ಪುಣೆ: ಮಾರಕ ಕೊರೊನಾ ವೈರಸ್ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಪ್ರಧಾನಿ ಮೋದಿ ಕರೆಗೆ ಇಡೀ ದೇಶ ಓಗೊಟ್ಟಿದೆ. ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರ್ದಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ದೇಶ ಮೊದಲ ಕೋಚಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುದ್ದಾದ ಹೆಣ್ಝು ಮಗವಿಗೆ ಜನ್ಮ ನೀಡಿದ್ದು, ಗರ್ಭವತಿಯಾದಾಗಲೂ ನಿರಂತರವಾಗಿ ಕೆಲಸ ಮಾಡಿದ ಆಕೆಯ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪುಣೆಯ ಮೈಲ್ಯಾಬ್ ಡಿಸ್ಕವರಿ ಎಂಬ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥೆಯಾಗಿರುವ ಮಿನಾಲ್ ಬೋಸ್ಲೆ, ತಯಾರಿಕೆಯಲ್ಲಿ ತೊಡಗಿದ್ದ ತಂಡದ ನೇತೃತ್ವವಹಿಸಿದ್ದರು. ಕೋವಿಡ್-19 ಕಿಟ್ ತಯಾರಿಸಲು ಭಾರತ ಸರ್ಕಾರದಿಂದ ಅನುಮತಿ ಪಡೆದಿದ್ದ ಮೈಲ್ಯಾಬ್ ಡಿಸ್ಕವರಿ, ಕಿಟ್ ತಯಾರಿಕಾ ತಂಡದ ನೇತೃತ್ವವನ್ನು ಮಿನಾಲ್ ಬೋಸ್ಲೆ ಅವರಿಗೆ ನೀಡಿತ್ತು. ಆದರೆ ಗರ್ಭವತಿಯಾಗಿದ್ದ ಮಿನಾಲ್, ತಮ್ಮ ವೈಯಕ್ತಿಕ ತೊಂದರೆಗಳನ್ನು ಲೆಕ್ಕಿಸದೇ ಕೋವಿಡ್-19 ಕಿಟ್ ತಯಾರಿಕೆಯಲ್ಲಿ ಹಗಲಿರುಳೂ ಶ್ರಮಿಸಿದರು. ಅದರಂತೆ ಕಿಟ್ ತಯಾರಿಸಿ ಒಂದು ದಿನವಾದ ಮೇಲೆ ಮಿನಾಲ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕೇವಲ 2 ರಿಂದ 2-30 ಗಂಟೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸುವ ಈ ಕಿಟ್ ಸದ್ಯ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುವ ಸಾಧನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿನಾಲ್ ಬೋಸ್ಲೆ, ದೇಶಕ್ಕೆ ನನ್ನ ಅಗತ್ಯವಿರುವುದನ್ನು ಮನಗಂಡು, ಗರ್ಭಧಾರಣೆ ಸಮಯದಲ್ಲೂ ನಿರಂತರವಾಗಿ ಕೆಲಸ ಮಾಡಿ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಪ್ಯಾಥೋ ಡಿಟೆಕ್ಟ್ ಎಂಬ ಕೋವಿಡ್-19 ಕಿಟ್ ತಯಾರಿಸಿರುವ ಮಿನಾಲ್ ಬೋಸ್ಲೆ ನೇತೃತ್ವದ ತಂಡವನ್ನು ಖುದ್ದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಹಾಗೆ ಪ್ಯಾಥೋ ಡಿಟೆಕ್ಟ್ ಕಿಟ್ ಬೆಲೆ ಕೆವಲ 1,200 ರೂ.
from India & World News in Kannada | VK Polls https://ift.tt/2UKF3M0