ರಷ್ಯಾಕ್ಕೆ ಸುನಾಮಿ ಕಂಟಕ, ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಎಚ್ಚರಿಕೆ!

: ರಷ್ಯಾದ ಕುರಿಲ್ ದ್ವೀಪ ಭಾಗದಲ್ಲಿ ಮಾ.25 ರಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.8 ದಾಖಲಾಗಿದೆ ಎಂದು ಭೂ ವೈಜ್ಞಾನಿಕ ಸಮೀಕ್ಷೆಯು ತಿಳಿಸಿದೆ. ಜಪಾನ್‌ನ ಉತ್ತರದ ಕುರಿಲ್ ನಿಂದ ಸೆವೆರೋದ ಆಗ್ನೇಯಕ್ಕೆ, 219 ಕಿಲೋಮೀಟರ್ ಅಂತರದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದ್ದು, ಇದು 56 ಕಿಲೋಮೀಟರ್ (37 ಮೈಲಿ) ಆಳದಲ್ಲಿತ್ತು. ಸಾಗರದಾಳದಲ್ಲಿ ಭೂಕಂಪ ಸಂಭವಿಸುವುದರಿಂದ ಸುನಾಮಿಗಳು ಕಾಣಿಸಿಕೊಳ್ಳುತ್ತವೆ. ಇಂದು ದ್ವೀಪ ಭಾಗದಲ್ಲಿ ಭೂಕಂಪ ಸಂಭವಿಸಿರುವುದರಿಂದ ಸುನಾಮಿ ಏಳಬಹುದು ಎಂದು ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಕಲ ಸಿದ್ಧತೆ ನಡೆಸಿಕೊಳ್ಳುವಂತೆಯೂ ಸೂಚಿಸಿದ್ದಾರೆ. ರಷ್ಯಾದಲ್ಲಿ ಕೊರೊನಾ ಪ್ರಕರಣಗಳಿಂದ ಭಯಭೀತಗೊಂಡಿರುವ ಜನತೆಗೆ, ಈ ಮಧ್ಯೆ ಸುನಾಮಿ ಕಂಟಕ ಎದುರಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಲ್ಲಿನ ಸಮುದ್ರ ಅಲೆಗಳಲ್ಲಿ ಕೊಂಚ ಬದಲಾವಣೆ ಕಂಡಿದೆ. ಆದರೆ, ರಷ್ಯಾದ ದ್ವೀಪದಲ್ಲಿ ಸುನಾಮಿ ಕಾಣಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಅಲ್ಲಿನ ಅಧಿಕೃತ ಮೂಲಗಳು ಹೇಳಿವೆ.


from India & World News in Kannada | VK Polls https://ift.tt/33HjgsH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...