370 ರದ್ದು: ಸೇಡಿನ ಕ್ರಮವಾಗಿ ಭಾರತದ ವಾಯು ಮಾರ್ಗ ನಿಷೇಧಿಸಿದ ಪಾಕಿಸ್ತಾನ

ಹೊಸದಿಲ್ಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯ ಪುನರ್‌ವಿಂಗಡನೆ ಕ್ರಮಗಳಿಂದ ತೀವ್ರ ಅಸಮಾಧಾನಗೊಂಡಿರುವ , ಭಾರತದ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ. ಹೌದು, 370 ರದ್ದತಿಯಿಂದ ಹತಾಶಗೊಂಡಿರುವ ಪಾಕ್, ಭಾರತದ ವಾಯು ಮಾರ್ಗವನ್ನು ಗುರುವಾರ ರಾತ್ರಿಯಿಂದ ನಿಷೇಧಿಸಿದೆ. ಭಾರತದ ಜತೆ ಎಲ್ಲಾ ರಾಜತಾಂತ್ರಿಕ ಸಂಬಂಧ ಹಾಗೂ ದ್ವಿಪಕ್ಷೀಯ ವ್ಯಾಪಾರ-ವ್ಯವಹಾರವನ್ನು ರದ್ದುಗೊಳಿಸಲು ಪಾಕಿಸ್ತಾನ ನಿರ್ಧರಿಸಿದ್ದು, ಮಂಗಳವಾರ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ''ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಜಯ್‌ ಬಿಸಾರಿಯಾ ಅವರನ್ನು ಭಾರತಕ್ಕೆ ಕಳುಹಿಸಲಾಗುವುದು. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನೂ ವಾಪಸ್‌ ಕರೆಸಿಕೊಳ್ಳಲಾಗುವುದು,'' ಎಂದು ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆಗಸ್ಟ್‌ 15ರಂದು ಪಾಕಿಸ್ತಾನದಲ್ಲಿ 'ಕರಾಳ'ದಿನ ಆಚರಿಸಲು ಹಾಗೂ ಗಡಿಯಲ್ಲಿ ತೀವ್ರ ನಿಗಾ ಇರಿಸಲು ಪಿಎಂ ಇಮ್ರಾನ್‌ ಖಾನ್‌ ಸೂಚಿಸಿದ್ದಾರೆ.


from India & World News in Kannada | VK Polls https://ift.tt/2YslaxM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...