ಕಾನ್ಫರೆನ್ಸ್ ಕಾಲ್ ಕಟ್; ಮೇನಲ್ಲಿ ಐಪಿಎಲ್ ನಡೆಯುವುದು ಡೌಟ್!

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಭವಿಷ್ಯ ನಿರ್ಧರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (), ಐಪಿಎಲ್ ಫ್ರಾಂಚೈಸಿ ಮಾಲಿಕರೊಂದಿಗೆ ಮಾರ್ಚ್ 24 ಮಂಗಳವಾರದಂದು ನಿಗದಿಪಡಿಸಿದ್ದ ಕಾನ್ಫರೆನ್ಸ್ ಕಾಲ್ ಅನ್ನು ರದ್ದುಗೊಳಿಸಿದೆ. ಇದರೊಂದಿಗೆ ಐಪಿಎಲ್ 13ನೇ ಆವೃತ್ತಿಯ ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಗೆ ಮತ್ತಷ್ಟು ಕಾರ್ವೋಡ ಕವಿದಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜನೆಯಾಗುವುದು ಅನುಮಾನವೆನಿಸಿದೆ. ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲೂ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಪರಿಸ್ಥಿತಿ ತೀರಾ ಹದೆಗೆಟ್ಟಿರುವ ಈ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಭೆ ನಡೆಸುವುದು ಸಮಂಜಸವಲ್ಲ ಎಂಬುದನ್ನು ಬಿಸಿಸಿಐ ತಿಳಿಸಿದೆ. ಇದರೊಂದಿಗೆ ಮೇ ತಿಂಗಳಲ್ಲೂ ಐಪಿಎಲ್ ಆಯೋಜನೆಯಾಗುವುದು ಸಂದೇಹವೆನಿಸಿದೆ. ಈಗಿನ ಪರಿಸ್ಥಿತಿ ಪರಿಶೀಲಿಸಿದಾಗ ಕೋವಿಡ್ 19 ಸೋಂಕು ಸದ್ಯದಲ್ಲಿ ನಿಯಂತ್ರಣಕ್ಕೆ ಬರುವುದು ಅಸಾಧ್ಯವೆನಿಸಿದೆ. ಐಪಿಎಲ್‌ನಲ್ಲಿ ಕೇವಲ ಭಾರತೀಯ ಆಟಗಾರರಷ್ಟೇ ಅಲ್ಲದೆ ವಿದೇಶಿ ಆಟಗಾರರು ಭಾಗವಹಿಸುತ್ತಿದ್ದಾರೆ. ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ವೀಸಾ ನಿರ್ಬಂಧವನ್ನು ಹೇರಲಾಗಿದೆ. ಈ ಮೊದಲು ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿತ್ತು. ''ಮೊದಲನೆಯದಾಗಿ ಮಾನವೀಯತೆ. ಉಳಿದೆಲ್ಲ ವಿಚಾರಗಳಿಗೂ ಎರಡನೇ ಆದ್ಯತೆ. ಪರಿಸ್ಥಿತಿ ಸುಧಾರಿಸಿಲ್ಲ. ಆದ್ದರಿಂದ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಐಪಿಎಲ್ ನಡೆಯದಿದ್ದರೆ ಹಾಗೆಯೇ ಆಗಲಿ'' ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಿಕ ನೆಸ್ ವಾಡಿಯಾ ತಿಳಿಸಿದರು. ''ಈ ಹಂತದಲ್ಲಿ ಯಾವುದನ್ನು ಚರ್ಚಿಸುವುದಲ್ಲಿ ಅರ್ಥವಿಲ್ಲ. ಇಡೀ ದೇಶವೇ ಲಾಕ್‌ಡೌನ್ ಆಗಿದೆ. ನಾವು ಐಪಿಎಲ್‌ಗಿಂತಲೂ ಮುಖ್ಯವಾದ ವಿಚಾರಗಳನ್ನು ಎದುರಿಸಬೇಕಿದೆ'' ಎಂದು ಮಗದೊಂದು ಪ್ರಾಂಚೈಸಿ ಮಾಲಿಕರು ಪ್ರತಿಕ್ರಿಯಿಸಿದರು. ''ಈ ಸಮಯದಲ್ಲಿ ಐಪಿಎಲ್ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಅಪ್ರಸ್ತುತವಾಗಿದೆ. ಮುಖ್ಯವಾದ ಏಕೈಕ ವಿಷಯದಲ್ಲಿ ನಾವು ವಾಸಿಸುತ್ತಿದ್ದೇವೆ ಮತ್ತು ಮಹಾ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿ ನಾವೆಲ್ಲರೂ ಅನೇಕ ಜನರಿಗೆ ಸಹಾಯ ಮಾಡಲು ಹೋರಾಡುತ್ತಿದ್ದೇವೆ'' ಎಂದು ನೆಸ್ ವಾಡಿಯಾ ಸೇರಿಸಿದರು. ''ಸರಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ನಾವು ಆಗಾಗ್ಗೆ ಸರಕಾರವನ್ನು ಟೀಕಿಸುತ್ತೇವೆ. ಆದರೆ ಅವರು ಕೈಗೊಂಡ ಕ್ರಮಗಳನ್ನು ನಾವು ಶ್ಲಾಘಿಸಬೇಕು. ದೇಶದಲ್ಲಿ ಎಲ್ಲ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ. ಇದು ಪ್ರಮುಖ ಹಾಗೂ ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೂ ಪರಿಸ್ಥಿತಿ ಸುಧಾರಿಸುವ ಭರವಸೆಯನ್ನು ಬಿಸಿಸಿಐ ಹೊಂದಿದೆ'' ಎಂದರು. ''ಒಲಿಂಪಿಕ್ ಕ್ರೀಡಾಕೂಟ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ ಅದರ ಮುಂದೆ ಐಪಿಎಲ್ ತೀರಾ ಚಿಕ್ಕದಾಗಿದೆ. ಸಮಸ್ಯೆಗಳು ಹೆಚ್ಚುತ್ತಿದ್ದು, ಐಪಿಎಲ್ ಆಯೋಜಿಸುವುದು ಕಷ್ಟಕರವೆನಿಸಿದೆ. ಈ ಸಂದರ್ಭದಲ್ಲಿ ವಿದೇಶ ವೀಸಾಗಳನ್ನು ಅನುಮತಿಸುವ ಕುರಿತಾಗಿಯೂ ಸರಕಾರ ಚಿಂತಿಸುತ್ತಿಲ್ಲ'' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2xZhUO0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...