ಹೊಸದಿಲ್ಲಿ: ವ್ಯಾಪಕತೆಯಿಂದ ರಾಷ್ಟ್ರದಲ್ಲಿ ನಿರ್ಮಾಣಗೊಂಡಿರುವ ತುರ್ತು ಪರಿಸ್ಥಿತಿಯ ಪರಿಣಾಮ ಭಾರತೀಯ ರಿಸರ್ವ್ ಬ್ಯಾಂಕ್() ಮೂರು ತಿಂಗಳು ಇಎಂಐ ಮುಂದೂಡಿದ ಕ್ರಮವನ್ನು ಪ್ರತಿಪಕ್ಷಗಳು ಸ್ವಾಗತಿಸಿವೆ. ಆರ್‌ಬಿಐ ನಿರ್ಧಾರವನ್ನು ಸ್ವಾಗತಿಸಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಮ್, ''ಇಎಂಐ ಮೂರು ತಿಂಗಳು ಮುಂದೂಡಲ್ಪಟ್ಟಿದ್ದು ಬಹಳ ಉತ್ತಮ ನಿರ್ಧಾರವಾಗಿದೆ. ಆದರೆ ಆರ್‌ಬಿಐ ನಿರ್ಣಯ ಗೊಂದಲ ಮೂಡಿಸುವಂತಿದೆ. ಸ್ಪಷ್ಟತೆ ರಹಿತವಾಗಿದೆ. ಆರ್‌ಬಿಐಗೆ ನನ್ನ ಒತ್ತಾಯವೆಂದರೆ ಮುಂದೂಡಲ್ಪಟ್ಟ ಅವಧಿಯ ಇಎಂಐ ದಿನಾಂಕ ಆಟೋಮ್ಯಾಟಿಕ್‌ಆಗಿ ಮೂರು ತಿಂಗಳ ಮುಂದಿನ ದಿನಾಂಕಕ್ಕೆ ಪರಿವರ್ತನೆಗೊಳ್ಳುವಂತೆ ಮಾಡಬೇಕು'' ಎಂದು ಸಲಹೆ ನೀಡಿದ್ದಾರೆ. ''ಮುಂದಿನ ಇಎಂಐ ಕಟ್ಟುವ ದಿನಾಂಕ ಜೂನ್ 30ರ ಒಳಗೆ ನಿಗದಿ ಪಡಿಸುವ ಬದಲು ಜೂನ್ 30ಕ್ಕೆ ನಿಗದಿ ಪಡಿಸುವುದು ಉತ್ತಮ. ಸಾಲಗಾರರು ಬ್ಯಾಂಕ್‌ನ ನಿರ್ಧಾರದ ಮೇಲೆ ಅವಲಂಬಿತರಾಗಿರುತ್ತಾರೆ. ಅವರಿಗೆ ಅಸಮಾಧಾನವಾಗಬಾರದು'' ಎಂದು ಚಿದಂಬರಮ್ ಸಲಹೆ ನೀಡಿದ್ದಾರೆ. ಮಧ್ಯಮ ವರ್ಗಕ್ಕೆ ಇದೊಂದು ಭಾರಿ ಸಮಾಧಾನ ನೀಡಿದ ಸಂಗತಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರ್‌ಬಿಐ ನಿರ್ಧಾರವನ್ನು ಕೊಂಡಾಡಿದ್ದಾರೆ.
from India & World News in Kannada | VK Polls https://ift.tt/2y7DgJ3