ವಾಷಿಂಗ್ಟನ್ ಡಿಸಿ: ವಿಶ್ವಾದ್ಯಂತ ಭೀತಿ ಹೆಚ್ಚಾಗುತ್ತಿದ್ದು, ಡೆಡ್ಲಿ ವೈರಸ್‌ಗೆ ಅಮೆರಿಕದಲ್ಲೇ ಸಾವಿರಾರು ಜನರು ಬಲಿಯಾಗಿದ್ದಾರೆ. ಬುಧವಾರ ಒಂದೇ ದಿನ ಅಮೆರಿಕದಲ್ಲಿ 400ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ. ಮುಂದುವರಿದ ರಾಷ್ಟ್ರವಾದ ಅಮೆರಿಕದಲ್ಲೂ ಕೊರೊನಾ ವೈರಸ್ ಅಟ್ಟಹಾಸ ಮಿತಿಮೀರಿದ್ದು, ಇಡೀ ದೇಶಕ್ಕೇ ಸೋಂಕು ಹರಡುತ್ತಿದೆ. ಅಮೆರಿಕದಲ್ಲಿ ಫೆಬ್ರವರಿ 29ರಂದು ಕೊರೊನಾ ವೈರಸ್‌ಗೆ ಮೊದಲ ಬಲಿಯಾಗಿದ್ದು, ನಂತರ ಮೂರೇ ವಾರದಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ವೈರಸ್ ಸೋಂಕು ನಿಯಂತ್ರಿಸಲು ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಬದಲಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಮಾರ್ಚ್ 24ರ ವೇಳೆಗೆ ಅಮೆರಿಕದಲ್ಲಿ ಕೊರೊನಾಗೆ 600ಕ್ಕೂ ಅಧಿಕ ಜನರು ಬಲಿಯಾಗಿದ್ದರು. ನಂತರ ಬುಧವಾರ ಬೆಳಗ್ಗೆ ವೇಳೆಗೆ 900 ತಲುಪಿತ್ತು. ಆದರೀಗ ಮಾರ್ಚ್ 25, 2020 ರಾತ್ರಿ ವೇಳೆಗೆ ಮಹಾಮಾರಿ ಕೊರೊನಾ ವೈರಸ್‌ಗೆ ಸಾವಿನ ಸಂಖ್ಯೆ 1041 ಎಂದು ಜಾನ್ಸ್ ಹಾಪ್ಕಿನ್ಸ್ ವಿವಿ ಮಾಹಿತಿ ನೀಡಿದೆ. ಅಲ್ಲದೆ, ಅಮೆರಿಕದಲ್ಲೇ 68 ಸಾವಿರಕ್ಕೂ ಅಧಿಕ ಮಂದಿ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಮಾರ್ಚ್ 25, 2020ರ ವೇಳೆಗೆ ವಿಶ್ವಾದ್ಯಂತ ಕೊರೊನಾ ವೈರಸ್‌ಗೆ 21 ಸಾವಿರಕ್ಕೂ ಅಧಿಕ ಜನತೆ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು, ಆದರೆ ಅಲ್ಲಿಗಿಂತ ಇಟಲಿ, ಸ್ಪೇನ್, ಇರಾನ್‌ನಲ್ಲಿ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿಗೀಡಾದವರ ಸಂಖ್ಯೆಯಲ್ಲಿ ಟಾಪ್ 3ನೇ ಸ್ಥಾನದಲ್ಲಿದೆ. ಇನ್ನು, ಚೀನಾ 4 ನೇ ಸ್ಥಾನ ಪಡೆದುಕೊಂಡರೆ ಫ್ರಾನ್ಸ್ ಐದು ಹಾಗೂ ಅಮೆರಿಕ 6 ನೇ ಸ್ಥಾನ ಪಡೆದುಕೊಂಡಿದೆ.
from India & World News in Kannada | VK Polls https://ift.tt/3bD93An