ವಾಷಿಂಗ್ಟನ್: ಅಮೆರಿಕವೂ ಸೇರಿದಂತೆ ವಿಶ್ವದಾದ್ಯಂತ ಮಾರಕ ಕೊರೊನಾ ವೈರಸ್ ಹರಡಲು ಕಾರಣ ಎಂದು ಬಹಿರಂಗವಾಗಿ ಆಪಾದನೆ ಹೊರಿಸಿದ ವಿಶ್ವದ ಏಕೈಕ ನಾಯಕ . ವೈರಸ್ ಕುರಿತು ಮೊದಲೇ ಮಾಹಿತಿ ನೀಡದ ಚೀನಾ ಮೇಲೆ ಅಸಮಾಧಾನವಿದೆ ಎಂದೂ ಟ್ರಂಪ್ ಗುಡುಗಿದ್ದರು. ಅಲ್ಲದೇ ಕೊರೊನಾ ವೈರಸ್‌ನ್ನು 'ಚೀನಿ ವೈರಸ್', 'ವುಹಾನ್ ವೈರಸ್' ಎಂದು ಕರೆದು ಕೋಪ ವ್ಯಕ್ತಪಡಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಸೇನೆಯೇ ದೇಶದಲ್ಲಿ ಕೊರೊನಾ ವೈರಸ್ ಬಿಟ್ಟಿದೆ ಎಂದು ಆಪಾದಿಸುವ ಮೂಲಕ ಚೀನಾ ಕೂಡ ಅಮೆರಿಕಕ್ಕೆ ಗುದ್ದು ನೀಡಿತು. ಹೀಗೆ ಕೊರೊನಾ ವೈರಸ್ ವಿಚಾರದಲ್ಲಿ ಅಮೆರಿಕ-ಚೀನಾ ಮುಸುಕಿನ ಗುದ್ದಾಟ ನಡೆಸಿವೆ. ಆದರೆ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ದೂರವಾಣಿ ಸಂಭಾಷಣೆ ನಡೆಸಲಿದ್ದಾರೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ಕುರಿತು ದೂರವಾಣಿ ಕರೆ ಮಾಡಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತನಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಚೀನಾ ಮೇಲೆ ಅಸಮಾಧಾನದ ಹೊರತಯಾಗಿಯೂ ತಾವು ಕ್ಸಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಚೀನಾ ಹೇಗೆ ವೈರಸ್‌ನ್ನು ಮಟ್ಟ ಹಾಕಿತು ಎಂಬುದನ್ನು ಅರಿಯಬೇಕಿದೆ ಎಂದು ಅವರು ನುಡಿದಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್‌ನಿಂದ ಪರಸ್ಪರ ಮುಖ ತಿರುಗಿಸಿಕೊಂಡಿದ್ದ ಅಮೆರಿಕ-ಚೀನಾ, ಇದೀಗ ಪರಸ್ಪರ ಮಾತುಕತೆ ಮೂಲಕ ಹತ್ತಿರವಾದರೆ ಇದು ಕರೊನಾ ವಿರುದ್ಧ ಹೋರಾಡುತ್ತಿರುವ ಜಾಗತಿಕ ಸಮುದಾಯಕ್ಕೂ ಅನುಕೂಲ ಎಂಬುದರಲ್ಲಿ ಎರಡು ಮಾತಿಲ್ಲ.
from India & World News in Kannada | VK Polls https://ift.tt/3bt0O9J