ಸಿಎಎ ವಿರೋಧಿಸಿದ್ದ ಮಹತಿರ್ ಔಟ್: ಮಲೇಷ್ಯಾ ನೂತನ ಪ್ರಧಾನಿಯಾಗಿ ಯಾಸಿನ್ ನೇಮಕ!

ಕ್ವಾಲಾಲಂಪುರ್: ಮಹತ್ವದ ಬೆಳವಣಿಗೆಯೊಂದರಲ್ಲಿ ಮಲೇಷ್ಯಾದಲ್ಲಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಪ್ರಮಾಣ ವಚನ ಸ್ವೀಕರಿಸಿದ್ದು, ಇಸ್ತಾನಾ ನೆಗರಾದಲ್ಲಿರುವ ನ್ಯಾಷನಲ್ ಪ್ಯಾಲೇಸ್'ನಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಹಿದ್ದೀನ್ ಯಾಸಿನ್, ತಮಗೆ 114 ಸದಸ್ಯರ ಬೆಂಬಲವಿರುವುದಾಗಿ ಸ್ಪಷ್ಟಪಡಿಸಿದರು. ಆದರೆ ಯಾಸಿನ್ ನೇಮಕವನ್ನು ವಿರೋಧಿಸಿರುವ ನಿರ್ಗಮಿತ ಪ್ರಧಾನಿ ಮಹತೀರ್ ಮೊಹ್ಮದ್, ರಾಜಕೀಯ ಅಸ್ಥಿರತೆಯಿಂದ ಕಂಗಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹತೀರ್ ಮೊಹ್ಮದ್ ತಮ್ಮ ಉತ್ತರಾಧಿಕಾರಿತಾಗಿ ಅನ್ವರ್ ಇಬ್ರಾಹಿಂ ಅವರನ್ನು ನೇಮಿಸಲು ಮುಂದಾಗಿದ್ದರು. ಆದರೆ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದ ಮೈತ್ರಿಕೂಟ, ಏಕಾಏಕಿ ಮುಹಿದ್ದೀನ್ ಯಾಸಿನ್ ಅವರಿಗೆ ಬೆಂಬಲ ಸೂಚಿಸಿತು. ಈ ಹಿನ್ನೆಲೆಯಲ್ಲಿ ಮಹತೀರ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಎಎ ಜಾರಿ ವಿರೋಧಿಸಿ ಭಾರತದ ಕೆಂಗೆಣ್ಣಿಗೆ ಗುರಿಯಾಗಿದ್ದ ಮಹತೀರ್, ಮಲೇಷ್ಯಾದಿಂದ ತಾಳೆ ಎಣ್ಣೆ ಆಮದನ್ನು ಭಾರತ ನಿಲ್ಲಿಸಿದ ಮೇಲೆ ತಣ್ಣಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.


from India & World News in Kannada | VK Polls https://ift.tt/2IedIf3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...