
ಕೋಲ್ಕತ್ತಾ: ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಂದಾಗುವಂತೆ ಇಡೀ ದೇಶಕ್ಕೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈಕರೆಗೆ ಓಗೊಟ್ಟಿರುವ ದೇಶದ ಜನತೆ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು, ಕೊರೊನಾ ವೈರಸ್ ನ್ನು ಈ ನೆಲದಿಂದ ಒದ್ದೊಡಿಸಲು ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿವೆ. ಇದಕ್ಕೆ ಪ.ಬಂಗಾಳ ಮುಖ್ಯಮಂತ್ರಿ ಕೂಡ ಹೊರತಾಗಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅಧಿಕೃತವಾಗಿ ಭಾಗಿಯಾಗಿರುವ ಪ.ಬಂಗಾಳದ ಸೇನೆಯನ್ನು ಸಿಎಂ ಮಮತಾ ಬ್ಯಾನರ್ಜಿ ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಗರದ ಹಣ್ಣು ಮತ್ತು ತ ರಕಾರಿ ವ್ಯಾಪಾರ ಮಾರುಕಟ್ಟೆಗೆ ತೆರಳಿದ ಸಿಎಂ ಮಮತಾ, ತಾವೇ ಖುದ್ದು ಅಂಗಡಿಗಳ ಮುಂದೆ ಮಾಡಿ ಅಧಿಕಾರಿಗಳನ್ನು ಹಾಗೂ ನೆರೆದ ಜನರನ್ನು ದಂಗು ಬಡಿಸಿದರು. ಮುಖಕ್ಕೆ ಮಾಸ್ಕ್ ಧರಿಸಿದ್ದ ಮಮತಾ ಖುದ್ದು ಹಣ್ಣು ಮತ್ತು ತರಕಾರಿ ಅಂಗಡಿಗಳ ಮುಂಭಾಗದಲ್ಲಿ ಕಾಯ್ದುಕೊಳ್ಳಲು ನೆರವಾಗುವಂತೆ ಬಾಕ್ಸ್ ಮಾರ್ಕಿಂಗ್ ಮಾಡಿ ಗಮನ ಸೆಳೆದರು. ಈ ಕುರಿತಾದ ವಿಡಿಯೋವೊಂದನ್ನು ಟಿಎಂಸಿ ಸಂಸದ ಡೆರೆಕ್ ಓ'ಬ್ರಿಯೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಮತಾ ಬದ್ಧತೆಯನ್ನು ವಿವರಿಸಲು ಪದಗಳು ಸಿಗುತ್ತಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಪ.ಬಂಗಾಳದಾದ್ಯಂತ 'ದೀದಿ' ಎಂದೇ ಖ್ಯಾತರಾಗಿರುವ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಮತು ಸೆಣೆಸುತ್ತಿರುವುದನ್ನು ಕಂಡು ನೆಟ್ಟಿಗರುಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಡೆರೆಕ್ ಟ್ವೀಟ್‌ಗೆ ರಿಟ್ವೀಟ್ ಮಾಡುವ ಮೂಲಕ ಮಮತಾ ಕಾರ್ಯವನ್ನು ಶ್ಲಾಘಿಸಿದ್ದಾರೆ.
from India & World News in Kannada | VK Polls https://ift.tt/39lGo0U