ಇಂದಿನ ಚುಟುಕು ಸುದ್ದಿಗಳು: ಕೆಎಸ್‌ಆರ್‌ಟಿಸಿಯ ಶೇ. 50ರಷ್ಟು ಸಿಬ್ಬಂದಿಗಳಿಗೆ ರಜೆ

*1.95 ಲಕ್ಷ ರೂ. ಆನ್‌ಲೈನ್‌ ವಂಚನೆ ಹುಬ್ಬಳ್ಳಿ : ಆನ್‌ಲೈನ್‌ ವಹಿವಾಟು ನಡೆಸುತ್ತಿದ್ದ ವೇಳೆ ತಪ್ಪಾಗಿ ಮೊಬೈಲ್‌ ನಂಬರ್‌ ನಮೂದಿಸಿದ್ದಾಗಿ ಹೇಳಿದ ಅಪರಿಚಿತ ವ್ಯಕ್ತಿ ಬಳಿಕ ಒಟಿಪಿ ಪಡೆದು ಆನಲೈನ್‌ ಮೂಲಕ 1.95 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಾ. 21ರಂದು ಅಪರಿಚಿತ ವ್ಯಕ್ತಿ 6206166061 ಮೊಬೈಲ್‌ ನಂಬರ್‌ನಿಂದ ಕರೆ ಮಾಡಿ ತಾನು ವ್ಯವಹಾರ ಮಾಡುತ್ತಿದ್ದಾಗ ತಪ್ಪಾಗಿ ನಿಮ್ಮ ( ವಂಚನೆಗೆ ಒಳಗಾದವರ ) ಮೊಬೈಲ್‌ ನಂಬರ್‌ ಹಾಕಿದ್ದೆ. ಹೀಗಾಗಿ ನಿಮ್ಮ ಮೊಬೈಲ್‌ ನಂಬರಿಗೆ ಬಂದ ಓಟಿಪಿ ನೀಡುವಂತೆ ಮನವಿ ಮಾಡಿದ್ದನು. ಮೊಬೈಲ್‌ಗೆ ಬಂದ ಒಟ್ಟು 4 ಓಟಿಪಿ ನಂಬರ್‌ಗಳಲ್ಲಿಒಂದನ್ನು ಪಡೆದಿದ್ದಾನೆ. ಆ ಮೂಲಕ ಮೊಬೈಲ್‌ ನಂಬರ್‌ ಲಿಂಕ್‌ ಇದ್ದ ವಿಜಯಾ ಬ್ಯಾಂಕ್‌ ಕರೆಂಟ್‌ ಅಕೌಂಟ್‌ನಿಂದ 1,95,996 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಬಸ್‌ ಸಂಚಾರ ಸಂಪೂರ್ಣ ಸ್ಥಗಿತ ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ರಾಜ್ಯಾದ್ಯಂತ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿವೆ. ಮಾ. 31ರವರೆಗೆ ಯಾವುದೇ ಬಸ್‌ಗಳು ರಸ್ತೆಗಳಿಗೆ ಇಳಿಯುವುದಿಲ್ಲ. ಕೆಎಸ್‌ಆರ್‌ಟಿಸಿಯು ಭಾನುವಾರದಿಂದಲೇ ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಿತ್ತು. ಇದೀಗ ಮಾ. 31ರವರೆಗೆ ಸೇವೆ ಸ್ಥಗಿತಗೊಳಿಸಲಾಗಿದ್ದು, ಸಂಸ್ಥೆಗೆ ಈವರೆಗೆ 15.45 ಕೋಟಿ ರೂ. ನಷ್ಟ ಉಂಟಾಗಿದೆ. ಸಂಸ್ಥೆಯು ನಿತ್ಯ 8000 ಅಧಿಕ ಬಸ್‌ಗಳನ್ನು ರಾಜ್ಯ ಮತ್ತು ಹೊರರಾಜ್ಯದ ನಾನಾ ಪ್ರದೇಶಗಳಿಗೆ ಓಡಿಸುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ್ದರಿಂದ ಪ್ರತಿದಿನ 1000ಕ್ಕೂ ಅಧಿಕ ಬಸ್‌ಗಳ ಕಾರ್ಯಾಚರಣೆಯನ್ನು ರದ್ದುಗೊಳಿಸುತ್ತಿತ್ತು. *ಕೊರೊನಾ ಎಫೆಕ್ಟ್‌: ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗಲಿದೆ ಬಡವರಿಗೆ ಉಚಿತ ಊಟ ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಸಾಧ್ಯತೆ ಇರುವುದರಿಂದ ಬಡವರಿಗೆ ಸಮಸ್ಯೆಯಾಗದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. *ಕೆಎಸ್‌ಆರ್‌ಟಿಸಿಯ ಶೇ 50ರಷ್ಟು ಸಿಬ್ಬಂದಿಗೆ ರಜೆ ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್‌ಆರ್‌ಟಿಸಿ) ಶೇ.50ರಷ್ಟು ಅಧಿಕಾರಿ, ನೌಕರರಿಗೆ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. 50 ವರ್ಷ ಮೇಲ್ಪಟ್ಟವರು ರಜೆ ಕೋರಿದರೆ ಕೂಡಲೇ ಮಂಜೂರು ಮಾಡಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


from India & World News in Kannada | VK Polls https://ift.tt/3ag6fbQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...