ಕೊಲ್ಲಂ( ) : ಕೊರೊನಾ ಶಂಕೆಯ ಕಾರಣದಿಂದಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದ ಐಎಎಸ್ ಅಧಿಕಾರಿಯೊಬ್ಬರು ಪರಾರಿಯಾದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಲ್ಲಂ ಜಿಲ್ಲೆಯ ಸಬ್ ಕಲೆಕ್ಟರ್ ಅನುಪಮ್ ಮಿಶ್ರಾ ಎಂಬುವವರು ಯಾರಿಗೂ ಮಾಹಿತಿ ನೀಡದೆ ತಮ್ಮೂರಿಗೆ ಪರಾರಿಯಾಗಿದ್ದಾರೆ. ವಿದೇಶದಿಂದ ಬಂದಿದ್ದ ಅವರನ್ನು ಮಾರ್ಚ್ 19 ರಿಂದ ಕೊಲ್ಲಂನಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಪ್ರತಿ ನಿತ್ಯ ಸ್ಥಳೀಯ ಆರೋಗ್ಯ ಅಧಿಕಾರಿಗಳು ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಆದರೆ ದಿಢೀರ್ ಆಗಿ ಐಎಎಸ್ ಅಧಿಕಾರಿ ಮನೆಯಿಂದ ನಾಪತ್ತೆಯಾಗಿದ್ದರು. ಆರೋಗ್ಯ ಅಧಿಕಾರಿಗಳು ಮನೆಗೆ ತಪಾಸಣೆ ಮಾಡಲೆಂದು ಹೋದಾಗ ಅಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಇದರಿಂದ ಗಾಬರಿಗೊಂಡ ಆರೋಗ್ಯ ಸಿಬ್ಬಂದಿ ಈ ಕುರಿತಾಗಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಲ್ಲಂ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಫೋನ್ ಮೂಲಕ ಅನುಪಮ್ ಮಿಶ್ರಾ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ಅವರೇ ಫೋನ್ ಮಾಡಿ ನಾನು ಕಾನ್ಪುರದಲ್ಲಿ ಇದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಹೋಂ ಕ್ವಾರಂಟೈನ್‌ನಿಂದ ಹೊರಹೋಗುವ ಸಂದರ್ಭದಲ್ಲಿ ಕೊಲ್ಲಂ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತಂದಿಲ್ಲ. ಐಎಎಸ್ ಅಧಿಕಾರಿಯ ಈ ಬೇಜಾವಾಬ್ದಾರಿಯುತ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಜಾಗರೂಕತಾ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವ ಹಾಗಿಲ್ಲ.ಹೀಗಿದ್ದರೂ ಇದನ್ನು ಪಾಲಿಸಬೇಕಾದ ಜಾವಾಬ್ದಾರಿಯುತ ಸ್ಥಾನದಲ್ಲಿರುವ ಐಎಎಸ್ ಅಧಿಕಾರಿಯೊಬ್ಬರು ಈ ರೀತಿಯ ನಡೆದುಕೊಂಡಿರುವುದು ನಿಜಕ್ಕೂ ಅಘಾತಕಾರಿ ಸಂಗತಿ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಐಎಎಸ್ ಅಧಿಕಾರಿ ಅನುಪಮ್ ಮಿಶ್ರಾ ಹಾಗೂ ಅವರ ಗನ್ ಮ್ಯಾನ್ ವಿರುದ್ಧ ಪ್ರಕರಣ ದಾಖಲಿಸಿದೆ.
from India & World News in Kannada | VK Polls https://ift.tt/3dzP6vJ