ಮ್ಯಾಡ್ರಿಡ್: ಮಾರಕ ಕೊರೊನಾ ವೈರಸ್ಗೆ ಬಡವ-ಶ್ರೀಮಂತ, ರಾಜ ಮನೆತನ , ಜನಸಾಮಾನ್ಯ ಹೀಗೆ ಯಾರ ಬಗ್ಗೆಯೂ ತಾರತಮ್ಯವಿಲ್ಲ. ಅವಕಾಶ ಸಿಕ್ಕೊಡನೇ ಯಾರ ದೇಹವನ್ನಾದರೂ ಹೊಕ್ಕುವ ಈ ವೈರಾಣುವಿಗೆ ಮನುಷ್ಯರನ್ನು ಬಲಿ ಪಡೆಯುವುದೊಂದೇ ಗುರಿ. ಅದರಂತೆ ಮಹಾಮಾರಿ ಕೊರೋನಾ ವೈರಸ್ ಇದೀಗ ರಾಜಮನೆತನಕ್ಕೂ ತಟ್ಟಿದ್ದು, ಮಾರಕ ವೈರಾಣುವಿಗೆ ರಾಜಕುಮಾರಿಯೊಬ್ಬರು ಬಲಿಯಾಗಿದ್ದಾರೆ. ಸ್ಪೇನ್ ಮಾರಿಯಾ ತೆರೆಸಾ ಕೊರೋನಾ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ಸ್ಪೇನ್ ಘೋಷಿಸಿದೆ. ಸ್ಪೇನ್ ರಾಜಕುಮಾರ ಫೆಲಿಪೆ VI ಅವರ ಸಂಬಂಧಿಯಾಗಿರುವ 86 ವರ್ಷದ ತೆರೆಸಾ ಕೊರೊನಾ ವೈರಸ್ಗೆ ಬಲಿಯಾಗದಿರುವುದು ದುರದೃಷ್ಟಕರ. ತೆರೆಸಾ ಸಾವಿನ ಕುರಿತು ಸಹೋದರ ಪ್ರಿನ್ಸ್ ಸಿಕ್ಟೋ ಎನ್ರಿಕ್ ಡಿ ಬೊರ್ಬನ್ ಅಧಿಕೃತ ಘೋಷಣೆ ಮಾಡಿದ್ದು, ಸಹೋದರಿ ತೆರೆಸಾ ಅಗಲಿಕೆಯಿಂದಾಗಿ ರಾಜಮನೆತನದಲ್ಲಿ ದು:ಖ ಆವರಿಸಿದೆ ಎಂದು ಹೇಳಿದ್ದಾರೆ. 1933ರ ಜುಲೈ 28 ರಂದು ಜನಿಸಿದ್ದ ಅವರು ಫ್ರಾನ್ಸ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಪ್ಯಾರಿಸ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಮಾರಿಯಾ ಅವರನ್ನು ರೆಡ್ ಪ್ರಿನ್ಸೆಸ್ ಎಂದೇ ಕರೆಯಲಾಗುತ್ತಿತ್ತು. ಮಾರಕ ಕೊರೊನಾ ವೈರಸ್ ತಗುಲಿರುವ ವಿಶ್ವ ಪ್ರಸಿದ್ಧರು: ಪ್ರಿನ್ಸ್ ಚಾರ್ಲ್ಸ್- ಬ್ರಿಟನ್ ರಾಜಮನೆತನ ಬೋರಿಸ್ ಜಾನ್ಸನ್- ಬ್ರಿಟನ್ ಪ್ರಧಾನಿ ಹಾರ್ವೆ ವೈನ್ಸ್ಟೈನ್- ಹಾಲಿವುಡ್ ನಿರ್ಮಾಪಕ ಡೆಬಿ ಮಜಾರ್- ಹಾಲಿವುಡ್ ನಟಿ ಸೋಫಿ ಗ್ರೆಗೊಯಿರ್ ಟ್ರುಡೋ- ಕೆನಡಾ ಪ್ರಧಾನಿ ಪತ್ನಿ
from India & World News in Kannada | VK Polls https://ift.tt/3bA02bc