ಭಾರತ ಅದ್ಭುತ ದೇಶ; ಪಾಕ್ ಜೊತೆ ವೈರತ್ವವನ್ನು ಬಯಸುವುದಿಲ್ಲ: ಶೋಯಬ್ ಅಖ್ತರ್

ಹೊಸದಿಲ್ಲಿ: ನೆರೆ-ಹೊರೆ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವ ಹೊತ್ತಿನಲ್ಲೂ ಭಾರತದ ನಾಗರಿಕರನ್ನು ಬಾಯ್ತುಂಬ ಹೊಗಳಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್‌ ಅಖ್ತರ್‌, ಭಾರತೀಯರು ಪಾಕಿಸ್ತಾನದ ಜತೆಗಿನ ಸಂಬಂಧ ವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ರಾವಿಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ನಿವೃತ್ತಿ ಬಳಿಕ ಕ್ರಿಕೆಟ್ ವೀಕ್ಷಣಾ ವಿವರಣೆಗಾರನಾಗಿ ಭಾರತದಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದಾರೆ. ಅಲ್ಲದೆ ಭಾರತದ ಪ್ರಗತಿಯ ಹಾದಿಯು ಪಾಕಿಸ್ತಾನದ ಮೂಲಕ ಹಾದು ಹೋಗುತ್ತಿದೆ ಎಂಬುದು ಮನವರಿಕೆಯಾಗಿದೆ ಎಂದಿದ್ದಾರೆ. ''ಭಾರತದ ಪ್ರಜೆಗಳಿಗೆ ಪಾಕಿಸ್ತಾನದ ಮೇಲೆ ಯಾವುದೇ ದ್ವೇಷವಿಲ್ಲ. ಅಲ್ಲಿನ ಜನರು ನಮ್ಮ ಮೇಲೆ ಯುದ್ಧ ಸಾರುವುದನ್ನು ಇಷ್ಟಪಡುವುದೇ ಇಲ್ಲ,'' ಎಂದು ಹೇಳಿದ್ದಾರೆ. ಅದೇ ಹೊತ್ತಿಗೆ ಅಲ್ಲಿನ ಟಿವಿಗಳಿಗೆ ನೋಡಿದರೆ ಯುದ್ಧ ನಾಳೆಯೇ ಸಂಭವಿಸಲಿದೆ ಎಂದು ಭಾರತೀಯ ಮಾಧ್ಯಮಗಳ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು. ಭಾರತ ಅತ್ಯಂತ ಶ್ರೇಷ್ಠ ದೇಶವಾಗಿದೆ. ಅಲ್ಲಿನ ಜನರಿಗೆ ನಮ್ಮ ಮೇಲೆ ದ್ವೇಷವಿದೆ ಎಂದು ನನಗೆ ಅನಿಸುವುದಿಲ್ಲ. ಅಲ್ಲಿನ ಜನರು ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧ ವೃದ್ಧಿಗಾಗಿ ಯತ್ನಿಸುತ್ತಿದ್ದಾರೆ,'' ಎಂದು ಹೇಳಿದರು. ಇದೇ ವೇಳೆ ಅವರು ಕೊರೊನಾ ವೈರಸ್‌ ಭೀತಿಯಿಂದಾಗಿ ಐಪಿಎಲ್‌ ಟೂರ್ನಿ ಮುಂದೂಡಿಕೆಯಾಗಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಇದರಿಂದ ಆ ದೇಶಕ್ಕೆ ನಷ್ಟವಾಗಲಿದೆ ಎಂದು ಹೇಳಿದರು. ಈ ಮೊದಲು ಹರಡಿರುವುದಕ್ಕೆ ಚೀನಾ ರಾಷ್ಟ್ರವನ್ನು ಶೋಯಬ್ ಅಖ್ತರ್ ಟೀಕಿಸಿದ್ದರು. ನಿಮ್ಮಿಂದ ಬಾವಲಿ, ನಾಯಿಗಳನ್ನು ಹೇಗೆ ತಿನ್ನಲು ಸಾಧ್ಯ ಎಂಬುದು ಅರ್ಥವಾಗುತ್ತಿಲ್ಲ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಆಕ್ರೋಶಭರಿತವಾಗಿ ನುಡಿದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TY8Bqm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...