ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 14,500ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 150ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕದಲ್ಲಿ 30 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ದೇಶದಲ್ಲಿ ಒಟ್ಟು 9 ಸಾವಿನ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 465 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಸಂಬಂಧ ಲೈವ್ ಮಾಹಿತಿ ವಿವರಣೆ ಇಲ್ಲಿದೆ. ಮಾರ್ಚ್ 24ರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:- ಕರ್ನಾಟಕ-33, ದೇಶ-468 ಸೋಂಕಿತ ಪ್ರಕರಣಗಳು. 9 ಮಂದಿ ಬಲಿ. -ದೇಶದ ಕೇಂದ್ರಾಡಳಿತ ಪ್ರದೇಶ ಸೇರಿ 23ರಾಜ್ಯಗಳಲ್ಲಿ ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ 74(2ಸಾವು), ಕೇರಳದಲ್ಲಿ 67, ದೆಹಲಿ 29(1 ಸಾವು), ಉತ್ತರಪ್ರದೇಶ 31, ಕರ್ನಾಟಕ 33(1ಸಾವು), ರಾಜಸ್ತಾನ 28, ತೆಲಂಗಾಣ 32, ಹರ್ಯಾಣ 26, ಪಂಜಾಬ್ 21(1ಸಾವು), ಗುಜರಾತ್ 29(1ಸಾವು), ಲಡಾಕ್ 13, ತಮಿಳುನಾಡು 9, ಆಂಧ್ರಪ್ರದೇಶ 7, ಚಂಡೀಗಡ 6, ಜಮ್ಮು ಕಾಶ್ಮೀರ 4, ಪಶ್ಚಿಮ ಬಂಗಾಳ 7(1ಸಾವು), ಮಧ್ಯಪ್ರದೇಶ 6, ಉತ್ತರಾಖಂಡ 3, ಒಡಿಶಾ 2, ಹಿಮಾಚಲ ಪ್ರದೇಶ 2(1ಸಾವು), ಬಿಹಾರ 2(1ಸಾವು) ಪುದುಚೇರಿ 1, ಛತ್ತೀಸ್‌ಗಢ 1 ಪ್ರಕರಣ ದಾಖಲಾಗಿದೆ. -ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ 35 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 424 ಪ್ರಕರಣಗಳು ಚಾಲ್ತಿಯಲ್ಲಿದೆ. -ಭಾರತದಲ್ಲಿ ಒಟ್ಟು 468 ಪ್ರಕರಣಗಳು ಈ ವರೆಗೆ ಬೆಳಕಿಗೆ ಬಂದಿದೆ. ಇವುಗಳಲ್ಲಿ 9 ಸೋಂಕಿತರನ್ನು ಕೊರೊನಾ ಬಲಿ ಪಡೆದಿದೆ.
from India & World News in Kannada | VK Polls https://ift.tt/3bxfLYD