ಅಮೆರಿಕ ಶೂಟೌಟ್: 9 ಮಂದಿ ಸಾವು

ಅಯ್ಟನ್, ಓಹಿಯೋ: ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಶೂಟೌಟ್‌ನಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಶಂಕಿತ ಹಂತಕನೂ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಒರೆಗಾನ್ ಜಿಲ್ಲೆಯಲ್ಲಿ ಹಂತಕನೊಬ್ಬ ಮನಬಂದಂತೆ ಗುಂಡು ಹಾರಿಸಲಾರಂಭಿಸಿದ ಎಂದು ಡೇಟನ್ ಪೊಲೀಸರು ಟ್ವೀಟ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಹಂತಕನ ಆಟಾಟೋಪಕ್ಕೆ ಕಡಿವಾಣ ಹಾಕಿದ್ದಾರೆ. ಗುಂಡೇಟಿನಿಂದ 16 ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು. ಶಂಕಿತ ಹಂತಕನ ಗುರುತು ಬಹಿರಂಗವಾಗಿಲ್ಲ. 16 ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಮಿಯಾಮಿ ವ್ಯಾಲಿ ಆಸ್ಪತ್ರೆ ವಕ್ತಾರೆ ಟೆರ್ರಾ ಲಿಟಲ್ ತಿಳಿಸಿದರು. ಆದರೆ ಅವರ ಸ್ಥಿತಿ ಹೇಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಸಿನ್ಸಿನಾಟಿಯಿಂದ ಸುಮಾರು 195 ಕಿ.ಮೀ ದೂರದಲ್ಲಿ ಈಶಾನ್ಯಕ್ಕಿರುವ ಪಶ್ಚಿಮ ಓಹಿಯೋದಲ್ಲಿ ಸುಮಾರು 1.40 ಲಕ್ಷ ಜನಸಂಖ್ಯೆಯಿದೆ. ಪ್ರಕರಣದ ತನಿಖೆಗೆ ಎಫ್‌ಬಿಐ ಸಹಕಾರ ನೀಡುತ್ತಿದೆ.


from India & World News in Kannada | VK Polls https://ift.tt/2YmgGJe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...