ವಲಸೆ ಕಾರ್ಮಿಕರ ಪ್ರವಾಹ ಕಂಡು ದಂಗಾದ ದೆಹಲಿ: ಹೋಗ್ಬೇಡಿ ಎಂದು ಮನವಿ ಮಾಡಿದ ಕೇಜ್ರಿ!

ನವದೆಹಲಿ: ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೆ ಪ್ರವಾಹೋಪಾದಿಯಲ್ಲಿ ಬಸ್ ನಿಲ್ದಾಣಗಳಿಗೆ ಲಗ್ಗೆ ಇಟ್ಟಿರುವ ಕಾರ್ಮಿಕರನ್ನು ಕಂಡು ದೆಹಲಿ ಸರ್ಕಾರ ದಂಗಾಗಿದೆ. ದೆಹಲಿಯ ವಿವಿಧ ಬಸ್ ನಿಲ್ದಾಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದು, ವಿಶೇಷ ಬಸ್‌ಗಳನ್ನು ಏರಿ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಆದರೆ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದಿರುವ ಜನರನ್ನು ಕಂಡು ದೆಹಲಿ ಸರ್ಕಾರ ದಂಗಾಗಿದೆ. ಲಾಕ್‌ಡೌನ್ ಆದೇಶದನ್ವಯ ಸಾರ್ವಜನಿಕವಾಗಿ ಭಾರೀ ಸಂಖ್ಯೆಯಲ್ಲಿ ಗುಂಪು ಸೇರುವಂತಿಲ್ಲ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಒಂದೆಡೆ ಸೇರಿರುವುದರಿಂದ ಕೊರೊನಾ ವೈರಸ್ ಹರುಡುವಿಕೆಯ ಪ್ರಮಾಣ ಏರಿಕೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಎಲ್ಲಿಯೂ ಪ್ರಯಾಣ ಮಾಡದಂತೆ ವಲಸೆ ಕಾರ್ಮಿಕರಿಗೆ ಮನವಿ ಮಾಡಿರುವ ದೆಹಲಿ ಸಿಎಂ , ಪ್ರಧಾನಿ ಮೋದಿ ಅವರ ಆದೇಶ ಪಾಲಿಸಿ ಎಂದು ಹೇಳಿದ್ದಾರೆ. ವಲಸೆ ಕಾರ್ಮಿಕರು ತಾವಿರುವ ಸ್ಥಳಗಳನ್ನು ಬಿಟ್ಟು ಎಲ್ಲಿಯೂ ಪ್ರಯಾಣ ಮಾಡಬೇಡಿ. ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ನೀವು ರಸ್ತೆಗಿಳಿದರೆ ನಿಮಗೂ ಹಾಗೂ ಸಮಾಜಕ್ಕೂ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಸಿದ್ದಾರೆ. ದೆಹಲಿ ಸರ್ಕಾರ ವಲಸೆ ಕಾರ್ಮಿಕರ ಊಟ ಹಾಗೂ ವಸತಿಯ ಜವಾಬ್ದಾರಿ ಹೊತ್ತುಕೊಂಡಿದೆ ಎಂದು ಸ್ಪಷ್ಟಪಡಿಸಿರುವ ಸಿಎಂ ಕೇಜ್ರಿವಾಲ್, ಹೀಗೆ ಗುಂಪು ಗುಂಪಾಗಿ ಬಸ್‌ನಲ್ಲಿ ಪ್ರಯಾಣ ಮಾಡಿ ಅಪಾಯ ತಂದೊಡ್ಡಬೇಡಿ ಎಂದು ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2y8UdTt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...