ಬೆಂಗಳೂರು: ಮೊದಲು ಮೃತಪಟ್ಟ ಗುಲ್ಬರ್ಗದ ವೃದ್ಧ ಮೆಕ್ಕಾದಿಂದ ಹಿಂತಿರುಗಿದ್ದ. ನಂತರ ಮೃತಪಟ್ಟ ಚಿಕ್ಕಬಳ್ಳಾಪುರದ ಮಹಿಳೆ ಕೂಡ ಮೆಕ್ಕಾದಿಂದ ವಾಪಸಾದ ಬಳಿಕ ಸೋಂಕಿನಿಂದ ಬಳಲಿದ್ದಳು. ಇದೀಗ ಮೃತಪಟ್ಟ ಮೂರನೇ ವ್ಯಕ್ತಿ ತುಮಕೂರಿನ ವೃದ್ಧ ದಿಲ್ಲಿಯ ಜಾಮಿಯಾ ಮಸೀದಿಗೆ ಭೇಟಿ ನೀಡಿ ಹಿಂತಿರುಗಿದ ಬಳಿಕ ಅಸ್ವಸ್ಥಗೊಂಡಿದ್ದ. ಈ ಮೂವರು ಸಾಯುವ ಮುನ್ನ ಹಲವಾರು ಪ್ರದೇಶದಲ್ಲಿ ಸುತ್ತಾಡಿದ್ದರು. ಸರಕಾರದ ಕರೆಗೆ ಓಗೊಟ್ಟ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಮಂದಿರ, ಚರ್ಚ್ಗೆ ಹೋಗುವುದನ್ನು ಹತ್ತು ದಿನಗಳ ಹಿಂದೆಯೇ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ ನಿರ್ದಿಷ್ಟ ಸಮುದಾಯದ ಸಮೂಹ ಮಾತ್ರ ಈಗಲೂ ಪ್ರಾರ್ಥನೆಯ ನೆಪದಲ್ಲಿ ಗುಂಪು ಸೇರುತ್ತಿರುವುದು, ಕಫ್ರ್ಯೂ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಓಡಾಡುತ್ತಿರುವುದು ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ. ಮಂಗಳೂರು, ಭಟ್ಕಳ ಮತ್ತಿತರರ ಕಡೆ ಪತ್ತೆಯಾಗಿರುವ ಪಾಸಿಟಿವ್ ಪೀಡಿತರು ಇದೇ ಸಮುದಾಯಕ್ಕೆ ಸೇರಿರುವುದು ರಾಜ್ಯದ ಕರಾವಳಿ ಭಾಗದ ಜನರ ಭೀತಿಗೆ ಕಾರಣವಾಗಿದೆ. ಈ ಸಮುದಾಯದ ಪ್ರಮುಖರು, ಧರ್ಮಗುರುಗಳು ಈ ಬಗ್ಗೆ ಗಮನ ಹರಿಸಬೇಕು. ಇವರು ಇತರರಿಗೆ ಸೋಂಕು ಹರಡದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ. ವೈರಸ್ ಹರಡಿ ಎಂದ 'ಕೊರೊನಾ ಉಗ್ರ' ಜನ ಸಮೂಹದ ಪ್ರದೇಶದಲ್ಲಿ ಉಗುಳಿ ಕೊರೊನಾ ಹರಡಿ ಎಂದು ಟ್ವಿಟರ್ನಲ್ಲಿ ಕರೆ ನೀಡಿದ್ದ ಬೆಂಗಳೂರಿನ ಮುಜೀಬ್ ಮೊಹಮ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಫೋಸಿಸ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮಸೀದಿದೆ ಹೋದವರು ಪೊಲೀಸರ ವಶಕ್ಕೆ ಚಿಕ್ಕಮಗಳೂರು: ನಿಯಮ ಮೀರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮೂವರನ್ನು ಇಲ್ಲಿಯ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯಲ್ಲಿ ಗುರುವಾರವಷ್ಟೇ ಬೆಳಗಾವಿಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ನೂರಾರು ಮಂದಿಯನ್ನು ಪೊಲೀಸರು ಲಾಠಿ ಚಾರ್ಜ್ ಮಾಡಿ ಓಡಿಸಿದ್ದರು. ಈ ನಡುವೆ, ಮುಧೋಳದ ಮದರಸಾದಲ್ಲಿ 22 ಮಂದಿ ಗುಂಪುಗುಂಪಾಗಿ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
from India & World News in Kannada | VK Polls https://ift.tt/2wyBtww