
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 8 ಸೋಂಕು ದೃಢಪಟ್ಟಿದ್ದು ರೋಗಿಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹತ್ತು ಸ್ಥಳೀಯ ಸೋಂಕು ಪ್ರಕರಣಗಳು ಅಂದರೆ, ವಿದೇಶದಿಂದ ಬಂದವರ ಜತೆ ನೇರ ಸಂಪರ್ಕ ಹೊಂದಿದವರು. ಆದರೆ, ಇದೀಗ ವಿದೇಶದಿಂದ ಬಂದವರ ಜತೆ ಸಂಪರ್ಕವೇ ಇಲ್ಲದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ, ಕೊರೊನಾ ರಾಜ್ಯದಲ್ಲಿ ಮೂರನೇ ಹಂತ ಪ್ರವೇಶಿಸಿದೆಯೇ ಎಂಬ ಆತಂಕ ವ್ಯಕ್ತವಾಗಿದೆ. ಮಕ್ಕಳು, ಸೆಕ್ಯುರಿಟಿ ಮ್ಯಾನ್: ವಿದೇಶದಿಂದ ಹಿಂದಿರುಗಿರುವ ಪಾಲಕರಿಂದ 7 ಮತ್ತು 9 ವರ್ಷದ ಇಬ್ಬರು ಹೆಣ್ಣು ಮಕ್ಕಳಿಗೆ ಸೋಂಕು ಹರಡಿದ್ದು ಬುಧವಾರ ಆತಂಕ ಸೃಷ್ಟಿಸಿತ್ತು. ಇದರ ಜತೆಗೆ 25ನೇ ರೋಗಿಯ ಮನೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗೂ ಸೋಂಕು ತಗುಲಿದ್ದು ಗುರುವಾರ ದೃಢಪಟ್ಟಿದೆ. ಈ ಮಧ್ಯೆ ಮೈಸೂರಿನ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಇವರು ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ, ಕೊರೊನಾ ಸೋಂಕಿತರ ಜತೆಗೆ ನೇರ ಸಂಪರ್ಕಕ್ಕೂ ಬಂದಿಲ್ಲ. ಆದರೆ ಔಷಧ ಗುಣ ನಿಯಂತ್ರಣ ವಿಭಾಗದಲ್ಲಿಕೆಲಸ ಮಾಡುತ್ತಿದ್ದು, ವೈದ್ಯ ಕ್ಷೇತ್ರದ ಅನೇಕ ತಜ್ಞರ ಜತೆಗೆ ಸಂಪರ್ಕಕ್ಕೆ ಬಂದಿದ್ದಾರೆ. ಹೀಗಾಗಿ ಇದು ಮೂರನೇ ಹಂತದ ಪ್ರಸರಣ ಪ್ರಕರಣವಾಗಿರುವ ಸಾಧ್ಯತೆಯಾಗಿರಬಹುದು ಎಂದು ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಇವರು ಇದುವರೆಗೆ ಏಳು ಜನರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವುದು ದೃಢಪಟ್ಟಿದ್ದು, ಮನೆಯಲ್ಲೇ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸಂಪರ್ಕಕ್ಕೆ ಮನವಿ 36ನೇ ರೋಗಿಯು ಮಾ.17ರಂದು ಮಂಗಳೂರು ಎಕ್ಸ್ ಪ್ರೆಸ್ ರೈಲಿನ ಎಸ್-3 ಕೋಚ್‌ನ ಲೋಯರ್ ಬತ್‌ರ್‍ನಲ್ಲಿಮುಂಬಯಿಯಿಂದ ಹೊರಟು ಮಾ.18ರಂದು ಭಟ್ಕಳಕ್ಕೆ ಆಗಮಿಸಿರುತ್ತಾರೆ. ಈ ಹಿನ್ನೆಲೆಯಲ್ಲಿಸಹ ಪ್ರಯಾಣಿಕರು 104 ಸಹಾಯವಾಣಿ ಅಥವಾ, 080-4684600 ಅಥವಾ, 080 -66692000ಗೆ ಸಂಪರ್ಕಿಸುವಂತೆ ರಾಜ್ಯ ಸರಕಾರ ಮನವಿ ಮಾಡಿದೆ. ಮೊಬೈಲ್ ಆ್ಯಪ್ ಕೊರೊನಾ ನಿಗಾಕ್ಕಾಗಿ ರಾಜ್ಯ ಸರಕಾರ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಿದೆ. ರೋಗಿಯ ಪ್ರಯೋಗಾಲಯ ಫಲಿತಾಂಶ, ಆತ ಪ್ರಯಾಣ ಮಾಡಿದ ಮೊದಲ 14 ದಿನಗಳು, ಪ್ರದೇಶ ಮೊದಲಾದ ವಿವರಗಳು ಇಲ್ಲಿ ಲಭ್ಯವಿದೆ. ಮಾಹಿತಿಗಾಗಿ ನೋಡಬಹುದು. ವಿದೇಶದಿಂದ ಬಂದವರ ಒಟ್ಟು ತಪಾಸಣೆ-1,28,046 ಕೆಂಪೇಗೌಡ ವಿಮಾನ ನಿಲ್ದಾಣ-89,963 ಮಂಗಳೂರು ವಿಮಾನ ನಿಲ್ದಾಣ-31,917 ಮಂಗಳೂರು, ಕಾರವಾರ ಬಂದರು-6166
from India & World News in Kannada | VK Polls https://ift.tt/3bqUqjp