21 ದಿನ ತುಂಬ ದೀರ್ಘವಾದುದು: ಲಾಕ್‌ಡೌನ್‌ಗೆ ಪ್ರಶಾಂತ್ ಕಿಶೋರ್ ಅಪಸ್ವರ!

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಪ್ರಧಾನಿ ಮೋದಿ ಕರೆ ನೀಡಿರುವ 21 ದಿನಗಳ ಆದೇಶಕ್ಕೆ ಇಡೀ ದೇಶ ಬೆಂಬಲ ವ್ಯಕ್ತಪಡಿಸಿದೆ. ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ದೇಶದ ಜನತೆ, ಈ ಮೂಲಕ ಮಾರಕ ಕೊರನಾ ವೈರಸ್ ವಿರುದ್ಧ ಸರ್ಕಾರ ಹೂಡಿರುವ ಸಮರಕ್ಕೆ ಸಾಥ್ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ಲಾಕ್‌ಡೌನ್ ಆದೇಶಕ್ಕೆ ಅಪಸ್ವರ ಎತ್ತಿರುವ ಉಚ್ಛಾಟಿತ ಜೆಡಿಯು ನಾಯಕ ಹಾಗೂ ರಾಜನೀತಿಜ್ಞ ಪ್ರಶಾಂತ್ ಕಿಶೋರ್, 21 ದಿನಗಳ ಲಾಕ್‌ಡೌನ್ ತುಂಬ ದೀರ್ಘವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವನ್ನು ಲಾಕ್‌ಡೌನ್ ಮಾಡುವ ಆದೇಶ ಸರಿಯಾದುದಾದರೂ, 21 ದಿನ ಅತ್ಯಂತ ದೀರ್ಘ ಸಮಯ ಎಂದು ಚಕಾರ ಎತ್ತಿದ್ದಾರೆ. ಅಲ್ಲದೇ ಮಾರಕ ವೈರಾಣು ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಅತ್ಯಂತ ತಡವಾಗಿ ಸಿದ್ಧವಾಗಿದೆ ಎಂದು ಹೇಳಿರುವ ಪ್ರಶಾಂತ್ ಕಿಶೋರ್, ದೇಶಕ್ಕೆ ಗಂಡಾಂತರಕಾರಿ ದಿನಗಳು ಕಾದಿವೆ ಎಂದು ಎಚ್ಚರಿಸಿದ್ದಾರೆ. ಆದರೆ ಪ್ರಶಾಂತ್ ಕಿಶೋರ್ ಅವರ ಟ್ವೀಟ್‌ಗೆ ವಿರೋಧ ವ್ಯಕ್ತವಾಗಿದ್ದು, ಇಡೀ ದೇಶ ಒಂದಾಗಿ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ವಿರೋಧದ ಧ್ವನಿಯ ಅವಶ್ಯಕತೆ ಇಲ್ಲ ಎಂದು ಹಲವರು ಪ್ರಶಾಂತ್ ಕಿಶೋರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


from India & World News in Kannada | VK Polls https://ift.tt/3ajq7Lc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...