ನವದೆಹಲಿ: ಬರೋಬ್ಬರಿ ಏಳು ವರ್ಷಗಳ ಬಳಿಕ ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಾಲ್ವರೂ ಅಪರಾಧಿಗಳನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ಹಂತಕರಿಗೆ ನೀಡಲಾಗಿದೆ ಎಂದು ಘೋಷಿಸುತ್ತಿದ್ದಂತೇ ಜಲಿನ ಮುಂಭಾಗದಲ್ಲಿ ಇದೇ ಸುದ್ದಿಗಾಗಿ ಕಾಯುತ್ತಿದ್ದ ಸಾವಿರಾರು ಜನ ಕುಣಿದು ಕುಪ್ಪಳಿಸಿದರು. ಮಗಳನ್ನು ನೆನೆದು ನಿರ್ಭಯಾ ಪೋಷಕರೂ ಕೂಡ ಕಣ್ಣೀರಾದರು. ಆದರೆ ಈ ಎಲ್ಲಾ ಬೆಳವಣಿಗೆಗಳಿಗಿಂತ ಮೊದಲು ಜೈಲಿನ ಒಳಗಡೆ ನಿರ್ಭಯಾ ಹಂತಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಜೈಲು ಅಧಿಕಾರಿಗಳು ಹೊರಗಡೆವಿದ್ದಾರೆ. ಮಧ್ಯರಾತ್ರಿ 2:15ರವೆರೆಗೂ ಸುಪ್ರೀಂಕೋರ್ಟ್‌ನಲ್ಲಿ ನಡೆದ ಹೈಡ್ರಾಮಾದಿಂದಾಗಿ, ತಮ್ಮ ವಕೀಲ ಹೇಗಾದರೂ ಮಾಡಿ ತಮ್ಮನ್ನು ಬದುಕಿಸಿಕೊಳ್ಳುತ್ತಾನೆ ಎಂಬ ಹಂತಕರ ಆಸೆಗೆ ಕೊನೆಗೂ ತಣ್ಣೀರೆರಚಲಾಯಿತು. ಸುಪ್ರೀಂಕೋರ್ಟ್ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ ಬಳಿಕ ನೇಣಿಗೆ ಕೊರಳೊಡ್ಡುವುದು ಹಂತಕರಿಗೆ ಅನಿವಾರ್ಯವಾಯಿತು. ಗಲ್ಲುಶಿಕ್ಷೆ ಖಾಯಂ ಆದ ಬಳಿಕ ನಾಲ್ವರೂ ಹಂತಕರನ್ನು ಬೆಳಗಿನ ಜಾವ 3:30ಕ್ಕೆ ಎಬ್ಬಿಸಲಾಯಿತು. ಸ್ನಾನ ಮಾಡಲು ಒಲ್ಲೆ ಎಂದ ನಾಲ್ವರಿಗೂ ತಿನ್ನಲು ಏನು ಬೇಕೆಂದು ಕೇಳಿದಾಗ ನಾಲ್ವರೂ ತಿನ್ನಲು ನಿರಾಕರಿಸಿದರು. ಆದರೆ ಅಧಿಕಾರಿಗಳ ಆದೇಶದ ಮೇರೆಗೆ ಸ್ವಲ್ಪ ಊಟ ಮಾಡಿದರು. ಬಳಿಕ ನಾಲ್ವರನ್ನೂ ಪ್ರತ್ಯೇಕ ಸೆಲ್‌ನಲ್ಲಿ ಇರಿಸಿ ತೀವ್ರ ನಿಗಾ ಇಡಲಾಯಿತು. ಗಲ್ಲುಶಿಕ್ಷೆ ಸಮೀಪಿಸುತ್ತಿದ್ದಂತೇ ಆತಂಕಕ್ಕೆ ಒಳಗಾದ ಹಂತಕರು, ಏಕಾಏಕಿ ಜೋರಾಗಿ ಅಳಲು ಪ್ರಾರಂಭಿಸಿದರು. ಬಳಿಕ ಜಿಲ್ಲಾ ವೈದ್ಯಾಧಿಕಾರಿ ಜೈಲಿಗೆ ಆಗಮಿಸಿ ನಾಲ್ವರ ವೈದ್ಯಕೀಯ ಪರೀಕ್ಷೆ ನಡೆಸಿದರು. ಹಂತಕರ ತೂಕ, ಎತ್ತರ ಎಲ್ಲವನ್ನೂ ಅತ್ಯಂತ ಜಾಗರೂಕತೆಯಿಂದ ಪರೀಕ್ಷೆ ನಡೆಸಿ ಬಳಿಕ ಗಲ್ಲುಶಿಕ್ಷೆ ಜಾರಿಯ ಪ್ರಕ್ರಿಯೆನ್ನು ಆರಂಭಿಸಲಾಯಿತು. ಬೆಳಗ್ಗೆ 5 ಗಂಟೆಗೆಲ್ಲಾ ಜೈಲು ಸಿಬ್ಬಂದಿ ನಾಲ್ವರನ್ನೂ ವಧಾಸ್ಥಾನಕ್ಕೆ ಕರೆದೊಯ್ದರು. ನೇಣುಗಂಬ ನೋಡುತ್ತಿದ್ದಂತೇ ಮತ್ತಷ್ಟು ಆಘಾತಕ್ಕೊಳಗಾದ ಹಂತಕರು, ಬೇರೆ ವಿಧಿ ಇಲ್ಲದೇ ನಾಲ್ವರೂ ಹಂತಕರು ಬೆಳಗ್ಗೆ 5:30ಕ್ಕೆ ನೇಣಿಗೆ ಕೊರಳೊಡಿದ್ದರು. ಈ ವೇಳೆ ಇಡೀ ತಿಹಾರ್ ಜೈಲನ್ನು ಬಂದ್ ಮಾಡಲಾಗಿತ್ತು. ಯಾವುದೇ ಕೈದಿಗೆ ಹೊರಗರೆ ಬರಲು ಅವಕಾಶ ನೀಡಲಾಗಲಿಲ್ಲ ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗೆ ನಿರ್ಭಯಾಳನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದ ನಾಲ್ವರೂ ಹಂತಕರು, ಕ್ಷಣ ಕ್ಷಣಕ್ಕೂ ಸಾವಿಗೆ ಎದುರು ನೋಡುತ್ತಾ ಕೊನೆಗೆ ಅತ್ಯಂತ ಯಾತನಾಮಯ ಸಾವಿಗೆ ಶರಣಾಗಿದ್ದಾರೆ.
from India & World News in Kannada | VK Polls https://ift.tt/3bczAUS