ಮೊದಲು ದೇಶದ ಬಗ್ಗೆ ಚಿಂತನೆ ಮಾಡೋಣ: ರೋಹಿತ್ ಶರ್ಮಾ ನುಡಿ

ಮುಂಬಯಿ: ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತ ಕ್ರಿಕೆಟ್ ತಂಡದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಓರ್ವರಾಗಿದ್ದಾರೆ. ಸಮಕಾಲೀನ ಟೀಮ್ ಇಂಡಿಯಾ ಆಟಗಾರರ ಪೈಕಿ ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ರೋಹಿತ್ ಶರ್ಮಾ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈ ನಡುವೆ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ ಆಯೋಜನೆಯಾಗಬೇಕೋ ಬೇಡವೋ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ20 ಕ್ರಿಕೆಟ್‌ನ ಲೀಗ್ ಅತ್ಯಂತ ಯಶಸ್ವಿ ನಾಯಕನ ಬಿರುದಿಗೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಮೂರು ಮತ್ತು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ (ಈಗ ಸನ್‌ರೈರ್ಸಸ್ ಹೈದರಾಬಾದ್) ಸೇರಿದಂತೆ ಅತಿ ಹೆಚ್ಚು ನಾಲ್ಕು ಬಾರಿ ಐಪಿಎಲ್ ಕಿರೀಟವನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೊನೆಯ ಬಾರಿ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು. ಈ ಬಾರಿಯೂ ಮುಂಬೈ ಹಾಗೂ ಚೆನ್ನೈ ನಡುವಣ ಉದ್ಘಾಟನಾ ಪಂದ್ಯ ನಿಗದಿಯಾಗಿತ್ತು. ಈ ನಡುವೆ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ. ಇಡೀ ವಿಶ್ವವೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದೆ. ಬಹುತೇಕ ಎಲ್ಲ ಕ್ರೀಡಾಕೂಟಗಳು ರದ್ದುಗೊಂಡಿದೆ. ಕೋವಿಡ್ 19 ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಈ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಿ ಮನೆಯಲ್ಲೇ ಇರುವಂತೆಯೇ ಕರೆ ನೀಡಲಾಗಿದೆ. ಈ ನಡುವೆ ಐಪಿಎಲ್ ರದ್ದಾಗುವ ಭೀತಿಯನ್ನು ಎದುರಿಸುತ್ತಿದೆ. ಇದಕ್ಕೀಗ ಮುಂಬೈ ನಾಯಕರಾಗಿರುವ ರೋಹಿತ್ ಶರ್ಮಾ ತಮ್ಮ ಅನಿಸಿಕೆಗಳನ್ನು ಹಂಚಿದ್ದಾರೆ. "ಐಪಿಎಲ್ ಸೇರಿದಂತೆ ಉಳಿದೆಲ್ಲ ವಿಷಯಗಳಿಗಾಗಿ ಕಾಯಬಹುದಾಗಿದೆ. ಮೊದಲು ಜನ ಜೀವನ ಸಹಜ ಸ್ಥಿತಿಗೆ ಮರಳಲಿ" ಎಂದು ಹೇಳಿದ್ದಾರೆ. "ನಾವೆಲ್ಲರೂ ಮೊದಲು ದೇಶದ ಬಗ್ಗೆ ಚಿಂತನೆ ಮಾಡಬೇಕು. ಮೊದಲು ಪರಿಸ್ಥಿತಿ ಸುಧಾರಿಸಬೇಕು. ತದಾ ಬಳಿಕ ಐಪಿಎಲ್ ಬಗ್ಗೆ ಚರ್ಚಿಸೋಣ. ಜನಜೀವನ ಸಹಜ ಸ್ಥಿತಿಗೆ ಮರಳಲಿ" ಎಂದು ರೋಹಿತ್ ತಿಳಿಸಿದರು. ಸದಾ ಜನಜಂಗುಳಿಯಿಂದ ತುಂಬಿಕೊಳ್ಳುತ್ತಿರುವ ವಾಣಿಜ್ಯ ನಗರಿ ಮುಂಬಯಿ ಬಿಕೋ ಎನ್ನುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, "ನಾನೆಂದು ಬಾಂಬೆ ನಗರವನ್ನು ಈ ರೀತಿಯಾಗಿ ನೋಡಿಲ್ಲ. ಓರ್ವ ಕ್ರಿಕೆಟಿಗನಾಗಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕುಟುಂಬದೊಂದಿಗೆ ಕಳೆಯಲು ಸಮಯ ಸಿಗುತ್ತಿಲ್ಲ. ಈಗ ಅವರ ಜೊತೆಗೆ ಇರಬಹುದಾಗಿದೆ" ಎಂದು ತಮ್ಮ ಕ್ವಾರಂಟೈನ್ ದಿನಗಳ ಬಗ್ಗೆ ತಿಳಿಸಿದರು. ಭಾರತದಲ್ಲಿ ಇದುವರೆಗೆ 700ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ 16 ಮಂದಿ ಸಾವಿಗೆ ಶರಣಾಗಿದ್ದಾರೆ. ಜಾಗತಿಕವಾಗಿ ಸಾವಿನ ಸಂಖ್ಯೆ 22000 ದಾಟಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3brqfsg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...