ಟೀಮ್ ಇಂಡಿಯಾಗೆ ಕಿಂಗ್ ಕೊಹ್ಲಿಯೇ ಬಾಸ್: ಕೋಚ್ ರವಿ ಶಾಸ್ತ್ರಿ

ಹೊಸದಿಲ್ಲಿ: ಕಪ್ತಾನ ಅವರೇ ಭಾರತೀಯ ಕ್ರಿಕೆಟ್ ತಂಡದ ಬಾಸ್ ಆಗಿದ್ದಾರೆ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಹಿಂದೆ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೆ ಓರ್ವ ನಾಯಕನಾಗಿ ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೇ ಕೋಚ್ ಶಾಸ್ತ್ರಿ ಬೊಟ್ಟು ಮಾಡಿದ್ದಾರೆ. "ನಾಯಕನೇ ಬಾಸ್, ಅದರಲ್ಲಿಯೇ ನಾನು ಯಾವತ್ತೂ ನಂಬಿಕೆಯಿಡುತ್ತೇನೆ. ಕೋಚಿಂಗ್ ಸ್ಟಾಫ್‌ಗಳ ಕೆಲಸದ ವಿಚಾರಕ್ಕೆ ಬಂದಾಗ, ಧೈರ್ಯ ತುಂಬುವುದು, ಸಕಾರಾತ್ಮಕ ಹಾಗೂ ನಿರ್ಭಿತಿಯ ಕ್ರಿಕೆಟ್ ಆಡಲು ಹುಡುಗರಿಗೆ ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ಸಿದ್ಧಪಡಿಸುವುದಾಗಿದೆ" ಎಂದರು. ಕ್ಯಾಪ್ಟನ್ ಕೊಹ್ಲಿ ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಿದ್ದಾರೆ. "ಹೌದು, ನಾವು ಅವರ ಮೇಲಿನ ಹೊರೆಯನ್ನು ಹೋಗಲಾಡಿಸಲು ಇಲ್ಲಿದ್ದೇವೆ. ಈ ಮೂಲಕ ಅವರಿಗೆ ತಮ್ಮ ಕರ್ತವ್ಯವನ್ನು ನಿಭಾಯಿಸಲು ಬಿಟ್ಟು ಬಿಡುತ್ತೇವೆ. ನಾಯಕನೇ ಇತರರಿಗೆ ಮಾದರಿಯಾಗುತ್ತಾರೆ. ಮೈದಾನದಲ್ಲಿ ಅವರೇ ಬಾಸ್" ಎಂದವರು ಸೇರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಗರಿಷ್ಠ ಮಟ್ಟದ ಫಿಟ್ನೆಸ್ ಕಾಯ್ದುಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಇತರೆ ಆಟಗಾರರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಗರಿಷ್ಠ ಗುಣಮಟ್ಟದ ಕ್ರಿಕೆಟ್ ಕಾಯ್ದುಕೊಳ್ಳಲು ಕಾರಣವಾಗಿದ್ದಾರೆ. "ನೀವು ಫಿಟ್ನೆಸ್ ಬಗ್ಗೆ ಮಾತನಾಡುವಾಗ ನಾಯಕತ್ವವು ಮೇಲ್ದರ್ಜೆಯಿಂದ ಬರುತ್ತದೆ. ಅವರೇ ವಿರಾಟ್ ಕೊಹ್ಲಿ. ಅವರು ಗೊಂದಲಕ್ಕೀಡಾಗುವ ವ್ಯಕ್ತಿಯಲ್ಲ. ಒಂದು ದಿನ ಬೆಳಗ್ಗೆ ಎಚ್ಚರಗೊಂಡ ಅವರು 'ಈ ಆಟವನ್ನು ಆಡಲು ಬಯಸುವುದಾದರೆ ವಿಶ್ವದಲ್ಲೇ ಅತ್ಯುತ್ತಮ ದೈಹಿಕ ಸದೃಢವುಳ್ಳ ಆಟಗಾರನಾಗಬೇಕು. ಈ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ವಿಶ್ವದೆಲ್ಲ ಶ್ರೇಷ್ಠರೊಂದಿಗೆ ಸ್ಪರ್ಧಿಸಲು ಸಾಧ್ಯ'. ಈ ಮೂಲಕ ತಮ್ಮ ದೇಹವನ್ನೇ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುವಂತೆ ಮಾಡಿದ್ದಾರೆ ಎಂದು ವಿವರಿಸಿದರು. "ಇದು ಕೇವಲ ತರಬೇತಿಯಲ್ಲ. ಆಹಾರ ಪಠ್ಯಕ್ರಮದಲ್ಲೂ ತ್ಯಾಗ ಮಾಡಿದ್ದಾರೆ. ಎಲ್ಲ ಸಂದರ್ಭದಲ್ಲೂ ಆ ಬದಲಾವಣೆಯನ್ನು ನಾನು ನೋಡಿದ್ದೇನೆ. ಒಂದು ದಿನ ಬೆಳಗ್ಗೆ ಎದ್ದ ಅವರು ನನ್ನ ಬಳಿ ಹೇಳಿದರು 'ರವಿ, ನಾನು ಸಸ್ಯಾಹಾರಿ'" ಎಂಬುದನ್ನು ಕೋಚ್ ನೆನಪಿಸಿದರು. "ನಾಯಕ ಸ್ವತ: ಅಂತಹ ಫಿಟ್ನೆಸ್ ಮಾನದಂಡಗಳನ್ನುಪಾಲಿಸಿದಾಗ ಅದು ಇತರರಿಗೂ ಸ್ಫೂರ್ತಿ ನೀಡುತ್ತದೆ. ನಮ್ಮ ಪಾಲಿಗೆ ಟೆಸ್ಟ್ ಕ್ರಿಕೆಟ್ ಮಹಾನ್ ಆಗಿದೆ. ಅದುವೇ ಬೆಂಚ್ ಮಾರ್ಕ್. ನಾವು ಮಾನದಂಡಗಳನ್ನು ರಚಿಸಲು ಬಯಸುತ್ತೇವೆ" ಎಂದವರು ತಿಳಿಸಿದರು. ಏತನ್ಮಧ್ಯೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಆಟಗಾರರೆಲ್ಲ ಮನೆಯಲ್ಲೇ ಉಳಿಯುವಂತಾಗಿದೆ. ಇದು ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಕ್ರಿಕೆಟ್ ಆಡುತ್ತಿರುವ ಭಾರತೀಯ ಆಟಗಾರರಿಗೆ ಸ್ವಾಗತಾರ್ಹ ವಿಶ್ರಾಂತಿಯಾಗಿದೆ ಎಂದರು. "ಈ ವಿಶ್ರಾಂತಿಯು ಕೆಟ್ಟ ವಿಷಯವಲ್ಲ. ಏಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆಯೇ ನ್ಯೂಜಿಲೆಂಡ್ ಪ್ರವಾಸದ ಕೊನೆಯಲ್ಲಿ, ಆಟಗಾರರು ಮಾನಸಿಕ ಆಯಾಸ, ದೈಹಿಕ ಸಾಮರ್ಥ್ಯ ಹಾಗೂ ಗಾಯದ ಸಮಸ್ಯೆ ಎದುರಿಸಿರುವುದನ್ನು ನೋಡಬಹುದಾಗಿದೆ" ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3arxMqV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...