ಬಿಜಿಂಗ್: ಕೊರೊಮನಾ ವೈರಸ್ ಜನ್ಮಸ್ಥಳ ಚೀನಾದ ವುಹಾನ್ನಲ್ಲಿ ಇದೀಗ ಹೊಸ ಸಮಸ್ಯೆಯೊಂದು ತಲೆದೂರಿದೆ. ವೈರಸ್ ಹತೋಟಿಗೆ ಬಂದ ಮೇಲೆ ವುಹಾನ್ನಲ್ಲಿ ಕರ್ಫ್ಯೂ ಸಡಿಲಿಸಿದ್ದು, 3 ತಿಂಗಳುಗಳ ಬಳಿಕ ನಾಗರಿಕರು ತಮ್ಮ ಮನೆಯಿಂದ ಹೊರಬಂದಿದ್ದಾರೆ. ಆದರೆ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ವುಹಾನ್ ನಾಗರಿಕರು ಬೇರೆ ಸ್ಥಳಗಳಿಗೆ ಹೋಗಲು ಮುಗಿ ಬಿದ್ದಿದ್ದು, ವುಹಾನ್ ನಗರದಾದ್ಯಂತ ದೊಂಬಿ, ಗಲಾಟೆಗಳು ವರದಿಯಾಗಿವೆ. ಸರ್ಕಾರಕ್ಕೆ ಇದೀಗ ವುಹಾನ್ ನಾಗರಿಕರ ದೊಂಬಿ ಹಾಗೂ ಮಾರಾಮಾರಿ ಹೊಸ ತಲೆನೋವಾಗಿ ಪರಿಣಮಿಸಿದೆ. ಬಸ್, ರೈಲು ನಿಲ್ದಾಣಗಳಲ್ಲಿ ಜನ ಪರಸ್ಪರ ಹೊಡೆದಾಡಿಕೊಂಡ ಘಟನೆಗಳು ವರದಿಯಾಗಿವೆ. ಅಲ್ಲದೇ ವಿಮಾನ ನಿಲ್ದಾಣದಲ್ಲೂ ಜನರ ನೂಕುನುಗ್ಗಲು ಸಂಭವಿಸಿದೆ ಎನ್ನಲಾಗಿದೆ. ಕೊರೋನಾ ತಡೆಗಾಗಿ ಹುಬೇ ಪ್ರಾಂತ್ಯದ ಮೇಲೆ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಇದೀಗ ಸಡಿಲಗೊಳಿಸಲಾಗುತ್ತಿದೆ. ಹುಬೇ ಪ್ರಾಂತ್ಯ ಹಾಗೂ ಅದರ ರಾಜಧಾನಿ ವುಹಾನ್ನಿಂದ ರೈಲು ಮತ್ತು ಬಸ್ ಸೇವೆಗಳು ಈಗಾಗಲೇ ಆರಂಭವಾಗಿವೆ. ಆದರೆ 3 ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಜನ ಸಂಪರ್ಕದಿಂದ ಪ್ರತ್ಯೇಕವಾಗಿಯೇ ಇದ್ದ ಈ ಭಾಗದ ಜನ, ಹಿಂಡು-ಹಿಂಡಾಗಿ ಇತರ ದೇಶಗಳಿಗೆ ತೆರಳುತ್ತಿದ್ದಾರೆ. ಇದರ ಪರಿಣಾಮ ತುಂಬಿ ತುಳುಕುತ್ತಿರುವ ಬಸ್ಸುಗಳು, ರೈಲು ಸೇರಿದಂತೆ ಇನ್ನಿತರ ಸಾರಿಗೆಗಳಲ್ಲಿ ಜನರ ನಡುವೆ ಭಾರೀ ಹೊಡೆದಾಟ ಸಂಭವಿಸುತ್ತಿವೆ. ಮತ್ತೊಂದೆಡೆ ಕೊರೊನಾ ಕೇಂದ್ರಿತ ಹುಬೇ ಪ್ರಾಂತ್ಯದ ಜನರನ್ನು ಸೇರಿಸಿಕೊಳ್ಳಲು ಪಕ್ಕದ ಜಿಯಾಂಗ್ ಕ್ಸಿ ಪ್ರಾಂತ್ಯ ನಿರಾಕರಿಸಿದೆ. ಉಭಯ ಪ್ರಾಂತ್ಯದ ಗಡಿ ಭಾಗವನ್ನು ಬಂದ್ ಮಾಡಲಾಗಿದ್ದು, ಗಡಿ ಪ್ರವೇಶದ ಬಳಿ ಜನರು ಹಾಗೂ ಪೊಲೀಸರ ನಡುವೆ ಮಾರಂಆರಿ ಸಂಭವಿಸಿದೆ.
from India & World News in Kannada | VK Polls https://ift.tt/2QSPYSq