ಆಗ್ರಾ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ದೇಶವನ್ನು 21 ದಿನಗಳ ಲಾಕ್ಡೌನ್ ಸ್ಥಿತಿಯಲ್ಲಿ ಇಡಲಾಗಿದೆ. ಎಲ್ಲರೂ ಮನೆಯಲ್ಲೇ ಇದ್ದು, ಲಾಕ್ಡೌನ್ ಆಧೇಶವನ್ನು ಪಾಲಿಸುವಂತೆ ಕರೆ ನೀಡಲಾಗಿದೆ. ಆದರೆ ಈ ಲಾಕ್ಡೌನ್ ಆದೇಶ ದೇಶದ ಲಕ್ಷಾಂತರ ವಲಸೆ ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಈ ಕಾರ್ಮಿಕರು ತಮ್ಮ ಸ್ವಂತ ರಾಜ್ಯಗಳಿಗೆ ತರಳಲು ಪರದಾಡುತ್ತಿದ್ದಾರೆ. ಅದರಂತೆ ಲಾಕ್ಡೌನ್ ಆದೇಶದ ಬಳಿಕ ನವದೆಹಲಿಯಿಂದ ತನ್ನ ಸ್ವಂತ ಊರಿಗೆ ನಡೆದುಕೊಂಡೇ ತೆರಳು ಮುಂದಾದ ವಿತರಾಣಾ ಏಜೆಂಟ್ವೋರ್ವ ಬರೋಬ್ಬರಿ 200 ಕಿ.ಮೀ. ನಡೆದ ಪರಿಣಾಮ ಹೆದ್ದಾರಿಯಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯವನಾದ 38 ವರ್ಷದ ರಣ್ವೀರ್ ಸಿಂಗ್, ನವದೆಹಲಿಯಲ್ಲಿ ಆಗಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಬಳಿಕ ನಡೆದುಕೊಂಡೇ ಮನೆಗೆ ತೆರಳಲು ಮುಂದಾತ ಈತ, 200 ಕಿ.ಮೀ. ಪ್ರಯಾಣದ ಬಳಿಕ ಹೆದ್ದಾರಿಯಲ್ಲೇ ಅಸುನೀಗಿದ್ದಾನೆ. ಉತ್ತರಪ್ರದೇಶದ ಆಗ್ರಾ ಸಮೀಪ ಹೆದ್ದಾರಿಯಲ್ಲಿ ಕುಸಿದು ಬಿದ್ದ ರಣ್ವೀರ್ಗೆ ರಸ್ತೆಯ ಪಕ್ಕದಲ್ಲೇ ಇದ್ದ ಚಹಾದಂಗಡಿ ಮಾಲೀಕ ಚಹಾ ಮತ್ತು ಬಿಸ್ಕೆಟ್ಗಳನ್ನು ನೀಡಿದ್ದಾನೆ. ಆದರೆ ಚಹಾ ಕುಡಿಯುತ್ತಲೇ ರಣ್ವೀರ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಬಸ್ ವ್ಯವಸ್ಥೆ ಮಾಡಿವೆ. ಆದರೆ ಇದಕ್ಕೂ ಮೊದಲೇ ರಾಷ್ಟ್ರ ರಾಜಧಾನಿಯಿಂದ ನಡೆದುಕೊಂಡೇ ತಮ್ಮ ಮನೆಗಳಿಗೆ ತಲುಪುತ್ತಿರುವ ವಲಸೆ ಕಾರ್ಮಿಕರು ಪರದಾಡಬೇಕಾದ ಸ್ಥಿತಿ ಬಂದಿದೆ.
from India & World News in Kannada | VK Polls https://ift.tt/33ULtMH