ಮದುವೆಗೆ ಒತ್ತಾಯಿಸಿದ್ದಕ್ಕೆ ಕುಟುಂಬವನ್ನೇ ಕೊಂದು ಆತ್ಮಹತ್ಯೆ

ಮೊಗ: ಎಂದರೆ ಸಾಮಾನ್ಯವಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂತೋಷ, ಸಡಗರ ಮನೆ ಮಾಡುತ್ತದೆ. ಆದರೆ ಇಲ್ಲೊಬ್ಬ ಯುವಕ ಮದುವೆಯಾಗೆಂದು ಒತ್ತಾಯಿಸಿದ್ದಕ್ಕೆ ಬೇಸತ್ತು ಕುಟುಂಬದ ಐವರು ಸದಸ್ಯರನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ . ಪಂಜಾಬ್‌ನ ಮೊಗಾದ ಬಘಾಪುರಾನಾ ಗ್ರಾಮದಲ್ಲಿ ಈ ಘೋರ ಕೃತ್ಯ ನಡೆದಿದ್ದು ಆರೋಪಿ ಸಂದೀಪ್ (27) , ತನ್ನ ಸಂಬಂಧಿಕರ ಮನೆಯಿಂದ ರಿವಾಲ್ವರ್ ಕದ್ದು ತಂದಿದ್ದ ಎಂದು ತಿಳಿದು ಬಂದಿದೆ. ತಂದೆಯಾಗುವ ಜವಾಬ್ದಾರಿ ಹೊರಲು ಸಿದ್ಧನಾಗಿಲ್ಲದ ಆದ ಮದುವೆಗೆ ಸದಾ ನಿರಾಕರಿಸುತ್ತಿದ್ದ. ಆದರೆ ಆತನ ಮದುವೆಗೆ ಒತ್ತಾಯಿಸುತ್ತಿದ್ದ ಕುಟುಂಬಸ್ಥರು ಡಿಸೆಂಬರ್ ತಿಂಗಳಲ್ಲಿ ಮದುವೆಗೆ ದಿನಾಂಕವನ್ನು ಸಹ ನಿಗದಿ ಪಡಿಸಿದ್ದರು. ಇದರಿಂದ ಕೆರಳಿದ್ದ ಸಂದೀಪ್ ಶನಿವಾರ ರಿವಾಲ್ವರ್‌ನಿಂದ ಮನೆಯವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಬಳಿಕ ತಾನು ಕೂಡ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ. ಪರಿಣಾಮ ಅಜ್ಜಿ ಗುರ್ದಿಪ್ ಕೌರ್ (70), ತಂದೆ ಮಂಜಿತ್ ಸಿಂಗ್ (55), ತಾಯಿ ಬಿಂದರ್ ಕೌರ್ (50), ಅಕ್ಕ ( ಅಮನ್‌ಜೋತ್ ಕೌರ್ (33) ಮತ್ತವಳ ಮಗಳು ಅವ್ನಿತ್ ಕೌರ್ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅಜ್ಜ ಗುರುಚರಣ್‌ಸಿಂಗ್‌ನನ್ನು ಫರಿದ್‌ಕೋಟ್‌ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


from India & World News in Kannada | VK Polls https://ift.tt/2KoEQsB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...