ಗಯಾನ: ವಿರುದ್ಧ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ವಿರಾಟ್ ಕೊಹ್ಲಿ ಪಡೆ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಟೀಮ್ ಇಂಡಿಯಾವು ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್‌ಗೈದಿದೆ. ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದ ಭಾರತ ತಂಡವು ಮಳೆ ಬಾಧಿತ ದ್ವಿತೀಯ ಪಂದ್ಯವನ್ನು ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 22 ರನ್ ಅಂತರದಲ್ಲಿ ವಶಪಡಿಸಿಕೊಂಡಿತ್ತು. ಇದೀಗ ಮೂರನೇ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 3-0 ವೈಟ್‌ವಾಷ್ ಗೆಲುವುಗಳು: 2016 ಆಸ್ಟ್ರೇಲಿಯಾ ವಿರುದ್ಧ, 2017ರಲ್ಲಿ ಶ್ರೀಲಂಕಾ ವಿರುದ್ಧ, 2018ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ, 2019ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಇದು ಎರಡನೇ ಬಾರಿಗೆ ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಗೆಲುವಿನ ಸಿಹಿ ಅನುಭವಿಸಿದೆ. 2018ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲೂ ಭಾರತ ಜಯಭೇರಿ ಬಾರಿಸಿತ್ತು. ವೆಸ್ಟ್‌ಇಂಡೀಸ್ ವಿರುದ್ಧ ತಂಡವೊಂದರಿಂದ ಸತತ ಟಿ20 ಗೆಲುವುಗಳು: ಭಾರತ 6 (2018-19) ಪಾಕಿಸ್ತಾನ 5 (2016-17) ದ.ಆಫ್ರಿಕಾ 4 (208-10) ಶ್ರೀಲಂಕಾ 4 (2009-12) ಆಸ್ಟ್ರೇಲಿಯಾ 4 (2010-12)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2M6h9se