ವಂಶ ಪತ್ರಿಕೋದ್ಯಮ: ಸಾಮ್ನಾ ಸಂಪಾದಕರಾಗಿ ಉದ್ಧವ್ ಪತ್ನಿ ರಶ್ಮಿ ಆಗಮನ!

ಮುಂಬೈ: ಭಾರತಕ್ಕೆ ವಂಶ ರಾಜಕಾರಣವೇನೂ ಹೊಸದಲ್ಲ. ತಂದೆ, ತಾಯಿ, ಪುತ್ರ, ಪುತ್ರಿ, ಸಹೋದರ, ಸಹೋಧರಿ ಹೀಗೆ ಗಣ್ಯ ರಾಜಕಾರಣಿಯ ರಕ್ತ ಸಂಬಂಧಿಗಳೆಲ್ಲರೂ ರಾಜಕಾರಣದಲ್ಲಿ ತಮ್ಮ ಹಣೆಬರಹ ಪರೀಕ್ಷಿಸುವವರೇ ಹೆಚ್ಚು. ಆದರೆ ಭಾರತದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂತಹ ನಡೆ ಅಪರೂಪದಲ್ಲೇ ಅಪರೂಪ. ಆದರೆ ಶಿವಸೇನೆಯ ಮುಖವಾಣಿ ಪತ್ರಿಕೆ ಮಾತ್ರ ಇದರಿಂದ ಹೊರತಾಗಿದ್ದು, ಪತ್ರಿಕೋದ್ಯಮದಲ್ಲೂ ವಂಶದ ಛಾಪು ಮೂಡಿಸಲು ಸಾಮ್ನಾ ಅನುವು ಮಾಡಿಕೊಟ್ಟಿದೆ. ಹೌದು, ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕರಾಗಿ ಮುಖ್ಯಮಂತ್ರಿ ಹಾಗೂ ಮುಖ್ಯಸ್ಥ ಅವರ ಪತ್ನಿ ಆಯ್ಕೆಯಾಗಿದ್ದಾರೆ. ಮರಾಠಿ ಭಾಷೆಯ ಪತ್ರಿಕೆಯ ಭಾನುವಾರದ ಆವೃತ್ತಿಯ ಕೊನೆಯ ಪುಟದಲ್ಲಿ, ರಶ್ಮಿ ಠಾಕ್ರೆ ಅವರ ಹೆಸರನ್ನು ಸಂಪಾದಕರು ಎಂದು ಮುದ್ರಿಸಲಾಗಿದೆ. ಈ ಮೂಲಕ ಶೀವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಸೊಸೆ ಸಾಮ್ನಾ ಪತ್ರಿಕೆಯ ಜವಾಬ್ದಾರಿ ಹೊತ್ತುಕೊಂಡಂತಾಗಿದೆ. ಇನ್ನು ಶಿವಸೇನೆಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರೌತ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿಯಲಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ನಿಧನದ ಬಳಿಕ ಉದ್ಧವ್ ಠಾಕ್ರೆ ಸಾಮ್ನಾದ ಸಂಪಾದಕರಾಗಿದ್ದರು. ಬಳಿಕ ಉದ್ಧವ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕೆಯ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


from India & World News in Kannada | VK Polls https://ift.tt/2PRBMsL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...