ವಿಶ್ವಾದ್ಯಂತ ಕಾಡುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಜೆಗಳಾದ ನಾವೇನು ಮಾಡಬೇಕು? ನಮ್ಮ ಕರ್ತವ್ಯವೇನು? ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾದ ದಿನಗಳಲ್ಲಿ ದೇಶಕ್ಕೆ ನಮ್ಮ ಕೊಡುಗೆ ಏನಿರಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿರ್ವಿಜ್ಞಾನಿಗಳಾದ ಅವರು ವಿಜಯ ಕರ್ನಾಟಕಕ್ಕೆ ತಮ್ಮ ರವಾನಿಸಿದ್ದಾರೆ. ‘ನಮಗಾಗಿ ಹಗಲಿರುಳು ಶ್ರಮಿಸುವ ವೈದ್ಯಲೋಕಕ್ಕೆ,ರಕ್ಷಣಾ ಸೈನಿಕ ಸಮೂಹಕ್ಕೆ, ಶುಚಿತ್ವವನ್ನು ಕಾಪಾಡುವ ಪೌರ ಕಾರ್ಮಿಕ ಸಮೂಹಕ್ಕೆ, ಆಗುಹೋಗುಗಳ ವರದಿ ನೀಡುವ ಸಮೂಹ ಮಾಧ್ಯಮ ಲೋಕಕ್ಕೆ ಒಳ್ಳೆಯ ಆಯುರಾರೋಗ್ಯವನ್ನು ಭಗವಂತ ನೀಡಲಿ ಎಂಬ ಪ್ರಾರ್ಥನೆಯು ನಮ್ಮಲ್ಲಿರಲಿ.’ ‘ಬರಬೇಕಾದ ಸೌಲಭ್ಯ ಸಿಗದಿದ್ದಾಗ ಆ ಸಮುದಾಯಕ್ಕೆ ಅನ್ಯಾಯ, ಈ ಸಮುದಾಯಕ್ಕೆ ಅನ್ಯಾಯ ಎಂದು ಗುಂಪುಗೂಡಿ ಮೆರವಣಿಗೆ, ಸತ್ಯಾಗ್ರಹ ಇತ್ಯಾದಿ ಪ್ರತಿಭಟನೆ ಮಾಡುತ್ತಾರೆ. ಇದು ತಪ್ಪು ಎಂದು ಹೇಳುತ್ತಿಲ್ಲ. ಮಾಡಲೇ ಬೇಕು. ಆದರೆ ಕೇವಲ ಸೌಲಭ್ಯ, ಲಾಭಕ್ಕೇ ನಮ್ಮ ಒಗ್ಗಟ್ಟು ಸಿಮಿತವಾಗಬಾರದು ಅಲ್ವೇ?' 'ಇಡೀ ಭಾರತೀಯ ಸಮುದಾಯಕ್ಕೇ ಈ ಘೋರ ವ್ಯಾಧಿಯು ಮಾರಕವಾಗಿದೆ. ವ್ಯಾಧಿಯು ತನ್ನ ಅನುದಾನಕ್ಕೆ ಯಾವ ಸಮುದಾಯದ ಪರವೂ ನೋಡುವುದಿಲ್ಲ. ಅದು ಕೇವಲ ಸಂಪರ್ಕ ಸ್ಪರ್ಶವನ್ನು ಮಾತ್ರ ನೋಡುತ್ತದೆ. ಇಂತಹ ಘೋರ ವ್ಯಾಧಿಯನ್ನು ತಡೆಯಲು ಕೇವಲ ನಮ್ಮನ್ನು ನಾವೇ ಗೃಹಬಂಧನದಲ್ಲಿಟ್ಟು ಹೊರ ಸಂಪರ್ಕವಾಗದಂತೆ ನೋಡುಕೊಳ್ಳುವುದು ದೇಶದ ಸ್ವಾಸ್ಥ್ಯಕ್ಕಾಗಿ ನಮ್ಮ ಮಹಾ ತ್ಯಾಗ ಆಗಲೇ ಬೇಕು. ಇವತ್ತು ಅವರ ಹಬ್ಬ, ಇವರ ಹಬ್ಬ ಎಂದು ಆಚರಣೆಗೆ ಹೊರಟರೆ ನಾಳೆ ಮಹಾಮಾರಿ ಹಬ್ಬವೇ ಆದೀತು.’ ‘ಇದಕ್ಕಾಗಿ ನಮ್ಮ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬರಬೇಕಾಯಿತು.ಇಡೀ ಭಾರತವನ್ನೇ ಬಂಧಿಸಿ ಇಡುವ ಒಂದು ಕಾರ್ಯ. India. ಆದರೆ ಇದು ಅನುಷ್ಟಾನಕ್ಕೆ ಬರಬೇಕಾದರೆ ಪ್ರಜಾ ಸಹಾಯ ಬೇಕೇ ಬೇಕು. ಈ 21 ದಿನದ lock down ಕಾರ್ಯಕ್ಕೆ ನಾವು ಸಜ್ಜಾಗಬೇಕಿದೆ. ಆದರೆ ಇದರ ಉದ್ದೇಶವನ್ನು ಕೆಲವರು ತಪ್ಪು ಸಂದೇಶ ನೀಡಿಯೋ, ಕೆಲವರು ತಾವು ಮಹಾಬುದ್ಧಿವಂತರೆಂದೋ, ಕೆಲವರು ನಮ್ಮ ಧರ್ಮಕ್ಕೆ ವಿರೋಧ ಎಂದೋ ತಪ್ಪು ಮಾಹಿತಿ ನೀಡಿ ವಿಫಲಗೊಳಿಸಬಹುದು. ಎಲ್ಲಾದರೂ ವಿಫಲವಾದರೆ ಬಹುದೊಡ್ಡ ಬೆಲೆ ಕೊಡಬೇಕಾದೀತು. ನಮ್ಮ ಮುಂದಿನ ಪೀಳಿಗೆಯಿಂದ ಪೀಳಿಗೆಗೆ ಮಾರಕ ಪ್ರಸಾದವನ್ನೇ ಕೊಡಬೇಕಾದೀತು. ಶಾಶ್ವತವಾಗಿ ನಮ್ಮ ದೇಶವು ರೋಗಗ್ರಸ್ತ ದೇಶ ಎಂದು ಕರೆಸಿಕೊಳ್ಳಬೇಕಾದೀತು. ಹಾಗೇನಾದರೂ ಆದರೆ ನಮ್ಮ ಹುಟ್ಟು ಕೇವಲ ಕೀಟಗಳ ಹುಟ್ಟು ಸಾವಿನಂತಾದೀತೇ ವಿನಃ ಯಾವ ಪ್ರಯೋಜನವೂ ಇಲ್ಲದಂತಾದೀತು.’ ‘ಕೆಲವರು ಮೊಂಡು ವಾದ ಮಾಡಿ ಹೊರಗೆ ಹೋದಾರು. ಪೋಲೀಸರು ಎಷ್ಟು ಕೆಲಸ ಮಾಡಿಯಾರು? ಅವರಿಗೂ ಮನೆ ಮಠಗಳಿಲ್ಲವೇ? ಅವರೂ ರೋಗ ಪೀಡಿತರಾದರೆ ಅವರನ್ನು ಸಲಹುವವರು ಯಾರು? ಇಂತಹ ವಿಚಾರಧಾರೆಯನ್ನು ವಿದ್ಯಾವಂತರಾದ ನಾವು ತಿಳಿಯದವರಿಗೆ ಹೇಳಬೇಕು. ಈ ಶಕ್ತಿ ಇರುವುದು ಆಯಾಯ ಸಮುದಾಯಗಳ ಮುಖ್ಯಸ್ಥರಿಗೆ ಮಾತ್ರ. ಮಠಾಧಿಪತಿಗಳು, ಸಂಘ ಸಂಸ್ಥೆಗಳು, ಸಮದಾಯಗಳ ಮುಖ್ಯಸ್ಥರು ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣ, ಸಂದೇಶವಾಹಕಗಳ ಮೂಲಕ, ಕರೆ ಮಾಡುವುದರ ಮೂಲಕ ಮಾಡಬೇಕು. ಮೋದಿಗೆ ಹೆಸರು ಬರುತ್ತೆ, ಬಿಜೆಪಿಗೆ ಹೆಸರು ಬರುತ್ತೆ ಎಂಬ ಮತ್ಸರದಿಂದ ಮಾಡಬಾರದ್ದನ್ನು ಮಾಡಲು ಹೋಗಬಾರದು. ಈ ದೇಶದ ಎಲ್ಲಾ ನಾಗರಿಕರೂ ಭಾರತೀಯರೇ. ಹಾಗಾಗಿ ನಿಮ್ಮ ನಿಮ್ಮ ವ್ಯಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಇತ್ಯಾದಿ ಮಾಧ್ಯಮಗಳ ಮೂಲಕ ಕಾರ್ಯವನ್ನು ಮಾಡಿಸಿ, ಈ ದೇಶದ ಉಳಿವಿಗೆ ನಮ್ಮ ಸೇವೆಯನ್ನು ಮಾಡೋಣ. ಜೈ ಹಿಂದ್.’ - ಪ್ರಕಾಶ್ ಅಮ್ಮಣ್ಣಾಯ
from India & World News in Kannada | VK Polls https://ift.tt/2xniViC