ಹೊಸದಿಲ್ಲಿ: ಭ್ರಷ್ಟರ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ, ಲಂಚ ಪಡೆದ ಆರೋಪ ಹೊತ್ತಿದ್ದ ತೆರಿಗೆ ಇಲಾಖೆಯ 22 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. ನೇರ ತೆರಿಗೆ ವಿಭಾಗದಲ್ಲಿ ಬರುವ ಜಿಎಸ್ ಟಿ ಮತ್ತು ಆಮದು ತೆರಿಗೆ ವಿಭಾಗದ ಅಧಿಕಾರಿಗಳನ್ನು ಭ್ರಷ್ಟಾಚಾರದ ಆರೋಪದಡಿ ಸೇವೆಯಿಂದ ಮುಕ್ತಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ಜೂನ್ ನಿಂದ ಈವರೆಗೆ ಮೂರು ಬಾರಿ ಭ್ರಷ್ಟ ಅಧಿಕಾರಿಗಳನ್ನು ಸಾಮೂಹಿಕವಾಗಿ ಸೇವೆಯಿಂದಲೇ ನಿವೃತ್ತಿಗೊಳಿಸಲಾಗುತ್ತಿದೆ. ಇತ್ತೀಚೆಗಷ್ಟೇ 27 ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು ತೆರಿಗೆ ಇಲಾಖೆಯಲ್ಲಿ ಕೆಲವು ಕಪ್ಪು ಕುರಿಗಳಿವೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿಯವರು ಹೇಳಿದ್ದನ್ನು ಸ್ಮರಿಸಬಹುದಾಗಿದೆ. ಇದೀಗ ಸೇವೆಯಿಂದ ಕಡ್ಡಾಯ ನಿವೃತ್ತರಾಗಿರುವ ಅಧಿಕಾರಿಗಳು, ತಮ್ಮ ಅಧಿಕಾರವನ್ನು ಬಳಸಿ ತೆರಿಗೆದಾರರಿಗೆ ಕಿರುಕುಳ ನೀಡೋದ್ರ ಜೊತೆಗೆ ಪ್ರಾಮಾಣಿಕ ತೆರಿಗೆದಾರರಿಗೂ ಹಿಂಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/3259ZIU