ಡೆಬ್ಯು ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸೈನಿ

ಫ್ಲೋರಿಡಾ: ಯುವ ಭರವಸೆಯ ವೇಗದ ಬೌಲರ್ ಮೂರು ವಿಕೆಟ್ ನೆರವಿನಿಂದ ಆತಿಥೇಯ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಅರ್ಹ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸೈನಿ, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಈ ಮೂಲಕ ಡೆಬ್ಯು ಟಿ20 ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಆರನೇ ಆಟಗಾರ ಎಂಬ ಗೌರವಕ್ಕೆ ಭಾಜನವಾಗಿದ್ದಾರೆ. ಡೆಬ್ಯು ಓವರ್‌ನಲ್ಲೇ ಎರಡು ವಿಕೆಟುಗಳನ್ನು ಕಬಳಿಸಿದ ಸೈನಿ, ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದರು. ಅಷ್ಟೇ ಅಷ್ಟೇ ಇನ್ನಿಂಗ್ಸ್‌ನ 20ನೇ ಓವರ್ ವಿಕೆಟ್ ಮೇಡನ್ ಮಾಡುವ ಮೂಲಕ ತಾವು ಭವಿಷ್ಯದ ತಾರೆ ಎಂಬುದನ್ನು ನಿರೂಪಿಸಿದರು. ಈ ಮೂಲಕ ಕೀರಾನ್ ಪೊಲಾರ್ಡ್‌ಗೆ ಅರ್ಧಶತಕವನ್ನು ನಿರಾಕರಿಸಿದರು. ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಕೀರಾನ್ ಪೊಲಾರ್ಡ್ ಜತೆಗೆ ನಿಕೋಲಸ್ ಪೂರನ್ ಹಾಗೂ ಶಿಮ್ರಾನ್ ಹೆಟ್ಮಾಯೆರ್ ವಿಕೆಟುಗಳನ್ನು ಕಬಳಿಸುವ ಮೂಲಕ ಗೆಲುವಿನ ರೂವಾರಿಯೆನಿಸಿಕೊಂಡರು. ಟಿ20 ಡೆಬ್ಯು ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪಡೆದ ಭಾರತೀಯ ಆಟಗಾರರು: ದಿನೇಶ್ ಕಾರ್ತಿಕ್ (ದ. ಆಫ್ರಿಕಾ ವಿರುದ್ಧ) 2006, ಪ್ರಗ್ಯಾನ್ ಓಜಾ (ಬಾಂಗ್ಲಾದೇಶ ವಿರುದ್ಧ) 2009, ಎಸ್. ಬದ್ರೀನಾಥ್, (ವೆಸ್ಟ್‌ಇಂಡೀಸ್ ವಿರುದ್ಧ) 2011, ಅಕ್ಷರ್ ಪಟೇಲ್, (ಜಿಂಬಾಬ್ವೆ ವಿರುದ್ಧ) 2015, ಬರಿಂದರ್ ಸ್ರಾನ್ (ಜಿಂಬಾಬ್ವೆ ವಿರುದ್ಧ) 2016, ನವದೀಪ್ ಸೈನಿ (ಫ್ಲೋರಿಡಾ) 2019.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31nAngR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...