ದೇವೇಗೌಡರ ಸಾಮ್ರಾಜ್ಯಕ್ಕೆ ಲಗ್ಗೆ ಇಡಲು ಬಿಜೆಪಿ ತಂತ್ರ, ಸಿ.ಟಿ ರವಿ ಹೇಳಿದ್ದೇನು ?

ಹಾಸನ: ಹಾಸನದಲ್ಲಿ ಜೆಡಿಎಸ್‌ ಪ್ರಾಬಲ್ಯವನ್ನು ಕುಗ್ಗಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಪರ್ವ ಶುರುವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಸಿ ರವಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ ರವಿ “ಮುಂದಿನ ದಿನಗಳಲ್ಲಿ ಹಾಸನದಲ್ಲಿ ಕುಟುಂಬ ರಾಜಕೀಯ ಅಂತ್ಯವಾಗಲಿದೆ. ಪಾಳೆಗಾರಿಕೆ ಬುಡವನ್ನು ಬೇರು ಸಹಿತ ಕಿತ್ತುಹಾಕುತ್ತೇವೆ” ಎಂದು ಗುಡುಗಿದರು. ಸದ್ಯಕ್ಕೆ ಹಾಸನ ಜಿಲ್ಲೆಯಲ್ಲಿ ಕುಟುಂಬ ರಾಜಕೀಯ ನಡೆಯುತ್ತಿದ್ದು ಶೀಘ್ರದಲ್ಲೇ ಇದು ಅಂತ್ಯವಾಗಲಿದೆ. ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವದ ಕಡೆಗೆ ತೆಗೆದುಕೊಂಡು ಹೋಗುವ ಹೊಸ ರಾಜಕೀಯ ಪರ್ವ ಶುರುವಾಗಲಿದೆ ಎಂದರು. ಜಿಲ್ಲೆಯಲ್ಲಿ ಕೌಟುಂಬಿಕ ಅಭಿವೃದ್ದಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕೌಟುಂಬಿಕ ಅಭಿವೃದ್ದಿಯ ಬದಲಾಗಿ ಜಿಲ್ಲೆಯ ಅಭಿವೃದ್ದಿಯಾಗಲಿದೆ. ಹಾಗೂ ಜಾತಿನಿಷ್ಠೆಯಿಂದ ರಾಷ್ಟ್ರನಿಷ್ಠೆತ ಕಡೆಗೆ ತೆಗೆದುಕೊಂಡು ಹೋಗುವ ರಾಜಕೀಯ ಮುಂದಿನ ದಿನಗಳಲ್ಲಿ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮಾತನಾಡಿ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮದು ರಾಷ್ಟ್ರನಿಷ್ಠೆಯ ರಾಜಕೀಯ, ಯಾರನ್ನೋ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಂಸದರನ್ನಾಗಿ ಮಾಡಲು ರಾಜಕೀಯ ಮಾಡುವುದಿಲ್ಲ ಎಂದು ಜೆಡಿಎಸ್‌ ಮುಖಂಡರಿಗೆ ಟಾಂಗ್ ಕೊಟ್ಟರು.


from India & World News in Kannada | VK Polls https://ift.tt/3aemzcT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...