ಬೆಂಗಳೂರು: ಜನತಾ ಕರ್ಫ್ಯೂಗೆ ರಾಷ್ಟ್ರಾದ್ಯಂತ ಭಾರಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಮಹಾಮಾರಿ ವಿರುದ್ಧದ ಹೋರಾಟದ ಮೊದಲ ಹೆಜ್ಜೆಗೆ ಜಯ ಸಿಕ್ಕಂತಾಗಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಜೋರಾಗಿರುವ ಹಿನ್ನೆಲೆ ಮಾರ್ಚ್ 31ರ ವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಮತ್ತೆ 6 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾದಂತಾಗಿದೆ ಲಾಕ್‌ಡೌನ್ ಆದ ರಾಜ್ಯದ ಜಿಲ್ಲೆಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಹಾಗೂ ಬೆಳಗಾವಿ ಇಂದೂ ಬಸ್ ಸೇವೆ ಇಲ್ಲರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸೇವೆಯನ್ನು ಸೋಮವಾರವೂ ಬಂದ್ ಮಾಡುವಂತೆ ಸೂಚಿಸಲಾಗಿದೆ. ಹಾಗಾಗಿ ಯಾವುದೇ ಭಾಗದಲ್ಲಿ ಬಸ್ ಸೌಲಭ್ಯ ಇರುವುದಿಲ್ಲ. ಏನೇನು ಲಾಕ್‌ಡೌನ್? - ಅಗತ್ಯ ವಸ್ತು ಹೊರತಾಗಿ ಉಳಿದೆಲ್ಲ ಚಟುವಟಿಕೆ ಬಂದ್. - 9 ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ - ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಸ್ಥಗಿತ. - ಕೇಂದ್ರದ ಸೂಚನೆ ಪ್ರಕಾರ ರೈಲುಗಳು ಸ್ಟಾಪ್ - ಹೊರಜಿಲ್ಲೆಗಳಿಂದ ಇಲ್ಲಿಗೆ ಯಾವುದೇ ಬಸ್, ವಾಹನ ಪ್ರವೇಶಿಸುವಂತಿಲ್ಲ. ಕಾರ್ಖಾನೆಗಳಲ್ಲಿ ಹೇಗೆ?- 9 ಜಿಲ್ಲೆಗಳಲ್ಲಿನ ಕೈಗಾರಿಕೆಗಳಲ್ಲಿ ದಿನಬಿಟ್ಟು ದಿನ ಅರ್ಧದಷ್ಟು ಕಾರ್ಮಿಕರ ನಿಯೋಜನೆ. - ಈ ಸಂದರ್ಭ ಬಳಸಿ ಯಾವುದೇ ಕಾರ್ಖಾನೆ ಮಾಲೀಕರು ನೌಕರರನ್ನು ವಜಾಗೊಳಿಸುವಂತಿಲ್ಲ. ಐಟಿ ಕಂಪನಿಗಳಿಗೆ ಸೂಚನೆಅಗತ್ಯಸೇವೆ ಹೊರತುಪಡಿಸಿ ಎಲ್ಲ ನೌಕರರು ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದು. ಯಾವುದಕ್ಕೆ ವಿನಾಯಿತಿ?- ಆಹಾರ, ನ್ಯಾಯಬೆಲೆ ಅಂಗಡಿ, ಹಾಲು, ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ - ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳು, ಪ್ಯಾರಾ ಮೆಡಿಕಲ್ - ಪತ್ರಿಕಾ ವಿತರಣೆ, ಮಾಧ್ಯಮ - ದಿನಬಳಕೆ ವಸ್ತು ಸಾಗಾಟ. - ಸರಕಾರ ಕಚೇರಿ, ಪೊಲೀಸ್, ನಗರ ಸ್ಥಳೀಯ ಸಂಸ್ಥೆ, ಪಂಚಾಯಿತಿ - ಅಂಚೆ, ಬ್ಯಾಂಕ್, ಎಟಿಎಂ, ದೂರವಾಣಿ - ಆಹಾರಗಳ ಹೋಮ್ ಡೆಲಿವರಿ - ಹೊಟೇಲ್‌ಗಳ ಪಾರ್ಸಲ್ ಸೇವೆ. - ಸರಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕ್ಯಾಂಟೀನ್ ಸೌಲಭ್ಯ. ಲಾಕ್‌ಡೌನ್ ಆದ ರಾಜ್ಯಗಳುದಿಲ್ಲಿ, ಪ.ಬಂಗಾಳ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಕೇರಳ, ಹರಿಯಾಣ, ಉ.ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್
from India & World News in Kannada | VK Polls https://ift.tt/2J4qTjr