ಮುಂಬೈ: ಆರ್ಭಟದಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಹೀಗಾಗಿ, ಕೂಲಿ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನೂರಾರು ಕಿಲೋ ಮೀಟರ್ ಬಿಸಿಲಿನಲ್ಲಿ ನಡೆದು ಊರು ಸೇರೋದು ಕಷ್ಟವಾದ ಹಿನ್ನೆಲೆಯಲ್ಲಿ, ಕೂಲಿ ಕಾರ್ಮಿಕರು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದರು..! ಆದ್ರೆ, ಆ ಪ್ಲಾನ್ ಇದೀಗ ಫ್ಲಾಪ್ ಆಗಿದೆ. ಮುಂಬೈನಿಂದ ರಾಜಸ್ತಾನದ ತಮ್ಮ ಸ್ವಗ್ರಾಮಗಳಿಗೆ ಹೋಗಲು ಕಾರ್ಮಿಕರು ತಂತ್ರ ಹೂಡಿದ್ದರು. ನಡೆದುಕೊಂಡು ಹೋದರೆ, ನೂರಾರು ಕಿ.ಮೀ ಸಾಗಲು ಹತ್ತಾರು ದಿನಗಳು ಬೇಕು ಎಂದು ಅರಿತ ಕಾರ್ಮಿಕರು, ಒಂದರಲ್ಲಿ ಪ್ರಯಾಣ ಬೆಳೆಸುವ ಪ್ಲಾನ್ ಮಾಡಿದರು. 12 ಜನರ ಈ ಕುಟುಂಬದಲ್ಲಿ ಮೂವರು ಮಹಿಳೆಯರು ಹಾಗೂ ಒಬ್ಬ ಬಾಲಕನಿದ್ದ. ಹಾಲಿನ ಟ್ಯಾಂಕರ್ ಒಂದನ್ನು ಗೊತ್ತುಮಾಡಿಕೊಂಡ ಈ ಕುಟುಂಬ, ಮಹಾರಾಷ್ಟ್ರದ ಕಲ್ಯಾಣ್ನಿಂದ ರಾಜಸ್ತಾನಕ್ಕೆ ಪ್ರಯಣ ಬೆಳೆಸಿದರು. ಹಾಲಿನ ವಾಹನ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ತಲಸರಿಗೆ ಬಂದಾಗ ಪೊಲೀಸರು ತಪಾಸಣೆ ಆರಂಭಿಸಿದರು. ಮಹಾರಾಷ್ಟ್ರ-ಗುಜರಾತ್ ಗಡಿಯಲ್ಲಿ ಇರುವ ತಲಸರಿಯಲ್ಲಿ ಈ ವಾಹನ ಪಾಸ್ ಆಗಿಬಿಟ್ಟರೆ, ರಾಜಸ್ತಾನ ತಲುಪೋದು ಅಸಾಧ್ಯ ಆಗಿರಲಿಲ್ಲ. ಆದ್ರೆ, ಗಡಿಯಲ್ಲೇ ಪೊಲೀಸರಿಗೆ ಅನುಮಾನ ಬಂದು ವಾಹನವನ್ನು ಪರಿಶೀಲಿಸಿದಾಗ ಜನರು ಇರೋದು ಪತ್ತೆಯಾಯ್ತು. ವಾಹನದ ಕಾಗದ ಪತ್ರವೂ ಸರಿ ಇಲ್ಲದ ಕಾರಣ, ಈ 12 ಮಂದಿಯ ದುಸ್ಸಾಹಸ ವಿಫಲವಾಗಿದೆ. ಹಾಗೆ ನೋಡಿದ್ರೆ, ದೇಶದೆಲ್ಲೆಡೆ ಲಕ್ಷಾಂತರ ಕಾರ್ಮಿಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಡೆದೇ ಸಾಗುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಎಲ್ಲರಿಗಿಂತಾ ಅತಿ ಹೆಚ್ಚು ತೊಂದರೆಗೆ ಈಡಾಗಿರೋದು ಕೂಲಿ ಕಾರ್ಮಿಕರು. ಅಸಂಘಟಿತ ವಲಯದ ಈ ಕಾರ್ಮಿಕರ ಸ್ಥಿತಿ ಡೋಲಾಯಮಾನವಾಗಿದೆ. ಒಂದೆಡೆ ಕೆಲಸವಿಲ್ಲ, ಅನ್ನಾಹಾರವಿಲ್ಲ, ಇರಲು ನೆಲೆಯಿಲ್ಲ… ಕೊನೆಗೆ ತಮ್ಮ ತಮ್ಮ ಊರುಗಳಿಗೆ ಮರಳೋದಕ್ಕೆ ವಾಹನಗಳೂ ಇಲ್ಲ.. ಹೀಗಾಗಿ, ಕಾರ್ಮಿಕರ ಪರಿಸ್ಥಿತಿ ದಾರುಣವಾಗಿದೆ.
from India & World News in Kannada | VK Polls https://ift.tt/2wAYZsM