೆಂಗಳೂರು ಕೊರೊನಾಘಾತಕ್ಕೆ ಸಿಲುಕಿರುವ ಅನ್ನದಾತರು ಎದುರಿಸುವ ನಾನಾ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಆಯುಕ್ತಾಲಯದಲ್ಲಿ ಅಗ್ರಿವಾರ್‌ರೂಮ್‌ ಕಾರ್ಯಾಚರಿಸುತ್ತಿದೆ. ನಾನಾ ಜಿಲ್ಲೆಗಳಿಂದ ಕರೆ ಮಾಡುತ್ತಿರುವ ರೈತರು ಬೆಳೆ ಸಾಗಿಸಲು ವಾಹನ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ, ಗ್ರೀನ್‌ ಪಾಸ್‌ ವಿತರಣೆ, ಟೋಲ್‌ ಪಾವತಿ ಕೇಂದ್ರದಲ್ಲಿನ ಕಿರಿಕಿರಿ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡುತ್ತಾರೆ. ಅವರ ಸಮಸ್ಯೆಗಳಿಗೆ ಈ ಕೃಷಿ ಸಹಾಯವಾಣಿ ಪರಿಹಾರ ದೊರಕಿಸಿಕೊಡುವಲ್ಲಿ ಸಫಲವಾಗಿದೆ. 7900 ಕರೆಗಳ ಸ್ವೀಕಾರ: ಏ.1ರಿಂದ ಅಗ್ರಿವಾರ್‌ ರೂಮ್‌ ಆರಂಭಿಸಲಾಗಿದ್ದು, ಈವರೆಗೆ 7900 ಕರೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ. ಆರಂಭದಲ್ಲಿ ನಿತ್ಯ 500ಕ್ಕೂ ಹೆಚ್ಚು ಕರೆಗಳ ಒತ್ತಡ ಇತ್ತು. ಬಹುತೇಕರು ಬೆಳೆಗೆ ಬೆಲೆ ಒದಗಿಸುವುದು ಹಾಗೂ ಮಾರುಕಟ್ಟೆಗೆ ಏನು ಪರಿಹಾರವಿದೆ ಎಂಬ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳುತ್ತಿದ್ದರು. ಜತೆಗೆ ಗ್ರೀನ್‌ ಪಾಸ್‌ ದೊರೆಯದ ಕುರಿತು ಆಕ್ಷೇಪಿಸುತ್ತಿದ್ದರು. ರೈತರ ಇಂತಹ ಹತ್ತು ಹಲವು ದುಃಖ-ದುಮ್ಮಾನಗಳಿಗೆ ಕೃಷಿ ಇಲಾಖೆ ಸಿಬ್ಬಂದಿಗೆ ಕಿವಿಯಾದರು. ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ರೈತರಿಗೆ ಆಪದ್ಬಾಂಧವರಾಗಿದ್ದಾರೆ. ಸರಕಾರ ಹಲವು ಸೌಲಭ್ಯ ಕಲ್ಪಿಸಿದ ಬಳಿಕ ಕರೆಗಳ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ. ಕೃಷಿಕರು ಈಗ ಬಿತ್ತನೆ ಬೀಜ-ರಸಗೊಬ್ಬರ, ಪಿಎಂ ಕಿಸಾನ್‌ ವಿಮೆ, ಬೆಳೆಗಳ ತಾಂತ್ರಿಕ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಿರಂತರ ಮುಂದುವರಿಕೆಗೆ ಮನವಿ: ಅಗ್ರಿವಾರ್‌ರೂಮ್‌ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹನ್ನೆರಡು ತಾಸು ಕಾರ್ಯನಿರ್ವಹಿಸುತ್ತಿದೆ. ಈಗ ಎರಡು ಲೈನ್‌ಗಳಷ್ಟೇ ಇದ್ದು, ಇದನ್ನು ಹೆಚ್ಚಿಸಿದಲ್ಲಿ ಹೆಚ್ಚಿನವರಿಗೆ ಅನುಕೂಲವಾಗುತ್ತದೆ. ಸಮರ್ಪಕವಾಗಿ ಮಾಹಿತಿ ಸಿಗುತ್ತಿರುವ ಕಾರಣ ವರ್ಷಪೂರ್ತಿ ನಿರಂತರವಾಗಿ ಮುಂದುವರಿಸಲು ರೈತರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಜಿಕೆವಿಕೆ ಕೇಂದ್ರಕ್ಕೂ ಕರೆಗಳ ಸುರಿಮಳೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಜಿಕೆವಿಕೆಯಲ್ಲೂ ವಿವಿ ವತಿಯಿಂದ ಪ್ರತ್ಯೇಕ ಅಗ್ರಿ ವಾರ್‌ ರೂಮ್‌ ಸ್ಥಾಪಿಸಲಾಗಿದೆ. ಕೇಂದ್ರ ಸ್ಥಾಪನೆಯಾದ ಹತ್ತೇ ದಿನದಲ್ಲಿ 2224 ಕರೆಗಳನ್ನು ರೈತರಿಂದ ಸ್ವೀಕರಿಸಿ ಪರಿಹಾರ ಒದಗಿಸಲಾಗಿದೆ. ಇಲ್ಲಿ ಬಿತ್ತನೆ ಕಾರ್ಯ ಹಾಗೂ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಅಗ್ರಿ ವಾರ್‌ ರೂಮ್‌ ಸಂಪರ್ಕ 080-22212818/22210237 (ಕೃಷಿ ಇಲಾಖೆ) 080-22636800 (ಜಿಕೆವಿಕೆ) ತರಕಾರಿ ಮಾರಾಟಕ್ಕೆ ಮಾರುಕಟ್ಟೆಗಳ ವಿವರ ಕೋರಿದಾಗ ನಿರ್ದಿಷ್ಟ ಪ್ರದೇಶದ ಕುರಿತು ಮಾಹಿತಿ ದೊರೆಯಿತು. ಇಂತಹ ವ್ಯವಸ್ಥೆಯು ರೈತರಿಗೆ ಎಲ್ಲಾ ಋತುಮಾನದಲ್ಲಿ ಸಿಕ್ಕರೆ ಅನುಕೂಲ. - ನಾಗರಾಜ್‌, ರೈತ ಅಗ್ರಿ ವಾರ್‌ ರೂಮ್‌ಗೆ ರೈತರಿಂದ ಬರುವ ಕರೆ ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸಲು ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನಾ ಜಿಲ್ಲೆಗಳ ರೈತರು ಕರೆ ಮಾಡುತ್ತಿದ್ದು, ಅವರ ಸಂದೇಹ ನಿವಾರಣೆಗೆ ಆದ್ಯತೆ ನೀಡಲಾಗಿದೆ. - ದೇವರಾಜ್‌, ಅಗ್ರಿ ವಾರ್‌ ರೂಮ್‌ ಉಸ್ತುವಾರಿ, ಕೃಷಿ ಇಲಾಖೆ ಕೊರೊನಾ ಸಂಕಷ್ಟ ಕಾಲದಲ್ಲಿ ಸರಕಾರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಜಿಲ್ಲೆಯಲೂ ಸಹಾಯವಾಣಿ ಸ್ಥಾಪಿಸಿದರೆ ಅಲ್ಲಿನ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. - ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ


from India & World News in Kannada | VK Polls https://ift.tt/3aNbijp

ಕೊರೊನಾ ಎರಡು, ಮೂರು ತಿಂಗಳು ಮುಂದುವರಿದರೆ ಅಚ್ಚರಿಯಿಲ್ಲ! ಬಿಎಸ್‌ವೈ ಭವಿಷ್ಯ

ಬೆಂ ಗಳೂರು: ಕೊರೊನಾ ಸೋಂಕು ಇನ್ನು ಎರಡು ಮೂರು ತಿಂಗಳುಗಳ ಕಾಲ ಮುಂದುವರಿದರೂ ಅಚ್ಚರಿ ಇಲ್ಲ ಎಂದು ಮುಖ್ಯಮಂತ್ರಿ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೊರೊನಾ ನಿಯಂತ್ರಣದ ನಡುವೆಯೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳ ಜೊತೆಗೆ ಗುರುವಾರ ಸಭೆ ನಡೆಸಲಿದ್ದಾರೆ. ಕೊರೊನಾ ಸೋಂಕು ನಿತಂತ್ರಣ ಮಾಡುವುದರ ಜೊತೆಗೆ ಆರ್ಥಿಕ ಚಟುವಟಿಕೆಯನ್ನು ಆರಂಭಿಸುವುದು ಸರ್ಕಾರದ ಮುಂದಿರುವ ಸಲವಾಲು. ಈ ನಿಟ್ಟಿನಲ್ಲಿ ಹಂತಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದು.ಕೇಂದ್ರ ಸರ್ಕಾರದವೂ ಈ ವಿಚಾರಗಳನ್ನು ಗಮನಿಸುತ್ತಿದ್ದು ಮೇ 4 ರಂದು ಅನುಕೂಲಕರವಾಗಲಿರುವ ತೀರ್ಮಾನಗಳನ್ನು ಕೇಂದ್ರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದರು. ಮೇ 3 ಬಳಿಕ ಬೆಂಗಳೂರು ಸುತ್ತಮುತ್ತಲು ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರ ಯೋಚನೆ ನಡೆಸುತ್ತಿದೆ. ಆದರೆ ಯಾವುದೇ ಮಾಲ್‌, ಹೋಟೆಲ್‌ಗಳನ್ನು ತೆರೆಯುವ ಯೋಚನೆ ಇಲ್ಲ ಎಂದು ಸಿಎಂ ಬಿಎಸ್‌ವೈ ಸ್ಪಷ್ಟ ಪಡಿಸಿದ್ದಾರೆ. ಹೊಟೇಲ್‌ಗಳನ್ನು ಪಾರ್ಸೆಲ್‌ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮದ್ಯ ಮಾರಾಟ ಆರಂಭಿಸುವ ಬಗ್ಗೆ ಮೇ 3ರ ಬಳಿಕವೇ ತೀರ್ಮಾನ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಒತ್ತಾಯಗಳು ಕೇಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಾಗಿ ಮೇ 3 ರ ಬಳಿಕ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಜೊತೆಗೆ ಸಲೂನ್‌ ಶಾಪ್ ತೆರೆಯುವ ವ ಬಗ್ಗೆಯೂ ಮೇ 3ರ ಬಳಿಕವೇ ನಿರ್ಧಾರ ಕೈಗೊಳ್ಳಲಿದೆ.


from India & World News in Kannada | VK Polls https://ift.tt/2KO2TSy

ಇದು ವಿಸ್ಮಯ; ಐದು ಕೂಸುಗಳಿಗೆ ಜನ್ಮ ನೀಡಿದ ಮಹಾತಾಯಿ

ಬರಾಬಂಕಿ (): ಉತ್ತರ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ ಐದು ಕೂಸುಗಳಿಗೆ ಜನ್ಮ ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಆದರೆ ಇದು ಅತ್ಯಂತ ವಿರಳ ಹಾಗೂ ವಿಸ್ಮಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಅನಿತಾ ಎಂಬ ಹೆಸರಿನ ಮಹಾತಾಯಿ ಈ ಅದೃಷ್ಟವಂತೆ. ಹಾಗೂ ಮಕ್ಕಳು ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಿ ಮಗದೊಂದು ಗಮನಾರ್ಹ ಅಂಶವೆಂದರೆ ಐವರು ಮಕ್ಕಳ ಪೈಕಿ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಈಕೆ ಉತ್ತರ ಪ್ರದೇಶದ ಸೂರತ್‌ಗಂಜ್ ಪಟ್ಟಣದಲ್ಲಿರುವ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಬುಧವಾರದಂದು ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. 'ಮಕ್ಕಳು ಸುರಕ್ಷಿತವಾಗಿದ್ದಾರೆ. ಇದೊಂದು ಮ್ಯಾಜಿಕ್. ನಮ್ಮ ಕುಟುಂಬದಲ್ಲಿ ಹೀಗೆ ಆಗಲಿದೆ ಎಂದು ಯೋಚಿಸಿರಲಿಲ್ಲ' ಎಂದು ಅನಿತಾ ಪತಿ ಕುಂದನ್ ತಿಳಿಸುತ್ತಾರೆ. ಆಗಲೇ ಗಂಡು ಮಗುವನ್ನು ಹೊಂದಿರುವ ಅನಿತಾ, ಎರಡನೇ ಬಾರಿಗೆ ಅನಿತಾ ಗರ್ಭಿಣಿಯಾಗಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಅನೇಕ ಸಾವು ನೋವುಗಳು ಸಂಭವಿಸಿದೆ. ಈ ನಡುವೆ ಮಹಿಳೆಯೊಬ್ಬರು ಐದು ಮಕ್ಕಳಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.


from India & World News in Kannada | VK Polls https://ift.tt/2SnZkGR

ಕೊರೊನಾ ಲಾಕ್‌ಡೌನ್: ಕೆಎಸ್‌ಆರ್‌ಟಿಸಿಗೆ ಆಗಿರುವ ನಷ್ಟದ ಪ್ರಮಾಣವೆಷ್ಟು?

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಪರಿಣಾಮ ಕೆಎಸ್‌ಆರ್‌ಟಿಸಿಗೆ 412 ಕೋಟಿ ನಷ್ಟ ಸಂಭವಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಈಶಾನ್ಯ, ವಾಯುವ್ಯ ಸಾರಿಗೆ ಹಾಗೂ ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ಒಟ್ಟು ಅಂದಾಜು 1000 ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ. ಎರಡು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಎಸ್‌ಆರ್‌ಟಿಸಿ 8,500 ಬಸ್‌ಗಳ ಸಂಚಾರದಿಂದ ಪ್ರತಿನಿತ್ಯ 9 ಕೋಟಿ ಆದಾಯ ಸಂಗ್ರವಾಗುತ್ತಿತ್ತು. ಅದರಂತೆ ವಾಯುವ್ಯ ಸಾರಿಗೆ ವಿಭಾಗದಲ್ಲಿ 230 ಕೋಟಿ ನಷ್ಟ ಸಂಭವಿಸಿದೆ. ಈ ವಿಭಾಗದಲ್ಲಿ 4676 ಬಸ್‌ಗಳು ಸಂಚಾರವಿದ್ದು ಪ್ರತಿನಿತ್ಯ 6 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಈಶಾನ್ಯ ವಿಭಾಗದಲ್ಲಿ ಲಾಕ್‌ಡೌನ್ ಅವಧಿಯಲ್ಲಿ 240 ಕೋಟಿ ನಷ್ಟ ಸಂಭವಿಸಿದೆ. ಈ ವಿಭಾಗದಲ್ಲಿ 4252 ಬಸ್‌ಗಳ ಸಂಚಾರವಿದ್ದು, ಪ್ರತಿನಿತ್ಯ 5.75 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಇನ್ನು ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತದಿಂದಲೂ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಪ್ರತಿನಿತ್ಯ ಬಿಎಂಟಿಸಿಗೆ 3.5 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಲಾಕ್‌ಡೌನ್ ಅವಧಿಯಿಂದ 173. 34 ಕೋಟಿ ಅಂದಾಜು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದೆ ಇದ್ದರೆ ಲಾಕ್‌ಡೌನ್ ಅವಧಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಪರಿಣಾಮ ಸಾರ್ವಜನಿಕ ಸಾರಿಗೆ ಸಂಪರ್ಕ ಆರಂಭಗೊಳ್ಳುದು ಕಷ್ಟಸಾಧ್ಯ. ಇಷ್ಟೊಂದು ಪ್ರಮಾಣದ ನಷ್ಟವನ್ನು ಸರಿದೂಗಿಸಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ನಾಲ್ಕು ವಿಭಾಗಗಳಲ್ಲಿ 1.27 ಲಕ್ಷ ನೌಕರರಿದ್ದು ಆದಾಯ ಸಂಕಷ್ಟ ನೌಕರರ ವೇತನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ನೌಕರರ ವೇತನಕ್ಕೆ ಸರ್ಕಾರದಿಂದ 163 ಕೋಟಿ ಬಿಡುಗಡೆ ಲಾಕ್‌ಡೌನ್‌ನಿಂದಾಗಿ ನಷ್ಟದಲ್ಲಿ ಕೆಎಸ್‌ಆರ್‌ಸಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ವೇತನ ಪಾವತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 163 ಕೋಟಿ ಬಿಡುಗಡೆಗೊಳಿಸಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಮಾತನಾಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ "ಲಾಕ್‌ಡೌನ್‌ ಕಾರಣದಿಂದಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ವೇತನ ಪಾವತಿ ಮಾಡುವುದು ನಮ್ಮ ಮುಂದಿರುವ ಸವಾಲು. ನೌಕರರ ವೇತನಕ್ಕಾಗಿ ಮಾಸಿಕ 325 ಕೋಟಿಯ ಅಗತ್ಯವಿದೆ. ಏನೇ ಸಮಸ್ಯೆ ಇದ್ದರೂ ನೌಕರರಿಗೆ ವೇತನ ಪಾವತಿ ಮಾಡುವುದು ನಮ್ಮ ಆದ್ಯತೆ ಆಗಿದೆ. ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ನಡೆಸಲಾಗಿದ್ದು, ಈಗಾಗಲೇ ಸರ್ಕಾರ 163 ಕೋಟಿ ಬಿಡುಗಡೆ ಮಾಡಿದೆ" ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/2W7oB9c

ದಿನಸಿ ತರುತ್ತೇನೆ ಎಂದು ಮನೆಯಿಂದ ಹೋದ.. ಹೊಸ ಪತ್ನಿಯ ಜೊತೆ ವಾಪಸ್‌ ಬಂದ..!

ಗಾಜಿಯಾಬಾದ್‌ (): ಏನೆಲ್ಲಾ ವಿಚಿತ್ರಗಳಿಗೆ ಸಾಕ್ಷಿಯಾಗಿದೆ ಎಂಬುದು ನಿಮಗೆಲ್ಲಾ ಗೊತ್ತೆ ಇದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಉತ್ತರಪ್ರದೇಶದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ದಿನಸಿ ತರಲು ಮನೆಯಿಂದ ಹೊರಹೋದ ವ್ಯಕ್ತಿ ವಾಪಸ್‌ ಮನೆಗೆ ಬರುವಾಗ ಹೊಸ ಹೆಂಡತಿಯೊಂದಿಗೆ ಮರಳಿರುವ ಘಟನೆ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ. ಹೌದು, ದಿನಸಿ ಸಾಮಗ್ರಿ ತರಲು ಮನೆಯಿಂದ ಹೊರಹೋದ ವ್ಯಕ್ತಿ ರಹಸ್ಯವಾಗಿ ಮದುವೆ ಮಾಡಿಕೊಂಡು ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ, ಆತನ ತಾಯಿ ವಧುವನ್ನು ಮನೆಗೆ ಸೇರಿಸದೆ ಪೊಲೀಸರತ್ತಿರ ದೂರು ತಗೊಂಡು ಹೋಗಿದ್ದಾಳೆ. ಗಾಜಿಯಾಬಾದ್‌ನ ಸಾಹಿಬಾಬಾಡ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಾನು ನನ್ನ ಮಗನನ್ನು ದಿನಸಿ ಸಾಮಗ್ರಿ ತರಲು ಅಂಗಡಿಗೆ ಕಳುಹಿಸಿದ್ದೆ. ಆದರೆ, ಆತ ವಾಪಸ್‌ ಬರುವಾಗ ಹೆಂಡತಿಯೊಂದಿಗೆ ಬಂದಿದ್ದಾನೆ. ನಾನು ಈ ಮದುವೆಯನ್ನು ಒಪ್ಪಲ್ಲ ಎಂದು ಪೊಲೀಸರ ಮುಂದೆ ತಾಯಿ ಹೇಳುವಾಗ ಅವರ ಕಣ್ಣು ತೇವವಾಗಿತ್ತು. ಆದರೆ, ಈ ಮದುವೆ ಎರಡು ತಿಂಗಳ ಹಿಂದೆಯೇ ಹರ್ದ್ವಾರದ ಆರ್ಯ ಸಮಾಜ್‌ ಮಂದೀರದಲ್ಲಿ ನಡೆದಿದ್ದು, ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಲಾಕ್‌ಡೌನ್‌ ಮುಗಿದ ಮೇಲೆ ಪಡೆಯುವುದಕ್ಕೆ ವಧು-ವರರು ನಿರ್ಧರಿಸಿದ್ದರು. ಸಾಕ್ಷಿಗಳ ಕೊರತೆಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ನಮಗೆ ಸಾಧ್ಯವಾಗಿಲ್ಲ. ಆಮೇಲೆ ವಾಪಸ್‌ ಹರ್ದ್ವಾರಗೆ ಹೋಗಬೇಕೆಂದರೆ ಲಾಕ್‌ಡೌನ್‌ನಿಂದ ಆಗಿದ್ದಿಲ್ಲ ಎಂದು 26 ವರ್ಷದ ಗದ್ದು ಹೇಳಿದ್ದಾರೆ. ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಗದ್ದು ಆತನ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತಾಗಿದೆ. ಆತನ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ, ಮನೆ ಮಾಲೀಕ ಮನೆ ಖಾಲಿ ಮಾಡುವಂತೆ ಹೇಳಿದ್ದರಿಂದ ವ್ಯಕ್ತಿ ಮನೆಗೆ ಪತ್ನಿಯನ್ನು ಕರೆದುಕೊಂಡು ಬರಲು ತೀರ್ಮಾನಿಸಿದ್ದ. ಲಾಕ್‌ಡೌನ್‌ನಿಂದ ಬಾಡಿಗೆ ಮನೆಯಿಂದ ಅವಳನ್ನು ಖಾಲಿ ಮಾಡಿಸಲಾಗಿದೆ. ಅದಕ್ಕಾಗಿ ನಮ್ಮ ತಾಯಿ ಮನೆಗೆ ಅವಳನ್ನು ಕರೆದುಕೊಂಡು ಬರಲು ಇಂದು ತೀರ್ಮಾನಿಸಿದೆ ಎಂದು ಗದ್ದು ಹೇಳಿದ್ದಾರೆ. ಈಗ ಸಾಹಿಬಾಬದ್‌ ಪೊಲೀಸರು ಸವಿತಾ ಮನೆ ಮಾಲೀಕರಿಗೆ ಅವರನ್ನು ಅದೇ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ.


from India & World News in Kannada | VK Polls https://ift.tt/3f6TB1A

ಖ್ಯಾತ ನಟ ರಿಷಿ ಕಪೂರ್ ವಿಧಿವಶ, ರಾಜಕಾರಣಿಗಳ ಸಂತಾಪ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್‌ ಹಿರಿಯ ನಟ ಗುರುವಾರ ನಿಧನರಾಗಿದ್ದಾರೆ. ರಿಷಿ ಕಪೂರ್‌ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಸೇರಿದಂತೆ ರಾಜ್ಯದ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ನಟ ರಿಷಿ ಕಪೂರ್‌ ನಿಧನ ಆಘಾತಕಾರಿಯಾಗಿದೆ. ಅವರದ್ದು ಮಂತ್ರಮುಗ್ದಗೊಳಿಸುವ ನಟನೆಯಾಗಿತ್ತು. ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಖ್ಯಾತ ಕಪೂರ್ ಕುಟುಂಬದ ಕೊಂಬೆಯೊಂದು ಕಳಚಿತು.ರಿಷಿ ಕಪೂರ್ ರವರ ಬಾಬ್ಬಿ ಸಿನಿಮಾ ಹಿಂದಿ ಚಲನಚಿತ್ರ ರಂಗದಲ್ಲಿ ಅಲೆಯೆಬ್ಬಿಸಿತ್ತು.ರಿಷಿ ಕಪೂರ್ ರವರು ಇತ್ತೀಚೆಗೆ ತಮ್ಮ ಟ್ವೀಟ್ ಗಳಿಂದ ಗಮನ ಸೆಳೆಯುತ್ತಿದ್ದರು.ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ನಿಧನದಿಂದ ಚಿತ್ರದಲ್ಲಿ ತುಂಬಲಾರದ ನಷ್ಟ ಆಗಿದೆ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದಿದ್ದ ರಿಷಿ ಕಪೂರ್ ನಿಧನದಿಂದ ತುಂಬಾ ನೋವಾಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿದ್ದು ಎಂದು ಸಚಿವ ಬಿ.ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕೂಡಾ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು ಭಾರತ ಚಿತ್ರರಂಗದ ಮತ್ತೊಂದು ಧ್ರುವ ತಾರೆ ತನ್ನ ಜೀವನಯಾತ್ರೆ ಮುಗಿಸಿದೆ ಎಂದಿದ್ದಾರೆ.


from India & World News in Kannada | VK Polls https://ift.tt/2VNfR9a

ಕೊರೊನಾ ಪಿಎಂ ಕೇರ್‌ ನಿಧಿಗೆ 2,800 ನೀಡಿದ್ದ ಪದ್ಮಾವತಿ, ಬಿಎಸ್‌ವೈಯಿಂದ ಪ್ರಶಂಸೆ ಪತ್ರ

ಬೆಂಗಳೂರು: ಕೊರೊನಾದಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಪಿಎಂ ಕೇರ್ ನಿಧಿಗೆ ತಾನು ಕೂಡಿಟ್ಟ 2,800 ರೂಪಾಯಿ ಹಣವನ್ನು ನೀಡಿದ್ದ ಹಿರಿಯ ಮಹಿಳೆ ಪದ್ಮಾವತಿ ಜಿ. ಅವರಿಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಧನ್ಯವಾದ ಸಲ್ಲಿಸಿ ಪ್ರಶಂಸೆ ಪತ್ರವನ್ನು ಬರೆದಿದ್ದಾರೆ. ಸಾಗರ ತಾಲೂಕು ಖಂಡಿಕಾ ಗ್ರಾಮದ ಪದ್ಮಾವತಿ ಜಿ. ಅವರು, ತಾವು ಕೂಡಿಟ್ಟಿದ್ದ 2,800 ರೂಪಾಯಿಗಳನ್ನು ಕೋವಿಡ್ -19ರ ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ ನಿಧಿಗೆ ಅರ್ಪಿಸಿದ್ದರು. ಇವರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದರು. ಬಡ ಮಹಿಳೆಯೊಬ್ಬರು ತಾವು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಕೊರೊನಾ ನಿಧಿಗೆ ನೀಡಿದ್ದ ಉದಾರತನಕ್ಕೆ ನೆಟ್ಟಿಗರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಇದು ಸಚಿವ ಸುರೇಶ್ ಕುಮಾರ್ ಮೂಲಕ ಮುಖ್ಯಮಂತ್ರಿ ಬಿಎಸ್‌ವೈ ಗಮನಕ್ಕೂ ಬಂದಿದ್ದು ಪದ್ಮಾವತಿ ಅವರಿಗೆ ಪತ್ರದ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ತಾವು ತಮ್ಮ ಪತಿ ದಿ.ಗಣಪತಿ ಭಟ್‌ ರಂತೆಯೇ ದೇಶಾಭಿಮಾನಿಯಾಗಿದ್ದೀರಿ, ತಾವು ಕಷ್ಟಕಾಲದಲ್ಲಿ ಕೂಡಿಟ್ಟ ಹಣವನ್ನು ಕೋವಿಡ್‌-19 ರೋಗ ನಿಯಂತ್ರಣಕ್ಕೆ ಪಿ.ಎಂ ಕೇರ್ ನಿಧಿಗೆ ಅರ್ಪಿಸಿದ್ದು ಕೇಳಿ ನನಗೆ ಅತೀವ ಸಂತೋಷವಾಗಿದೆ. ನಿಮ್ಮ ಈ ಅಳಿಲು ಸೇವೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಗೂ ಮಾದರಿಯಾಗಲಿ ಮತ್ತು ಸ್ಫೂರ್ತಿದಾಯಕವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ. ತಮ್ಮಂತಹ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಿ ಹಾಗೂ ಸರ್ಕಾರದೊಂದಿಗೆ ತನು, ಮನ ಧನದೊಮದಿಗೆ ಸಹಕರಿಸಲಿ ಎಂದು ಆಶಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


from India & World News in Kannada | VK Polls https://ift.tt/3d1Ih5m

ರೆಡ್‌ ಝೋನ್‌ನತ್ತ ಕೇರಳ: 20 ಸಾವಿರ ಕೋಟಿ ರೂ. ಗಾಳಿಗೆ ತೂರಿದರೆಂದ ಬಿ ಎಲ್‌ ಸಂತೋಷ್‌!

ತಿರುವನಂತಪುರ: ಕೇರಳದ ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತಪುರಗಳಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗುವುದರೊಂದಿಗೆ, ರಾಜ್ಯವು ನಿಧಾನವಾಗಿ ಅಪಾಯಕಾರಿ ಹಂತಕ್ಕೆ ಜಾರುತ್ತಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಕಿಡಿ ಕಾರಿದ್ದಾರೆ. ಪೂರ್ತಿ ರಾಜ್ಯವೇ ರೆಡ್‌ ಝೋನ್‌ನತ್ತ ವಾಲಿದೆ. 20 ಸಾವಿರ ಕೋಟಿ ರೂ. ಪ್ಯಾಕೇಜ್‌ ಗಾಳಿಯಲ್ಲಿ ತೂರಿ ಹೋದಂತಾಗಿದೆ. ಸರಕಾರಿ ಸಿಬ್ಬಂದಿ ಸಂಬಳವನ್ನು ಹಿಡಿದಿಡಲಾಗಿದೆ. ಈ ರೀತಿ ಮಾಡುತ್ತಿರುವ ಮೊದಲ ರಾಜ್ಯ ಕೇರಳ ಎಂದು ಸಂತೋಷ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸರಣಿ ಟ್ವೀಟ್‌ ಮಾಡಿರುವ ಬಿ ಎಲ್‌ ಸಂತೋಷ್‌ ಕೇರಳ ಸರಕಾರದ ನಡೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಎಚ್ಚೆತ್ತುಕೊಳ್ಳಬೇಕು. ಪರಿಸ್ಥಿತಿಯನ್ನು ರಾಜಕೀಯಗೊಳಿಸುವುದನ್ನು ಬಿಟ್ಟು ಕೊರೊನಾ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಜೊತೆಗೆ ಕೇರಳ ಬಿಜೆಪಿ ಇದೆ. ಅತ್ಯಂತ ಕರಾರುವಾಕ್‌ ಆಗಿ ಕಾರ್ಯ ನಿರ್ವಹಿಸುವ ಬಿಜೆಪಿಯ ಸಾಮಾಜಿಕ ತಂಡ ನಿಮ್ಮೊಂದಿಗಿದೆ. ಕೇರಳಕ್ಕೆ ಉತ್ತಮ ಭವಿಷ್ಯವಿದೆ ಎಂದು ಸಲಹೆ ನೀಡಿದ್ದಾರೆ. ಪಿಣರಾಯಿ ಸರಕಾರವನ್ನು ಬಿ ಎಲ್‌ ಸಂತೋಷ್‌ ತರಾಟೆಗೆ ತೆಗೆದುಕೊಂಡಿರುವುದು ಹೀಗೆ...
  1. ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತರಪುರದಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಡೀ ರಾಜ್ಯವೇ ರೆಡ್‌ ಝೋನ್‌ನತ್ತ ಹೊರಳಿದೆ.
  2. 20,000 ಕೋಟಿ ರೂ. ಪ್ಯಾಕೇಜ್‌ ಗಾಳಿಗೆ ತೂರಿ ಹೋಗಿದೆ. ಸರಕಾರಿ ಸಿಬ್ಬಂದಿ ಸಂಬಳವನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಹೀಗೆ ಮಾಡಿದ ಮೊದಲ ರಾಜ್ಯ ಕೇರಳ.
  3. ಗುರುವಾರ ನಾಲ್ಕು ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. 25 ಮಂದಿಯನ್ನು ವಾಪಸ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಏಕೆ?
  4. ಕೇರಳದ ಐಎಂಎ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಕಟುವಾಗಿ ಪತ್ರ ಬರೆದಿದೆ.
  5. ವಿತ್ತ ಸಚಿವ ಡಾ. ಥಾಮಸ್‌ ಐಸಾಕ್‌ ರಾಜ್ಯದ ಆರ್ಥಿಕತೆ ಹಳ್ಳಹಿಡಿದಿರುವ ಬಗ್ಗೆ ಸಾರ್ವಜನಿಕವಾಗಿ ಹೇಳಿ ನೀಡಿದ್ದಾರೆ. ಹಾಗಿದ್ದ ಮೇಲೆ ಪ್ಯಾಕೇಜ್‌ ಘೋಷಿಸಿದ್ದು ಏಕೆ?
  6. ಕರ್ನಾಟಕದಲ್ಲಿ 55,504 ಕೊರೊನಾ ವೈರಸ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 534 ಪಾಸಿಟಿವ್‌ ಕಂಡು ಬಂದಿದೆ. ಅದೇ ಕೇರಳದಲ್ಲಿ 23,980 ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ 2 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದಿದೆ. ಹಾಗಿದ್ದರೆ ಅಷ್ಟು ಕೊರೊನಾ ಪರೀಕ್ಷಾ ಕಿಟ್ಸ್‌ ಅವರ ಬಳಿ ಎಲ್ಲಿವೆ?
  7. ರಾಜ್ಯದಲ್ಲಿರುವ 284 ತಬ್ಲಿಘಿ ಜಮಾತ್‌ ಸಭೆಯಲ್ಲಿ ಪಾಲ್ಗೊಂಡವರನ್ನು ಪತ್ತೆ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಅವರ ಫೋನ್‌ಗಳು ಸ್ವಿಚ್ಆಫ್‌ ಆಗಿವೆ ಎಂದು ಕಾರಣ ನೀಡಲಾಗುತ್ತಿದೆ.
  8. ಈಗಾಗಲೇ 3.5 ಲಕ್ಷ ಮಂದಿ ಗಲ್ಫ್‌ನಿಂದ ವಾಪಸಾಗುತ್ತಿದ್ದಾರೆ. ಎಚ್ಚರಗೊಳ್ಳಿ ಪಿಣರಾಯಿ ವಿಜಯನ್‌.


from India & World News in Kannada | VK Polls https://ift.tt/3aOrwJo

ಕೊರೊನಾ ವೈರಸ್ ತಡೆಗಟ್ಟುವ ಮದ್ದು ಉತ್ತಮ ಫಲಿತಾಂಶ ಕಾಣುತ್ತಿದೆ: ಅಮೆರಿಕ ವೈದ್ಯ

ಹೊಸದಿಲ್ಲಿ: ಇಡೀ ವಿಶ್ವದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಮೆರಿಕದಲ್ಲಂತೂ ಕೆಟ್ಟ ಪರಿಣಾಮ ಬೀರಿದ್ದು, ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿದೆ. ಕೊರೊನಾ ವೈರಸ್‌ಗೆ ಇದುವರೆಗೆ ಔಷಧಿಯನ್ನು ಕಂಡು ಹುಡುಕಿಲ್ಲ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಅಧ್ಯಯಗಳು ನಡೆಯುತ್ತಿದೆ. ಈ ಮಧ್ಯೆ ಶುಭ ಸುದ್ದಿಯೊಂದನ್ನು ಬಿತ್ತರಿಸಿರುವ ಅಮೆರಿಕದ ಖ್ಯಾತ ವೈದ್ಯ, ಆಂಥೊನಿ ಫೌಸಿ, ಕೊರೊನಾ ವೈರಸ್ ತಡೆಗಟ್ಟುವ ಮದ್ದು ಉತ್ತಮ ಫಲಿತಾಂಶವನ್ನು ಬೀರುತ್ತಿದೆ ಎಂದು ಹೇಳಿದ್ದಾರೆ. ಇದು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕೊರೊನಾ ವೈರಸ್ ಡ್ರಗ್ ಟ್ರಯಲ್ ಟೆಸ್ಟಿಂಗ್ ಗಿಲಿಯಾಡ್ ಸಯನ್ಸ್ ಸಾಕಷ್ಟು ಒಳ್ಳೆಯ ಸುದ್ದಿಯನ್ನು ಬಿತ್ತರಿಸಿದೆ. ಇದು ಕೋವಿಡ್ ರೋಗಿಗಳಿಗೆ ಮತ್ತಷ್ಟು ಗುಣಮಟ್ಟದ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದು ಶ್ವೇತಭವನದ ಆರೋಗ್ಯ ಸಲಹೆಗಾರನಾಗಿರುವ ಡಾ. ಆಂಥೊನಿ ಫೌಸಿ ತಿಳಿಸಿದರು. ಈ ಬಗ್ಗೆ ವೈಟ್‌ಹೌಸ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಫೌಸಿ, ಪ್ರಯೋಗಾಲಯದಲ್ಲಿ ಪ್ರಯೋಗ ಮಾಡಿದ ಅಂಕಿಅಂಶಗಳಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಿದೆ ಎಂದು ಹೇಳಿದ್ದಾರೆ. ಈಗಿನ ಚೇತರಿಕೆ ಸಮಯ 15 ದಿನಗಳಿಗೆ ಹೋಲಿಸಿದರೆ ಈ ಔಷಧಿಯ ಚೇತರಿಕೆಯ ಸಮಯ 11 ದಿನಗಳಾಗಿದೆ. ಅಲ್ಲದೆ ಈ ಮೂಲಕ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಉಲ್ಲೇಖಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫೆಕ್ಸಿಯಸ್ ಡಿಸೀಸ್ ನಿರ್ದೇಶಕರಾಗಿರುವ ಆಂಥೊನಿ ಫೌಸಿ, ಇದು ಆರೈಕೆಯ ಮಾನದಂಡವಾಗಿದ್ದು, ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಾಗಲಿದೆ ಎಂಬುದನ್ನು ಸಾಬೀತುಪಡಿಸಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫೆಕ್ಸಿಯಸ್ ಡಿಸೀಸ್ ನಡೆಸಿದ ಮದ್ದಿನ ಪ್ರಯೋಗದ ಸಂಪೂರ್ಣ ಫಲಿತಾಂಶಗಳನ್ನು ಅಮೆರಿಕ ಆರೋಗ್ಯ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ.


from India & World News in Kannada | VK Polls https://ift.tt/35lWcAC

ಮಾ.24ರಂದು ಮುಚ್ಚಿದ ವಿಧಾನಸಭೆ ಸಚಿವಾಲಯ ಕಚೇರಿಗಳು ಇನ್ನೂ ತೆರೆದಿಲ್ಲ!

- ಕೆಂಚೇಗೌಡ, ಬೆಂಗಳೂರು ಸಚಿವಾಲಯ, ಸರಕಾರಿ ಕಚೇರಿಗಳಲ್ಲಿ ಮೂರನೇ ಒಂದರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆಗೆ ವಿಧಾನಸೌಧ 3ನೇ ಮಹಡಿಯಿಂದ ಹೊರಬಿದ್ದಿರುವ ಆದೇಶಕ್ಕೆ ಮೊದಲ ಮಹಡಿಯಲ್ಲೇ ಕಿಮ್ಮತ್ತು ಸಿಕ್ಕಿಲ್ಲ. ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಮಾ.24 ರಂದು ಮುಚ್ಚಿದ ವಿಧಾನಸಭೆ ಸಚಿವಾಲಯದ ಕಚೇರಿಗಳು ಇನ್ನೂ ತೆಗೆದಿಲ್ಲ. ಅಧಿವೇಶನ ಬಳಿಕ ವಿಧಾನಸಭೆ ಸಚಿವಾಲಯ ಸಂಪೂರ್ಣ ಬಂದ್‌ ಆಗಿವೆ. ಲಾಕ್‌ ಡೌನ್‌-2 ಅವಧಿಯಲ್ಲಿ ಸಚಿವಾಲಯ ಮತ್ತು ಕಚೇರಿಗಳ ಕಾರ್ಯಾರಂಭಕ್ಕೆ ಡಿಪಿಎಆರ್‌ ಹೊರಡಿಸಿದ ಆದೇಶಕ್ಕೆ ವಿಧಾನಸಭೆ ಸಚಿವಾಲಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲಎಂಬ ಆರೋಪಗಳು ಕೇಳಿಬರುತ್ತಿವೆ. ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ ಮಟ್ಟದ ಅಧಿಕಾರಿಗಳೂ ವಿಧಾನಸೌಧ ಕಚೇರಿಗಳತ್ತ ಸುಳಿದಿಲ್ಲ. ಶಾಸಕರು ಶಾಸಕರ ಭವನದಲ್ಲಿ ತಂಗಿಲ್ಲ. ನಾನಾ ಸಮಿತಿ ಸಭೆಗಳು ನಡೆಯುತ್ತಿಲ್ಲ. ಭರವಸೆಗಳ ಸಮಿತಿ ಸೇರಿ ಹತ್ತಾರು ಸಮಿತಿಗಳ ಕೆಲಸ ಬೆಟ್ಟದಷ್ಟಿರುತ್ತದೆ. ಅಧಿವೇಶನದಲ್ಲಿ ಸಚಿವರು ನೀಡಿದ ಭರವಸೆ ಆಧರಿಸಿ ಸಂಬಂಧಿತ ಇಲಾಖೆಗಳ ಕ್ರಮಗಳ ಫಾಲೋಅಪ್‌ ಮಾಹಿತಿ ಕ್ರೋಡೀಕರಿಸುವುದು, ಉತ್ತರ ಪಡೆದು ಸಮಿತಿ ಮುಂದಿಡಲು ತಯಾರಿಸಬೇಕಾಗುತ್ತದೆ. ಐದು ವಾರಗಳಿಂದ ಎಲ್ಲ ಕೆಲಸವೂ ಬಂದ್‌ ಆಗಿವೆ. ಕಾರಣವೇ ಬೇರೆ..! ಪರಿಷತ್‌ ಸಚಿವಾಲಯ ಕೆಲಸ ನಿರ್ವಹಿಸುತ್ತಿದೆ. ಆದರೆ, ವಿಧಾನಸಭೆ ಸಚಿವಾಲಯ ಬಾಗಿಲು ಮುಚ್ಚಿರಲು ಬೇರೆಯದೇ ಕಾರಣವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್‌. ಮೂರ್ತಿ ಅವರನ್ನು ನಾನಾ ಆಪಾದನೆಯಡಿ ಅಮಾನತು ಮಾಡಲಾಗಿದೆ. ಅಮಾನತು ಮಾಡಿ 16 ತಿಂಗಳು ಕಳೆದರೂ ವಿಚಾರಣೆ ಮುಗಿದಿಲ್ಲ. ನಿಯಮಾವಳಿ ಪ್ರಕಾರ 6 ತಿಂಗಳ ಬಳಿಕವೂ ಅಮಾನತು ಮುಂದುವರಿಸುವಂತಿಲ್ಲಎಂಬ ಕಾರಣಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠ ಬೇಗ ವಿಚಾರಣೆ ಮುಗಿಸಲು ಆದೇಶಿಸಿದೆ. ಮೇ 3 ರ ಬಳಿಕ ಮತ್ತೆ ಪ್ರಕರಣ ವಿಚಾರಣೆಗೆ ಬರುತ್ತಿದೆ. ಆದಷ್ಟು ಬೇಗ ವಿಚಾರಣೆ ಪ್ರಕ್ರಿಯೆ ಮುಗಿಸಲು ಕೋರ್ಟ್‌ ಆದೇಶಿಸಿರುವ ಕಾರಣ ಲಾಕ್‌ಡೌನ್‌ನಿಂದಾಗಿ ವಿಚಾರಣೆ ಪ್ರಕ್ರಿಯೆ ನಡೆದಿಲ್ಲ ಎಂಬ ನೆಪವೊಡ್ಡಬಹುದು ಎಂಬ ಆಪಾದನೆಗಳು ಕೇಳಿಬರುತ್ತಿವೆ.


from India & World News in Kannada | VK Polls https://ift.tt/2We9JFV

ಕೊರೊನಾ ಲೈವ್ ಅಪ್‌ಡೇಟ್ಸ್; ದೇಶದಲ್ಲಿ 1,079 ಮಂದಿ ಸಾವು!

ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 2ಲಕ್ಷದ 28 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ 33,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಮೇ 3ರ ಕ್ಷಣಕ್ಷಣದ ಮಾಹಿತಿ ಇಲ್ಲಿದೆ:- -ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. 216 ಮಂದಿ ಗುಣಮುಖರಾಗಿದ್ದು 21ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 12ನೇ ಸ್ಥಾನದಲ್ಲಿದೆ.

-ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸೋಂಕಿತರ ಸಂಖ್ಯೆ 33,066ಕ್ಕೆ ಏರಿಕೆಯಾಗಿದೆ. 8,437 ಮಂದಿ ಗುಣಮುಖರಾಗಿದ್ದು, 1,079 ಮಂದಿ ಸಾವನ್ನಪ್ಪಿದ್ದಾರೆ. -ಅಮೆರಿಕದಲ್ಲಿ ಅತೀ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದು. ಸೋಂಕಿತ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 10 ಲಕ್ಷದ 64 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, 61,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪಟ್ಟಿಯಲ್ಲಿ ಕೂಡ ಮೊದಲನೇ ಸ್ಠಾನದಲ್ಲಿದೆ. -ಸೋಂಕಿತ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 2 ಲಕ್ಷದ 36 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 24,000ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಚಾರ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದೆ. -ಇಟಲಿ ಮೃತಪಟ್ಟವರ ಚಾರ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 2ಲಕ್ಷದ 03ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 27,600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. ಸೋಂಕಿತರ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. -ವಿಶ್ವದಾದ್ಯಂತ 2 ಲಕ್ಷ 28 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 32 ಲಕ್ಷದ 19ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇದರಲ್ಲಿ 10ಲಕ್ಷ ಮಂದಿ ಗುಣಮುಖರಾಗಿದ್ದಾರೆ.


from India & World News in Kannada | VK Polls https://ift.tt/2YjRDFe

ಲಾಕ್‌ಡೌನ್‌ನಿಂದ ಕೃಷಿ ಪರಿಕರಗಳ ಬೆಲೆ ಗಗನಕ್ಕೆ: ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ವ್ಯಾಪಾರಿಗಳು!

ವಿ. ರವಿಕಿರಣ್‌, ರಾಮನಗರ ರಾಮನಗರ: ಕೊರೊನಾ ತುರ್ತುಪರಿಸ್ಥಿತಿ ಇದ್ದರೂ ಕೃಷಿ ಚಟುವಟಿಕೆಗಳಿಗೆ ಯಾವುದೇ ಭಂಗವಿಲ್ಲ. ಬೇಸಾಯ ಮಾಡಲು ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಕೃಷಿಗೆ ಬೇಕಾದ ಎಲ್ಲ ರೀತಿಯ ಪರಿಕರಗಳ ದಾಸ್ತಾನು ಸಾಕಷ್ಟು ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಗ್ರೌಂಡ್‌ ರಿಯಾಲಿಟಿ ಬೇರೆಯೇ ಇದೆ. ಲಾಕ್‌ಡೌನ್‌ ಅನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಕೃತಕ ಅಭಾವ ಸೃಷ್ಟಿಸಿ ರೈತರನ್ನು ದೋಚಲು ನಿಂತಿದ್ದಾರೆ. ಕೃಷಿಗೆ ಬೇಕಾದ ಪರಿಕರಗಳ ಹಾಗೂ ಯಂತ್ರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ರೈತರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಮಳೆ ಬಂದರೂ, ಕೈಕಟ್ಟಿದ ಅನುಭವ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಕೃಷಿಪೂರ್ವ ಕೆಲಸಗಳಿವೆ. ಕೃಷಿಗೆ ಸಾಕಷ್ಟು ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಪರಿಕರಗಳ ಖರೀದಿಗೆ ಮಾರುಕಟ್ಟೆಗೆ ಬರುತ್ತಿರುವ ರೈತರಿಗೆ ಆಘಾತ ಎದುರಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ ಇಲ್ಲ, ಸೀಮಿತ ದಾಸ್ತಾನು ಇದೆ ಎಂದು ಸುಳ್ಳು ಕತೆ ಕಟ್ಟುವ ವ್ಯಾಪಾರಿಗಳು ಮತ್ತು ದಲ್ಲಾಳಿಗಳು, ದುಪ್ಪಟ್ಟು ಬೆಲೆಗಳಿಗೆ ಇವುಗಳನ್ನು ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ರೈತರಿಗೆ ಮಳೆ ಬಂದರೂ ಕೃಷಿ ಮಾಡಲಾಗದೇ ಕೈಕಟ್ಟಿ ಹಾಕಿದ ಅನುಭವವಾಗುತ್ತಿದೆ. ಯಾವೆಲ್ಲಾ ಪರಿಕರಗಳು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕ, ಸಾವಯವ ಗೊಬ್ಬರ ಸೇರಿದಂತೆ ಕೃಷಿ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬರುತ್ತಿವೆ. ಇದನ್ನು ಕೃಷಿ ಇಲಾಖೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಶಿಸ್ತು ಕ್ರಮದ ಎಚ್ಚರಿಕೆ ಕೃಷಿ ಸಲಕರಣೆಗಳನ್ನು ದುಪ್ಪಟ್ಟು ಬೆಲೆಗೆ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರ ಮಾರಾಟದ ಪರವಾನಗಿ ರದ್ದುಪಡಿಸುವುದಾಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರವಿ ಎಚ್ಚರಿಸಿದ್ದಾರೆ. ಕೃಷಿ ಸಲಕರಣೆ ಪೂರೈಸುವ ವ್ಯಾಪಾರಿಗಳು, ಸಾವಯವ ಗೊಬ್ಬರು, ರಸಗೊಬ್ಬರ, ಬಿತ್ತನೆ ಬೀಜ, ಕೀಟ ನಾಶಕಗಳ ಸಾಕಷ್ಟು ದಾಸ್ತಾನು ಮಾಡಿಕೊಳ್ಳುವುದು ಕಡ್ಡಾಯ. ಜತೆಗೆ ಕೊರೊನಾ ಹರಡದಂತೆ ಸುರಕ್ಷತೆ ಕ್ರಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂಗಡಿಗೆ ಬರುವ ರೈತರು ಮುಖಕ್ಕೆ ಮಾಸ್ಕ್‌ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೈಗೆ ಸ್ಯಾನಿಟೈಸರ್‌ ಹಾಕಲೇಬೇಕು. ವ್ಯವಹಾರದ ವೇಳೆ ಸಾಮಾಜಿಕ ಅಂತರ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ದಾಸ್ತಾನು, ದರಪಟ್ಟಿ ಪ್ರಕಟಿಸಿ ಜಿಲ್ಲೆಯ ಎಲ್ಲ ಕೃಷಿ ಸಲಕರಣೆ ಮಾರಾಟದ ಮಳಿಗೆಗಳಲ್ಲಿಅಂಗಡಿಯಲ್ಲಿರುವ ದಾಸ್ತಾನು ಹಾಗೂ ಅವುಗಳ ಚಿಲ್ಲರೆ ಮಾರಾಟದ ದರದ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಇದು ಅಂಗಡಿಯಲ್ಲಿಎಲ್ಲರಿಗೂ ಕಾಣುವಂತೆ ದೊಡ್ಡದಾಗಿರಬೇಕು. ದರಪಟ್ಟಿಯಲ್ಲಿ ನಮೂದಿಸಿರುವ ಬೆಲೆಯಲ್ಲೇ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು. ಇದಕ್ಕೆ ತಪ್ಪಿದರೆ ತಕ್ಕ ಶಾಸ್ತಿ ಖಚಿತ ಎಂದು ಅವರು ಎಚ್ಚರಿಸಿದ್ದಾರೆ. 7100 ಹೆಕ್ಟೇರ್‌ ಗುರಿ 2020-21ರ ಪೂರ್ವ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ 7100 ಹೆಕ್ಟೇರ್‌ ಗುರಿಯನ್ನು ನಿಗದಿಗೊಳಿಸಿದೆ. ಎಳ್ಳು 3500 ಹೆಕ್ಟೇರ್‌, ತೊಗರಿ 1610 ಹೆಕ್ಟೇರ್‌ , 1100 ಹೆಕ್ಟೇರ್‌ ಅಲಸಂದೆ, ಅವರೇ 900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇವು ಜಿಲ್ಲೆಯ ಪೂರ್ವ ಮುಂಗಾರಿನ ಪ್ರಮುಖ ಬೆಳೆಯಾಗಿವೆ. ಜಾಗೃತ ಕೋಶಕಳಪೆ ಕೃಷಿ ಪರಿಕರಗಳ ಮಾರಾಟ ಮತ್ತು ನೊಂದಾಣಿಯಾಗದ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟ ನಾಶಕ ಮಾರಾಟ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಇದರ ಜತೆಗೆ, ನಿಗದಿತ ಬೆಲೆಗಿಂತ ಹೆಚ್ಚು ದರಕ್ಕೆ ಮಾರಾಟ ಮಾಡುವುದು ಮತ್ತು ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಬಹುದು. ಇದರೊಟ್ಟಿಗೆ ಜಿಲ್ಲಾಮಟ್ಟದಲ್ಲಿ ಜಾಗೃತ ಕೋಶ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ. ರೈತರು ಸಹ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೇ, 8277929745 ನಂಬರ್‌ಗೆ ಕರೆ ಮಾಡಬಹುದು ಎಂಬುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಳಿಗೆ ಬಂದ್‌ ಕೊರೊನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಡಕು ಆಗದಿರಲಿ ಎಂದು ಜಿಲ್ಲಾಕೃಷಿ ಇಲಾಖೆ ಮಳಿಗೆಗಳಿಗೆ 118 ಪಾಸುಗಳನ್ನು ವಿತರಣೆ ಮಾಡಿದೆ. ಆದರೆ, ಪಾಸು ಪಡೆದ ಮಳಿಗೆಗಳು ಮಳಿಗೆ ತೆರೆಯದೇ ಬಹುತೇಕ ಸ್ವಯಂ ಘೋಷಿತ ಬಂದ್‌ ಮಾಡಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರು, ಕೃಷಿ ಚಟುವಟಿಕೆಗಳಿಗೆ ಅಗತ್ಯ ಪದಾರ್ಥಗಳು ಲಭ್ಯವಾಗದೇ, ರೈತರು ತಲೆಯ ಮೇಲೆ ಕೈ ಹಿಡಿದು ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಎಂಪಿಆರ್‌ಪಿಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡಲಾಗುತ್ತಿದೆ. ಕೆಲವೊಂದು ಬೀಜಗಳು ಲಭ್ಯವಾಗುತ್ತಿಲ್ಲ. ರೈತರು ಕೇಳುವ ಪದಾರ್ಥಗಳು ಡೀಲರ್‌ಗಳ ಬಳಿ ಲಭ್ಯವಾಗುತ್ತಿಲ್ಲ. ಸೊಪ್ಪು ಸೇರಿದಂತೆ ಇತರೆ ಪದಾರ್ಥಗಳ ಬೀಜಗಳಿಗೆ ದುಪ್ಪಟ್ಟು ಹಣ ಕೇಳಲಾಗುತ್ತಿದೆ. ಇನ್ನು ರಾಸಾಯನಿಕ ಮತ್ತು ಕೀಟ ನಾಶಕವನ್ನು ಕೇಳಲು ಸಾಧ್ಯವಾಗುತ್ತಿಲ್ಲ. -ಎಂ.ಡಿ.ಶಿವಕುಮಾರ್‌, ರೈತ ಸಂಘ ಮುಖಂಡ, ರಾಮನಗರ ಹೆಚ್ಚಿನ ದರಕ್ಕೆ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಮುಂಜಾಗ್ರತ ಕ್ರಮವಾಗಿ, ಪ್ರಕಟಣೆಯನ್ನು ಹೊರಡಿಸಲಾಗಿದೆ. ಇಂತಹ ಘಟನೆಗಳು ಕಂಡು ಬಂದರೇ, ರೈತರು ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಬಹುದು ಅಥವಾ ಜಾಗೃತಕೋಶ ಅಧಿಕಾರಿ ನಂಬರ್‌ಗೆ ಕರೆ ಮಾಡಬಹುದು. -ರವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ


from India & World News in Kannada | VK Polls https://ift.tt/2Whlg7M

ಕೇಂದ್ರ ಸರ್ಕಾರಿ ನೌಕರರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ: ಸಿಬ್ಬಂದಿ ಸಚಿವಾಲಯದ ಸೂಚನೆ

ನವದೆಹಲಿ: ಹೊರಗುತ್ತಿಗೆ ಸಿಬ್ಬಂದಿಯೂ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ನೌಕರರೂ ಆರೋಗ್ಯ ಸಚಿವಾಲಯದ ಆರೋಗ್ಯ ಸೇತು ಆ್ಯಪ್‌ನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸಿಬ್ಬಂದಿ ಸಚಿವಾಲಯ ಸೂಚನೆ ನೀಡಿದೆ. ಈ ಕುರಿತು ಹೊರಡಿಸಲಾಗಿರುವ ಜ್ಞಾಪನಾ ಪತ್ರದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರದ ಎಲ್ಲಾ ನೌಕರರು ಆರೋಗ್ಯ ಸೇತು ಆ್ಯಪ್‌ ಡೌನ್ಲೋಡ್ ಮಾಡಿಕೊಳ್ಳಲು ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಯವುದೇ ಸಿಬ್ಬಂದಿ ಕಚೇರಿಗೆ ಬರುವ ಮೊದಲು ಆ್ಯಪ್‌ನಲ್ಲಿ ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ತಾವು ಸುರಕ್ಷಿತ ಎಂದು ಹೇಳಿದಾಗ ಮಾತ್ರ ಕಚೇರಿಗೆ ಬರಬೇಕು ಎಂದು ಸಿಬ್ಬಂದಿ ಸಚಿವಾಲು ಸ್ಪಷ್ಟ ಸೂಚನೆ ನೀಡಿದೆ. ಅಲ್ಲದೇ ಕೊರೊನಾ ವೈರಸ್ ಸೋಂಕಿಯ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ ಸಸ್ಥಳದ ಆಧಾರದ ಮೇಲೆ ಅಪ್ಲಿಕೇಶನ್ ಹೆಚ್ಚಿನ ಅಪಾಯದ ಕುರಿತು ಮುನ್ಸೂಚನೆ ನೀಡಿದರೆ ಕೂಡಲೇ ಅಂತಹ ನೌಕರರು 14 ದಿಒನಗಳ ಗೃಹ ಬಂಧನಕ್ಕೆ ತುತ್ತಾಗಬೇಕು ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್(ಆ್ಯಂಡ್ರಾಯ್ಡ್ ಫೋನ್‌ಗಳಿಗಾಗಿ) ಹಾಗೂ ಆ್ಯಪಲ್ ಆ್ಯಪ್ ಸ್ಟೋರ್(ಐಓಎಸ್‌ಗಾಗಿ)ನಲ್ಲಿ ಲಭ್ಯವಿದೆ.


from India & World News in Kannada | VK Polls https://ift.tt/2KGh0sU

ಮಾನಸಿಕ ಸಮತೋಲನವೇ ಕೊರೊನಾ ವೈರಸ್‌ಗೆ ಅಸ್ತ್ರ

- ಡಾ.ಬಿ.ಟಿ.ರುದ್ರೇಶ್‌ ಕಳೆದ ಸುಮಾರು ನಾಲ್ಕು ತಿಂಗಳಿಂದ ಚೀನಾದ ವೂಹಾನ್‌ನಿಂದ ಜಗತ್ತಿನ ವಿವಿಧೆಡೆಗಳಿಗೆ ಹಬ್ಬುತ್ತಿರುವ ಎಂಬ ವೈರಾಣು ಸೋಂಕು ಬದುಕಿನ ನೆಮ್ಮದಿಯನ್ನೇ ಕೆಡಿಸಿದೆ. ಮೊದಲು ಕೆಮ್ಮು, ಜ್ವರ ಮತ್ತು ಮೈಕೈ ನೋವಿದ್ದರೆ ಅದು ಕೊರೊನಾ ಆಗಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಎಲ್ಲ ಕೆಮ್ಮು, ಜ್ವರದ ಲಕ್ಷ ಣಗಳು ಕೊರೊನಾ ಆಗಿರಲೇಬೇಕಿಲ್ಲ ಎಂಬ ಸಮಾಧಾನದ ಮಾತುಗಳೂ ಇದ್ದವು. ಈಗ ಇದ್ಯಾವ ಲಕ್ಷ ಣಗಳೂ ಇಲ್ಲದೆ ಕೊರೊನಾ ಪ್ರಕರಣಗಳು ಪತ್ತೆಯಾಗಿರುವುದರಿಂದ ಜನಸಾಮಾನ್ಯರು ಭಯದ ನೆರಳಲ್ಲೇ ಬದುಕುವಂತಾಗಿದೆ. ಹಾಗಾದರೆ ಕೊರೊನಾ ಸೋಂಕು ಎಲ್ಲರನ್ನೂ ನುಂಗಿ ಹಾಕುತ್ತದೆಯೇ? ಖಂಡಿತ ಇಲ್ಲ. ರೋಗ ನಿರೋಧಕ ಶಕ್ತಿ ಕುಗ್ಗಿದವರಿಗಷ್ಟೇ ಈ ತೊಂದರೆ. ನಮ್ಮ ಜರ್ಜರಿತ ಮನಸ್ಸು ಕೊರೊನಾಗೆ ಆಹ್ವಾನ ನೀಡಬಹುದು. ಇದರ ಅರ್ಥ ಇಷ್ಟೇ. ಮಾನಸಿಕವಾಗಿ ದುರ್ಬಲವಾದರೆ ರೋಗನಿರೋಧಕ ಶಕ್ತಿಯೂ ಕುಗ್ಗುತ್ತದೆ. ‘‘ಮನಸ್ಸೇ ಎಲ್ಲ. ನಿಮ್ಮ ಯೋಚನೆಯಂತೆಯೇ ನಿಮ್ಮ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ’’ ಎಂದು ಭಗವಾನ್‌ ಬುದ್ಧ ಹೇಳಿದ್ದಾನೆ. ಮನಸ್ಸಿನಂತೆ ಮಹದೇವ ಎಂಬ ಮಾತು ನೀವೆಲ್ಲ ಕೇಳಿರುತ್ತೀರಿ. ನಾವು ಏನಾಗಬೇಕೆಂದು ಮನಸ್ಸಿನಲ್ಲಿ ಪ್ರಾಮಾಣಿಕವಾಗಿ ಬಯಸುತ್ತೇವೆಯೋ ಹಾಗೇ ಆಗುತ್ತೇವೆ. ನಮ್ಮ ಮನಸ್ಸಿನ ನಿರ್ಧಾರದಂತೆ ಇತರ ಇಂದ್ರಿಯಗಳೂ ಕಾರ್ಯ ನಿರ್ವಹಿಸುತ್ತವೆ. ಮನಸ್ಸು ಎಲ್ಲಿ ವ್ಯವಹರಿಸುವುದೋ ಅಲ್ಲಿಯೇ ಎಲ್ಲ ಇಂದ್ರಿಯಗಳು ವ್ಯವಹರಿಸುತ್ತವೆ ಎಂದು ಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ಹೇಳಿದ್ದಾರೆ. ಕೊರೊನಾದಿಂದ ನಮ್ಮನ್ನು ಕಾಪಾಡಿಕೊಳ್ಳಲು ಮಾನಸಿಕ ಸಮತೋಲನ ಅತ್ಯಗತ್ಯ. ಚೀನಾದ ಆರೋಗ್ಯ ಕ್ಷೇತ್ರದ ಪ್ರಮುಖ ವಿಜ್ಞಾನಿಗಳಾದ ಝೂವಾಂಗ್‌, ವಾಂಗ್‌ ಕಿಯಾಂಗ್‌ ಮತ್ತು ಹು ಕೆ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಮಾನಸಿಕ ಸಮತೋಲನದತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ಮಾನಸಿಕ ಸಮತೋಲನ ಮತ್ತು ದೈಹಿಕ ಸಮತೋಲನಗಳು ಸೋಂಕುಗಳಿಂದ ರಕ್ಷ ಣೆ ಪಡೆಯುವ ನಮ್ಮ ವ್ಯವಸ್ಥೆಗೆ ವಯಸ್ಸಾಗುವುದನ್ನು ಮುಂದೂಡುತ್ತದೆ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಮಾನಸಿಕ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಭಾವನೆಗಳ ಸ್ವಯಂನಿಯಂತ್ರಣವನ್ನು ಅಭ್ಯಾಸ ಮಾಡಬೇಕಾಗುತ್ತದೆ. ವಿವಿಧ ರೀತಿಯಲ್ಲಿ ನಮ್ಮನ್ನು ಕಾಡುವ ನಕಾರಾತ್ಮಕ ಪ್ರಚೋದನೆಗಳಿಗೆ ತಿರಸ್ಕಾರದ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ನಮ್ಮ ಬದುಕಿನ ಸಕಾರಾತ್ಮಕ ಚಟುವಟಿಕೆಗಳು ಮಾನಸಿಕ ಸಮತೋಲನ ಕಾಪಾಡಲು ನೆರವಾಗುತ್ತವೆ. ಈ ಹಿನ್ನೆಲೆಯಲ್ಲಿ ಆಶಾ ಭಾವನೆ, ಉಲ್ಲಾಸ ಮತ್ತು ಸಹನೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಸದಾ ಹಸನ್ಮುಖಿಗಳಾಗಿರಬೇಕು. ಮನುಷ್ಯನ ಜೀವಿತಾವಧಿ ನೂರು ವರ್ಷಗಳೆಂದು ಹೇಳುತ್ತಿದ್ದರೂ ಬಹುತೇಕರು ನೂರರ ಅಂಚನ್ನೂ ತಲುಪುವ ಸಾಕಷ್ಟು ಮುನ್ನವೇ ಸಾವನ್ನಪ್ಪಿರುತ್ತಾರೆ. ಆದರೆ ಎಲ್ಲೋ ಕೆಲವರು ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿ ಅಚ್ಚರಿ ಉಂಟುಮಾಡುತ್ತಿರುತ್ತಾರೆ. ಈ ಶತಾಯುಷ್ಯದ ಗುಟ್ಟೇನು? ನೂರಕ್ಕಿಂತ ಹೆಚ್ಚು ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳಲ್ಲಿ ಕೆಲವು ಸಮಾನ ಲಕ್ಷ ಣಗಳನ್ನು ಕಾಣಬಹುದು. ಅವರೆಲ್ಲ ಮುಕ್ತ ಮನಸ್ಸಿನವರು, ಬದುಕನ್ನು ಸುಲಭವಾಗಿ ಪರಿಗಣಿಸಿ ನಿರಾತಂಕವಾಗಿ ಮುನ್ನಡೆಯುವವರು ಮತ್ತು ದಯಾಪರರು. ಕೆಲಸ ಮತ್ತು ಕ್ರೀಡೆಯನ್ನು ಪ್ರೀತಿಸುವವರು. ಇಂಥವರಲ್ಲಿ ಕ್ಷ ಮಾಗುಣವೂ ಇದೆ. ಈ ಗುಣಗಳನ್ನೇ ನಾವು ಕೂಡ ಅಭ್ಯಾಸ ಮಾಡಿಕೊಳ್ಳಬೇಕು. ಇದರ ಒಟ್ಟು ತಾತ್ಪರ್ಯ ಇಷ್ಟೇ. ಸಾಮಾಜಿಕ ಬದುಕಿನಲ್ಲಿ ಉತ್ತಮ ಸಂಬಂಧಗಳು ರೋಗ ನಿರೋಧಕ ಶಕ್ತಿ ವರ್ಧನೆ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡುತ್ತದೆ. ಹಾಗೇ ವೈಯಕ್ತಿಕ ಸಂಬಂಧಗಳಲ್ಲಿ ಭಾವನೆಗಳ ನಿಯಂತ್ರಣ ಅತಿ ಮುಖ್ಯ. ಈ ಗುಣಲಕ್ಷ ಣಗಳನ್ನು ರೂಢಿಸಿಕೊಳ್ಳಬೇಕಾದರೆ ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಕೋಪ ನಿಗ್ರಹವನ್ನೂ ಅಭ್ಯಾಸ ಮಾಡಿ ಕೊಳ್ಳಬೇಕು. ಸಾಧ್ಯವಾದಷ್ಟು ಇತರರು ಮಾತಾಡುವಾಗ ನಮ್ಮ ವಾಕ್ಚಾತುರ್ಯ ಪ್ರದರ್ಶಿಸುವ ಬದಲು ಆಲಿಸುವುದನ್ನೂ ಕಲಿತುಕೊಳ್ಳಬೇಕು. ಇತರರ ಸಾಧನೆ ಬಗ್ಗೆ ಕರುಬುವ ಬದಲು ಮೆಚ್ಚುಗೆ ವ್ಯಕ್ತಪಡಿಸುವುದೂ ಅತ್ಯಗತ್ಯ ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನಿಮ್ಮ ಉತ್ತಮ ಮನಃಸ್ಥಿತಿ ಮುಖದಲ್ಲಿ ಪ್ರತಿಫಲಿಸುತ್ತದೆ. ಸಹಜವಾಗಿಯೇ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಕೊರೊನಾ ಭಯವನ್ನೂ ಓಡಿಸಿಬಿಡುತ್ತದೆ. ಮಲಿನಗೊಂಡ ಮನಸ್ಸು ದೈಹಿಕ ಆರೋಗ್ಯವನ್ನೂ ಹಾಳುಗೆಡವುತ್ತದೆ. ನಿರ್ಮಲ ಮನಸ್ಸು ಆರೋಗ್ಯವನ್ನು ಕಾಪಾಡುತ್ತದೆ. ಅಂದ ಹಾಗೆ ಹೋಮಿಯೋಪಥಿ ಪ್ರಕಾರವೂ ಮಾನಸಿಕ ಮತ್ತು ದೈಹಿಕ ಅಸಮತೋಲನವೇ ಯಾವುದೇ ಕಾಯಿಲೆಗೆ ಕಾರಣ. ಹೋಮಿಯೋಪಥಿ ಚಿಕಿತ್ಸೆಯಲ್ಲಿ ರೋಗಿಯ ಕುಟುಂಬ, ಕಾರ್ಯಕ್ಷೇತ್ರ ಮತ್ತು ಸಮಾಜಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದೇ ಅದರ ಆಧಾರದಲ್ಲಿ ಔಷಧ ನೀಡಲಾಗುತ್ತದೆ. ಹೋಮಿಯೋಪಥಿಯಲ್ಲಿ ಮಾನಸಿಕ ಸಮತೋಲ ನಕ್ಕೂ ಚಿಕಿತ್ಸೆ ಇದೆ, ಕೊರೊನಾ ಸೇರಿದಂತೆ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಕರೋನ ಚಿಂತೆ ಬಿಡಿ. ಮಾನಸಿಕ ಸಮತೋಲನ ಕಾಪಾಡಿ. (ಲೇಖಕರು ಖ್ಯಾತ ಹೋಮಿಯೋಪಥಿ ವೈದ್ಯರು)


from India & World News in Kannada | VK Polls https://ift.tt/2VNMCmA

ಬೆಳಗಾವಿ ಕೋಬ್ರಾ ಕಮಾಂಡೋಗೆ ಪೊಲೀಸ್ ಠಾಣೆಯಲ್ಲೂ ಹಲ್ಲೆ! ಫೋಟೋ ವೈರಲ್

ಬೆಳಗಾವಿ: ಮಾಸ್ಕ್‌ ಧರಿಸಿಲ್ಲ ಎಂಬ ಕಾರಣಕ್ಕಾಗಿ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ್ ಮೇಲೆ ಹಲ್ಲೆ ಹಾಗೂ ಬಂಧನ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಸ್ತೆಯಲ್ಲಿ ನಡೆದ ಜಟಾಪಟಿಯ ಬಳಿಕ ಯೋಧನನ್ನು ಬಂಧಿಸಿದ್ಧ ಪೊಲೀಸರು ಠಾಣೆಯಲ್ಲಿ ತೀವ್ರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬುವಂತೆ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಿತಾಂಶು ಚೌಧರಿ ಎಂಬುವವರು ಸಚಿನ್ ಸಾವಂತ್ ಅವರ ಎರಡು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕೋಬ್ರಾ ಕಮಾಂಡೋ ಸಚಿನ್‌ಗೆ 15 ಮಂದಿ ಪೊಲೀಸರು ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ಕುರಿತಾಗಿ ನ್ಯಾಯಾಧೀಶರ ಮುಂದೆ ಹೇಳಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದರಿಂದ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಹಲ್ಲೆಯಿಂದಾಗಿ ಗಾಯದ ಗುರುತಿರುವ ಎರಡು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. ಏಪ್ರಿಲ್‌ 23 ಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯೋಧ ಸಚಿನ್ ಸಾವಂತ್ ಮನೆಯ ಮುಂದೆ ಬೈಕ್‌ ತೊಳೆಯುತ್ತಿದ್ದ ಸಂದರ್ಭದಲ್ಲಿ ಮಾಸ್ಕ್‌ ಧರಿಸಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮುಕಿ ನಡೆದಿತ್ತು. ಬಳಿಕ ಪೊಲೀಸರು ಲಾಠಿಯಲ್ಲಿ ಸಚಿನ್ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿನ್ ಕೂಡಾ ಹೊಡೆದಿದ್ದರು. ಬಳಿಕ ಕೋಬ್ರಾ ಯೋಧನನ್ನು ಬಂಧಿಸಿದ ಪೊಲೀಸರು ಕೈಕೋಳ ತೊಡಿಸಿ ಕೂರಿಸಿದ ಫೋಟೋ ವೈರಲ್‌ ಆಗಿತ್ತು. ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಠಾಣೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪೊಲೀಸರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಬಂಧನದಲ್ಲಿದ್ದ ಕೋಬ್ರಾ ಕಮಾಂಡೋ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.


from India & World News in Kannada | VK Polls https://ift.tt/35fMCPv

ಸಂಬಳ ಕಡಿತ; ಸುಗ್ರೀವಾಜ್ಞೆ ಹೊರಡಿಸಲಿರುವ ಕೇರಳ ಸರಕಾರ

ತಿರುವನಂತಪುರ: ವಿರುದ್ಧದ ಹೋರಾಟದಲ್ಲಿ ದೇಶದಲ್ಲೇ ಹೆಚ್ಚು ಪರಿಣಾಮಕಾರಿ ಎನಿಸಿಕೊಂಡಿರುವ ನೆರೆಯ ರಾಜ್ಯ ಇದೀಗ ತನ್ನ ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಲು ಸಿದ್ದವಾಗಿದೆ. ಸಂಬಳ ಕಡಿತಗೊಳಿಸುವ ಸರಕಾರದ ಆದೇಶಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಇದು ಕೇರಳ ಸರಕಾರದ ಯೋಜನೆಗಳಿಗೆ ಹಿನ್ನೆಡೆಯಾಗಿ ಪರಿಣಮಿಸಿತ್ತು. ಅಲ್ಲದೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿಧಿಯನ್ನು ಒಟ್ಟುಗೂಡಿಸಲು ಸರ್ಕಾರಿ ನೌಕರರ ಸಂಬಂಳವನ್ನು ಕಡಿತಗೊಳಿಸುವುದಕ್ಕೆ ಕಾನೂನಿನ ಮಾರ್ಗಗಳನ್ನು ಅನುಸರಿಸಲು ಯೋಜನೆ ಇರಿಸಿದೆ. ಈ ನಿಟ್ಟಿನಲ್ಲಿ ಆಡಳಿತರೂಢ ಕೇರಳ ಸರಕಾರವು ಆದಷ್ಟು ಬೇಗನೇ ಆರ್ಡಿನೆನ್ಸ್ ಜಾರಿಗೊಳಿಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರಕಾರವು ಸುಗ್ರೀವಾಜ್ಞೆಯನ್ನು ನೀಡಲು ಬುಧವಾರ ನಿರ್ಧರಿಸಿದೆ. ಸಂಪುಟ ಸಭೆಯ ನಿರ್ಧಾರವನ್ನು ಮಾಧ್ಯಮಗಳಿಗೆ ವಿವರಿಸಿರುವ ಕೇರಳ ವಿತ್ತ ಸಚಿವ ಟಿಎಂ ಥಾಮಸ್ ಐಸಾಕ್, 'ಈ ಆರ್ಡಿನೆನ್ಸ್ ಪ್ರಕಾರ ವಿಪತ್ತು ಸಂಭವಿಸಿದಾಗ ಸರ್ಕಾರಿ ನೌಕರರ ವೇತನದ ಶೇಕಡಾ 25ರಷ್ಟನ್ನು ಕಡಿತಗೊಳಿಸುವ ಅಧಿಕಾರವನ್ನು ಸರಕಾರ ಹೊಂದಿದೆ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಸಂಬಳ ಕಡಿತಗೊಳಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಹಲವು ಸರ್ಕಾರಿ ನೌಕರರ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ವಿರೋಧ ಪಕ್ಷದ ಸಂಘಟನೆಗಳು ಆದೇಶದ ಪ್ರತಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟಿಸಿದ್ದರು.


from India & World News in Kannada | VK Polls https://ift.tt/3f4nhwk

ನಿಮ್ಮ ರಾಜ್ಯ ನೋಡಿಕೊಳ್ಳಿ: ಶಿವಸೇನೆ ನಾಯಕನ ಬೆವರಿಳಿಸಿದ ಯೋಗಿ ಆದಿತ್ಯನಾಥ್!

ಲಕ್ನೋ: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಇಬ್ಬರು ಸಾಧುಗಳ ಹತ್ಯೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಹಾಗೂ ಮಹಾರಾಷ್ಟ್ರದ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬುಲಂದ್‌ಶಹರ್ ಸಾಧುಗಳ ಹತ್ಯೆ ಕುರಿತಂತೆ ಶೀವಸೇನೆ ನಾಯಕ ಹಾಗೂ ರಾಜ್ಯಸಭಾ ಸಂಸದ ನೀಡಿರುವ ಹೇಳಿಕೆಗಳನ್ನು ಉತ್ತರಪ್ರದೇಶ ಮಖ್ಯಮಂತ್ರಿ ಯೊಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ಯುಪಿ ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಟ್ವಿಟ್‌ಗಳನ್ನು ಮಾಡಿರುವ ಸಂಜಯ್ ರಾವುತ್,ಘಟನೆಗೆ ಕೋಮು ಬಣ್ಣ ಬಳಿಯುವುದು ಬೇಡ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಯೊಗಿ ಆದಿತ್ಯನಥ್, ಸಂಜಯ್ ರಾವುತ್ ಉತ್ತರಪ್ರದೇಶದ ಕುರಿತು ಚಿಂತೆ ಮಾಡುವುದನ್ನು ಬಿಟ್ಟು ಮಹಾರಾಷ್ಟ್ರದ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಕುಹುಕವಾಡಿದ್ದಾರೆ. ನಿರ್ದಿಷ್ಟ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಉತ್ತರಪ್ರದೇಶ ಸರ್ಕಾರಕ್ಕೆ ಗೊತ್ತಿದೆ. ಇದನ್ನು ಸಂಜಯ್ ರಾವುತ್ ನಮಗೆ ಹೇಳಿ ಕೊಡಬೇಕಿಲ್ಲ ಎಂದು ಯೋಗಿ ಆದಿತ್ಯನಾಥ್ ಹರಿಹಾಯ್ದಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಸಂಬಂದ ತಾವು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಲು ಸಾವಿಗೀಡಾದ ಸಾಧುಗಳು ನಿರ್ಮೋಹಿ ಅಖಾಡಕ್ಕೆ ಸೇರಿದವರಾಗಿದ್ದರು ಎಂಬ ಕಾರಣಕ್ಕೆ ಹೊರತು, ರಾಜಕೀಯ ಮಾಡಲು ಅಲ್ಲ ಎಂದು ಯೊಗಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ. ಪಾಲ್ಗರ್ ಸಾಧುಗಳ ಹತ್ಯೆಗೆ ಸಂಬಂಧಿಸಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೊಗಿ ಆದಿತ್ಯನಾಥ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕರೆಮ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬುಲಂದ್‌ಶಹರ್ ಸಾಧುಗಳ ಹತ್ಯೆಗೆ ಪ್ರತಿಯಾಗಿ ಉದ್ಧವ್ ಠಾಕ್ರೆ ಅವರು ಯೊಗಿ ಆದಿತ್ಯನಾಥ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದರು.


from India & World News in Kannada | VK Polls https://ift.tt/35hdbEc

ಮೂರು ವಾರದಲ್ಲಿ ಅದೆನಾಯ್ತೋ? ಪ್ರಧಾನಿ ಮೋದಿ ಟ್ವಿಟ್ಟರ್ ಅನ್‌ಫಾಲೋ ಮಾಡಿದ ವೈಟ್‌ಹೌಸ್!

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಡಿ ಮನುಷ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಡೀ ಟ್ರಂಪ್ ಆಡಳಿತವೇ ಮೂಡಿಯಾಗಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಕೇವಲ ಮೂರು ವಾರಗಳ ಹಿಂದೆ ಅವರನ್ನು ಅಕೌಂಟ್‌ನ್ನು ಫಾಲೋ ಮಾಡಲು ಆರಂಭಿಸಿದ್ದ ಅಮೆರಿಕದ , ಇದೀಗ ಪ್ರಧಾನಿ ಮೋದಿ ಅವರನ್ನು ಅನ್‌ಫಾಲೋ ಮಾಡಿ ಗಮನ ಸೆಳೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮೇರೆಗೆ ಭಾರತ ಮೇಲೆರಿಯಾ ರೋಗಕ್ಕೆ ನೀಡುವ ಔಷಧಿ ಮತ್ತು ಮಾತ್ರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಟ್ಟಿತ್ತು. ಮಾತ್ರೆಗಳನ್ನು ಸ್ವೀಕರಿಸಿದ ಟ್ರಂಪ್ ಭಾರತದ ಸಹಾಯವನ್ನು ಎಂದೂ ಮರೆಯವುದಿಲ್ಲ ಎಂದೆಲ್ಲಾ ಕೊಂಡಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಮೆರಿಕದ ಶ್ವೇತಭವನ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ ಮೂಲಕ ಪ್ರಧಾನಿ ಮೋದಿ, ಪ್ರಧಾನಿ ಕಚೇರಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಷ್ಟ್ರಪತಿ ಭವನ, ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಫಾಲೋ ಮಾಡತೊಡಗಿತು. ಭಾರತದ ಈ ಪ್ರಮುಖ ಆರು ಅಕೌಂಟ್‌ಗಳನ್ನು ಫಾಲೋ ಮಾಡಿದ ಪರಿಣಾಮವಾಗಿ ಶ್ವೇತಭವನದ ಟ್ವಿಟ್ಟರ್ ಅಕೌಂಟ್‌ಗೆ 21.5 ಮಿಲಿಯನ್ ಹೊಸ ಫಾಲೋವರ್ಸ್‌ಗಳು ಸೇರ್ಪಡೆಗೊಂಡಿದ್ದರು. ಅಲ್ಲದೇ ಶ್ವೇತಭವನ ಫಾಲೋ ಮಾಡುತ್ತಿದ್ದ ವಿದೇಶಿ ಅಕೌಂಟ್‌ಗಳ ಸಂಖ್ಯೆ 19 ಕ್ಕೆ ಏರಿಕೆಯಾಗಿತ್ತು. ಆದರೆ ಇದೀಗ ತಾನು ಫಾಲೋ ಮಾಡುವ ವಿದೇಶಿ ನಾಯಕರ ಸಂಖ್ಯೆಯನ್ನು13ಕ್ಕೆ ಇಳಿಸಿಕೊಂಡಿರುವ ಶ್ವೇತಭವನ ತನ್ನ ಫಾಲೋವರ್ಸ್‌ಗಳ ಸಂಖ್ಯೆಯನ್ನು 0.5 ಮಿಲಿಯನ್‌ಗೆ ಕಡಿತ ಮಾಡಿಕೊಂಡಿದೆ. ಅಂದರೆ ಪ್ರಧಾನಿ ಮೋದಿ ಅವರನ್ನೂ ಸೇರಿಸಿ ಒಟ್ಟು ಆರು ಅಕೌಂಟ್‌ಗಳನ್ನು ಶ್ವೇತಭವನ ಅನ್‌ಫಾಲೋ ಮಾಡಿದೆ. ಆದರೆ ಶ್ವೇತಭವನವೇಕೆ ಪ್ರಧಾನಿ ಮೋದಿ ಸೇರಿದಂತೆ ಒಟ್ಟು ಆರು ಟ್ವಿಟ್ಟರ್‌ ಅಕೌಂಟ್‌ಗಳನ್ನು ಅನ್‌ಫಾಲೋ ಮಾಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


from India & World News in Kannada | VK Polls https://ift.tt/2VKeF6G

ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಸಿಗುತ್ತಾ ಅವಕಾಶ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ!

ಬೆಂಗಳೂರು: ಲಾಕ್‌ಡೌನ್ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಲಾಕ್‌ಡೌನ್ ಭವಿಷ್ಯ ಸೇರಿದಂತೆ ಹಸಿರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅನಮತಿ ಹಾಗೂ ಆರ್ಥಿಕ ಪುನಶ್ಚೇತನ ಕುರಿತಾಗಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಕೊರೊನಾ ನಿಯಂತ್ರಣ ಮಾಡಲು ಜಾರಿಯಲ್ಲಿರುವ ಲಾಕ್‌ಡೌನ್ ಅವಧಿ ಮೇ 3 ಕ್ಕೆ ಅಂತಿಮಗೊಳ್ಳುತ್ತದೆ. ಈಗಾಗಲೇ ಹಸಿರು ವಲಯದಲ್ಲಿರುವ 13 ಜಿಲ್ಲೆಗಳಲ್ಲಿ ಕೈಗಾರಿಕೆಗೆ ಹಾಗೂ ಕೆಲವೊಂದು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ಯಾವ ಜಿಲ್ಲೆಗಳಲ್ಲಿ ವಿಸ್ತರಣೆ ಮಾಡಬೇಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಆರ್ಥಿಕ ಪುನಶ್ಚೇತನ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಲಾಕ್‌ಡೌನ್‌ ಸಡಿಲಗೊಂಡಿರುವ ಜಿಲ್ಲೆಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶವನ್ನು ನೀಡಿಲ್ಲ. ಮದ್ಯ ಮಾರಾಟ ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಆದಾಯವಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಹಸಿರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಸಾಧಕ ಬಾಧಕಗಳ ಕುರಿತಾಗಿ ಚರ್ಚೆ ನಡೆದ ಬಳಿವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಎಲ್ಲಾ ನಿಟ್ಟಿನಲ್ಲಿ ಗುರುವಾರದ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಸಚಿವರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕುರಿತು ಸಿಎಂ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3bOPgOC

ಕಾಸಿಲ್ಲದೆ ಕ್ರಿಕೆಟ್‌ ಕೆರಿಯರ್‌ ಕೈಬಿಟ್ಟಿದ್ದ ಇರ್ಫಾನ್‌ ಖಾನ್!

ಬೆಂಗಳೂರು: 'ಸ್ಲಮ್‌ ಡಾಗ್‌ ಮಿಲಿಯನೇರ್' ಮತ್ತು 'ಲೈಫ್‌ ಆಫ್‌ ಪೈ' ನಂತಹ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಭಾರತಕ್ಕೆ ಕೀರ್ತಿ ತಂದಿದ್ದ ಹೆಸರಾಂತ ನಟ ಇರ್ಫಾನ್‌ ಖಾನ್‌ (53) ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಮನಮೋಹಕ ನಟನೆ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಮನ ಗೆದ್ದಿದ್ದ ಇರ್ಫಾನ್‌ ಖಾನ್‌ ನಟನೆ ಆಯ್ಕೆ ಮಾಡಿಕೊಂಡದ್ದು ಅಚಾನಕ್ಕಾಗಿ ಎಂಬುದು ವಿಶೇಷ. ಅಂದಹಾಗೆ ನಟನಾಗುವ ಮೊದಲು ಇರ್ಫಾನ್‌ ಒಬ್ಬ ಕ್ರಿಕೆಟರ್‌ ಆಗಬೇಕು ಎಂದು ಕನಸು ಕಂಡಿದ್ದರು ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಹೌದು, ಇರ್ಫಾನ್‌ ನಟನೆಯಷ್ಟೇ ಅದ್ಭುತವಾಗಿ ಕ್ರಿಕೆಟ್‌ ಆಡುತ್ತಿದ್ದರು. "ಇರ್ಫಾನ್ ಆರಂಭಿಕ ದಿನಗಳಲ್ಲಿ 23 ವರ್ಷದೊಳಗಿನವರ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ" ಎಂದು ಇರ್ಫಾನ್‌ ಜೊತೆಗೆ ಸಿಕೆ ನಾಯ್ಡು ಟ್ರೋಫಿಗೆ ಆಯ್ಕೆಯಾಗಿದ್ದ ಅವರ ಸ್ನೇಹಿತ ಸತೀಶ್‌ ಶರ್ಮಾ ಹೇಳಿದ್ದಾರೆ. 1994-98ರವರೆಗೆ 'ಚಂದ್ರಕಾಂತ' ಹಾಗೂ 'ಬನೇಗಿ ಅಪ್ನಿ ಬಾತ್‌' ನಂತಹ ಜನಪ್ರಿಯ ದಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್‌ ಖಾನ್‌, 1988ರಲ್ಲಿ ನ್ಯಾಷನಲ್ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ 'ಸಲಾಮ್‌ ಬಾಂಬೆ' ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ದರು. ಅಂದಿನಿಂದ ಕ್ರಿಕೆಟ್‌ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಿದ್ದಿಲ್ಲ. ಇನ್ನು ಮೂರು ದಿನಗಳ ಹಿಂದಷ್ಟೇ 95 ವರ್ಷದ ತಾಯಿಯನ್ನು ಕಳೆದುಕೊಂಡಿದ್ದ ಶಹಬ್‌ಝಾದೆ ಇರ್ಫಾನ್‌ ಅಲಿ ಖಾನ್‌, ತಮ್ಮ ತಾಯಿಗೆ ಪೆಟ್ಟಿಗೆ ತುಂಬ ಹಣ ತುಂಬಿ ತಂದುಕೊಡುವ ಕನಸು ಕಂಡಿದ್ದರಂತೆ. ಅಂತೆಯೇ ಕಠಿಣ ಪರಿಶ್ರಮದ ಮೂಲಕ ನಟನೆಯಲ್ಲಿ ಸಾಧನೆಯ ಮೆಟ್ಟಿಲನ್ನೇರಿ 2011ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾದರು. ಅಂದಹಾಗೆ ಅವರ ಬಾಲಿವುಡ್‌ ಸಿನಿಮಾ 'ಲಂಚ್‌ ಬಾಕ್ಸ್‌' ಟಿಎಫ್‌ಸಿಎ (ಟೊರಾಂಟೊ ಫಿಲ್ಮ್ ಕ್ರಿಟಿಕ್ಸ್‌ ಅಸೋಸಿಯೇಷನ್ ಅವಾರ್ಡ್‌) ಪ್ರಶಸ್ತಿ ಪಡೆದ ಏಕಮಾತ್ರ ಭಾರತೀಯ ಸಿನಿಮಾ ಆಗಿದೆ. ಇನ್ನು ಬಹುಬೇಗನೆ ಅಗಲಿದ ಬಾಲಿವುಡ್‌ ತಾರೆಯರಿಗೆ ಕ್ರಿಕೆಟ್‌ ದಿಗ್ಗಜರು ಕೂಡ ಟ್ವಿಟರ್‌ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, "ಇರ್ಫಾನ್‌ ಖಾನ್‌ ನಿಧನದ ಸುದ್ದಿ ಕೇಳಿ ಬಹಳ ಬೇಸರವಾಗಿದೆ. ಅವರು ನನ್ನ ಅಚ್ಚುಮೆಚ್ಚಿನ ನಟರಲ್ಲಿ ಒಬ್ಬರು. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. 'ಅಂಗ್ರೇಝಿ ಮೀಡಿಯಮ್' ಕೊನೆಯ ಚಿತ್ರ. ನಟನೆ ಎಂಬುದು ಅವರಲ್ಲಿ ಶ್ರಮವಿಲ್ಲದೆ ಹೊರಬರುತ್ತಿತ್ತು. ಅದ್ಭುತ ಕಲಾವಿದ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಪ್ರೀತಿಪಾತ್ರರಿಗೆ ದುಃಖ ಭರಿಸುವ ಶಕ್ತಿ ಸಿಗಲಿ," ಎಂದು ಟ್ವಿಟರ್‌ನಲ್ಲಿ ಸಂದೇಶ ಬರೆದಿದ್ದಾರೆ. ಇದೇ ವೇಳೆ ಹಾಲಿ ಮಾಜಿ ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್‌, ಇಶಾಂತ್‌ ಶರ್ಮಾ, ವೀರೇಂದ್ರ ಸೆಹ್ವಾಗ್‌ ಹಾಗೂ ಅನಿಲ್‌ ಕುಂಬ್ಳೆ ಎಲ್ಲರೂ ಟ್ವಿಟರ್‌ ಮೂಲಕ ತಮ್ಮ ನುಡಿ ನಮನ ಸಲ್ಲಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KOzNSJ

ಕಾರ್ಮಿಕರು, ರೈತರ ಸಮಸ್ಯೆಗಳ ಚರ್ಚೆಗೆ ವಿರೋಧ ಪಕ್ಷಗಳ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು : ಲಾಕ್‍ಡೌನ್ ನಿಂದಾಗಿ ಕಾರ್ಮಿಕ ವರ್ಗ ಹಾಗೂ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗುರುವಾರ ವಿರೋಧ ಪಕ್ಷಗಳ ನಾಯಕರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆ ಕರೆದಿದ್ದಾರೆ. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಐಎಂ, ಸಿಪಿಐ ಹಾಗೂ ವಿವಿಧ ರೈತ ಸಂಘಟನೆಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಅವರು ಎಲ್ಲ ನಾಯಕರಿಗೂ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಲಾಕ್‍ಡೌನ್ ಹೇರಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳಾಗುತ್ತಿದ್ದು, ನಿತ್ಯದ ದುಡಿಮೆಯನ್ನು ಆಧರಿಸಿ ಬದುಕುತ್ತಿರುವ, ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ವಿವಿಧ ಸಮುದಾಯಗಳವರು, ಅಟೋ, ಟ್ಯಾಕ್ಸಿ ಚಾಲಕರು ಮತ್ತು ಬೀದಿ ಬದಿಯ ವ್ಯಾಪಾರಿಗಳ ಬದುಕು ದುಸ್ತರವಾಗಿರುವುದರ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಹಲವು ಸಭೆಗಳನ್ನು ಮಾಡಿ ಸರಕಾರಕ್ಕೆ ಮನವಿಗಳನ್ನು ನೀಡಲಾಗಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು, ಈ ವಿಚಾರದಲ್ಲಿ ಎಲ್ಲ ನಾಯಕರ ಸಲಹೆ, ಸೂಚನೆ ಕೋರಲು ಸಭೆ ಕರೆಯಲಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮತ್ತೊಂದೆಡೆ ಲಾಕ್‍ಡೌನ್‍ನಿಂದಾಗಿ ರೈತರ ಸ್ಥಿತಿಯೂ ಶೋಚನೀಯವಾಗಿದೆ. ಬೆಳೆದ ಬೆಳೆಗಳನ್ನು ಖರೀದಿ ಮಾಡುವವರಿಲ್ಲದೆ, ಸಾಗಣೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಬೀದಿಪಾಲಾಗುವ ಹಂತ ತಲುಪಿದ್ದಾರೆ. ಅನೇಕ ಕಡೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ರಸ್ತೆಗೆ ಸುರಿಯುತ್ತಿರುವ ಬಗ್ಗೆ, ಅವರ ಜಮೀನುಗಳಲ್ಲಿಯೇ ಹಾಳಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವರದಿಗಳು ಬರುತ್ತಿವೆ. ಅಲ್ಲದೆ, ಪೂರ್ವ ಮುಂಗಾರಿನ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ಹಲವೆಡೆ ರೈತರು ಬೆಳೆದ ಭತ್ತ, ತರಕಾರಿ, ಹಣ್ಣಿನ ಬೆಳೆಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ನಷ್ಟಕ್ಕೆ ಒಳಗಾದ ರೈತರಿಗೂ ಪರಿಹಾರ ಸಿಕ್ಕಿಲ್ಲ. ಈ ನಡುವೆ ಪೂರ್ವ ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಗುಣಮಟ್ಟದ ಬೀಜ, ಗೊಬ್ಬರ ದೊರೆಯದಿರುವ ಕುರಿತು ದೂರುಗಳು ಬರುತ್ತಿವೆ ಇವೆಲ್ಲದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.


from India & World News in Kannada | VK Polls https://ift.tt/3cYkO4M

ಪಾಲ್ಘರ್‌ ಸಾಧುಗಳ ಹತ್ಯೆ ಕೇಸ್‌ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿರುವವರು ಇವರೇನಾ?

ಹಕ್ಕು ಪಾಲ್ಘರ್‌ನಲ್ಲಿ ಹಿಂದೂ ಸಾಧುಗಳನ್ನು ಹತ್ಯೆಗೈದ ಆರೋಪಿಗಳು ಜಾಮೀನು ಪಡೆಯಲು ಈ ಇಬ್ಬರು ಪತಿ-ಪತ್ನಿ ಜೋಡಿ ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಮಹಿಳೆ ಮತ್ತು ಪುರುಷನ ಫೋಟೋವನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಜೋಡಿಯ ಹೆಸರು ಪ್ರದೀಪ್ ಪ್ರಭು ಅಲಿಯಾಸ್ ಪೀಟರ್ ಡಿಮೆಲೊ ಮತ್ತು ಸಿರಾಜ್ ಬಲ್ಸಾರಾ ಮತ್ತು ಇಬ್ಬರೂ ಸಾಧುಗಳ ಹತ್ಯೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಪೊಲೀಸರು ಹಿಂಸಿಸದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಸತ್ಯ ಈ ಫೋಟೋ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್)ನ ಪ್ರಖ್ಯಾತ ಪ್ರಾಧ್ಯಾಪಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರದ್ದು. ಪರಿಶೀಲನೆ ಮತ್ತು ವಿಧಾನ ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು, ಏಪ್ರಿಲ್ 26,2020 ರಂದು ಪಾಲ್ಘರ್ ಹತ್ಯೆ: ಟಿಐಎಸ್ಎಸ್ ಪ್ರಾಧ್ಯಾಪಕರು ನಕಲಿ ಸುದ್ದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಶೀರ್ಷಿಕೆಯ ಪ್ರಕಟಿತ ದಿ ಹಿಂದೂ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯ ಪ್ರಕಾರ, ಪಾಲ್ಘರ್‌ನ ಸಾಮಾಜಿಕ ಹಕ್ಕು ಕಾರ್ಯಕರ್ತರು ಎಂಬ ಹೇಳಿಕೆಯೊಂದಿಗೆ ಟಿಐಎಸ್ಎಸ್ ಪ್ರಾಧ್ಯಾಪಕ ಅಂಜಲಿ ಮಾಂಟೆರೋ ಮತ್ತು ಪ್ರೊಫೆಸರ್ ಕೆ.ಪಿ ಜಯಶಂಕರ್ ಅವರ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇಬ್ಬರೂ ಪ್ರಾಧ್ಯಾಪಕರು ತಮ್ಮ ಚಿತ್ರವನ್ನು ಸುಳ್ಳು ಹಕ್ಕಿನೊಂದಿಗೆ ಹಂಚಿಕೊಳ್ಳುತ್ತಿದ್ದಾರೆಂದು ಫೇಸ್‌ಬುಕ್ ಸ್ನೇಹಿತರ ಮೂಲಕ ತಿಳಿದುಕೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾವು ನಂತರ ಟಿಐಎಸ್ಎಸ್ ವೆಬ್‌ಸೈಟ್‌ನ ಅಧ್ಯಾಪಕ ವಿಭಾಗದ ಅಡಿಯಲ್ಲಿ ಪ್ರೊಫೆಸರ್ ಕೆ.ಪಿ. ಜಯಶಂಕರ್ಮತ್ತು ಪ್ರೊಫೆಸರ್ ಅಂಜಲಿ ಮಾಂಟೆರೋ ಅವರ ಪ್ರೊಫೈಲ್‌ಗಳನ್ನು ಕಂಡುಕೊಂಡಿದ್ದೇವೆ. ಇಬ್ಬರೂ ಮುಂಬಯಿ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಾರೆ, ಹಾಗೂ ಹಲವಾರು ಸಾಕ್ಷ್ಯಚಿತ್ರಗಳನ್ನು ಇಬ್ಬರೂ ಒಟ್ಟಿಗೆ ಮಾಡಿದ್ದಾರೆ. ಇದರ ಬಗ್ಗೆ ನೀವು ಇಲ್ಲಿ ಇನ್ನಷ್ಟು ಓದಬಹುದು. ವೈರಲ್ ಚಿತ್ರದ ರಿವರ್ಸ್-ಇಮೇಜ್ ಹುಡುಕಾಟವನ್ನು ನಡೆಸಿದಾಗ, 2007 ರಲ್ಲಿ ಪ್ರಕಟವಾದ ಬ್ಲಾಗ್‌ವೊಂದಕ್ಕೆ ಲಿಂಕ್ ಅನ್ನು ನಾವು ಕಂಡುಕೊಂಡಿದ್ದೇವೆ. ಕೆ.ಪಿ ಜಯಶಂಕರ್ ಮತ್ತು ಅಂಜಲಿ ಮಾಂಟೆರೋ ನಿರ್ದೇಶನದ 'ನಮ್ಮ ಕುಟುಂಬ' ಚಿತ್ರದ ನಿರ್ದೇಶಕರ ಬಗ್ಗೆ ಹುಡುಕಿದಾಗ ಇವರಿಬ್ಬರ ಅದೇ ವೈರಲ್ ಚಿತ್ರವನ್ನು ಹೊಂದಿದೆ. ತೀರ್ಮಾನ ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಪಡೆಯಲು ಯತ್ನಿಸಿದ ಸಾಮಾಜಿಕ ಹಕ್ಕು ಕಾರ್ಯಕರ್ತರು ಎಂಬ ಸುಳ್ಳು ಹೇಳಿಕೆಯೊಂದಿಗೆ ಇಬ್ಬರು ಟಿಐಎಸ್ಎಸ್ ಪ್ರಾಧ್ಯಾಪಕರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಕೊಂಡಿದೆ.


from India & World News in Kannada | VK Polls https://ift.tt/2VMSdK4

6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಸ್ಥಾನ: ಪ್ರಧಾನಿ ಪರವಾಗಿ ಮೊದಲ ಪೂಜೆ

ಉತ್ತರಾಖಂಡ್: ಬರೋಬ್ಬರಿ 6 ತಿಂಗಳ ಚಳಿಗಾಲದ ವಿರಾಮದ ಬಳಿಕ ಕೇದಾರನಾಥ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದ್ದು, ಪರವಾಗಿ ಮೊದಲ ಪೂಜೆಯನ್ನು ನೆರವೇರಿಸಲಾಗಿದೆ. ಆದರೆ ನಿಮಿತ್ತವಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕೇವಲ ದೇವಸ್ಥಾನದ ಮುಖ್ಯ ಅರ್ಚಕರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಅವರ ಪರವಾಗಿ ರುದ್ರಾಭಿಷೇಕ ಪೂಜೆಯನ್ನು ನೆರವೇರಿಸಲಾಯಿತು. ಇಂದು ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ಸರಿಯಾಗಿ ದೇವಸ್ಥಾನದ ಬಾಗಿಲನ್ನು ಪ್ರಧಾನ ಅರ್ಚಕರು ತೆರೆದರು, ಈ ವೇಳೆ ಇಡೀ ದೇವಸ್ಥಾನವನ್ನು 10 ಕ್ವಿಂಟಲ್ ಚೆಂಡು ಹೂವುಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ಈ ಕುರಿತು ಮಾಹಿತಿ ನೀಡಿರುವ ದೇವಸ್ವಂ ಮಂಡಳಿಯ ಪ್ರತಿನಿಧಿ ಬಿಡಿ ಸಿಂಗ್, ದೇವಸ್ಥಾನದ ಪ್ರಧಾನ ಅರ್ಚಕರು, ಸಿಬ್ಬಂದಿ ವರ್ಗ ಹಾಗೂ 15 ಜನ ಪೊಲೀಸರ ಸಮ್ಮುಖದಲ್ಲಿ ಕೇದಾರನಾಥ ದೇವಸ್ಥಾನದ ಬಾಗಿಲು ತೆರೆದು ಪೂಜಾ ವಿಧಿಗಳನ್ನು ನೆರವೇರಿಸಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಕೇದಾರನಾಥ ದೇವಸ್ಥಾನದ ಬಾಗಿಲು ತೆರೆದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ್ದಕ್ಕೆ ದೇವಸ್ಥಾನ ಮಂಡಳಿಗೆ ಶುಭ ಕೋರಿರುವ ಉತ್ತಾರಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೊರೊನಾ ವೈರಸ್ ಶೀಘ್ರವಾಗಿ ಈ ದೇಶದಿಂದ ಕಾಲ್ಕಿತ್ತು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವಂತಾಗಲಿ ಎಂದು ಹಾರೈಸಿದ್ಧಾರೆ.


from India & World News in Kannada | VK Polls https://ift.tt/2YgXxqU

ತ್ಯಾಜ್ಯದ ಮೂಲಕ ಹರಡುತ್ತಾ ಕೊರೊನಾ ! ಪರಿಸರ ತಜ್ಞರ ವರದಿ ಏನು ಹೇಳುತ್ತೆ?

ಬೆಂಗಳೂರು: ಒಳಚರಂಡಿ ಮೂಲಕ ಕೊರೊನಾ ಹರಡುವ ಸಾಧ್ಯತೆಗಳ ಕುರಿತಾಗಿ ಅಧ್ಯಯನ ನಡೆಸಬೇಕು ಎಂದು ಎನ್ವಿರಾನ್ಮೆಂಟ್ ಟ್ರಸ್ಟ್ ( BET ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತಾಗಿ ಪರಿಸರ ತಜ್ಞ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್‌ ಅಧ್ಯಕ್ಷ ಡಾ. ಎ. ಎನ್ ಯಲ್ಲಪ್ಪ ರೆಡ್ಡಿ ನೇತೃತ್ವದ ತಂಡ ಸುದೀರ್ಘ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಪರಿಶೀಲನೆ ನಡೆಸುವಂತೆ ಕೋರಿದೆ. ಬೆಂಗಳೂರು ನಗರದಿಂದ ಶೇ 30 ರಷ್ಟು ಮನುಷ್ಯ ತ್ಯಾಜ್ಯಗಳು ಒಳಚರಂಡಿಯ ಮೂಲಕ ವೃಷಭಾವತಿ ಹಾಗೂ ಆರ್ಕಾವತಿ ನದಿ ಸೇರುತ್ತದೆ. ಪೀಣ್ಯ, ಯಶವಂತಪುರ, ವಿಜಯನಗರ, ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್‌, ಕೆಂಗೇರಿ ಉಪನಗರ, ರಾಜಾಜಿನಗರ ಭಾಗದ ಕೈಗಾರಿಕಾ ತ್ಯಾಜ್ಯ ಹಾಗೂ ಮನುಷ್ಯ ತ್ಯಾಜ್ಯಗಳು ಇವುಗಳಲ್ಲಿ ಸೇರಿವೆ. ಈ ನಿಟ್ಟಿನಲ್ಲಿ ವೃಷಭಾವತಿ ನದಿ ನೀರನ್ನು ಒಳಸುವ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತಾಗಿ ಅಧ್ಯಯನ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅದರಲ್ಲೂ ನಗರದ ಕೊರೊನಾ ಹಾಟ್‌ಸ್ಪಾಟ್‌ಗಳಾದ ಪಾದರಾಯನಪುರ, ಬಾಪೂಜಿನಗರದ ಒಳಚರಂಡಿಗಳು ವೃಷಭಾವತಿ ನದಿ ಸೇರುತ್ತಿದೆ. ಸದ್ಯ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಒಳಚರಂಡಿ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವುದರಿಂದ ಈ ಮೂಲಕ ಕೊರೊನಾ ಹರಡಬಹುದಾ ಎಂಬ ಆತಂಕ ರೈತರಲ್ಲಿದೆ. ರೈತರ ಆತಂಕದ ಹಿನ್ನೆಲೆಯಲ್ಲಿ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ನಿರ್ಮಲಾ ಗೌಡ, ಡಾ. ನಿಧಿ ಪಾಲಿವಾಲ್‌, ರಜನಿ ಸಂತೋಷ್, ಸಂಧ್ಯಾ ಬಾಲಸುಬ್ರಹ್ಮಣ್ಯ ಅವರನ್ನು ಒಳಗೊಂಡಿರುವ ತಂಡ ಒಂದು ವರದಿ ಸಿದ್ದಪಡಿಸಿದೆ. ವರದಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಮಲ ಮೂತ್ರ ಒಳಚರಂಡಿ ಮೂಲಕ ನದಿ ಸೇರುವುದರಿಂದ ಅವರನ್ನು ಬಳಸುವ ಮನುಷ್ಯ ಹಾಗೂ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆಯಾ ಎಂಬ ಕುರಿತಾಗಿ ಅಧ್ಯಯನ ನಡೆಸುವಂತೆ ಒತ್ತಾಯಿಸಿದೆ. ತ್ಯಾಜ್ಯದ ಮೂಲಕ ಹರಡುತ್ತಾ ಕೊರೊನಾ ವೈರಸ್ ? ಗಾಳಿಯ ಮೂಲಕ ಹಾಗೂ ಸಂಪರ್ಕದಿಂದ ಹರಡುತ್ತದೆ ಎಂದು ಅಧ್ಯಯನ ಅಧಿಕೃತಗೊಳಿಸಿದೆ. ಆದರೆ ನೀರಿನ ಮೂಲಕವೂ ಕೊರೊನಾ ಹರಡುವ ಸಾಧ್ಯತೆಗಳ ಕುರಿತಾಗಿ ಕೆಲವು ದೇಶಗಳಲ್ಲಿ ನಡೆದಿರುವ ಅಧ್ಯಯನ ವರದಿಗಳು ತಿಳಿಸುತ್ತವೆ. ಈ ಕುರಿತಾಗಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮಾಹಿತಿಗಳನ್ನು ಸಂಗ್ರಹ ಮಾಡಿ ಸುದೀರ್ಘ ವರದಿಯನ್ನು ತಯಾರಿಸಿದೆ. ವಿಶ್ವದ ಇತರ ದೇಶಗಳ ಅಧ್ಯಯನ ವರದಿಗಳ ಸಾರಾಂಶವನ್ನು ಸಂಗ್ರಹಿಸಿರುವ ತಂಡ ಇದನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ನೆದರ್‌ಲ್ಯಾಂಡ್, ಬೆಲ್ಜಿಯಂ, ಫ್ರಾನ್ಸ್ ಹಾಗೂ ಅಮೆರಿಕಾದಲ್ಲಿ ರೋಗಿಯ ಮಲ ಮೂತ್ರ ಸೇರಿದ ತ್ಯಾಜ್ಯ ನೀರಿನಲ್ಲಿ ಸೋಂಕು ಹರಡುವುದು ಸಾಬೀತಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೂ ಬಂದಿದ್ದೂ ಆದರೆ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಹೀಗಿದ್ದರೂ ಇತರ ದೇಶಗಳು ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕಗಳ ಮೂಲಕ ಕೊರೊನಾ ಮುಕ್ತಗೊಳಿಸುತ್ತಿವೆ. ಆದರೆ ಭಾರತದಲ್ಲಿ ಇದು ನಡೆಯುತ್ತಿಲ್ಲ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಸಿಟಿಜನ್ ಸೈಂಟಿಫಿಕ್ ಇನ್‌ ವೆಸ್ಟಿಗೇಷನ್ ತಂಡ ಅಧ್ಯಯನದ ಪ್ರಕಾರ ವೃಷಭಾವತಿ, ಮೈಲುಸಂದ್ರ, ಕೆಂಗೇರಿ ಹಾಗೂ ದೊಡ್ಡಬೆಲೆ ಬಳಿ ಇರುವ ತ್ಯಾಜ್ಯ ಸಂರಸ್ಕಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಪರಿಣಾಮ ಕೊರೊನಾ ಸೋಂಕಿತರ ಮಲ ಮೂತ್ರ ಒಳಚರಂಡಿ ಸೇರಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ. " ತ್ಯಾಜ್ಯ ನೀರಲ್ಲಿ ವೈರಸ್‌ ಇರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇತರ ದೇಶಗಳು ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಈ ಅಂಶವನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಒಳಚರಂಡಿ ಮೂಲಕ ತ್ಯಾಜ್ಯ ನದಿ ನೀರನ್ನು ಸೇರುತ್ತಿದ್ದು ಕೃಷಿ ಚಟುವಟಿಕೆಗಾಗಿ ರೈತರು ಈ ನೀರನ್ನು ಬಳಸುತ್ತಿದ್ದಾರೆ. ಈ ಕಾರಣದಿಂದಾಗಿ ಸರ್ಕಾರ ಕೂಡಲೇ ಅಧ್ಯಯನ ನಡೆಸಿ ನದಿ ನೀರಿ ಬಳಕೆ ಮಾಡಲು ಸುರಕ್ಷಿತ ಎಂಬುವುದನ್ನು ಸಾಬೀತು ಪಡಿಸಬೇಕಾಗಿದೆ" ಎನ್ನುತ್ತಾರೆ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಪರಿಸರ ತಜ್ಞೆ ನಿರ್ಮಲಾ ಗೌಡ. ಈ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಕೂಡಲೇ ಈ ಕುರಿತಾಗಿ ಅಧ್ಯಯನ ನಡೆಸಿ ಜನರ ಗೊಂದಲವನ್ನು ಬಗೆಹರಿಸಬೇಕಾಗಿದೆ.


from India & World News in Kannada | VK Polls https://ift.tt/3d9fUCn

ಲಾಕ್‌ಡೌನ್‌ ಸಂಕಷ್ಟ: ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ನಾನಾ ವೃತ್ತಿ ಸಂಘಟನೆಗಳಿಂದ ಒತ್ತಾಯ

ಬೆಂಗಳೂರು: ರೈತರು, ಕಾರ್ಮಿಕರು, ಮಧ್ಯಮ ವರ್ಗದವರು, ಶ್ರಮಿಕ ವರ್ಗದವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಗುರುವಾರ ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದ್ದೇನೆ. ಜೆಡಿಎಸ್‌, ಜೆಡಿಯು, ಸಿಪಿಐ, ಸಿಪಿಐ(ಎಂ), ಬಿಎಸ್‌‍ಪಿ, ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಒತ್ತಡ ಹೇರುತ್ತಿರುವ ಸಂಘಟನೆಗಳು
  1. ಸವಿತಾ ಸಮಾಜ
  2. ರಾಜ್ಯ ನೇಕಾರರ ಸಂಘ
  3. ರಾಜ್ಯ ಕಮ್ಮಾರರ ಸಂಘ
  4. ರಾಜ್ಯ ಗಾಣಿಗರ ಸಂಘ
  5. ಕುರುಹಿನ ಶೆಟ್ಟಿ ಸಮಾಜ
  6. ಬುಡಕಟ್ಟು ಸಮುದಾಯಗಳ ಒಕ್ಕೂಟ
  7. ಕುಳುವ ಮಹಾ ಸಭಾ
  8. ಟ್ಯಾಕ್ಸಿ ಮಾಲೀಕರ ಸಂಘ
  9. ಟ್ಯಾಕ್ಸಿ ಚಾಲಕರ ಸಂಘ
  10. ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರ ಸಂಘ
  11. ಅಸಂಘಟಿತ ವಲಯದ ಕಾರ್ಮಿಕರ ಸಂಘ
  12. ಬೀದಿ ಬದಿ ವ್ಯಾಪಾರಿಗಳ ಸಂಘ
  13. ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಒಕ್ಕೂಟ
  14. ಛಾಯಾಗ್ರಾಹಕರ ಸಂಘ
  15. ಕುಂಬಾರರ ಸಂಘ
  16. ಅಟೋ ಚಾಲಕರ ಸಂಘ
  17. ಅಲೆಮಾರಿ ಸಮುದಾಯದ ಸಂಘಟನೆಗಳ ಒಕ್ಕೂಟ
  18. ಅಕ್ಕಸಾಲಿಗರ ಸಂಘ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ವಿಧಾನಸೌಧದಲ್ಲಿ ಕರೆದಿದ್ದ ವಿವಿಧ ಸಾಂಪ್ರದಾಯಿಕ ವೃತ್ತಿಪರರ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಹಲವು ವರ್ಗದ ಪ್ರತಿನಿಧಿಗಳು ತಮ್ಮ ಸಮಸ್ಯೆ ಹೇಳಿಕೊಂಡರು. ಸಂಘಟನೆಗಳ ಪ್ರತಿನಿಧಿಗಳ ಸಮಸ್ಯೆ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ''ಲಾಕ್‌‍ಡೌನ್‌‍ನಿಂದ ಸಾಂಪ್ರದಾಯಿಕ ವೃತ್ತಿ ಮಾಡುವವರೂ ಸೇರಿ ಶ್ರಮಿಕ ವರ್ಗದವರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬದುಕು ಚಿಂತಾಜಕನ ಪರಿಸ್ಥಿತಿ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿನೆಲೆಸಿರುವ ಈ ಸಮುದಾಯದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಸಿಎಂ ಕೂಡಲೇ ಎಚ್ಚೆತ್ತುಕೊಂಡು ವಿಶೇಷ ಯೋಜನೆ ಪ್ರಕಟಿಸಬೇಕು,'' ಎಂದು ಆಗ್ರಹಿಸಿದರು. ತಲುಪದ ನೆರವು ''ಶ್ರಮಿಕ ವರ್ಗದವರಿಗೆ ಉಚಿತವಾಗಿ ಊಟ, ತಿಂಡಿ ಕೊಡಿ ಎಂದು ಸಿಎಂಗೆ ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಇದಕ್ಕಾಗಿ 18 ರಿಂದ 20 ಕೋಟಿ ರೂ. ವೆಚ್ಚವಾಗಬಹುದು. ಅದಕ್ಕೂ ಸರಕಾರ ಮೀನಾಮೇಷ ಎಣಿಸುತ್ತಿದೆ. ಸರಕಾರ ಈಗ ವಿತರಿಸುತ್ತಿರುವ ದವಸ-ಧಾನ್ಯದ ಕಿಟ್‌‍ಗಳು ಎಲ್ಲರನ್ನೂ ತಲುಪುತ್ತಿಲ್ಲ. ಅದಕ್ಕಾಗಿಯೇ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂಬುದು ನಮ್ಮ ಒತ್ತಾಯ,'' ಎಂದರು. ರಾಜಕೀಯ ಮಾಡಲ್ಲ ''ಈ ಸಂದರ್ಭದಲ್ಲಿ ರಾಜಕೀಯ ಮಾಡುವುದಿಲ್ಲ. ಸರಕಾರ ಈ ವರ್ಗದವರಿಗೆ ಏನಾದರೂ ಪರಿಹಾರ ನೀಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿತ್ತು. ಆದರೆ, ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲಎಂದು ಮುಖಂಡರು ಹೇಳಿದ್ದಾರೆ. ಸೆಲೂನ್‌‍ಗಳು ಬಂದ್‌ ಆಗಿವೆ. ಸವಿತಾ ಸಮಾಜದವರು ತೀವ್ರ ನಷ್ಟಕ್ಕೆ ಒಳಗಾಗಿ ಬೀದಿಪಾಲಾಗುವ ಹಂತ ತಲುಪಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಏಕೆಂದರೆ ಇವರೆಲ್ಲರೂ ದಿನವೂ ದುಡಿದು ಸಂಪಾದನೆ ಮಾಡಿ ಜೀವನ ನಡೆಸುವವರು,'' ಎಂದರು. ''ರಾಜ್ಯದಲ್ಲಿ20 ಲಕ್ಷ ಸಂಘಟಿತ ಕಾರ್ಮಿಕರಿದ್ದು, ಈ ಪೈಕಿ 12 ಲಕ್ಷ ಮಂದಿಗೆ ಮಾತ್ರ ಸರಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ಎರಡು ಸಾವಿರ ರೂ.ಗಳ ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್‌ ನವೀಕರಣವಾಗಿಲ್ಲಎಂಬ ನೆಪ ಹೇಳಿ ಸಹಾಯಧನ ನೀಡುತ್ತಿಲ್ಲ. ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ,'' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/35ghbVk

ರಾಜ್ಯದಲ್ಲಿ ಮತ್ತೆ 9 ಹೊಸ ಕೊರೊನಾ ಕೇಸ್‌, ಕಲಬುರಗಿಯಲ್ಲಿಯೇ 8 ಸೋಂಕಿತರು ಪತ್ತೆ‌

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ತಣ್ಣಗಾದಂತೆ ಕಂಡಿದ್ದರೂ ಮತ್ತೆ 9 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 532ಕ್ಕೆ ಏರಿದೆ. ಕಲಬುರಗಿಯಲ್ಲಿಯೇ 8 ಕೊರೊನಾ ಸೋಂಕಿತರು ಕಂಡುಬಂದಿದ್ದು, ಮತ್ತೊಂದು ಪ್ರಕರಣ ಬೆಳಗಾವಿಯಲ್ಲಿ ಕಾಣಿಸಿದೆ. ಮಂಗಳವಾರ ಸಂಜೆ 5 ರಿಂದ ಬುಧವಾರ ಮಧ್ಯಾಹ್ನ 12ರವರೆಗಿನ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ. ಮಂಗಳವಾರ 11 ಪ್ರಕರಣಗಳು ವರದಿಯಾಗಿದ್ದರೆ, ಸೋಮವಾರ 9 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಇನ್ನು, ಭಾನುವಾರ ಕೇವಲ ಮೂರೇ ಮೂರು ಪ್ರಕರಣಗಳು ಕಂಡುಬಂದಿದ್ದವು. ಕಲಬುರಗಿಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಮಂಗಳವಾರ 8 ಪ್ರಕರಣಗಳು ಕಂಡುಬಂದಿದ್ದು, ಬಿಸಿಲ ನಾಡಿನ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಇನ್ನೊಂದು ಪ್ರಕರಣ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕಾಣಿಸಿಕೊಂಡಿದೆ. ಇದುವರೆಗೂ ರಾಜ್ಯದಲ್ಲಿ 532 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 215 ಜನ ಗುಣಮುಖರಾಗಿದ್ದರೆ, 20 ಜನ ಕೊರೊನಾಗೆ ಬಲಿಯಾಗಿದ್ದಾರೆ. ಹೊಸ ಕೊರೊನಾ ಸೋಂಕಿತರ ವಿವರ * ರೋಗಿ ಸಂಖ್ಯೆ 524: 12 ವರ್ಷದ ಬಾಲಕ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿ ಹಾಗೂ ರೋಗಿ ಸಂಖ್ಯೆ 293ರ ಸಂಪರ್ಕ. * ರೋಗಿ ಸಂಖ್ಯೆ 525: 4.6 ವರ್ಷದ ಬಾಲಕಿ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 395ರ ಸಂಪರ್ಕ. * ರೋಗಿ ಸಂಖ್ಯೆ 526: 28 ವರ್ಷದ ಪುರುಷ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 515ರ ಸಂಪರ್ಕ. * ರೋಗಿ ಸಂಖ್ಯೆ 527: 14 ವರ್ಷದ ಬಾಲಕಿ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 425ರ ಸಂಪರ್ಕ. * ರೋಗಿ ಸಂಖ್ಯೆ 528: 22 ವರ್ಷದ ಯುವಕ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 205ರ ಸಂಪರ್ಕ. * ರೋಗಿ ಸಂಖ್ಯೆ 529: 40 ವರ್ಷದ ಮಹಿಳೆ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 425ರ ಸಂಪರ್ಕ. * ರೋಗಿ ಸಂಖ್ಯೆ 530: 20 ವರ್ಷದ ಯುವಕ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 205ರ ಸಂಪರ್ಕ. * ರೋಗಿ ಸಂಖ್ಯೆ 531: 17 ವರ್ಷದ ಯುವತಿ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 425ರ ಸಂಪರ್ಕ. * ರೋಗಿ ಸಂಖ್ಯೆ 532: 12 ವರ್ಷದ ಬಾಲಕಿ. ಕಲಬುರಗಿ ನಿವಾಸಿ ಹಾಗೂ ರೋಗಿ ಸಂಖ್ಯೆ 425ರ ಸಂಪರ್ಕ.


from India & World News in Kannada | VK Polls https://ift.tt/2zGLuc3

ರಾಹುಲ್ ಗಾಂಧಿ ನಾಚಿಕೆಗೆಟ್ಟ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಕೇಂದ್ರ ಸರಕಾರವು ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂಬ ಕಾಂಗ್ರೆಸ್ ಮುಖಂಡ ಆರೋಪಕ್ಕೆ ವಿತ್ತ ಸಚಿವೆ ಮಂಗಳವಾರದಂದು ಕಟುವಾದ ಮಾತುಗಳಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಂಕ್‌ಗಳಿಂದ ಸಾಲ ಪಡೆದ ಸುಸ್ತಿದಾರರ 50ಕ್ಕೂ ಹೆಚ್ಚು ಮಂದಿಯ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಕೇಂದ್ರ ಸರಕಾರ ವಿರುದ್ಧ ಆರೋಪ ಮಾಡಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ ಯಾವುದೇ ಉತ್ತರ ನೀಡಿರಲಿಲ್ಲ ಎಂದು ಆರೋಪಿಸಿದ್ದರು. ಇದಕ್ಕೀಗ ತಿರುಗೇಟು ನೀಡಿರುವ ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಗೆಟ್ಟ ರೀತಿಯಲ್ಲಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್, 'ಸಂಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಲಜ್ಜೆಗೆಟ್ಟ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ವಿಚಿತ್ರ ಶೈಲಿಯಾಗಿದೆ. ವಿಷಯದ ಮಹತ್ವವನ್ನು ಬೇರೆಡೆಗೆ ವರ್ಗಾಯಿಸುತ್ತಿದೆ' ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕೆ ಮತ್ತಷ್ಟು ಪುರಾವೆ ನೀಡಿರುವ ವಿತ್ತ ಸಚಿವೆ, ಯುಪಿಎ ಆಡಳಿತದಲ್ಲಿ 2009-10 ಹಾಗೂ 2013-14ನೇ ಆರ್ಥಿಕ ಸಾಲಿನಲ್ಲಿನಿಗದಿತ ವಾಣಿಜ್ಯ ಬ್ಯಾಂಕ್‌ಗಳ 1,45,226 ಕೋಟಿ ರೂ.ಗಳನ್ನು ಮನ್ನಾ ಮಾಡಿದೆ ಎಂಬುದನ್ನು ಬೊಟ್ಟು ಮಾಡಿದರು. 'ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವ್ಯವಸ್ಥೆಯನ್ನು ಸ್ವಚ್ಷಗೊಳಿಸುವಲ್ಲಿ ರಚಾನಾತ್ಮಕ ಪಾತ್ರ ವಹಿಸಲು ಏಕೆ ವಿಫಲವಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಅಧಿಕಾರದಲ್ಲಿದ್ದಾಗಲೂ ಅಥವಾ ಪ್ರತಿಪಕ್ಷದಲ್ಲಿದ್ದಾಗಲೂ ಕಾಂಗ್ರೆಸ್ ಭ್ರಷ್ಟಾಚಾರವನ್ನು ತಡೆ ಹಿಡಿಯಲು ಬದ್ಧತೆಯನ್ನು ತೋರಲಿಲ್ಲ' ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು. ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ 50 ಮಂದಿ ಬ್ಯಾಂಕ್ ಸುಸ್ತಿದಾರ ಉದ್ಯಮಿಗಳ ಸುಮಾರು 68,607 ಕೋಟಿ ರೂಪಾಯಿಗಳ ಸಾಲವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹಾಗೆಯೇ ಸರಕಾರ ಕಳೆದ ಆಡಳಿತಾವಧಿಯಲ್ಲಿ 6.66 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ ಎಂಬುದನ್ನು ಆರೋಪ ಮಾಡಿದೆ. ದೇಶದ 50 ಮಂದಿ ಬ್ಯಾಂಕ್ ಸುಸ್ತಿದಾರರ ಹೆಸರನ್ನು ಪ್ರಕಟಿಸುವಂತೆ ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದೆ. ಆದರೆ ಹಣಕಾಸು ಸಚಿವರು ನನ್ನ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇದೀಗ ಆರ್‌ಬಿಐ ಪಟ್ಟಿಯಲ್ಲಿ ನೀರವ್ ಮೋದಿ, ಚೋಕ್ಸಿ ಸೇರಿದಂತೆ ಬಿಜೆಪಿಯ ಹಲವು ಸ್ನೇಹಿತರು ಇದ್ದಾರೆ. ಇದೇ ಕಾರಣಕ್ಕಾಗಿ ಈ ಸತ್ಯವನ್ನು ಸಂಸತ್ತಿನಲ್ಲಿ ಬಚ್ಚಿಡಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.


from India & World News in Kannada | VK Polls https://ift.tt/3aMtk5p

ಲಾಕ್‌ಡೌನ್‌ ಪರಿಣಾಮ: ಮದ್ಯ ಸಿಗದೆ ಹಳ್ಳಿಗಳೀಗ ‘ಗಾಂಧಿ ಗ್ರಾಮ’!

ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿತ್ತು. ಅದ್ಯಾವ ಪರಿಯೆಂದರೆ ಬಾರ್‌ಗಳೇ ಇಲ್ಲದ ಊರಲ್ಲಿ 'ಮನೆ ಅಂಗಡಿ'ಗಳಲ್ಲಿ ಯಾವುದೇ ಎಗ್ಗು ಸಿಗ್ಗು ಇಲ್ಲದೆ ಎಣ್ಣೆ ಮಾರಾಟವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಿ ಎಂದು ಸ್ತ್ರೀಶಕ್ತಿ ಸಂಘಗಳು ಪಾದಯಾತ್ರೆ ನಡೆಸಿದವು. ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸರಕಾರ ನೀಡುತ್ತಿದ್ದ ಟಾರ್ಗೆಟ್‌ ಮುಟ್ಟಬೇಕಾದ ಒತ್ತಡದಿಂದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಕೂಡ ಜಾಣ ಕುರುಡರಂತೆ ವರ್ತಿಸುತ್ತಿದ್ದರು. ಆದರೀಗ ಲಾಕ್‌ಡೌನ್‌ನಿಂದ ಮದ್ಯ ಮಾರಾಟಕ್ಕೆ ತಡೆ ಬಿದ್ದಿದೆ. ಇದರಿಂದ ಕುಡಿತದ ಹಾವಳಿಯೂ ಕಡಿಮೆ ಆಗಿದೆ. ಈ ಬಿಗಿಯನ್ನು ಬಳಸಿಕೊಂಡು ಎಚ್ಚರ ಮೂಡಿಸಿದರೆ ಮದ್ಯದ ಹಾವಳಿಗೆ ಖಂಡಿತ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಳ್ಳಿಗಳ ಚಾ-ತಿಂಡಿ ಹೋಟೆಲ್‌ಗಳು, ಕಿರಾಣಿ ಅಂಗಡಿಗಳಲ್ಲೂ ದಿನಸಿ ಸಿಕ್ಕ ರೀತಿಯಲ್ಲಿ ಮದ್ಯ ಸಿಗುವಂತಾಗಿತ್ತು. ಸಂಸದರ ಆದರ್ಶ ಗ್ರಾಮಗಳೂ ಇದಕ್ಕೆ ಹೊರತಗಾಗಿರಲಿಲ್ಲ. ಅಕ್ರಮವಾಗಿ ಸುಲಭವಾಗಿ ಮದ್ಯ ಕೈಗೆ ಸಿಗುವಂತಿದ್ದರಿಂದ ಗ್ರಾಮಗಳಲ್ಲಿ ಕುಡಿತದ ಹಾವಳಿಯೂ ಹೆಚ್ಚಿತ್ತು. ಬಾರುಗಳಿಗೆ ದೂರದೂರಿಗೆ ಹೋಗದಂತೆ ಸುಲಭವಾಗಿ ಮದ್ಯ ಸಿಗುತ್ತಿದ್ದರಿಂದ ಅನೇಕ ಯುವಕರು ಕುಡಿತ ಶುರು ಹಚ್ಚಿಕೊಂಡು ಸಂಜೆ ವೇಳೆಗೆ ಹಳ್ಳಿಗಳ ಚಿತ್ರಣವೇ ಬದಲಾಗುತ್ತಿತ್ತು. ಇದು ಹಳ್ಳಿಯ ಜೀವಾಳವಾದ ಕೃಷಿ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತುಎಂದು ಗ್ರಾಮಗಳ ಹಿರಿಯರು ಹೇಳುತ್ತಾರೆ. ಇದೀಗ ಲಾಕ್‌ ಡೌನ್‌ನಿಂದ ಇಂಥ ರಗಳೆಗಳಿಗೆ ಮುಕ್ತಿ ಸಿಕ್ಕಿದೆ. ಶೇ. 89 ಕುಟುಂಬಗಳಲ್ಲಿ ಶಾಂತಿಗ್ರಾಮೀಣ ಪ್ರದೇಶದಲ್ಲಿ ಕುಡಿತದ ಚಟ ಬಿಡಿಸುವ ಮದ್ಯ ವರ್ಜನ ಶಿಬಿರಗಳನ್ನು ಕೆಲ ಸಂಸ್ಥೆಗಳು ಮಾಡುತ್ತವೆ. ಅದರಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯುವರು ಕೆಲವು ದಶಕದಿಂದ ಕುಡಿತದ ಚಟ ಅಂಟಿಸಿಕೊಂಡಿದ್ದವರ ಬಿಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯ ಇಲ್ಲದ ವೇಳೆಯ ಸರ್ವೆ ನಡೆಸಿದ್ದು , ಕುಡಿತ ಚಟ ಅಂಟಿಸಿಕೊಂಡಿದ್ದವರ ಶೇ.89ರಷ್ಟು ಕುಟುಂಬಗಳಲ್ಲಿ ಶಾಂತಿ ನೆಲೆಸಿದ್ದು, ಬದುಕಿನಲ್ಲಿ ತೃಪ್ತಿಯೂ ಕಂಡು ಬಂದಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌. ಮಂಜುನಾಥ್‌ ಹೇಳಿದ್ದಾರೆ. ಈ ಕುರಿತು ವಿಜಯ ಕರ್ನಾಟಕದ ಜತೆ ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ 9,402 ಜನರನ್ನು ಸರ್ವೆಗೆ ಒಳಪಡಿಸಲಾಗಿತ್ತು ಎಂದು ಹೇಳಿದರು. ಅರ್ಧದಷ್ಟು ಮದ್ಯ ಹಳ್ಳಿಗಾಡಿಗೆದಾವಣಗೆರೆ ಜಿಲ್ಲೆಯಲ್ಲಿಎಂಎಸ್‌ಐಎಲ್‌ನಿಂದ ಹಿಡಿದು ಎಲ್ಲ ರೀತಿ ಸೇರಿ ಒಟ್ಟು 259 ಬಾರ್‌ಗಳಿವೆ. ಇದರಲ್ಲಿ 96 ಗ್ರಾಮಗಳು ಗ್ರಾಮೀಣ ಪ್ರದೇಶದಲ್ಲಿವೆ. ಜಿಲ್ಲೆಗೆ ಪ್ರತಿ ತಿಂಗಳು 1.25 ಲಕ್ಷ ಬಾಕ್ಸ್‌ ಲಿಕ್ಕರ್‌ (ಬಿಯರ್‌ ಹೊರತು ಪಡಿಸಿ) ಮಾರಾಟದ ಟಾರ್ಗೆಟ್‌ ಇದೆ. ಇಲಾಖೆ ಅಂಕಿಸಂಖ್ಯೆ ಪ್ರಕಾರ ಇದರಲ್ಲಿ ಶೇ. 30ರಷ್ಟು ಗ್ರಾಮೀಣ ಪ್ರದೇಶದ ಬಾರ್‌ಗಳಿಗೆ ಹಂಚಿಕೆ ಆಗುತ್ತದೆ, ಇದು ಸಕ್ರಮ. ಇನ್ನು ಅಕ್ರಮವೂ ಸೇರಿದರೆ ಒಂದು ಜಿಲ್ಲೆಯ ಮದ್ಯ ಮಾರಾಟದ ಗುರಿಯ ಶೇ.40ಕ್ಕಿಂತ ಹೆಚ್ಚು ಇಲ್ಲವೇ ಅರ್ಧದಷ್ಟು ಮದ್ಯ ಹಳ್ಳಿಗಾಡಿಗೆ ಪೂರೈಕೆ ಆಗುತ್ತದೆ. ರಾಜ್ಯದ ಇತರ ಜಿಲ್ಲೆಗಳ ಚಿತ್ರಣವೂ ಇದಕ್ಕಿಂತ ಭಿನ್ನವಿಲ್ಲ.


from India & World News in Kannada | VK Polls https://ift.tt/2VJpqGi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...