ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ಈಗ ವಿಶ್ವಾದ್ಯಂತ ಹರಡುತ್ತಿದೆ. 9000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದು, ಭಾರತ ಸೇರಿ ಒಟ್ಟು 150ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕಕ್ಕೂ ಕಾಲಿಟ್ಟಿದೆ. ದೇಶದಲ್ಲಿ 4 ಸಾವಿನ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 190 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಸಂಬಂಧ ಲೈವ್ ಮಾಹಿತಿ ವಿವರಣೆ ಇಲ್ಲಿದೆ. ಮಾರ್ಚ್ 19ರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ:- -ಕರ್ನಾಟಕದಲ್ಲಿ 15, ದೇಶದಲ್ಲಿ 195ಸೋಂಕಿತ ಪ್ರಕರಣಗಳು. ದೇಶದಲ್ಲಿ 4 ಮಂದಿ ಬಲಿ.-ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿಆಯುಷ್ಮಾನ್ ಭಾರತ್-ಆರೋಗ್ಯ ಆರೋಗ್ಯ ಕಾರ್ಡ್‌ಗಳ ವಿತರಣೆ ಪ್ರಕ್ರಿಯೆಯನ್ನು ಮಾ.31 ರವರೆಗೆ ಸ್ಥಗಿತಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. corodjfki -ಕಾಸರಗೋಡು ಶಾಸಕರಾದ ಎನ್ ಎ ನೆಲ್ಲಿ ಕುನ್ನು ಮತ್ತು ಮಂಜೇಶ್ವರ ಕ್ಷೇತ್ರದ ಎಂ ಸಿ ಖಮರುದೀನ್ ನಿಗಾದಲ್ಲಿದ್ದಾರೆ. ಕಳೆದ ದಿನ ಕೊರೋನಾ ದೃಢಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣ ನಿಗಾ ವಹಿಸಲಾಗಿದೆ. -ಶುಕ್ರವಾರದ ವರದಿ ಪ್ರಕಾರ ಭಾರತದಲ್ಲಿಮೃತ4 ಮಂದಿ ಸೇರಿ ಸೋಂಕಿತ ಪ್ರಕರಣಗಳ ಸಂಖ್ಯೆ 195 ಏರಿಕೆಯಾಗಿದೆ. -ಪಂಜಾಬ್ ರಾಜ್ಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಬಲಿಯಾಗುವ ಮೂಲಕ ದೇಶದಲ್ಲಿ ಮಾರಕ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. -ಜಗತ್ತಿನಾದ್ಯಂತ 9000 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇಟಲಿಯಲ್ಲಿ ಮೃತರ ಸಂಖ್ಯೆ 2,500ಕ್ಕೆ ಮುಟ್ಟಿದೆ ಜೊತೆಗೆ 27, 900 ಸೋಂಕಿತ ಪ್ರಕರಣಗಳ ಸಂಖ್ಯೆ ಬೆಳಕಿಗೆ ಬಂದಿದೆ. -ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ ಈವರೆಗೆ 80,800 ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳ ಪತ್ತೆಯಾಗಿವೆ.
from India & World News in Kannada | VK Polls https://ift.tt/2J1OlO5