ಕೊರೊನಾ ಪೀಡಿತರ ಕೈ ಮೇಲೆ ಮುದ್ರೆ ಒತ್ತಿದ 'ಮಹಾ' ಸರ್ಕಾರ!

ಮುಂಬೈ: ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದಲ್ಲಿ, ಕೊರೊನಾ ಸೋಂಕಿತರ ಕೈ ಮೇಲೆ ಒತ್ತುವ ಸರ್ಕಾರದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ವೈರಸ್ ತಗುಲಿರುವ ಶಂಕೆಯ ಆಧಾರದ ಮೇಲೆ ಗೃಹ ಬಂಧನಕ್ಕೆ ತುತ್ತಾಗುವವರ ಕೈ ಮೇಲೆ ಚಿಕಿತ್ಸೆಯ ದಿನಾಂಕವನ್ನು ನಮೂದಿಸಿ ಮುದ್ರೆ ಒತ್ತಲಾಗುತ್ತಿದೆ. ಇದರಿಂದಾಗಿ ನಿರ್ದಿಷ್ಟ ವ್ಯಕ್ತಿಯ ಚಿಕಿತ್ಸಾ ವಿಧಾನಗಳ ಕುರಿತು ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ರಾಜೇಶ್ ತೋಪೆ, ಕೊರೊನಾ ತಗುಲಿರುವ ಶಂಕೆ ಇರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಅವರ ಚಿಕಿತ್ಸಾ ಮಾರ್ಗಗಳ ಕುರಿತು ಅರಿಯಲು ಅವರ ಎಡಗೈ ಮೇಲೆ ದಿನಾಂಕವನ್ನು ನಮೂದಿಸಿ ಮುದ್ರೆ ಒತ್ತಾಲಾಗುತ್ತಿದೆ ಎಂದು ತೋಪೆ ಸ್ಪಷ್ಟಪಡಿಸಿದರು. ಕೊರೊನಾ ಪೀಡಿತರನ್ನು ಪತ್ತೆ ಹಚ್ಚಲು ಈ ಮುದ್ರೆ ಸಹಾಯ ಮಾಡಲಿದೆ ಎಂದು ರಾಜೇಶ್ ತೋಪೆ ಸಮರ್ಥನೆ ನೀಡಿದ್ದು, ನಿರ್ದಿಷ್ಟ ವ್ಯಕ್ತಿಗೆ ಎಷ್ಟು ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಇದು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾ ವೈರಸ್ ತಗುಲಿದರೆ ಅದೇನು ಅಪರಾಧವಲ್ಲ. ಆದರೆ ಕೊರೊನಾ ಪೀಡಿತರನ್ನು ಗುರುತಿಸಿ ಅವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವುದಷ್ಟೇ ಅಲ್ಲದೇ, ಸಮಾಜದಲ್ಲಿ ಈ ಮಾರಕ ವೈರಾಣು ಹರಡದಂತೆ ತಡೆಗಟ್ಟುವ ಜವಾಬ್ದಾರಿಯೂ ನಮ್ಮ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ವಿರೋಧ ವ್ಯಕ್ತಪಡಿಸಿರುವ ಕೆಲವರು, ಕೊರೊನಾ ಪೀಡಿತರ ವಿವರಗಳನ್ನು ಸಾರ್ವಜನಿಕಗೊಳಿಸುವುದು ಅಮಾನವೀಯ ಎಂದು ಹರಿಹಾಯ್ದಿದ್ದಾರೆ.


from India & World News in Kannada | VK Polls https://ift.tt/2TZg7RT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...