ಕೊರೊನಾ ನಂತರ ಇದೀಗ ಚೀನಾದಲ್ಲಿ ಹ್ಯಾಂಟ ವೈರಸ್‌ಗೆ ಓರ್ವ ಬಲಿ

ಬೀಜಿಂಗ್‌: ಕೊರೊನಾದಿಂದ ಹೊಡೆತ ತಿಂದು ಇದೀಗಷ್ಟೇ ಚೇತರಿಸಿಕೊಂಡಿರುವ ಚೀನಾದಲ್ಲಿ ಮತ್ತೊಂದು ವೈರಸ್‌ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಈ ವೈರಸ್‌ಗೆ ಅದಾಗಲೇ ಒಬ್ಬರು ಬಲಿಯಾಗಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿನ ಯುನ್ನಾನ್‌ ಪ್ರಾಂತ್ಯದಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಇದೇ ವೈರಾಣುವಿನಿಂದ ಸಾವನ್ನಪ್ಪಿದ್ದಾರೆ. ಅವರು ಕೆಲಸಕ್ಕಾಗಿ ಶಂಡಾಂಗ್‌ ಪ್ರಾಂತ್ಯಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇದೇ ವೈರಸ್‌ 32 ಜನರಲ್ಲಿ ಕಾಣಿಸಿಕೊಂಡಿದೆ ಎಂಬುದಾಗಿ ಚೀನಾದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. ಈ ಸಾವಿನ ಬೆನ್ನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಂಟ್‌ ವೈರಸ್‌ ಟ್ರೆಂಡ್‌ನಲ್ಲಿದ್ದು. ಇದು ಮತ್ತೊಂದು ಕೋವಿಡ್‌19 ಸೋಂಕುನಂತಾಗಲಿದೆ ಎಂಬ ಭಯ ಜನರಲ್ಲಿ ಆವರಿಸಿದೆ. ಆದರೆ ಹಾಗಿಲ್ಲ ಎನ್ನುತ್ತವೆ ವೈಜ್ಞಾನಿಕ ಮಾಹಿತಿಗಳು. ಕೊರೊನಾ ವೈರಸ್‌ಗೂ ಹ್ಯಾಂಟ ವೈರಸ್‌ಗೂ ವ್ಯತ್ಯಾಸಗಳಿವೆ. ಹ್ಯಾಂಟ ವೈರಸ್‌ ಗಾಳಿಯಲ್ಲಿ ಹರಡುವುದಿಲ್ಲ. ಹ್ಯಾಂಟ ವೈರಸ್‌ ಸೋಂಕು ಮೊದಲಿಗೆ ದಂಶಕ (ಇಲಿ ಜಾತಿಯ ಪ್ರಾಣಿಗಳು) ಗಳಿಗೆ ತಗುಲುತ್ತದೆ. ಆದರೆ ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ. ಆದರೆ ಈ ಪ್ರಾಣಿಗಳ ಮಲ, ಮೂತ್ರ, ಲಾಲಾರಸಗಳನ್ನು ಮನುಷ್ಯರು ಸ್ಪರ್ಷಿಸಿದಾಗ ಈ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆರೋಗ್ಯವಂಥ ಮನುಷ್ಯರಿಗೂ ಈ ವೈರಾಣು ಸೋಂಕು ತಗುಲಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ದಂಶಕಗಳ ಮಲ, ಮೂತ್ರ, ಲಾಲಾರಸ ಸ್ಪರ್ಷಿಸಿ ನಂತರ ಕಣ್ಣು, ಮೂಗು, ಬಾಯಿ ಸ್ಪರ್ಷಿಸಿದರೆ ಆ ವ್ಯಕ್ತಿಗಳಿಗೆ ಈ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ವೈರಾಣು ತಗುಲಿದರೆ ಆರಂಭದಲ್ಲಿ ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ಹೊಟ್ಟೆನೋವು, ತಲೆತಿರುಗುವಿಕೆ, ಶೀತ ಮತ್ತು ವಾಕರಿಕೆ, ವಾಂತಿ, ಅತಿಸಾರದಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರದ ದಿನಗಳಲ್ಲಿ ಶ್ವಾಸಕೋಶಗಳಿಗೆ ನೀರು ತುಂಬಿಕೊಳ್ಳುವುದು, ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಈ ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2J7AWEn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...