ನವದೆಹಲಿ: ಸದ್ಯ ಮಾರಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ. 21 ಆದೇಶದ ಮೂಲಕ ಮಾರಕ ವೈರಾಣುವಿನ ಆಟ ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೊರೊನಾ ವೈರಸ್ ಕುರಿತಾದ ವದಂತಿಗಳೊಂದಿಗೂ ಭಾರತ ಹೋರಾಡಬೇಕಿದ್ದು, ಈ ಕುರಿತಾದ ಸುಳ್ಳು ಸುದ್ದಿಗಳು ಹರಡದಂತೆಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಂತೆ 21 ದಿನಗಳ ಬಳಿಕವೂ ಭಾರತದಲ್ಲಿ ಲಾಕ್‌ಡೌನ್ ಆದೇಶ ಮುಂದುವರೆಯಲಿದೆ ಎಂಬ ವದಂತಿ ಹಬ್ಬಿದ್ದು, ಈ ಕುರಿತು ಜನ ಗೊಂದಲದಲ್ಲಿದ್ದಾರೆ. 21 ದಿನಗಳ ಬಳಿಕವೂ ಅನಿರ್ದಿಷ್ಟಾವಧಿಗೆ ಲಾಕ್‌ಡೌನ್ ಮುಂದುವರೆಯಲಿದೆ ಎಂಬ ಸುದ್ದಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಲಾಕ್‌ಡೌನ್ ಆದೇಶ ಎಲ್ಲಿಯವರೆಗೆ ಎಂಬ ಪ್ರಶ್ನೆ ಇದೀಗ ಮೂಡಿದೆ. ಆದರೆ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ , 21 ದಿನಗಳ ಲಾಕ್‌ಡೌನ್ ಬಳಿಕ ದೇಶ ಸಹಜ ಸ್ಥಿತಿಗೆ ಮರಳಲಿದೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, 21 ದಿನಗಳ ಬಳಿಕ ಲಾಕ್‌ಡೌನ್‌ನ್ನು ವಿಸ್ತರಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ. 21 ದಿನಗಳ ಬಳಿಕ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂಬುದು ಕೇವಲ ವದಂತಿ ಎಂದಿರುವ ರಾಜೀವ್ ಗೌಬಾ, ಈ ವದಂತಿಗಳನ್ನು ನಂಬದಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/3bxAiMz