ಗಯಾನ: ಭಾರತ ವಿರುದ್ಧ ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ಸೋಲಿನ ಆಘಾತಕ್ಕೊಳಗಾಗಿರುವ , ಮೂರು ಪಂದ್ಯಗಳ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗಕ್ಕೊಳಗಾಗಿದೆ. ಇದರೊಂದಿಗೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಸೋಲುಗಳನ್ನು ಅನುಭವಿಸಿರುವ ತಂಡವೆಂಬ ಅಪಖ್ಯಾತಿಗೊಳಗಾಗಿದೆ. ಇದು ಟಿ20ನಲ್ಲಿ ವಿಂಡೀಸ್‌ಗೆ ಎದುರಾದ 58ನೇ ಸೋಲಾಗಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಲಾ 57 ಸೋಲುಗಳನ್ನು ಕಂಡಿದೆ. ಇನ್ನು ಅಗ್ರ ತಂಡಗಳ ಪೈಕಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸೋಲನುಭವಿಸಿದ ತಂಡಗಳು: ವೆಸ್ಟ್‌ಇಂಡೀಸ್ 58 ಶ್ರೀಲಂಕಾ/ಬಾಂಗ್ಲಾದೇಶ 57 ನ್ಯೂಜಿಲೆಂಡ್ 56 ಆಸ್ಟ್ರೇಲಿಯಾ 54 ಪಾಕಿಸ್ತಾನ 52 ಜಿಂಬಾಬ್ವೆ/ಇಂಗ್ಲೆಂಡ್ 50 ದ.ಆಫ್ರಿಕಾ 44 ಭಾರತ 41
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2M5rnsO