ರೈಲ್ವೆ ಬೋಗಿಗಳೇ ಐಸೋಲೇಷನ್‌ ವಾರ್ಡ್‌, ಕೊರೊನಾ ವಿರುದ್ಧದ ಹೋರಾಟಕ್ಕೆ ತಾತ್ಕಾಲಿಕ ಸಿದ್ಧತೆ

ಹೊಸದಿಲ್ಲಿ: ರೈಲ್ವೆ ಇಲಾಖೆಯು ಕೋವಿಡ್‌-19 ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ರೈಲುಗಳ ನಾನ್‌ ಏಸಿ ಬೋಗಿಗಳನ್ನು ಐಸೋಲೇಶನ್‌ ವಾರ್ಡ್‌ಗಳಾಗಿ ಪರಿವರ್ತಿಸಲು ಸಿದ್ಧತೆ ನಡೆಸುತ್ತಿದ್ದು, ಮೊದಲ ಮಾದರಿಗಳನ್ನು ವ್ಯವಸ್ಥೆಗೊಳಿಸಿದೆ. ಆರಂಭಿಕ ಹಂತದಲ್ಲಿ ರೈಲ್ವೆಯ ಪ್ರತಿ ವಲಯಗಳಲ್ಲಿ ತಲಾ 10 ಬೋಗಿಗಳನ್ನು ಐಸೋಲೇಶನ್‌ ವಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಭಾರತೀಯ ರೈಲ್ವೆಯು 17 ವಲಯಗಳನ್ನು ಹೊಂದಿದೆ. ಈ ಐಸೋಲೇಶನ್‌ ಕ್ಯಾಬಿನ್‌ಗಳನ್ನು ವ್ಯವಸ್ಥೆಗೊಳಿಸಲು ಒಂದು ಬದಿಯ ಮಧ್ಯ ಭಾಗದ ಬರ್ತ್‌ ತೆಗೆದಿದ್ದರೆ, ಇತರ ಮೂರೂ ಬರ್ತ್‌ಗಳನ್ನು ತೆರವುಗೊಳಿಸಲಾಗುತ್ತದೆ. ಪ್ರತಿ ಕ್ಯಾಬಿನ್‌ಗೂ 220 ವೋಲ್ಟ್‌ ಎಲೆಕ್ಟ್ರಿಕ್‌ ಪಾಯಿಂಟ್‌, ವೈದ್ಯಕೀಯ ಸಲಕರಣೆಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ. ಕೋಚ್‌ಗಳ ನೈರ್ಮಲ್ಯಕ್ಕೂ ಆದ್ಯತೆ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಒಂದೊಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಪರಿಸ್ಥಿತಿಯನ್ನು ನಿಭಾಯಿಸಲು ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡುವಂತೆ ಹಲವರು ಸರಕಾರಕ್ಕೆ ಸಲಹೆಗಳನ್ನು ನೀಡಿದ್ದರು. ಹೋಟೆಲ್‌ಗಳು, ಶಾಲೆಗಳು ಮತ್ತು ರೈಲ್ವೆ ಬೋಗಿಗಳನ್ನು ಐಸೋಲೇಶನ್‌ ವಾರ್ಡ್‌ ಆಗಿ ಪರಿವರ್ತಿಸುವ ಬಗ್ಗೆ ಸರಕಾರ ಚಿಂತನೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಅದರಂತೆ ಇದೀಗ ರೈಲ್ವೆ ತನ್ನ ಪ್ರಾರಂಭಿಕ ಕೆಲಸ ಆರಂಭಿಸಿದೆ.


from India & World News in Kannada | VK Polls https://ift.tt/2QMB2p9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...