ವಿಶ್ವಾದ್ಯಂತ ಎಷ್ಟಾಗಿವೆ ಕೊರೊನಾ ಪ್ರಕರಣಗಳು? ಸತ್ತವರ ಸಂಖ್ಯೆಯೆಷ್ಟು? ಇಲ್ಲಿದೆ ಪೂರ್ಣ ವಿವರ

ಹೊಸದಿಲ್ಲಿ: ವಿರುದ್ಧದ ಹೋರಾಡಲು ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಅವಧಿ ಮುಂದುವರಿದಿದ್ದು, ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿದೆ. ದಿನಸಿ, ದಿನಬಳಕೆ ವಸ್ತುಗಳ ಮಾರುಕಟ್ಟೆ ತೆರೆದಿದ್ದು ದೈನಂದಿನ ಬದುಕಿಗೆ ಕುಂದುಕೊರತೆಗಳನ್ನು ನೀಗಿಸಲು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ಮಂಡಳಿಗಳು ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಷ್ಟ್ರದಲ್ಲಿ ಒಂದೇ ದಿನ 112 ಕೊರೊನಾ ಪ್ರಕರಣಗಳು ಕಂಡುಬಂದಿದ್ದು ಒಟ್ಟಾರೆ ಇದುವರೆಗೆ 722 ಪ್ರಕರಣಗಳು ದೃಢ ಪಟ್ಟಿವೆ. ಈ ಪೈಕಿ ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 55 ಕೋವಿಡ್‌-19 ಪ್ರಕರಣಗಳು ದೃಢ ಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ ಇದುವರೆಗೆ 5,20,000 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 23,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 1,22,000 ರೋಗಿಗಳು ಗುಣಮುಖರಾಗಿದ್ದಾರೆ. - ಅಮೆರಿಕದಲ್ಲಿ 1,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. - ಸ್ಪೇನ್‌ನಲ್ಲಿ ಸಾವಿನ ಸಂಖ್ಯೆ 4,000 ದಾಟಿದೆ. - ಯುರೋಪ್‌ನಲ್ಲಿ ಅತಿಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟ 3ನೇ ರಾಷ್ಟ್ರ ಜರ್ಮನಿ. - ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಜಪಾನ್‌ನಿಂದ ಟಾಸ್ಕ್‌ಫೋರ್ಸ್‌ ವಿಶ್ವಾದ್ಯಂತಒಟ್ಟು ಪ್ರಕರಣಗಳು: 5.2 ಲಕ್ಷ ಸತ್ತವರ ಸಂಖ್ಯೆ: 23 ಸಾವಿರ ದೇಶಾದ್ಯಂತಒಟ್ಟು ಪ್ರಕರಣಗಳು: 722 ಸತ್ತವರ ಸಂಖ್ಯೆ: 16 ರಾಜ್ಯಾದ್ಯಂತ ಒಟ್ಟು ಪ್ರಕರಣಗಳು: 55 ಸತ್ತವರ ಸಂಖ್ಯೆ: 2


from India & World News in Kannada | VK Polls https://ift.tt/3bFzMfF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...