ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕದಲ್ಲಿ 40 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ದೇಶದಲ್ಲಿ ಒಟ್ಟು 10 ಸಾವಿನ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 600ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಸಂಬಂಧ ಲೈವ್ ಮಾಹಿತಿ ವಿವರಣೆ ಇಲ್ಲಿದೆ. ಮಾರ್ಚ್ 26ರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:- ಕರ್ನಾಟಕ-41, ದೇಶ-606 ಸೋಂಕಿತ ಪ್ರಕರಣಗಳು. 10 ಮಂದಿ ಬಲಿ. -ಚೀನಾ 3200 ಕ್ಕೂ ಹೆಚ್ಚು ಮಂದಿಯನ್ನು ಕಳೆದುಕೊಂಡಿದೆ. ಸ್ಪೇನ್ ನಲ್ಲಿ 3600 ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಬಗ್ಗೆ ವರದಿ ತಿಳಿಸಿದೆ. -ವಿಶ್ವದಾದ್ಯಂತ ಸೋಂಕಿಗೆ ಮೃತಪಟ್ಟವರ ಸಂಖ್ಯೆ 20 ಸಾವಿರ ದಾಟಿಗೆ. ಇಟಲಿಯಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದ್ದು 7000 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. -ಮುಂಬೈನಲ್ಲಿ ಮತ್ತೆರಡು ಪ್ರಕರಣ ಬೆಳಕಿಗೆ 124ಕ್ಕೆ ಏರಿದ ಸೋಂಕಿತ ಪ್ರಕರಣ
from India & World News in Kannada | VK Polls https://ift.tt/2WQt4yS