ಹೊಸದಿಲ್ಲಿ: ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಏಪ್ರಿಲ್ 14ರ ವರೆಗೆ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಅಲ್ಲದೆ ಸಾಮಾಜಿತ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರಲ್ಲೂ ಮನೆಯಲ್ಲೇ ಉಳಿಯುವಂತೆ ಸೂಚಿಸಲಾಗಿದೆ. ಟೀಮ್ ಇಂಡಿಯಾ ನಾಯಕ ಮತ್ತು ಪತ್ನಿ ಹಾಗೂ ಬಾಲಿವುಡ್ ನಟಿ ಮನೆಯಲ್ಲೇ ಕ್ವಾರಂಟೈನ್ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ಕಿಚನ್ ಕತ್ತರಿ ಉಪಯೋಗಿಸಿ ವಿರಾಟ್ ಕೊಹ್ಲಿ ಹೇರ್ ಕಟ್ಟಿಂಗ್ ಮಾಡುವ ಮೂಲಕ ಪತ್ನಿ ಅನುಷ್ಕಾ ಶರ್ಮಾ ಗಮನ ಸೆಳೆದಿದ್ದಾರೆ. ಅಡುಗೆ ಕೋಣೆಯ ಕತ್ತರಿ ಮೂಲಕ ಕೂದಲು ಕತ್ತರಿಸಿರುವುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಸ್ವತ: ಅನುಷ್ಕಾ ಶರ್ಮಾ ಅವರೇ ತಮ್ಮ ಸಾಮಾಜಿಕ ಖಾತೆಗಳಲ್ಲಿ ಹಂಚಿದ್ದಾರೆ. ಪ್ರಸ್ತುತ ವಿಡಿಯೋ ವೈರಲ್ ಆಗಿದೆ. ಕೋವಿಡ್ 19 ವೈರಸ್ನಿಂದ ಇಡೀ ದೇಶವೇ ಸ್ತಬ್ದವಾಗಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಲೂನ್ಗಳನ್ನೆಲ್ಲ ಮುಚ್ಚುಗಡೆಗೊಳಿಸಲಾಗಿದೆ. ಇದರಿಂದಾಗಿ ಕ್ಷೌರ ಕಟ್ಟಿಂಗ್ ಹಾಗೂ ಶೇವಿಂಗ್ ಮುಂತಾದವುಗಳನ್ನು ಮನೆಯಲ್ಲೇ ಮಾಡುವಂತಾಗಿದೆ. ಈ ನಡುವೆ ತಮ್ಮ ಪತಿ ವಿರಾಟ್ ಕೊಹ್ಲಿ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಅನುಷ್ಕಾ ಶರ್ಮಾ, ಅಡುಗೆ ಕತ್ತರಿ ಉಪಯೋಗಿಸಿ ಮನೆಯಲ್ಲೇ ಹೇರ್ ಕಟ್ಟಿಂಗ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಬಯಕೆಯಂತೆಯೇ ನಾಯಕ ವಿರಾಟ್ ಕೊಹ್ಲಿ ಗಡ್ಡ ಬೆಳೆಸಿದ್ದಾರೆ. ಅಲ್ಲದೆ ಯಾವತ್ತೂ ಕ್ಲೀನ್ ಶೇವ್ ಮಾಡಿಸಿಲ್ಲ. ಇದು ಅನುಷ್ಕಾಗೂ ಇಷ್ಟವಿಲ್ಲವಂತೆ. ಆದರೂ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಈ ಮೊದಲು ಕೊರೊನಾ ವೈರಸ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಮನೆಯಿಂದ ವಿನಾ ಕಾರಣ ಹೊರಬರುತ್ತಿರುವವರ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದರು. ಕೋವಿಡ್ 19 ವಿರುದ್ಧ ಹೋರಾಟ ನಡೆಸುವುದು ಸುಲಭದ ಮಾತಲ್ಲ. ಲಾಕ್ಡೌನ್ ಆದೇಶ ಇದ್ದರೂ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಅಸಮಾಧಾನ ತಂದಿದೆ ಎಂದಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dAe7aa