ತಿರುವನಂತಪುರಂ: ಕೊರೊನಾ ವೈರಸ್ ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿದ್ದ 69 ವರ್ಷದ ಕೊಚ್ಚಿಯ ಮಟ್ಟಂಚ್ಚೇರಿ ನಿವಾಸಿಯೊಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಇದು ಕೇರಳದಲ್ಲಿ ಮೊದಲ ಬಲಿಯಾಗಿದೆ. ಇವರು ಮಾ.16ರಂದು ದುಬೈಯಿಂದ ಆಗಮಿಸಿದ್ದರು. ಮಾ.22ರಂದು ಕೊರೊನಾ ಪಾಸಿಟಿವ್ ದೃಢಗೊಂಡಿದ್ದು, ಬಳಿಕ ಐಸೋಲೇಶನ್ ವಾರ್ಡ್ನಲ್ಲಿ ಚಿಕಿತ್ಸೆಯಲ್ಲಿದ್ದರು. ಸೋಂಕಿತರು ವಿಮಾನ ನಿಲ್ದಾಣದಿಂದ ಮನೆಗೆ ಬಂದಾಗ ಅವರ ಜತೆಗಿದ್ದ ಟ್ಯಾಕ್ಸಿ ಚಾಲಕನಿಗೂ ಈಗ ಕೊರೊನಾ ಪಾಸಿಟಿವ್ ದೃಢಗೊಂಡಿದೆ. ಟ್ಯಾಕ್ಸಿ ಚಾಲಕನ ಸಂಪರ್ಕ ಹೊಂದಿದ್ದ 30 ಮಂದಿ, ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಫ್ಲ್ಯಾಟ್ನಲ್ಲಿರುವ ಜನರನ್ನು ಸದ್ಯ ನಿಗಾದಲ್ಲಿರಿಸಲಾಗಿದೆ. ಶನಿವಾರ ಕಟ್ಟುನಿಟ್ಟಿನ ಸುರಕ್ಷೆಯೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತದೇಹವನ್ನು ಮುಟ್ಟಲು ಮತ್ತು ಸಂಬಂಧಿಕರಿಗೆ ಹತ್ತಿರದಿಂದ ವೀಕ್ಷಿಸಲು ಸ್ಥಳೀಯ ಆರೋಗ್ಯ ಅಧಿಕಾರಿಗಳು ಅವಕಾಶ ನೀಡಲಿಲ್ಲ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪತ್ನಿ, ಮಕ್ಕಳಿಗೆ ವಿಡಿಯೋ ಮೂಲಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ 84 ಮಂದಿ ಪ್ರಸ್ತುತ ನಿಗಾದಲ್ಲಿದ್ದಾರೆ.
ಕೇರಳದಲ್ಲಿ ಈವರೆಗೆ 182 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 169 ಪ್ರಕರಣಗಳು ಸದ್ಯ ಚಾಲ್ತಿಯಲ್ಲಿದೆ. 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
from India & World News in Kannada | VK Polls https://ift.tt/2UnELf0